Featured NewsKrushiResearch Articles

ಏಲಕ್ಕಿ ಬೇಸಾಯ ಕ್ರಮಗಳು

“ಸಂಬಾರ ಪದಾರ್ಥಗಳ ರಾಣಿ” ಎಂದು ಕರೆಯಲ್ಪಡುವ ಏಲಕ್ಕಿ ಸಂಬಾರ ಪದಾರ್ಥಗಳ ಅಂತರರಾಷ್ಟ್ರೀಯ ಮಾರುಕಟೈಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಏಲಕ್ಕಿಯು ಪ್ರಪಂಚದಲ್ಲಿ ಬಹಳ ಹಳೆಯದಾದ ಸಂಬಾರ ಪದಾರ್ಥ. ಏಲಕ್ಕಿಯು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣ ಕಾಡುಗಳ ಮೂಲ ನಿವಾಸಿಯಾಗಿದೆ. ಏಲಕ್ಕಿಯನ್ನು ವಾಣಿಜ್ಯವಾಗಿ ಮಾರಾಟವಾಗುವ ಒಣಗಿಸಿದ ಹಣ್ಣಿಗೋಸ್ಕರ ಬೆಳೆಯುತ್ತಾರೆ.

ಪ್ರಭೇದ

ಬೆಳೆಯುವ ಪ್ರದೇಶ ಪುಷ್ಪಗೊಚ್ಚಲುಗಳ ಸ್ವಭಾವ,ಗಿಡಗಳ ಗಾತ್ರ ಮತ್ತು ಇತರ ಗುಣಗಳನ್ನು ನೋಡಿ, ಏಲಕ್ಕಿಯ ಪ್ರಭೇಧಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳು ಮಲಬಾರ್‌, ಮೈಸೂರು ಮತ್ತು ವಜುಕ್ಕಾ.ಮಲಬಾರ್‌ ಪ್ರಭೇದದ ಗಿಡಗಳ ಪುಷ್ಪಗೊಚ್ಚಲುಗಳು/ಕೊತ್ತುಗಳು ನೆಲದ ಮೇಲೆ ಹರಡಿರುತ್ತವೆ. ಈ ಪ್ರಭೇದವನ್ನು ಕರ್ನಾಟಕದಲ್ಲಿ ಬೆಳೆಯುತ್ತಾರೆ. ಮೈಸೂರು ಪ್ರಭೇದ ಗಿಡಗಳ ಪುಷ್ಪಗೊಚ್ಚಲುಗಳು ನೇರವಾಗಿ ನಿಂತಿದ್ದು ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ವಜುಕ್ಕಾ ಏಲಕ್ಕಿಯು ಮಲಬಾರ್‌ ಮತ್ತು ಮೈಸೂರು ಪ್ರಭೇದದ ನೈರ್ಸಗಿಕ ಸಂಕೀರ್ಣ ಪ್ರಭೇದವಾಗಿದ್ದು ಪುಷ್ಪಗೊಚಲುಗಳು/ ಕೊತ್ತುಗಳು ತೂಗು ಹಾಕಿದ ಸರದಂತೆ ಇರುತ್ತವೆ. ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

Also read  India's Coffee Production is expect to slump to 21 years low

ಹವಾಗುಣ ಮತ್ತು ಮಣ್ಣು

ಏಲಕ್ಕಿ ಚೆನ್ನಾಗಿ ಪಸರಿಸಿ ಬೀಳುವ 1500-2500 ಮಿ. ಮೀ. ಮಳೆ, ಸರಾಸರಿ ಉಷ್ಣತೆ 15 ರಿಂದ 25 ಡಿಗ್ರಿ ಸೆ. ಮತ್ತು 600 ರಿಂದ 1200 ಮೀಟರ್‌ ಎತ್ತರವಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.

ಆಮ್ಲೀಯ ರಸಸಾರ (5.5-6.5) ಹೊಂದಿರುವ ಕಾಡಿನ ಗೊಡಿಜು ಮಣ್ಣುಗಳಲ್ಲಿ ಈ ಬೆಳೆ ಹುಲುಸಾಗಿ ಬೆಳೆಂಯುತ್ತದೆ. ಏಲಕಿ ಬೆಳೆಯಲಾಗುತ್ತಿರುವ ಮಣ್ಣುಗಳಲ್ಲಿ ಹೆಚ್ಚು ಸಾವಯವ ಪದಾರ್ಥ ಅಧಿಕ ಸಾರಜನಕ, ಕಡಿಮೆಯಿಂದ ಮಧ್ಯಮ ಪ್ರಮಾಣದಲ್ಲಿ ದೊರೆಯುವ ರಂಜಕ ಹಾಗೂ ಮಧ್ಯಮದಿಂದ ಅಧಿಕ ದೊರೆಯುವ ಪೊಟ್ಯಾಷ್‌ ಪೋಷಕಾಂಶಗಳನ್ನು ಹೊಂದಿರುತ್ತವೆ..

ಸಸ್ಯ ಉತ್ಪಾದನೆ

ಅಬೀಜ (ಕಂದುಗಳ ಮೂಲಕ) ಸಸ್ಯಾಭಿವೃದ್ಧಿ

ಏಲಕ್ಕಿಯನ್ನು ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದು ಉತ್ತಮ ವಿಧಾನ ಏಲಕ್ಕಿಯ ಸಸಿಗಳನ್ನು ಬೀಜ ಮತ್ತು ಕೋಶ ಸಮೂಹದ ವಿಧಾನದಲ್ಲಿ ಸಸ್ಯ ಉತ್ಪಾದನೆ ಮಾಡಬಹುದು.

ಉತ್ತಮ ಇಳುವರಿ ಕೊಡುವ ತಳಿಗಳನ್ನು ಬೆಳೆಯುವ ಕಂದುಗಳಿಂದ ಬೆಳೆಸಿದ ನರ್ಸರಿ ಬೇಕಾಗುತ್ತದೆ. ನರ್ಸರಿಯಲ್ಲಿ ನೆಡುವ ಗಿಡವು ಚೆನ್ನಾಗಿ ಬೆಳೆದಿರುವ ಕಂದು ಗೆಡ್ಡೆ ಮತ್ತು ಸಣ್ಣ ಕಂದನ್ನು ಹೊಂದಿರಬೇಕು. ಕಂದುಗಳ ನರ್ಸರಿಂಬುನ್ನು ಮಾರ್ಚ್‌ ತಿಂಗಳ ಮೊದಲನೇ ವಾರದಿಂದ ಸೆಪ್ಟೆಂಬರ್‌ ತಿಂಗಳವರೆಗೆ ನೆಡಬಹುದು. ಸಸಿ ಬೆಳೆಸಲು ಸ್ಥಳದ ಆಯ್ಕೆ ಮಾಡುವಾಗ ನೀರಿನ ಸೌಲಭ್ಯವಿರಬೇಕು. ನೀರು ಚೆನ್ನಾಗಿ ಬಸಿದು ಹೋಗುವಂತಹ ಸೂರ್ಯನ ಬಿಸಿಲು ಬೀಳುವ, ಸ್ವಲ್ಪ ಇಳಿಜಾರಾಗಿರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.

ಇಳಿಜಾರಿಗೆ ಅಡ್ಡಲಾಗಿ 45 ಸೆ.ಮೀ. ಅಗಲ ಮತ್ತು ಆಳದ ಅನುಕೂಲಕರ ಉದ್ದವಿರುವ ಕಾಲುವೆಗಳನ್ನು ಪರಸ್ಪರ 1.8 ಮೀ ಅಳತೆ ಇರುವಂತೆ ತೆಗೆದು ಸಾವಯವಯುಕ್ತ ಮೇಲ್‌ಮಣ್ಣು,ಮರಳು ಮತ್ತು ಚೆನ್ನಾಗಿ ಕೊಳೆತ ದನದ ಗೊಬ್ಬರಗಳ ಸಮ ಪ್ರಮಾಣದಲ್ಲಿ ಬೆರೆಸಿ ಮಿಶ್ರಣದಿಂದ ಭರ್ತಿ ಮಾಡಬೇಕು. ಕಂದುಗಳನ್ನು 1.8 ಮೀ – 0.6 ಮೀ ಅಂತರದಲ್ಲಿ ನೆಡಬೇಕು. ಹೊಸದಾಗಿ ನಾಟಿ ಮಾಡಿದ ಗಿಡಗಳಿಗೆ ನೆರಳನ್ನು ಒದಗಿಸಬೇಕು. ಗಿಡಗಳಿಗೆ 48:48:96 ಗ್ರಾಂ ಸಾರಜನಕ:ರಂಜಕ:ಪೋಟಾಷ್‌ ರಸಗೊಬ್ಬರಗಳನ್ನು 2-3 ವಿಭಾಗ ಮಾಡಿ ಎರಡು ತಿಂಗಳಿಗೊಮ್ಮೆ ಕೊಡಬೇಕು. 100 ಮತ್ತು 150 ಗ್ರಾಂ ಬೇವಿನ ಹಿಂಡಿಯನ್ನು ರಸಗೊಬ್ಬರದ ಜೊತೆ ಕೊಡಬೇಕು. ಸರಾಸರಿ 15 ರಿಂದ 20 ನೆಡುವ ಕಂದುಗಳನ್ನು 10 ತಿಂಗಳಲ್ಲಿ ಪಡೆಯಬಹುದು.

ಬೀಜದಿಂದ ಸಸ್ಯಾಭಿವೃದ್ಧಿ

ಪ್ರಾಥಮಿಕ ಸಸಿಮಡಿ

ಸಸಿಗಳನ್ನು ಬೆಳೆಸಲು ಸ್ಥಳದ ಆಯ್ಕೆ ಮಾಡುವಾಗ ಸದಾಕಾಲ ನೀರಿನ ಸೌಲಭ್ಯ ವಿರುವ, ನೀರು ಚೆನ್ನಾಗಿ ಬಸಿದು ಹೋಗುವಂತಕು ಸೂರ್ಯನ ಬಿಸಿಲು ಬೀಳುವಂತಕಾ ಸ್ವಲ್ಪ ಇಳಿಜಾರಾಗಿರುಎ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿದ” ಸ್ಥಳದಲ್ಲಿರುವ
ಗಿಡಗೆಂಟೆಗಳನ್ನು, ಅವುಗಳ ಬೇರು ಬುಡಗಳನ್ನು, ಬೇರುಗಳನ್ನು, ಕಲ್ಲುಗಳನ್ನು ತೆಗೆದು, ಸ್ವಚ್ಛ ಮಾಡಬೇಕು. ಸ್ವಚ್ಛಗೊಳಿಸಿದ ಸ್ಥಳದಲ್ಲಿ ಒಂದು ಮೀಟರ್‌ ಅಗಲವಿರುವ, 20 ಸೆಂ. ಮೀ. ಎತ್ತರವಿರುವ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದವಿರುವ (ಆರು ಮೀಟರ್‌) ಏರು ಮಡಿಗಳನ್ನು ತಯಾರು ಮಾಡಬೇಕು. ಈ ಏರು ಮಡಿಗಳ ಮೇಲೆ ಎರಡರಿಂದ ಮೂರು ಸೆಂ. ಮೀ. ದಪ್ಪವಿರುವಷ್ಟು ಕಾಡಿನ ಮೇಲ್ಕಣ್ಣನ್ನು ಹರಡಬೇಕು.

ಗೊತ್ತಾದ ಮೂಲದ ಅಧಿಕ ಇಳುವರಿ ನೀಡುವ ಮತ್ತು ರೋಗ ಮುಕ್ತವಾದ ತಾಯಿಗಿಡದಿಂದ ಎರಡು ಮತ್ತು ಮೂರನೆಯ ಕೊಯಿಲಿನಿಂದ ಸಂಪೂರ್ಣ ಬಲಿತ ದಪ್ಪನೆಯ ಬೀಜಕೋಶಗಳನ್ನು ಶೇಖರಣೆ ಮಾಡಿ, ಬೀಜಕೋಶಗಳಿಂದ ಬೀಜಗಳನ್ನು ಹೊರ ತೆಗೆಯಬೇಕು. ತಳಿಗಳು, ಬೀಜಗಳ ಗಾತ್ರ ಮತ್ತು ಬೀಜಕೋಶದಲ್ಲಿರುವ ಬೀಜಗಳ ಸಂಖ್ಯೆಯನ್ನು ಆಧರಿಸಿ, ಒಂದು ಕಿ.ಗ್ರಾಂ. ನಷ್ಟು ಹಸಿ ಬೀಜಕೋಶಗಳಲ್ಲಿ ಸುಮಾರು 500 ರಿಂದ 800 ಕಾಯಿಗಳು ಇರುತ್ತವೆ. 3000-5000 ಸಸಿ ಮಾಡಲು ಸಾಕಾಗುತ್ತದೆ. ಬೀಜಕೋಶಗಳಿಂದ ಬೀಜಗಳನ್ನು ಹೊರತೆಗೆದ ನಂತರ ನೀರಿನಲ್ಲಿ ತೊಳೆಯುವ್ರದರ ಮೂಲಕ ಬೀಜಗಳ ಜೊತೆಗಿರುವ ಅಂಟು ಪದಾರ್ಥವನ್ನು ತೆಗೆಂಯಬೇಕು. ನಂತರ ಮರದ ಬೂದಿಯಿಂದ ಮಿಶ್ರ ಮಾಡಿ, ನೆರಳಿನಲ್ಲಿ ಒಣಗಿಸಬೇಕು. ಒಂದು ಹೆಕ್ಟೇರ ಪದೇಶಕ್ಕೆ ನಾಟಿ ಮಾಡಲು ಬೇಕಾಗುವಷ್ಟು ಉತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಲು 175-200 ಗ್ರಾಂ ನಷ್ಟು ಬೀಜಗಳು
ತಿಂಗಳಿನಲ್ಲಿ ಬಿತ್ತನೆ ಮಾಡುವುದರಿಂದ ಅಧಿಕ ಮೊಳೆಯುವಿಕೆಯನ್ನು ಪಡೆಬಹುದು. ಚಳಿಗಾಲ ಮತ್ತು ಅಧಿಕ ಮುಂಗಾರು ಮಳೆ ಬೀಳುವ ಸಮಯದಲ್ಲಿ ಬಿತ್ತನೆ ಮಾಡಬಾರದು.

Also read  ಶುಂಠಿ ಬೇಸಾಯ ಕ್ರಮಗಳು

ಶೇಕಡಾ 25 ರಷ್ಟು ನೈಟ್ರಿಕ್‌ ಆಮ್ಲದೊಂದಿಗೆ ಬೀಜಗಳನ್ನು ಉಪಚಾರ ಮಾಡುವುದರಿಂದ ಬೀಜದ ಗಟ್ಟಿಯಾದ ಹೊರ ಪದರವು ಮೃದುವಾಗಿ ಮೊಳೆಯುವಿಕೆ ಪ್ರಮಾಣ ಹೆಚ್ಚುತ್ತದೆ… ಈ ಉಪಚಾರದ ನಂತರ ಮಾರನೆಯ ದಿನ ಬೀಜಗಳನ್ನು ಬಿತ್ತನೆಮಾಡಬಹುದು.

ಸಸಿಮಡಿಗಳಲ್ಲಿ 10 ಸೆಂ. ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು. 6 ಥಿ 1 ಮೀ. ಅಳತೆಯ ಸಸಿಮಡಿಯಲ್ಲಿ ಬಿತ್ತನೆ ಮಾಡಲು 30 ರಿಂದ 50 ಗ್ರಾಂ. ಬೀಜ ಬೇಕಾಗುತ್ತದೆ. ಬೀಜಗಳನ್ನು ಬಿತ್ತನೆ ಮಾಡಿದ ನಂತರ ಸಸಿಮಡಿಗಳ ಮೇಲೆ ತೆಳುವಾಗಿ ನಯವಾದ ಮಣ್ಣನ್ನು ಹರಡಿ, ಅದರ ಮೇಲೆ ಅಡ್ಡವಾಗಿ ಇಟ್ಟಿರುವ ಮರದ ರೆಂಬೆಗಳ ಮೇಲೆ ಒಣಗಿದ ಪೋಥಾ ಹುಲ್ಲು ಅಥವಾ ಭತ್ತದ ಒಣ ಹುಲನ್ನು ಹೊದಿಕೆಯಾಗಿ ಹರಡಬೇಕು. ಹೊದಿಕೆಯ ಹುಲ್ಲು ಮಣ್ಣಿನೊಂದಿಗೆ ಸಂಪರ್ಕ ಬಾರದಂತೆ ಎಚ್ಚರಿಕೆ ವಹಿಸಬೇಕು. ಸಸಿಮಡಿಗಳಲ್ಲಿ ಸಾಕಷ್ಟು ತೇವಾಂಶವಿರುವಂತೆ ನೀರು ಕೊಡಬೇಕು. ಒಮ್ಮೆ ಮೊಳಕೆ ಕಾಣಿಸಿಕೊಂಡ ನಂತರ ಹೊದಿಕೆಯನ್ನು ತೆಗೆದು, ಸಾಲುಗಳ ಮಧ್ಯಂತರ ಜಾಗದಲ್ಲಿ ಸಣ್ಣದಾಗಿ ಕತ್ತರಿಸಿದ ಹುಲ್ಲು ಹರಡಬೇಕು. ನೇರವಾಗಿ ಸೂರ್ಯನ ಬಿಸಿಲು ಸಸಿಗಳ ಮೇಲೆ ಬೀಳುವುದನ್ನು ತಪ್ಪಿಸಲು ಸಸಿಮಡಿಗಳ ಮೇಲೆ ಎತ್ತರವಾದ ಚಪ್ಪರವನ್ನು ಹಾಕಬೇಕು. ಬಿತ್ತನೆ ಮಾಡಿದ 20 ರಿಂದ 25 ದಿನಗಳ ನಂತರ ಮೊಳೆಯುವಿಕೆ ಪ್ರಾರಂಭವಾಗಿ, 30 ರಿಂದ 40 ದಿನಗಳವರೆಗೂ ಮುಂದುವರಿಯುತ್ತದೆ.

ಸಸಿಮಡಿಗೆ 3-4 ಎಲೆಗಳಿರುವ ಗಿಡಗಳ ನಾಟಿಂಯನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಜೂನ್‌ ಜುಲೈನಲ್ಲಿ ಮಾಡಿದ್ದರಿ

ಕರ್ನಾಟಕದಲ್ಲಿ ನವೆಂಬರ್‌-ಜನವರಿ ತಿಂಗಳಲ್ಲಿ ಮಾಡುತ್ತಾರೆ. ಪ್ರತಿ ಮಡಿಗೆ (6 ಥ 1 ಮೀ) 90:60:120 ಗ್ರಾಂ ಸಾರಜನಕ, ರಂಜಕ ಮತ್ತು ಪೋಟಾಷ್‌ ರಸಗೊಬ್ಬರವನ್ನು 45 ದಿನಗಳ ಅಂತರದಲ್ಲಿ 3 ಬಾರಿ ಹಾಕಬೇಕು. ಪ್ರಥಮ ಬಾರಿಗೆ ನಾಟಿ ಮಾಡಿದ 30 ದಿನದ ನಂತರ ಹಾಕಬೇಕು. ರಸಗೊಬ್ಬರ ಕೊಟ್ಟ ನಂತರ ಮಣ್ಣ ಕೊಡಬೇಕು, 20-25 ದಿನಗಳ ಅಂತರದಲ್ಲಿ ಕಳೆ ತೆಗೆಯಬೇಕು. ಗಿಡ ತೆಗೆಯುವ ಒಂದು ತಿಂಗಳ ಮುಂಚೆ ನೆರಳು ಮನೆಯನ್ನು ತೆಗೆಯುವುದರಿಂದ ತುಂಬ ಪೀಳೆಗಳು ಬರುತ್ತವೆ. 8-10 ತಿಂಗಳಲ್ಲಿ ತೋಟದಲ್ಲಿ ನೆಡುವ ಗಿಡಗಳು ಸಿಗುತ್ತವೆ.

ಎರಡನೆಯ ಸಸಿಮಡಿ

ಎರಡನೆಯ ಸಸಿಮಡಿಂಯಲ್ಲಿ ಸಸಿಗಳನ್ನು ಬೆಳೆಸಲು ಎರಡು ವಿಧಾನಗಳಿವೆ.

ಸಸಿ ಮಡಿಗಳಲ್ಲಿ ಸಸಿಗಳನ್ನು ಬೆಳೆಸುವ ವಿಧಾನ

ಪ್ರಾಥಮಿಕ ಸಸಿಮಡಿಗಳಲ್ಲಿ ಮಾಡಿದಂತೆಯೇ ಸಸಿಮಡಿಗಳನ್ನು ತಂಖಾರುಮಾಡಬೇಕು. ಸಸಿಮಡಿಂತು ಮೇಲೆ ಒಂದು ಪದರದಷ್ಟು ದನವಿನ ಗೊಬ್ಬರ ಮತ್ತು ಮರದ ಬೂದಿಗಳ ಮಿಶ್ರಣವನ್ನು ಹರಡಿ, ಮಣ್ಣಿನಲ್ಲಿ” ಮಿಶ್ರ ಮಾಡಬೇಕು. ಪ್ರಾಥಮಿಕ ಸಸಿಮಡಿಯಲ್ಲಿರುವ ಮೂರರಿಂದ ನಾಲ್ಕು ಎಲೆಗಳನ್ನು ಹೊಂದಿರುವ ಸಸಿಗಳನ್ನು ಎರಡನೆಯ ಮಡಿಯಲ್ಲಿ ಸಸಿಯಿಂದ ಸಸಿಗೆ 20-25 ಸೆಂ. ಮೀ. ಅಂತರದಲ್ಲಿ ನಾಟಿ ಮಾಡಬೇಕು. ಸಸಿ ನಾಟಿ ಮಾಡಿದ ತಕ್ಬಣವೇ ಸಸಿಮಡಿಗಳಿಗೆ ಒಣ ತರಗೆಲೆಗಳಿಂದ ಹೊದಿಕೆ ಹಾಕಬೇಕು ಮತ್ತು ನೀರು ಕೊಡಬೇಕು. ಸೂರ್ಯನ ಬಿಸಿಲಿನಿಂದ ಸಸಿಗಳನ್ನು ಸಂರಕ್ಟಿಸಲು ಸಸಿಮಡಿಗಳ ಮೇಲೆ ಎತ್ತರದಲ್ಲಿ ಚಪ್ಪರವನ್ನು ಹಾಕಬಹುದು.

ಪಾಲೀಥೀನ್‌ ಚೇಲಗಳಲ್ಲಿ ಸಸಿಗಳನ್ನು ಬೆಳೆಸುವ ವಿಧಾನ

20 ಥಿ 20 ಸೆಂ.ಮೀ. ಅಳತೆಯ 100 ಜಿ.ಎಸ್‌.ಐಮ್‌ ದಪ್ಪವಿರುವ, ತಳದಲ್ಲಿ ಮೂರರಿಂದ ನಾಲ್ಕು ತೂತುಗಳನ್ನು ಮಾಡಿರುವ ಕಪ್ಪು ಬಣ್ಣದ ಎಚ್‌ಎಮ್‌/ ಎಚ್‌ಡಿಪಿ ಪಾಲೀಥೀನ್‌ ಚೀಲಗಳನ್ನು ಈ ಉದ್ದೇಶಕ್ಕೆ ಬಳಸಬಹುದು. ಈ ಪಾಲೀಥೀನ್‌ ಚೀಲಗಳಲ್ಲಿ 3:1:1 ಪ್ರಮಾಣದಲ್ಲಿ ಕಾಡಿನ ಮೇಲ್ಮಣ್ಣು, ದನಗಳ ಸಗಣಿ ಗೊಬ್ಬರ ಮತ್ತು ಮರಳುಗಳ ಮಿಶ್ರಣವನ್ನು ಭರ್ತಿ ಮಾಡಬೇಕು. ಈ ಚೀಲಗಳನ್ನು ಅನುಕೂಲಕ್ಕೆ ತಕ್ಕಷ್ಟು ಉದ್ದ ಮತ್ತು ಅಗಲವಿರುವಂತೆ ಸಾಲುಗಳಲ್ಲಿ ಜೋಡಿಸಬೇಕು. ಎರಡರಿಂದ ಮೂರು ಎಲೆಗಳನ್ನು ಹೊಂದಿರುವ, ಆರೋಗ್ಯವಾಗಿರುವ ಮತ್ತು ರೋಗ ಮುಕ್ತವಾದ ಸಸಿಯೊಂದನ್ನು ಪಾಲೀಥೀನ್‌ ಚೀಲದಲ್ಲಿ ನಾಟಿ ಮಾಡಬೇಕು.

ಎರಡನೆಯ ಸಸಿಮಡಿ ಅಥವಾ ಪಾಲೀಥೀನ್‌ ಚೀಲಗಳಲ್ಲಿ ಬೆಳೆಸಿದ ಸಸಿಗಳನ್ನು ಮುಂಗಾರು ಮಳೆ ಆರಂಭವಾದಾಗ ಮೇ ತಿಂಗಳಿನ ಕೊನೆಯ ವಾರದಲ್ಲಿ ಜಮೀನಿನಲ್ಲಿ ನಾಟಿ ಮಾಡಬೇಕು.

ಜಮೀನಿನಲ್ಲಿ ನಾಟಿ ಮಾಡುವುದು ಮತ್ತು ನಿರ್ವಹಣೆ

ಇಳಿಜಾರಾಗಿರುವ ಪ್ರದೇಶಗಳಲ್ಲಿ ಮಣ್ಣು ಕೊಚ್ಚಣಿಯನ್ನು ತಡೆಗಟ್ಟಲು ಜಗತಿಕಟೈಗಳ ಮೇಲೆ ನಾಟಿ ಮಾಡಬೇಕು. ನಾಟಿ ಮಾಡುವ ಅಂತರವನ್ನು ಅವಲಂಬಿಸಿ ಇಳಿಜಾರಿಗೆ ಅಡ್ಡಲಾಗಿ ಬೇಕಾದಷ್ಟು ಅಂತರದಲ್ಲಿ ಜಗತಿಕಟೈಗಳನ್ನು ನಿರ್ಮಿಸಬೇಕು. ಒಂದು ವೇಳೆ ತೋಟದಲ್ಲಿ ನೆರಳಿನ ಮರಗಳು ಬಿದ್ದು, ಪ್ರದೇಶವು ಬಯಲು ಆದ ಸಂದರ್ಭದಲ್ಲಿ ಶೀಘ್ರವಾಗಿ ಬೆಳವಣಿಗೆಂಖಾಗುವ ಮರಗಳಾದ ಕರುಣ (ವೆರ್ನೋನಿಯಾ ಆರ್ಬೋರಿಂಖಾ), ಕೋರಂಗಟಿ (ಅಕ್ರೋಕಾರ್ಪಸ್‌ ಪ್ರಾಗ್ಸಿನಿಘೋಲಿಂಯಸ್‌), ಚಂದನ ವಂಯಂಬು (ಟೂನಾ ಸಿಲಿಯೇಟಾ), ಜಾವಲ್‌ (ಸಿಜಿಜಿಯಂ ಕುಮುನಿ), ಹಲಸು ಮರ (ಆರ್ಟೋಕಾರ್ಪಸ್‌ ಹೆಟ್ರೋಫಿಲ್ಲಸ್‌) ಇತ್ಯಾದಿ ನೆರಳಿನ ಮರಗಳ ಸಸಿಗಳನ್ನು ನಾಟಿ ಮಾಡಬೇಕು. ನೆರಳಿನ ಮರಗಳು ಸಣ್ಣ ಎಲೆಗಳನ್ನು ಮತ್ತು ತಾಯಿ ಬೇರು ಸಮೂಹವನ್ನು ಹೊಂದಿರಬೇಕು, ಜೊತೆಗೆ ಬೇಸಿಗೆಯಲ್ಲಿ ಎಲೆಗಳು ಉದುರಬಾರದು.

ಹೊಸದಾಗಿ ನಾಟಿ ಮಾಡಬೇಕೆಂದಿರುವ ಜಮೀನಿನಲ್ಲಿ ಪೊದೆ ಗಿಡಗೆಂಟೆಗಳನ್ನು ಬೇರು ಸಮೇತ ತೆಗೆಯಬೇಕು. ಒಂದು ವೇಳೆ ಮರು ನಾಟಿ ಮಾಡುವುದಾದಲ್ಲಿ ಹಳೆಯ ಏಲಕ್ಕಿ ಗಿಡಗಳನ್ನು ಸಂಪೂರ್ಣವಾಗಿ ತೆಗೆಯಬೇಕು.

Also read  ಕಬ್ಬಿನ ಬೇಸಾಯ ಕ್ರಮಗಳು

ಬೇಸಿಗೆ ತಿಂಗಳುಗಳಲ್ಲಿ ನೆರಳು ನಿಯಂತ್ರಣ, ಸಮಪಾತಳಿ ಜಗತಿಕಟ್ಟೆಗಳನ್ನು ನಿರ್ಮಿಸುವುದು ಮತ್ತು ಗುಣಿಗಳನ್ನು ತೆಗೆಯಬೇಕು. ಹೊಸದಾಗಿ. ನಾಟಿ ಮಾಡಿದ ಪ್ರದೇಶದಲ್ಲಿ ಬೇಸಿಗೆ ಕಾಲದಲಿ (ಮಾರ್ಚಿ-ಏಪ್ರಿಲ್)ಯೂ ಹಾಗೂ ಹಳೆಯ ತೋಟಗಳಲ್ಲಿ ಬೇಸಿಗೆ ಮಳೆ ಬಂದನಂತರ (ಮೇ-ಜೂನ್‌)ವೂ ನೆರಳಿನ ನಿಯಂತ್ರಣ ಮಾಡಬೇಕು. ತೋಟದಲ್ಲಿ ದಟ್ಟವಾದ ನೆರಳಿದ್ದಲ್ಲಿ ಶೇಕಡಾ 40 ರಿಂದ 60 ರಷ್ಟು ಸೋಸಿದ ನೆರಳು ಏಲಕ್ಕೆ ಗಿಡಗಳ ಮೇಲೆ ಬೀಳುವಂತೆ ನೆರಳಿನ ಮರಗಳ ರೆಂಬೆಗಳನ್ನು ಕತ್ತರಿಸಬೇಕು. ನೆರಳಿನ ಮರಗಳ ಮುಕುಟದ ಎತ್ತರದಲ್ಲಿ ಕೆಳಭಾಗದ 1/3 ಭಾಗದಷ್ಟು ಅಥವಾ ಅರ್ಧದಷ್ಟು ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ನೆರಳಿನ ಮರಗಳ ಒಂದೇ ಬದಿಯಲ್ಲಿ ರೆಂಬೆಗಳನ್ನು ತೆಗೆಯಬಾರದು. ನೆರಳಿನ ಮರದ ಎಲ್ಲಾ ಬದಿಗಳಿಂದಲೂ ರೆಂಬೆಗಳನ್ನು ಕತ್ತರಿಸಿ ತೆಗೆಯುವುದರಿಂದ ಸಮತೋಲನ ರೆಂಬೆಗಳ ಮುಕುಟವನ್ನು ಪಡೆಯಬಹುದು. ನೈರುತ್ಯ ದಿಕ್ಕಿನ ಇಳಿಜಾರು ಪ್ರದೇಶಗಳಿಗೆ ಈಶಾನ್ಯ ದಿಕ್ಕಿನ ಇಳಿಜಾರು ಪ್ರದೇಶಗಳಿಗಿಂತ ಹೆಚ್ಚಿಗೆ ನೆರಳು ಬೇಕಾಗುತ್ತದೆ.

ಮುಂಗಾರು ಮಳೆ ಶುರುವಾದ ನಂತರ ಜೂನ್‌ ಜುಲೈ ತಿಂಗಳಲ್ಲಿ ಗಿಡ ನಾಟಿ ಮಾಡುವುದು ಸೂಕ್ತ ಸಮಯ. ತಂಗು ಪ್ರದೇಶದಲ್ಲಿ ಮಳೆ ಕಡಿಮೆಂಖಾದ ನಂತರ ಸೆಪೈಂಬರ್‌ನಲ್ಲಿ ಗಿಡ ನೇಡುವುದು.

10 ರಿಂದ 18 ತಿಂಗಳ ಏಲಕ್ಕೆ ಗಿಡಗಳನ್ನು ಗುಂಡಿಯಲ್ಲಿ ನೇಡುವುದು. ಮಲಬಾರ್‌ ತಳಿಗೆ, 45 ಥಿ 45 ಥಿ 45 ಸೆಂ. ಮೀ. ಅಳತೆಯ ಗುಣಿಗಳ ಮತ್ತು ಮೈಸ್ರರು, ವೆಜುಕ್ಕಾ ತಳಿಗಳಿಗಿ 90 ಥಿ 90 ಥಿ 45 ಸೆಂ. ಮೀ. ಅಥವಾ 90 ಠಿ 90 ಥಿ 90 ಸೆಂ. ಮೀ. ಅಳತೆಯ ಗುಣಿಗಳನ್ನು ತೆಗೆದು, ಆ ಗುಣಿಗಳನ್ನು 1/3 ಭಾಗದಷ್ಟು ಮೇಲ್ಮಣ್ಣಿನಿಂದಲೂ ಮತ್ತು 1/3 ಭಾಗದಷ್ಟು ಸಾವಯವ ಗೊಬ್ಬರ ಮತ್ತು ಮೇಲ್ಮಣ್ಣುಗಳ ಮಿಶ್ರಣ ಭರ್ತಿಮಾಡಬೇಕು. ಮೈಸೂರು ತಳಿ ಮತ್ತು ವೆಜುಕ್ಕಾ ತಳಿಗಳಿಗೆ ಗಿಡಗಳಿಂದ ಗಿಡಗಳಿಗೆ 3 ಮೀ. ಅಂತರದಲ್ಲಿ (ಹಕ್ಬೇರಿಗೆ 1111 ಸಸಿಗಳು) ಮತ್ತು ವಜಕ್ಕ ತಳಿಗೆ 2.4ಥು.4 ಮೀ. ಅಂತರವನ್ನು (ಹೆಕ್ಟೇರಿಗೆ 1736 ಸಸಿಗಳು) ಶಿಫಾರಸು ಮಾಡಲಾಗಿದೆ. ಕರ್ನಾಟಕದಲ್ಲಿ ಗಿಡಗಳಿಂದ ಗಿಡಗಳಿಗೆ 18 ಥಾ 1.8 ಮೀ. 2 ಥಾ 2 ಮೀ ಅಂತರವು (ಹೆಕ್ಟೇರಿಗೆ 3086-2500 ಸಸಿಗಳು) ಮಲಬಾರ್‌ ಸೂಕ್ತವಾದುದಾಗಿದೆ. ಭರ್ತಿ ಮಾಡಿದ ಗುಣಿಗಳಲ್ಲಿ ಈ ಸಸಿಗಳನ್ನು ನಾಟಿ ಮಾಡಬೆಕು. ಗಿಡ ನೇಡುವಾಗ 15 ಗ್ರಾಂ ಕಾರ್‌ಬೊಪೋರಾನ್‌ ಅಥವಾ 50 ಗ್ರಾಂ ಬೇವಿನ ಹಿಂಡಿ ಮತ್ತು 40 ಗ್ರಾಂ ಮಾಡಬೆಕು. ಗಿಡ ನೇಡುವಾಗ 15 ಗ್ರಾಂ ಕಾರ್‌ಬೊಪೋರಾನ್‌ ಅಥವಾ 50 ಗ್ರಾಂ ಬೇವಿನ ಹಿಂಡಿ ಮತ್ತು 40 ಗ್ರಾಂ ಕಾರ್‌ಪಾಸ್‌ಪೆಟ್‌ ಗುಂಡಿಗೆ ಹಾಕಬೇಕು. ಗಿಡಗಳನ್ನು ತುಂಬ ಆಳದಲ್ಲಿ ನೇಡಬಾರದು. ನಾಟಿ ಮಾಡಿದ ಸಸಿಗಳು ಗಾಳಿಗೆ ಅಲುಗಾಡದಂತೆ ಕೋಲಿನಿಂದ ಆಧಾರ ಕೊಡಬೇಕು. ಗಿಡ ನೆಟ್ಟ ನಂತರ ತರಗೆಲೆಯಿಂದ ಗಿಡದ ಬುಡವನ್ನು ಮುಚ್ಚಬೇಕು. ಇಳಿಜಾರಿಗೆ ಅಡವಾಗಿ ನೇಡುವುದರಿಂದ ಮಣ್ಣು ಮತ್ತು ನೀರು ಸಂರಕ್ಟಣೆ ಸಾಧ್ಯ. ಗಿಡಗಳನ್ನು ಕಾಲುವೆಯಲ್ಲಿ (60 ಥಿ 30 ಸೆಂ.ಮೀ., 2 ಥ 1 ಮೀ ಅಂತರದಲ್ಲಿ ನೇಡುವುದು. ಗುಂಡಿಯಲ್ಲಿ ನೇಡುವುದಕ್ಕಿಂತ ಉತ್ತಮ. ಇದರಿಂದ ಗಿಡಗಳು ಬೇಗ ಉತ್ತಮವಾಗಿ ಬೆಳೆದು ಉತ್ತಮ ಇಳುವಾರಿ ಕೊಡುತ್ತವೆ. ಜೊತೆಗೆ ನೀರಿನ ಅಂಶ ತುಂಬ ದಿನ ಉಳಿಯುತ್ತದೆ. ಇಳಿಜಾರು ಭೂಮಿಯಲ್ಲಿ ಜಗತಿ ಕಟ್ಟೆಗಳನ್ನು ಮಾಡಿ 2-3 ಮೀ ಉದ್ದ ಮಾಡಿ ಗುಂಡಿಗಳನ್ನು ಅಂತರದಲ್ಲಿ ತೆಗೆದು ಗಿಡ ನೆಡುವುದು.

ಬೇಸಿಗೆ ತಿಂಗಳುಗಳಲ್ಲಿ ಹಾಗೂ ಬಹುಕಾಲದವರೆಗೆ ಮಳೆಯು ಬಾರದೇ ಇರುವ ಸಂದಿಗ್ಧ ಸಮಯ (ಎಳೆಯ ಕವಲುಗಳು ಮತ್ತು ಸಂಕೀರ್ಣ ಪುಷ್ಪಗುಚ್ಛಗಳ ಬೆಳವಣಿಗೆಂಯಾಗುವ ಅವಧಿಗಳಲ್ಲಿ ಸಾಮಾನ್ಯವಾಗಿ ನೀರು ಕೊಡಬೇಕಾಗುತ್ತದೆ. ಮಳೆಗಾಲದಲ್ಲಿ ವಿವಿಧ ನೀರು ಸಂಗ್ರಹಣಾ ವಿಧಾನಗಳ ಮೂಲಕ ನೀರನ್ನು ಸಂಗ್ರಣೆ ಮಾಡಬೇಕು. ಕುಂಡ ನೀರಾವರಿ, ಪೈಪುಗಳ ಮೂಲಕ ನೀರು ಕೊಡುವುದು, ತುಂತುರು (ಸಿಂಚನ) ನೀರಾವರಿ, ಹನಿ ನೀರಾವರಿ ಅಥವಾ ಕಿರು ತುಂತುರು ನೀರಾವರಿ ಇತ್ಯಾದಿ ನೀರಾವರಿ ವಿಧಾನಗಳ ಮೂಲಕ ನೀರು ಕೊಡಬಹುದು. ಕುಂಡ ನೀರಾವರಿ ಅಥವಾ ಪೈಪುಗಳ ಮೂಲಕ ನೀರು ಕೊಡುವುದಾದಲ್ಲಿ ವಾರಕ್ಕೊಮ್ಮೆ ಗಿಡವೊಂದಕ್ಕೆ 20-30 ಲೀ. ನಷ್ಟು (ಗಿಡದ ಬುಡದ ಗಾತ್ರವನ್ನು ಆಧರಿಸಿ) ನೀರು ಕೊಡಬಹುದು. ತುಂತುರು ನೀರಾವರಿ ಮೂಲಕ ನೀರು ಕೊಡುವುದಾದಲ್ಲಿ ಸಾಮಾನ್ಯವಾದ ಪರಿಸ್ಥಿತಿಯಲ್ಲಿ 15 ದಿನಗಳಿಗೊಂದಾವರ್ತಿ 35 ರಿಂದ 45 ಮೀ. ಮೀ. ಮಳೆಗೆ ಸಮಾನವಾದಷ್ಟು ನೀರು ಕೊಡಬೇಕು. ಹನಿ ನೀರಾವರಿ ಅಥವಾ ಕಿರು ತುಂತುರು (ಸಿಂಚನ) ನೀರಾವರಿ ಕೊಡುವುದಾದಲ್ಲಿ ಪ್ರತಿ ದಿನ ಗಿಡವೊಂದಕ್ಕೆ ೫ ರಿಂದ ೬ ಲೀಟರ್ ನಷ್ಟು ನೀರು ಕೊಡಬೇಕು . ಯಾವುದೇ ನೀರಾವರಿ ವಿಧಾನವನ್ನು ಅನುಸರಿಸುವಾಗ ಎಷ್ಟು ದಿನಗಳಿಗೊಮ್ಮೆ ನೀರು ಕೊಡಬೇಕೆನ್ನುವುದು ಸ್ಥಳೀಯ ಹವಾಗುಣವನ್ನು ಅವಲಂಭಿಸಿ ನಿರ್ಧರಿಸಬೇಕಾಗುತ್ತದೆ. ನೀರು ಕೊಡುವಾಗ ಗಿಡದ ಬುಡಭಾಗದಲ್ಲಿ ಅತಿ ಹೆಚ್ಚು ಅವಧಿಯವರೆಗೆ ಅಧಿಕ ತೇವಾಂಶವಿರದಂತೆ ಎಚ್ಚರಿಕೆ ವಹಿಸಬೇಕು. ಅಧಿಕ ತೇವಾಂಶವಿದ್ದರೆ ಗಿಡಗಳು ಅಜುಕಲ್‌ (ಕೊಳೆ) ರೋಗಕ್ಕೆ ತುತ್ತಾಗುತ್ತವೆ. ಭೂಮಿಯು ಸ್ವಲ್ಪ ಇಳಿಜಾರಾಗಿರುವ ತೋಟಗಳಲ್ಲಿ ನಾಲ್ಕು ಏಲಕ್ಕಿ ಗಿಡಗಳ ಮಧ್ಯೆ ಆಯತಾಕಾರದ (10 ಥಿ 0.5 ಥಿ 0.6 ಮೀ) ಗುಣಿಗಳನ್ನು ತೆಗೆಯುವುದರಿಂದ ಈ ಗುಣಿಗಳಲ್ಲಿ ಶೇಖರಣೆಯಾಗುವುದರ ಜೊತೆಗೆ ನೀರು ಮತ್ತು ಮಣ್ಣು ಸಂರಕ್ಟಿಸಲು ಸಹಾಯಕವಾಗುತ್ತದೆ.

ಭೂಮಿಯ ಇಳಿಜಾರು ಬಹಳಷ್ಟು ಕಡಿದಾಗಿರುವ ಪ್ರದೇಶಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ 10-20 ಮೀ. ಅಂತರದಲ್ಲಿ ಕಲ್ಲಿನ ಗೋಡೆಗಳನ್ನು ಕಟ್ಟುವುದರಿಂದ ಹಾಗೂ ನೀರು ಬಸಿದು ಹೋಗಲು ನಿರ್ಮಿಸಿರುವ ಬಸಿಗಾಲುವೆಗಳಲ್ಲಿ ಅಲ್ಲಲ್ಲಿ ನೀರು ಶೇಖರಣಾ ಕಂದಕಗಳನ್ನು ತೆಗೆಂಯುವುದರಿಂದ ಮಣ್ಣು ಮತ್ತು ನೀರು ಸಂರಕ್ಚಿಸಬಹುದು.

ಕಳೆಗಳು ಏಲಕ್ಕಿ ಬೆಳೆಯೊಂದಿಗೆ ನೀರು ಮತ್ತು ಪೋಷಕಾಂಶಗಳಿಗೋಸ್ಕರ ಬಹಳವಾಗಿ ಸ್ಪರ್ಧಿಸುತ್ತವೆ. ಆರಂಭದಲ್ಲಿ ಕಳೆಗಳ ಬೆಳವಣಿಗೆಯು ಬಹಳ ಷ್ಟಿರುತ್ತದೆ. ಮೇ, ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ / ಜನವರಿ ತಿಂಗಳುಗಳಲ್ಲಿ ಎರಡು ಅಥವಾ ಮೂರುಬಾರಿ ಸಸಿಗಳ ಬುಡದಲ್ಲಿ ಕಳೆಯನ್ನು ಕೈಯಿಂದ ತೆಗೆಯಬೇಕು. ಕಳೆ ತೆಗೆದ ನಂತರ ದೊರೆಯುವ ಹಾಲ್ಲು ಮತ್ತು ಕಳೆಗಳನ್ನು ಮಣ್ಣಿನ ಮೇಲೆ ಹೊದಿಕೆಂಯಾಗಿ ಮುಚ್ಚಲು ಉಪಯೋಗಿಸಬೇಕು . ಕಳೆಯನ್ನು ಯಂತ್ರಗಳ ಮೂಲಕ ಸಹ ತೆಗೆಯಬಹುದು.

ಮಣ್ಣಿನಲ್ಲಿನ ತೇವಾಂಶ ಆವಿಯಾಗುವುದನ್ನು ತಡೆಗಟ್ಟಲು, ಕಳೆಗಳ ಬೆಳವಣಿಗೆಯನ್ನು ಅಡಗಿಸಲು ಮತ್ತು ಮಣ್ಣಿನ ಉಷ್ಟತೆಯನ್ನು ಸಮಸ್ಥಿತಿಯಲ್ಲಿಡಲು ಸಾಧ್ಯವಾದ ಮಟ್ಟಿಗೆ, ತೋಟದ ಪೂರ್ತಿ ಮತ್ತು ಅದರಲ್ಲೂ ಗಿಡಗಳ ಬುಡದ ಮಣ್ಣಿನ ಮೇಲೆ ಒಣಗಿದ
ತರಗೆಲೆಗಳಿಂದ ಹೊದಿಕೆಯನ್ನು ಹಾಕಬೇಕು. ಹೆಚ್ಚು ಮಳೆಯಾಗುವ ಕಾಲವನ್ನು (ಜೂನ್‌-ಸೆಪ್ಟೆಂಬರ್‌) ಹೊರತುಪಡಿಸಿ, ಉಳಿದ ಕಾಲದಲ್ಲಿ ಗಿಡಗಳ ಬುಡದ ಭಾಗದಲ್ಲಿ ಮಣ್ಣಿನ ಮೇಲೆ ಒಣಗಿದ ತರಗೆಲೆಗಳಿಂದ ಹೊದಿಕೆ (5-10 ಸೆಂ. ಮೀ. ದಪ್ಪ) ಹಾಕುವುದು ಅತ್ಯಾವಶ್ಯಕ. ಉತ್ತಮ ಮಣ್ಣು ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಮಣ್ಣು ಸಡಿಲವಾಗುವುದಲ್ಲದೆ ಪುಡಿ ಪುಡಿ ಆಗುತ್ತದೆ. ಮಣ್ಣು ಗಟ್ಟಿಯಾಗುವ ಪರಿಸ್ಥಿತಿಗಳಲ್ಲಿ, ಗಿಡಗಳ ಬುಡದ ಸುತ್ತ 90 ಸೆಂ. ಮೀ. ದೂರದವರೆಗೆ 9-12 ಸೆಂ. ಮೀ. ಆಳದವರೆಗೆ ಮಣ್ಣನ್ನು ಕಲಕುವುದರಿಂದ ಬೇರುಗಳ ಬೆಳವಣಿಗೆ ಹೆಚ್ಚಿಸಲು, ಬೇಸಿಗೆಯಲ್ಲಿ ಬಿದ್ದ ಮಳೆಯ ನೀರು ಭೂಮಿಯಲ್ಲಿ ಇಂಗುವಿಕೆಗೆ ಹಾಗೂ ಮಣ್ಣಿನಲ್ಲಿ ಗಾಳಿಯಾಡಲು ಸಹಾಯಕವಾಗುತ್ತದೆ. ಈಶಾನ್ಯ ಮಳೆಗಾಲ ಮುಗಿಯುವಾಗ ನವೆಂಬರ್‌ – ಡಿಸೆಂಬರ್‌ ತಿಂಗಳುಗಳಲ್ಲಿ ಬೇರು ಸಮೂಹಕ್ಕೆ ಅತಿ ಕಡಿಮೆ ಹಾನಿಯಾಗುವಂತೆ ಎಚ್ಚರಿಕೆ ವಹಿಸಿ ಮಣ್ಣನ್ನು ಕಲಕಬೇಕು.

ಗಿಡಗಳ ಬುಡವನ್ನು ಮುಚ್ಚಿರುವ ಮೇಲ್ಮಣ್ಣು ಕೊಚ್ಚಿ ಹೋಗಿ, ಗುಪ್ತಕಾಂಡ ಮತ್ತು ಬೇರುಗಳು ಕಾಣಿಸಿಕೊಂಡಾಗ ಹಿಂಗಾರು ಮಳೆ ನಿಲ್ಲುವುದಕ್ಕಿಂತ ಮುಂಚೆ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಿನಲ್ಲಿ ಗಿಡಗಳ ಬುಡಕ್ಕೆ ಮೇಲ್ಮಣ್ಣಿನಿಂದ ಏರು ಹಾಕಬೇಕು. ಈ ಕಾರ್ಯವನ್ನು ಮಾಡುವಾಗ ಮೇಲ್ಮಣ್ಣನ್ನು ಮಾತ್ರ ಉಪಂಕೋಗಿಸಬೇಕು ಮತ್ತು ಗುಪ್ತಕಾಂಡದ ಗೆಡ್ಡೆಯ ಅರ್ಧ ಭಾಗದಷ್ಟು ಮುಚ್ಚುವಂತೆ ಬುಡದಲ್ಲಿ ತೆಳುವಾಗಿ ಮತ್ತು ಸಮನಾಗಿ ಹರಡಬೇಕು. ಈ ರೀತಿ ಮಾಡುವುದರಿಂದ 10-15 ಸೆಂ. ಮೀ. ದಪ್ಪದಷ್ಟು ಮೇಲ್ಮಣ್ಣು ಸಡಿಲ ಮತ್ತು ಪಡಿ ಪುಡಿಯಾಗಿ ಬೇರುಗಳು ಸುಲಭವಾಗಿ ಮಣ್ಣಿನ ಆಳಕ್ಕೆ ಹೋಗಲು ಮತ್ತು ನೀರು ಭೂಮಿಯಲ್ಲಿ ಇಂಗಲು ಸಹಾಯಕವಾಗುತ್ತದೆ.

ತಗ್ಗು ಮತ್ತು ಜಾಸ್ತಿ ಮಳೆ ಬೀಳುವ ಪ್ರದೇಶಗಳಲ್ಲಿ, 45 ಸೆಂ.ಮೀ. ಆಳ 30 ಸೆಂ.ಮೀ. ಅಗಲದ ಎರಡು ಸಾಲುಗಳ ಮದ್ಯ ಚರಂಡಿ ಮಾಡಬೇಕು. ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚೆ ನೆರಳು ತೆಗೆಯಬೇಕು. ಮಿಥ್ಯಾಕಾಂಡದಿಂದ ಸತ್ತು ಹೋದ ಒಣಗಿ ಜೋತಾಡುತ್ತಿರುವ ಎಲೆಗಳನ್ನು ಮತ್ತು ಮಿಥ್ಯಾಕಾಂಡಗಳನ್ನು ಚೂಪಾದ ಕುಡಿಗೋಲಿನಿಂದ ಕತ್ತರಿಸಿ ತೆಗೆಯುವುದು. ಈ ಕಾರ್ಯ ಮಾಡುವಾಗ ಮಿಥ್ಯಾಕಾಂಡದಿಂದ ಎಲೆಯ ಗರಿ ಸುಲಿದು ಹೋಗದಂತೆ ಎಚ್ಚರಿಕೆ ವಹಿಸಬೇಕು. ಜನವರಿಯಲ್ಲಿ ಮತ್ತು ಸೆಪ್ಟೆಂಬರ್‌ನಲ್ಲಿ (ಥ್ರಿಪ್ಸ್‌ ಕೀಟಗಳ ಸಂಖ್ಯೆ ಜಾಸ್ತಿ ಇರುವ ಕಾಲ) ಈ ಕೆಲಸವನ್ನು ಮಾಡಬಹುದು. ಈ ರೀತಿ ಕತ್ತರಿಸಿದ ಎಲೆಗಳನ್ನು ಗಿಡಗಳ ಬುಡಭಾಗದ ಸುತ್ತ ಮಣ್ಣಿನ ಮೇಲೆ ಹೊದಿಕೆಂಯಾಗಿ ಹರಡಲು ಬಳಸಬಹುದು.

ಎಪಿಸ್‌ ಸೆರೆನಾ ಇಂಡಿಕಾ ಮತ್ತು ಎಪಿಸ್‌ ಡಾರ್ಸೇಟಾ ಎಂಬ ಪ್ರಭೇದದ ಜೇನು ನೊಣಗಳು ಏಲಕ್ಕಿಯ ಹೂವುಗಳಲ್ಲಿ ಪರಾಗಸ್ಪರ್ಶವಾಗಲು ಸಹಾಯ ಮಾಡುತ್ತವೆ. ಬೆಳಿಗ್ಗೆ 7 ರಿಂದ 11 ಗಂಟೆಯವರೆಗಿನ ಸಮಂಹದಲ್ಲಿ ಜೇನು ನೊಣಗಳು ಏಲಕ್ಕಿ ಬೆಳೆಯ ಹೂವುಗಳಿಂದ ಮಕರಂದ ಹೀರುವಾಗ ಪರಾಗಸ್ಪರ್ಶ ನಡೆಯುತ್ತದೆ. ಜೇನು ನೊಣಗಳು ಏಲಕ್ಕೆ ಗಿಡದಲ್ಲಿರುವ ಪ್ರತಿಯೊಂದು ಹೂವಿಗೂ ಭೇಟಿ ನೀಡುತ್ತವೆ. ಜೇನು ನೊಣಗಳು ಹೂವುಗಳಿಗೆ ಬೇಟಿ ನೀಡುವುದರಿಂದ ಕಾಯಿ ಕಚ್ಚಲು ಸಹಾಯಕವಾಗುತ್ತದೆ ಮತ್ತು ಒಂದು ಹೆಕ್ಟೇರ್‌ ಏಲಕ್ಕಿ ತೋಟದಲ್ಲಿ ಪರಾಗಸ್ಪರ್ಶವು ಪರಿಣಾಮಕಾರಿಯಾಗಿ ನಡೆಯಲು ಜೇನು ನೊಣಗಳ ನಾಲ್ಕು ಕುಟುಂಬಗಳನ್ನು ಸಾಕಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಜೇನು ನೊಣ ಸಾಕುವುದರಿಂದ ಪರಾಗ ಸ್ಪರ್ಶವಾಗಿ ಕಾಯಿಕಚ್ಚುವಿಕೆಯು ಜಾಸ್ತಿಯಾಗುವ್ರುದರ ಜೊತೆಗೆ. ಬೀಜಕೋಶದಲ್ಲಿನ ಬೀಜಗಳ ಸಂಖ್ಯೆ ಮತ್ತು ಹಸಿ ಬೀಜಕೋಶಗಳನ್ನು ಒಣಗಿಸಿದಾಗ ಲಭ್ಯವಾಗುವ ಒಣ ಬೀಜಕೋಶಗಳ ತೂಕವೂ ಹೆಚ್ಚಾಗುತ್ತದೆ.

ಉತ್ತಮ ಇಳುವರಿಯನ್ನು ಪಡೆಯಲು 8-10 ವರ್ಷಕೊಮ್ಮೆ ಪುನರ್‌ ನಾಟಿ ಮಾಡುವುದು. ಏಲಕ್ಕಿಯ ಇಳುವರಿಯು ಆರ್ಥಿಕವಾಗಿ ಕಡಿಮೆಯಾದ ವರ್ಷದಿಂದ ಪುನರ್‌ ನಾಟಿ ಮಾಡುವುದು ಸೂಕ್ತ.

Also read  Falling pepper prices hits coffee growers further

ಗೊಬ್ಬರಗಳನ್ನು ಹಾಕುವುದು

ಶಿಫಾರಾಸ್ಸು ಮಾಡಿದ ಗೊಬ್ಬರದ ಮೂರನೇ ಒಂದು ಭಾಗವನ್ನು ನಾಟಿ ಮಾಡಿದ ಮೊದಲನೇ ವರ್ಷದಲ್ಲಿ ಮಳೆ ಆಧಾರಿತ ಮತ್ತು ನೀರಾವರಿ ಪ್ರದೇಶದಲ್ಲಿ ಕೊಡುವುದು (ಕೊಪ್ಪಕೆ-2). ಎರಡನೇ ವರ್ಷ ಶಿಫಾರಾಸ್ಸು ಮಾಡಿದ ಗೊಬ್ಬರದ ಅರ್ಧ ಭಾಗವನ್ನು ಮತ್ತು ಮೂರನೇ ವರ್ಷದಿಂದ ಶಿಫಾರಾಸ್ಸು ಮಾಡಿದ ಪೂರ್ಣ ಪ್ರಮಾಣದ ರಸಗೊಬ್ಬರವನ್ನು ಕೊಡುವುದು.

ಗಿಡಗಳ ಬುಡದಲ್ಲಿನ ಒಣಗಿದ ತರಗೆಲೆಗಳ ಹೊದಿಕೆಯನ್ನು ತೆಗೆದು, ಗಿಡಗಳ ಬುಡದಿಂದ 30 ಸೆಂ.ಮೀ. ದೂರದಲ್ಲಿ 15 ಸೆಂ.ಮೀ. ಅಗಲದ ವರ್ತುಲಾಕಾರದಲ್ಲಿ ಮಣ್ಣಿನ ಮೇಲೆ ಚೆಲ್ಲಿ 5 ರಿಂದ 7 ಸೆಂ.ಮೀ. ಆಳಕ್ಕೆ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ರಸಗೊಬ್ಬರ ಹಾಕಿದ ಪ್ರದೇಶವನ್ನು ಒಣಗಿದ ತರಗೆಲೆಗಳಿಂದ ಪುನ: ಹೊದಿಕೆ ಹಾಕಬೇಕು.

ಅಧಿಕ ಉತ್ಪಾದನಾ ತಾಂತ್ರಿಕತೆಯಡಿಯಲ್ಲಿ ಏಲಕ್ಕಿಯನ್ನು 18 ತಿಂಗಳುಗಳ ನಂತರ ಕೊಯಿಲು ಮಾಡುವ ಬೆಳೆಯಲ್ಲಿ ಎರಡನೆಯ ವರ್ಷದ ನಂತರ ಪೂರ್ತಿ ಬೆಳವಣಿಗೆ ಹಾ ತೋಟಗಳಿಗೆ ಶಿಫಾರಸು ಮಾಡಿದಷ್ಟು ರಸಗೊಬ್ಬರಗಳನ್ನು ಕೊಡಬೇಕು. ನಾಲ್ಕು ಅಥವಾ ಹೆಚ್ಚು ಕಂತುಗಳಲ್ಲಿ ಕಡಿಮೆ ಪ್ರಮಾಣದ ರಸಗೊಬ್ಬರಗಳನ್ನು ಪ್ರತಿಬಾರಿ ಏಲಕ್ಕಿಯನ್ನು ಕೊಯಿಲು ಮಾಡಿದ ನಂತರ ಕೊಡಬೇಕು ಅಥವಾ ರಸಗೊಬ್ಬರಗಳನ್ನು ಕೊಡ ೨ ವಾಗ ಮಣ್ಣಿಗೆ ಹಾಕುವ ವಿಧಾನ ಹಾಗೂ ಗಿಡಗಳ ಮೇಲೆ ಸಿಂಪರಣೆ ಮಾಡುವ ವಿಧಾನ ಎರಡರ ಮೂಲಕ ಕೊಡಬೇಕು.

ಗಿಡವೊಂದಕ್ಕೆ 5 ಕಿ.ಗ್ರಾಂ. ಕಳೆತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್‌ ಗೊಬ್ಬರವನ್ನು ಮೇ-ಜೂನ್‌ ತಿಂಗಳುಗಳಲ್ಲಿ ಕೊಡಬೇಕು.

ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರವನ್ನು ಒಳಗೊಂಡ ಸಿಂಪರಣಾ ದ್ರಾವಣವನ್ನು ಗಿಡಗಳ ಎಲೆಗಳ ಮೇಲೆ ಎಲೆಗಳ ಮೇಲ್ಮೈ ಮತ್ತು ತಳಭಾಗಗಳೆರಡೂ ಕಡೆ ತಗುಲುವಂತೆ ಸಿಂಪರಿಸಬೇಕು. ಸಿಂಪರಣೆ ಮಾಡುವ ಸಮಯದಲ್ಲಿ ಗಿಡದಲ್ಲಿ ಸಾಕಷ್ಟು ತೇವಾಂಶವನ್ನು ಹೊಂದಿರಬೇಕು.

ಮಣ್ಣಿನ ರಸಸಾರ 5.0ಕ್ಕಿಂತ ಕಡಿಮೆ ಇರುವ ಮಣ್ಣುಗಳಲ್ಲಿ ಗಿಡವೊಂದಕ್ಕೆ ವರ್ಷಕ್ಕೆ ಒಂದು ಕಿ.ಗ್ರಾಂ. ಕೃಷಿ ಸುಣ್ಣವನ್ನು ಹಾಕಬೇಕು. ಸುಣ್ಣವನ್ನು ಒಂದು ಅಥವಾ ಎರಡು ಕಂತುಗಳಲ್ಲಿ ಮೇ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿ ಕೊಡಬೇಕು. ಸುಣ್ಣವನ್ನು ಹಾಕಿದ 15-20 ದಿನಗಳ ನಂತರವೇ ರಸಗೊಬ್ಬರಗಳನ್ನು ಹಾಕಬೇಕು.

ಸತುವಿನ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ 250 ಗ್ರಾಂ. ಕರಗಿಸಿ, ಏಪ್ರಿಲ್‌/ಮೇ ಮತ್ತು ಸೆಪ್ಟೆಂಬರ್/ಅಕ್ಟೋಬರ್‌ ತಿಂಗಳುಗಳಲ್ಲಿ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಗಿಡಗಳ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ ಏಲಕ್ಕಿಯ ಗುಣಮಟ್ಟವನ್ನೂ ಉತ್ತಮಪಡಿಸುತ್ತದೆ. ಸತುವ್ರ ದ್ರಾವಣ ಸಿಂಪರಿಸುವಾಗ ಇದರ ಜೊತೆಗೆ ಬೇರೆ ಯಾವುದೇ ಕೀಟನಾಶಕ ಅಥವಾ ಶಿಲೀಂಧ್ರನಾಶಕ ಅಥವಾ ರಸಗೊಬ್ಬರದೊಂದಿಗೆ ಮಿಶ್ರಮಾಡಬಾರದು.

Also read  ಡಿಎಪಿ ರಸಗೊಬ್ಬರ: ಸಬ್ಸಿಡಿ ಮೊತ್ತ ₹ 1,200ಕ್ಕೆ ಹೆಚ್ಚಳ

ಬೋರಾನ್‌ ಪೋಷಕಾಂಶ ಕೊರತೆಯಿರುವ ಪ್ರದೇಶಗಳಲ್ಲಿ ಹೆಕ್ಟೇರಿಗೆ 7.5 ಕಿ.ಗ್ರಾಂ. ನಷ್ಟು ಬೋರಾಕ್ಸ್‌ ಅನ್ನು ಮಣ್ಣಿಗೆ ಹಾಕಿ, ಮಿಶ್ರ ಮಾಡಬೇಕು. ಬೋರಾಕ್ಸ್‌ ಅನ್ನು ರಸಗೊಬ್ಬರಗಳ ಜೊತೆಗೆ ಎರಡು ಸಮಪ್ರಮಾಣದ ಕಂತುಗಳಲ್ಲಿ ಕೊಡಬಹುದು.

ಕೀಟಗಳು

ಏಲಕ್ಕಿ ಥ್ರಿಪ್ಸ್‌ (ಸಿಯೋಥ್ರಿಪ್ಸ್‌ ಕಾರ್ಡ್‌ಮೋಮಿ)

ಥ್ರಿಪ್ಸ್‌ ಏಲಕ್ಕಿ ಬೆಳೆಯ ಹಾನಿಕಾರಕ, ಸದಾ ಬಾಧಿಸುವ ಪೀಡೆಯಾಗಿದ್ದು, ಏಲಕ್ಕಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿಯೂ ಕಂಡು ಬರುತ್ತದೆ. ಈ ಕೀಟಗಳು ಗುಂಪು ಗುಂಪಾಗಿದ್ದು, ಇನ್ನೂ ಬಿಚ್ಚಿಕೊಂಡಿರದ ಎಲೆಗಳು, ಎಲೆಗರಿಗಳು, ಹೂವಿನ ಉಪಪತ್ರ ಮತ್ತು
ಹೂವಿನ ಕೊಳವೆಗಳು ಮುಂತಾದ ಸಸ್ಯದ ವಿವಿಧ ಭಾಗಗಳಲ್ಲಿ ವಂಶಾಭಿವೃದ್ಧಿ ಮಾಡುತ್ತವೆ. ಈ ಕೀಟದ ವಯಸ್ಕ ಕೀಟಗಳು ಮತ್ತು ಮರಿಹುಳುಗಳು ಸಂಕೀರ್ಣ ಪುಷ್ಪಗುಚ್ಛ ಮತ್ತು ಬೀಜಕೋಶಗಳಿಗೆ (ಕಾಯಿಗಳು) ಹಾನಿಯುಂಟುಮಾಡುತ್ತವೆ. ಈ ಕೀಟಗಳು ಮೇಲ್ಮೈ ಅಂಗಾಂಶಗಳನ್ನು ಕೆರೆದು, ಅದರಿಂದ ಒಸರುವ ರಸವನ್ನು ಹೀರುತ್ತವೆ. ಹಾನಿಗೊಳಗಾದ ಸಂಕೀರ್ಣ ಪುಷ್ಪಗುಚ್ಛಗಳು ಬೆಳವಣಿಗೆಯಲ್ಲಿ ಕುಂಠಿತವಾಗುತ್ತವೆ, ಹಾಗೂ ಎಳೆಯ ಬೀಜಕೋಶಗಳು ಹಾನಿಗೊಳಗಾದಾಗ ಅವುಗಳ ಮೇಲೆ ಕಜ್ಜಿಯಂತಹ ಬೆಳವಣಿಗೆ ಉಂಟಾಗುತ್ತದೆ. ಬಾಧೆಗೊಳಗಾದ ಬೀಜಕೋಶಗಳು ವಿಕಾರಾಕೃತಿ ಹೊಂದುವುದರ ಜೊತೆಗೆ ಮುಟುರುತ್ತವೆ.

ಈ ಕೀಟಗಳ ಸಂಖೈಯು ಬೇಸಿಗೆ (ಫೆಬ್ರವರಿ – ಮೇ)ಯಲ್ಲಿ ಅತಿ ಹೆಚ್ಚಾಗಿಯೂ, ಮಳೆಗಾಲ (ಜೂನ್‌-ಜುಲೈ)ದಲ್ಲಿ ಕನಿಷ್ಠವೂ ಮತ್ತು ಆಗಸ್ಟ್‌-ಡಿಸೆಂಬರ್‌ನಲ್ಲಿ ಕಡಿಮೆಯೂ ಇರುತ್ತದೆ.

ದಂಟು/ಸಂಕೀರ್ಣ ಪುಷ್ಪಗುಚ್ಛ/ಬೀಜಕೋಶ ಕೊರೆಯುವ ಹುಳು (ಕೋಸೂಗೆಥಿಸ್‌ಪಂಕ್ಕಿ ಫೆರಾಲಿಸ್‌)

ಬೀಜಕೋಶ, ಸಂಕೀರ್ಣ,ಪುಷ್ಪಗುಚ್ಛ ಮತ್ತು ರೆಂಬೆಗಳಿಗೆ ಹಾನಿ ಮಾಡುವ ಕೊರಕ ಹುಳುವಿನ ಹಾವಳಿಯು ಏಲಕ್ಕಿ ತೋಟಗಳಲ್ಲಿ ಒಂದು ಗಂಭೀರ ಸಮಸ್ಯೆಯಾಗಿದೆ. ಈ ಕೀಟದ ಮರಿ ಹುಳುವು ಹಾನಿಯುಂಟು ಮಾಡುತ್ತದೆ. ನಂತರದ ಹಂತದಲ್ಲಿ ಮರಿಹುಳುಗಳು ದಂಟುಗಳನ್ನು ಕೊರೆಯುತ್ತವೆ. ಇವುಗಳು ಮಿಥ್ಯಾಕಾಂಡದ ಒಳಗಿನ ಮಧ್ಯ ಭಾಗವನ್ನು ತಿನ್ನುವುದರಿಂದ ಮಧ್ಯದ ಭಾಗ ಕೊಳೆಯುತ್ತದೆ. ಸಂಕೀರ್ಣ ಪುಷ್ಪಗುಚ್ಛಗಳು ಬಾಧೆಗೊಳಗಾದಾಗ ಕೊರೆದ ಜಾಗದಿಂದ ಮೇಲ್ಭಾಗವು ಒಣಗಿ ಹೋಗುತ್ತದೆ. ಕಾಯಿಗಳಲ್ಲಿ ಮರಿಹುಳುವು ಬೀಜಗಳನ್ನು ತಿನ್ನುವುದರಿಂದ ಬೀಜಕೋಶಗಳು ಖಾಲಿಯಾಗುತ್ತವೆ.

ಕೀಟದ ಹಾವಳಿಯು ಮೂರು ಕಾಲಗಳಲ್ಲಿ (ಜನವರಿ-ಫೆಬ್ರವರಿ, ಮೇ-ಜೂನ್‌ ಮತ್ತು ಸೆಪ್ಟೆಂಬರ್‌-ಅಕ್ಟೋಬರ್‌) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಮೇಲ್ಕಂಡ ಕಾಲಗಳ ಮಧ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಗೊಣ್ಣೆ (ಬೇರು) ಹುಳು (ಬ್ಯಾಸಿಲೆಪ್ಪಾ ಫಲೈ ಕಾರ್ಸ್‌)

ಗೊಣ್ಣೆಹುಳು ಗಂಭೀರ ಕೀಟವಾಗಿದ್ದು, ಏಲಕ್ಕಿ ಬೆಳೆಯ ಬೇರುಗಳಿಗೆ ಹಾನಿ ಮಾಡುತ್ತದೆ. ಬೇರುಗಳ ಹಾನಿಯಿಂದ ಪೋಷಕಾಂಶಗಳ ಹೀರುವಿಕೆ ಕಡಿಮೆಯಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಕೀಟದ ಹಾವಳಿಯು ಕಡಿಮೆ ನೆರಳು ಇರುವ ಪ್ರದೇಶದಲ್ಲಿ ಗಂಭೀರವಾಗಿರುತ್ತದೆ.

ದುಂಬಿಗಳು, ಮಾರ್ಚಿ-ಏಪ್ರಿಲ್‌ ಮತ್ತು ಆಗಸ್ಟ್‌-ಸೆಪ್ಟೆಂಬರ್‌ ತಿಂಗಳುಗಳಲ್ಲಿ ಕಂಡು ಬರುತ್ತವೆ. ಮರಿಹುಳುಗಳು ಏಪ್ರಿಲ್‌ – ಜುಲೈ ಮತ್ತು ಸೆಪ್ಟೆಂಬರ್‌-ಜನವರಿ ತಿಂಗಳುಗಳಲ್ಲಿ ಕಂಡು ಬರುತ್ತವೆ.

ಮರಿಹುಳುಗಳು ಬೇರುಗಳನ್ನು ತಿಂದು, 45-60 ದಿನಗಳಲ್ಲಿ ಪೂರ್ಣ ಬೆಳವಣಿಗೆ ಹೊಂದಿದ ನಂತರ ಚಿಕ್ಕದಾಗಿ, ದಪ್ಪವಾಗಿ ಅರ್ಧ ಚಂದ್ರಾಕಾರದಲ್ಲಿರುತ್ತವೆ. ಕೋಶಾವಸ್ಥೆಯು ಮಣ್ಣಿನ ಕುಡಿಗೆಗಳಲ್ಲಿ ನಡೆಯುತ್ತದೆ. ಈ ಕೀಟವು ಮೊದಲನೆಯ ಸಂತತಿಯ ಜೀವನ ಚಕ್ರವನ್ನು 65-102 ದಿನಗಳಲ್ಲಿ (ಮಾರ್ಚಿ-ಆಗಸ್ಟ್‌) ಯೂ ಮತ್ತು ಎರಡನೆಯ ಸಂತತಿಯ ಜೀವನ ಚಕ್ರವನ್ನು 73-111 ದಿನಗಳಲ್ಲಿ (ಸೆಪ್ಟೆಂಬರ್‌- ಫೆಬ್ರವರಿ)ಯೂ ಮುಗಿಸುತ್ತವೆ.

ಅಪ್ರಧಾನ ಕೀಟಗಳು

ಕಾಯಿ ಕೊರೆಯುವ ಹುಳು

ಈ ಕೀಟದ ಮರಿಹುಳುಗಳು ಹೂವಿನ ಮೊಡ್ಗುಗಳು, ಹೂವುಗಳು ಮತ್ತು ಬೀಜಕೋಶಗಳನ್ನು ಕೊರೆದು ತಿನ್ನುತ್ತವೆ. ಅಪ್ರಾಪ್ತ ಬೀಜಕೋಶದ ಮೇಲೆ ವೃತ್ತಾಕಾರದ ರಂಧ್ರವೊಂದನ್ನು ಮಾಡಿ, ಅದರೊಳಗೆ ಮರಿಹುಳು ಸೇರಿಕೊಂಡು, ಬೀಜ ಕೋಶದೊಳಗಿರುವ ಬೀಜವನ್ನು ಸಂಪೂರ್ಣವಾಗಿ ತಿಂದು ಖಾಲಿ ಮಾಡುತ್ತದೆ. ಈ ಕೀಟದ ಬಾಧೆಯನ್ನು ಜೂನ್‌ ನಿಂದ ಸೆಪ್ಟೆಂಬರ್‌ ರವರೆಗೆ ಕಾಣಬಹುದು.

Also read  ಮಂಡ್ಯದ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಹಾಗೂ ಸುರುಳಿಯಾಕಾರದ ಬಿಳಿ ನೊಣ ಹಾವಳಿ:ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ

ಬೇರು ಮತ್ತು ಗೆಡ್ಡೆ ಕೊರೆಯುವ ಹುಳು

ಈ ಕೀಟದ ಮರಿ ಹುಳುಗಳ ಬೇರುಗಳನ್ನು ಕೊರೆದು ತಿನ್ನುತ್ತವೆ. ಈ ಕೊರೆದ ಜಾಗದಲ್ಲಿ ಮಲಿನ ವಸ್ತುಗಳನ್ನು ಬೀಡುವುದರಿಂದ, ಬೇರುಗಳು ಸಾಯುತ್ತವೆ, ನಂತರ ಗೆಡ್ಡೆಗಳು ಒಣಗುತ್ತವೆ ಈ ರೋಗವು ಎರಡನೆ ಹಂತದ ನರ್ಸರಿಯಲ್ಲಿ ಬರುತ್ತದೆ.

ಕಂಬಳಿ ಹುಳುಗಳು

ಇವು ಏಲಕ್ಕಿ ಎಲೆಗಳನ್ನು ಸಂಪೂರ್ಣವಾಗಿ ತಿಂದು ಹಾಕುವ ಕಂಬಳಿಹುಳುಗಳ ಗುಂಪಿಗೆ ಸೇರಿದ್ದು, ಬಹುಭಕ್ಬಕ ಆಗಿವೆ. ಈ ಕಂಬಳಿ ಹುಳುಗಳು ಆರಂಭದ ಹಂತಗಳಲ್ಲಿ ನೆರಳಿನ ಮರಗಳ ಎಲೆಗಳನ್ನು ತಿನ್ನುತ್ತವೆ, ನಂತರದ ಹಂತಗಳಲ್ಲಿ ಏಲಕ್ಕಿ ಎಲೆಗಳನ್ನು ತಿನ್ನುತ್ತವೆ.

ಮರಿಹುಳುಗಳನ್ನು ಶೇಖರಿಸಿ, ನಾಶ ಮಾಡಬೇಕು. ಹಗಲು ಸಮಯದಲ್ಲಿ ಮರಿಹುಳುಗಳು ಮರಗಳ ಕಾಂಡಗಳ ಮೇಲೆ ಗುಂಪಾಗಿ ಸೇರುವುದರಿಂದ ಯಾಂತ್ರಿಕ ಹತೋಟಿ ಕ್ರಮವು ಸುಲಭವಾದ ವಿಧಾನವಾಗಿದೆ.

ದಂಟಿನ ನೊಣ (ಫಾರ್ಮೋಸಿನಾ ಫ್ಲೇವಿಪಿಸ್‌)

ವಯಸ್ಕ ನೊಣವು ಏಲಕ್ಕಿ ಗಿಡದ ಮೇಲ್ಭಾಗದಲ್ಲಿನ ಎಲೆಯ ಗರಿ ಮತ್ತು ಮಿಥ್ಯಾಕಾಂಡಗಳ ಮಧ್ಯದಲ್ಲಿ ಬಿಳಿ ಬಣ್ಣದ ಮೊಟೆಗಳನ್ನು ಇಡುತ್ತದೆ. ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಮಿಥ್ಯಾಕಾಂಡದೊಳಗೆ ಹೋಗಿ ಬುಡದ ಭಾಗದ ಮಧ್ಯದಲ್ಲಿನ ಅಂಗಾಂಶಗಳನ್ನು ತಿನ್ನುವುದರಿಂದ ಸುಳಿಯಲ್ಲಿನ ಏಲೆಗಳು ಒಣಗಿ ಹೋಗುತ್ತವೆ (ಹೃದಯ ಭಾಗ ಸತ್ತು ಹೋದ ಲಕ್ಬಣ). ನೆರಳಿನಲ್ಲಿರದೇ ಬಯಲಿನಲ್ಲಿರುವ ಗಿಡಗಳಲ್ಲಿ ಇವುಗಳ ಬಾಧೆ ಜಾಸ್ತಿ ಇರುತ್ತದೆ. ಈ ಕೀಟದ ಹಾವಳಿ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ, ಮಾರ್ಚಿ-ಏಪ್ರಿಲ್‌ನಲ್ಲಿ ಅತಿ ಹೆಚ್ಚು ಇರುತ್ತದೆ.

ದಂಡಾಣುಗಳು (ಮೆಲೋಯಿಡೋಗ್ಬೆ ನ್‌ ಪ್ರಭೇದ)

ನರ್ಸರಿ ಮತ್ತು ತೋಟಗಳಲ್ಲಿ ಬೇರು ಗಂಟು ದಂಡಾಣುಗಳು (ಮೆಲೋಯಿಡೋಗ್ಯೈನೆ. ಇನ್‌ಕಂಗನಿಟ್‌ ಮತ್ತು ಮೆಲೋಯಿಡೋಗೈನೆ ಜವನಿಕ) ಏಲಕ್ಕಿ ಬೆಳೆಯ ಬೇರುಗಳಿಗೆ ಹಾನಿ ಮಾಡುತ್ತವೆ. ಎಲೆಗಳು ಕಿರಿದಾಗುವುದು, ಎಲೆಗಳ ನರಗಳು ದಪ್ಪವಾಗುವುದು, ದಂಟಿನಲ್ಲಿ ಗೆಣ್ಣುಗಳ ಮಧ್ಯದ ಅಂತರ ಕಡಿಮೆಯಾಗುವುದು, ನಂತರ ಎಲೆಗಳು ಚಿಕ್ಕದಾಗಿ ಗೊಂಚಲು ಗೊಂಚಲು ಆಗಿ ಗುಂಪು ಆಗುವುದು ಈ ದಂಡಾಣುಗಳು ಬಾಧಿಸಿದಾಗ ಕಂಡು ಬರುವ ಲಕ್ಬಣಗಳು. ಬೇರುಗಳು ಅಸಂಖ್ಯಾತ ಕವಲು ಹೊಡೆಯುತ್ತವೆ ಮತ್ತು ಅವುಗಳ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಗಿಡಗಳ ಬೆಳವಣಿಗೆ ಬಹಳಷ್ಟು ಕುಂಠಿತವಾಗುತ್ತದೆ. ಇಳುವರಿ ಶೇ.32-47 ಕಡಿಮೆಯಾಗುತ್ತದೆ. ಪಾಲುವಾಣ ಮರದ ಬೇರುಗಳಲ್ಲಿ ಈ ದಂಡಾಣುಗಳು ಜೀವಿಸುತ್ತವೆ.

ನರ್ಸರಿ ನಿರ್ವಹಣೆ

ನರ್ಸರಿಯನ್ನು ಇಥಲೀನ್‌ ಡೈ ಬ್ರೋಮೈಡ್‌, ಪಾರಸುಲೀನ್‌, ಮೀಥೈಲ್‌ ಬ್ರೋಮೈಡ್‌ ಹಾಕಿ ಪಾಲಿಥೀನ್‌ ಹಾಳೆಯಿಂದ 3-7 ದಿನ ಮಚ್ಚುವುದು ಅಥವಾ ಕೀಟನಾಶಕಗಳಾದ ಕಾರ್‌ಬೋಪೋರಾನ್‌/ಪೋರೇಟ್‌ ಹರಳುಗಳನ್ನು ಪ್ರತಿ ಮಡಿಗೆ 40 ಗ್ರಾಂ ಹಾಕುವುದು.

ತೋಟ

* ದಂಡಾಣು ರಹಿತ ಗಿಡಗಳನ್ನು ನೆಡುವುದು.
* ಬೆಳಕು ಜಾಸ್ತಿ ಬೀಳುವ ಪ್ರದೇಶದಲ್ಲಿ ಬುಡಕ್ಕೆ ತರೆಗೆಲೆ ಹಾಕುವುದು.
* ಪ್ರತಿ ಚರ್ಷ 250-1000 ಗ್ರಾಂ ಬೇವಿ ಹಿಂಡಿಯನ್ನು 2 ಬಾರಿ ಹಾಕುವುದು.
* ಬೆಳವಣಿಗೆ ಕಂಠಿತವಾಗಿರುವ ಗಿಡಗಳಿಗೆ ದುಂಡಾಣು ನಾಶಕಗಳಾದ ಕಾರ್‌ಬೋಪೋರಾನ್‌/ಪೋರೇಟ್‌ 15-50 ಗ್ರಾಂ ವರ್ಷದಲ್ಲಿ 2 ಬಾರಿ ಹಾಕುವುದು.
* ದುಂಡಾಣು ನಾಶಕಗಳಲ್ಲಿ ಮುಂಗಾರು ಮಳೆ ಕಾಲದಲ್ಲಿ ಕೊಟ್ಟು ಮಳೆಗಾಲದ ಮಧ್ಯ ಬಾಗದಲ್ಲಿ ಬೇವಿನ ಹಿಂಡಿಯನ್ನು ಕೊಡುವುದು ಬಹಳ ಉತ್ತಮ.

ಸಾಗುವಳಿ ಕ್ರಮ

* ನರ್ಸರಿಯನ್ನು ತೋಟದಿಂದ ದೂರ ಮಾಡುವುದರಿಂದ ಮತ್ತೆ ಮತ್ತೆ ಕೀಟ ಬಾದೆ ಕಾಣಿಸಿಕೊಳ್ಳುವುದನ್ನು ತಡೆಯಬಹುದು.
* ಸಾವಯವ ಗೊಬ್ಬರವನ್ನು ಕೊಡುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ
* ಸಸಿ ಮಡಿಗಳನ್ನು ಮಾಡುವ ಜಾಗವನ್ನು ಮತ್ತೆ ಮತ್ತೆ ಬದಲಿಸುವುದರಿಂದ ಸಸಿ ಮಡಿಗಳಲ್ಲಿ ದುಂಡಣು ಮತ್ತು ಬೇರು ತಿನ್ನುವ ಹುಳುಗಳನ್ನು ನಿಯಂತ್ರಿಸಬಹುದು
* ಬೇರಿನ ಪ್ರದೇಶಕ್ಕೆ ಮಳೆ ನಿಂತ ನಂತರ ಮಣ್ಣು ಕೊಟ್ಟು ತರೆಗೆಲೆಯಿಂದ ಮುಚ್ಚುವುದು
* ವರ್ಷದಲ್ಲಿ 3 ಬಾರಿ ಒಣಗಿರುವ ಎಲೆ ಮತ್ತು ಕಾಂಡಗಳನ್ನು ತೆಗೆಯಬೇಕು. ಕಳೆಗಳು ಮತ್ತು ಇತರೆ ಗಿಡಗಳನ್ನು ತೆಗೆಯುವುದರಿಂದ ಕೇಲವು ಕೀಟಗಳು ಕಡಿಮೆಯಾಗುತ್ತವೆ.
* ಬಲೆಗಳನ್ನು ಬಳಸಿ ಏಪ್ರಿಲ್‌ – ಮೇ ಮತ್ತು ಸೆಪೈೆಂಬರ್‌- ಅಕ್ಟೋಬರ್‌ನಲ್ಲಿ ಮಮಸ ಕೀಟ ಮತ್ತು ಚೀಟೆಗಳನ್ನು ಹಿಡಿದು ಸಾಯಿಸಬೇಕು.
* ಹಗಲು ಸಮಯದಲ್ಲಿ ಕಂಬಳಿ ಹುಳಗಳು ಮರಗಳ ಕಾಂಡಗಳ ಮೇಲೆ ಗುಂಪಾಗಿ ಸೇರುವುದರಿಂದ ಯಾಂತ್ರಿಕ ಹತೋಟಿ ಮಾಡಬೇಕು.
* ಬೆಳಕು ದೀಪಗಳನ್ನು ರಾತ್ರಿಕಾಲದಲ್ಲಿ ತೋಟದಲ್ಲಿ ನೆತ್ತು ಹಾಕಿ ಬಿದ್ದ ಕೀಟಗಳನ್ನು ಸಾಯಿಸಬೇಕು.

ರಾಸಯನಿಕ ಹತೋಟಿ

ಸಾಮಾಗ್ರ ರಾಸಯನಿಕ ವೇಳಪಟ್ಟಿಯನ್ನು ಆಳವಡಿಸಿ ಕಾಂಡ, ಕೊತ್ತು, ಕಾಯಿ, ಕೊರಕ , ಥ್ರಿಪ್ಸ್‌ ಎಲೆ ತಿನ್ನುವ ಮತ್ತು ರಸ ಹೀರುವ ಕೀಟಗಳನ್ನು ಹತೋಟಿ ಮಾಡುವುದು (ಕೋಷ್ಟಕ 3)
*. 20-40 ದಿನಗಳ ಅಂತರದಲ್ಲಿ ಕೀಟನಾಶಕ ಸಿಂಪಡಣೆ ಮಾಡುವುದು.
* ಜೇನು ನೊಣಗಳು ಏಲಕ್ಕಿ ತೋಟದಲ್ಲಿ ಬೆಳಗಿನ ಸಮಯ ಜಾಸ್ತಿ ಇರುವುದರಿಂದ ಕೀಟ ನಾಶಕಗಳ ಸಿಂಪಡಣೆಯನ್ನು ಮಧ್ಯಾಹ್ನದ ನಂತರ ಮಾಡವುದು.

ರೋಗಗಳು ಮತ್ತು ಅವುಗಳ ನಿರ್ವಹಣೆ

ಸಸಿಮಡಿಗಳ ರೋಗಗಳು

ಪ್ರಥಮ ಸಸಿಮಡಿ ಎಲೆ ಚುಕ್ಕೆ ರೋಗ (ಫಿಲ್ಲೋಸ್ಟಿಕ್ಟಾ ಎಲಿಟೇರಿಯಾ)

ಎಲೆ ಚುಕ್ಕೆ ರೋಗವು ಫಿಲ್ಲೋಸ್ಟಿಕ್ಟಾ ಎಲಿಟೇರಿಯಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತಿದ್ದು, ಸಸಿಮಡಿಗಳಲ್ಲಿ ಒಂದು ವಿನಾಶಕಾರಿ ರೋಗವಾಗಿದೆ. ಬೇಸಿಗೆ ಮಳೆ ಬಂದಾಗ (ಫೆಬ್ರವರಿ-ಏಪ್ರಿಲ್‌) ಈ ರೋಗ ಕಾಣಿಸಿಕೊಳ್ಳುತ್ತದೆ.

ರೋಗವ್ರ ಆರಂಭದಲ್ಲಿ ಎಲೆಗಳ ಮೇಲೆ ಮಾಸಲು ಬಿಳುಪಿನ ಗುಂಡಾಕಾರದ ಅಥವಾ ಅಂಡಾಕಾರದ ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಈ ಚುಕ್ಕೆಗಳು ಸಾಯುತ್ತವೆ, ಚುಕ್ಕೆಗಳ ಮಧ್ಯದಲ್ಲಿ ರಂಧ್ರವನ್ನು ಕಾಣಬಹುದು. ಈ ಚುಕ್ಕೆಗಳ ಸುತ್ತ ತೇವಾಂಶಭರಿತ ಪ್ರದೇಶವನ್ನು ಕಾಣಬಹುದು. ಸೂರ್ಯನ ಬಿಸಿಲು ಬೀಳುವ ಬಯಲಿನಲ್ಲಿ ಬೆಳೆಸಿದ ಸಸಿಮಡಿಗಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಎರಡನೆಯ ಸಸಿಮಡಿಗಳಲ್ಲಿ ಬೆಳೆಸಿದ ಬೆಳವಣಿಗೆ ಹೊಂದಿದ ಸಸಿಗಳಿಗೆ ಮತ್ತೊಂದು ತರಹದ ಎಲೆಚುಕ್ಕೆ ರೋಗವ್ರ ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಎಲೆಗಳ ಮೇಲ್ಮೈ ಮೇಲೆ ಹಳದಿಯಿಂದ ಕೆಂಪುಮಿಶ್ರಿತ ಕಂದು ಬಣ್ಣದ ಆಯತಾಕಾರದ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಈ ಪಟ್ಟಿಗಳು ಎಲೆಯ ಮೇಲಿರುವ ಪಕ್ಕದ ನರಗಳಿಗೆ ಸಮಾನಾಂತರವಾಗಿರುತ್ತವೆ. ವಯಸ್ಸಾದ ಕಲೆಗಳು ಮಣ್ಣಿನ ಕೆಂಪು ಬಣ್ಣವನ್ನು ಹೊಂದುತ್ತವೆ. ಸೆರ್ಕೋಸ್ಫೋರಾ ಜಿಂಜಬರೈ ಎಂಬ ಶಿಲೀಂಧ್ರದಿಂದ ಈ ರೋಗ ಉಂಟಾಗುತ್ತದೆ.

ನಿರ್ವಹಣೆ

* ಆಗಸ್ಟ್‌-ಸೆಪ್ಟೆಂಬರ್‌ ತಿಂಗಳುಗಳಲ್ಲಿ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಸಸಿಗಳು ಸಾಕಷ್ಟು ಬೆಳವಣಿಗೆಯಾಗಿ ರೋಗ ಸಹಿಸುವ ಶಕ್ತಿಯನ್ನು ಹೊಂದುತ್ತವೆ.
* ಮೇಲ್ಭಾಗದಿಂದ ಅಥವಾ ಪಕ್ಕಗಳಿಂದ ಸೂಂರ್ದುನ ಬಿಸಿಲು ನೇರವಾಗಿ ಸಸಿಗಳ ಮೇಲೆ ಬೀಳುವುದನ್ನು ತಪ್ಪಿಸಬೇಕು.
* ಪ್ರತಿ ವರ್ಷವೂ ಅದೇ ಜಾಗದಲ್ಲಿಯೇ ಸಸಿ ಮಡಿಗಳನ್ನು ಬೆಳೆಸಬಾರದು.
* ಮುಂಜಾಗ್ರತಾ ಕ್ರಮವಾಗಿ ಶೇಕಡಾ 0.2 ಸಾಮರ್ಥ್ಯದ ಮ್ಯಾನಕೊಜಬ್‌ ಶಿಲೀಂಧ್ರನಾಶಕವನ್ನು ಎಲೆಗಳ ಮೇಲೆ ಸಿಂಪರಿಸಬೇಕು. ವ್ರೆದಲನೆಚಿಯು ಸಿಂಪರಣೆಯನ್ನು ಮಾರ್ಚ್‌ ಏಪ್ರಿಲ್‌ ಮತ್ತು ನಚಿತರದ ಸಂಪರ್ಕವನ್ನು 15 ದಿನಗಳ ಅಂತರದಲ್ಲಿ ಅವಶ್ಯಕವಿದ್ದರೆ ಕೊಡಬೇಕು.
* ಸಿಂಪರಣೆ ಮಾಡಿದ ನಂತರ ಬಹಳವಾಗಿ ರೋಗಕ್ಕೆ ತುತ್ತಾದ ಎಲೆಗಳನ್ನು ಕತ್ತರಿಸಿ, ನ್ದಾಶ ಮಾಡುವುದರಿಂದ ರೋಗವು ಆರೋಗ್ಯವಂತ ಎಲೆಗಳಿಗೆ ಹರಡುವುದನ್ನು ತಪ್ಪಿಸಬಹುದು.

ಸಸಿಮಡಿ ಎಲೆ ಕೊಳೆಯುವ ರೋಗ

ಈ ರೋಗವು ಫಘ್ಯುಸೇರಿಯಂ ಮತ್ತು ಅಲ್ಬರ್ನೇರಿಯಾ ಪ್ರಭೇದಗಳ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಈ ರೋಗವು ಮೂರರಿಂದ ನಾಲ್ಕು ತಿಂಗಳ ವಯಸ್ಸಿನ ಎಳೆಯ ಸಸಿಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಆರಂಭದಲ್ಲಿ ಎಲೆಗಳ ಮೇಲೆ ತೇವಾಂಶ ಮಿಶ್ರಿತ ಕಲೆಗಳು ಉಂಟಾಗಿ ನಂತರ ಕಲೆಗಳು ಸಾಯುವುದರಿಂದ ಬಾಧೆಗೊಳಗಾದ ಎಲೆಯು ಭಾಗಗಳು ಕೊಳೆಯುತ್ತವೆ. ಸರ್ವೇ ಸಾಮಾನ್ಯವಾಗಿ ಎಲೆಂಯ ತುದಿ ಮತ್ತು ತುದಿಯ ಭಾಗಗಳು ಹಾನಿಗೊಳಗಾಗುತ್ತವೆ. ರೋಗ ಜಾಸ್ತಿಯಾದಾಗ ಎಲೆಯ ತೊಟ್ಟಿನವರೆಗೂ ಕೊಳೆತು, ಎಲೆ ಕವಚವೂ ಸಹ ಕೊಳೆಯುತ್ತದೆ.
ಸಸಿಗಳಿಗೆ ಹೆಚ್ಚು ನೀರು ಕೊಡುವುದನ್ನು ನಿಲ್ಲಿಸುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು. ಬಾಧೆಗೊಳಗಾದ ಎಲೆಯ ಭಾಗಗಳನ್ನು ನಾಶ ಮಾಡಿದ ನಂತರ ಶೇಕಡಾ 0.2 ಸಾಮರ್ಥ್ಯದ ಕಾರ್‌ಬೆಂಡಿಜಮ್‌ ಶಿಲೀಂಧ್ರ ನಾಶಕವನ್ನು 15 ದಿನಗಳು ಅಂತರದಲ್ಲಿ ಎರಡು ಬಾರಿ ಸಿಂಪರಿಸಬೇಕು.

ಸಸಿ ಸಾಯುವ ರೋಗ ಅಥವಾ ಸಸಿ ಕೊಳೆಯುವ ರೋಗ

ಪ್ರಾಥಮಿಕ ಸಸಿಮಡಿಗಳಲ್ಲಿ ಮಳೆಗಾಲದಲ್ಲಿ ನೀರು ಸರಿಯಾಗಿ ಬಸಿದು ಹೋಗದೇ ಇದ್ದಾಗ ಸಸಿಗಳು ಮೊಳೆಯುತ್ತಿರುವಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಎಲೆಗಳು ಬಿಳಿಚುತ್ತವೆ ಮತ್ತು ತುದಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣವಾಗಿ ಈ ಲಕ್ಬಣಗಳು ಸಂಪೂರ್ಣವಾಗಿ ಎಲೆ ಮತ್ತು ಎಲೆಯ ಕವಚಕ್ಕೂ ವ್ಯಾಪಿಸುವುದರಿಂದ ಸಸಿಗಳು ಬಾಡುತ್ತವೆ. ಸಸಿಯ ಬುಡ ಭಾಗ ಕೊಳೆಯುತ್ತದೆ, ಸಸಿ ಸಂಪೂರ್ಣವಾಗಿ ಸಾಯುತದೆ… ಈ ರೋಗವು ಸಸಿ ಮಡಿಗಳಲ್ಲಿನ ಇತರ ಸಸಿಗಳಿಗೂ ಹರಡಿ, ಸಸಿಗಳು ಸಾಯುತವೆ. ಈ ರೋಗವು ಮಣ್ಣಿನಲ್ಲಿ ಹುಟ್ಟುವ ಶಿಲೀಂಧ್ರ (ಪೈಥಿಯಂ ವೆಕ್ಸಾನ್ಸ್‌ ಮತ್ತು ರೈಜೋಕ್ಟೋನಿಯಾ ಸೊಲಾನಿ) ಗಳಿಂದ ಉಂಟಾಗುತ್ತದೆ. ಘ್ಯುಸೇರಿಯಂ ಆಕ್ಸಿಸ್ಟೋರಂ ಎಂಬ ಶಿಲೀಂಧ್ರವೂ ಸಕ ಸಸಿಗಳ ಕೊಳೆಯುವಿಕೆಂಯನ್ನುಂಟು ಮಾಡುವುದರ ಜೊತೆಗೆ ಸಸಿಗಳನ್ನು ಸಂಪೂರ್ಣವಾಗಿ ಬಾಡುವಂತೆ ಮಾಡುತ್ತದೆ.

ನಿರ್ವಹಣೆ

* ಪ್ರಾಥಮಿಕ ಸಸಿಮಡಿಯಲ್ಲಿ ಬೀಜಗಳನ್ನು ಬಿತ್ತನೆ ಮಾಡುವಾಗ ಬೀಜದಿಂದ ಬೀಜಕ್ಕೆ ಜಾಸ್ತಿ ಅಂತರವಿದ್ದು ಬಿತ್ತನೆ ಮಾಡುವುದರಿಂದ ಸಸಿಗಳು ಗುಂಪು ಗುಂಪಾಗಿರುವ್ರದನ್ನು ತಪ್ಪಿಸಬಹುದು.

* ಸಸಿಮಡಿಗಳಲ್ಲಿ ನೀರು ಚೆನ್ನಾಗಿ ಬಸಿದು ಹೋಗುವಂತೆ ವ್ಯವಸ್ಥೆ ಮಾಡಬೇಕು.

* ಸಸಿಮಡಿಗಳಲ್ಲಿ ಬಾಧೆಗೊಳಗಾಧ ಸಸಿಗಳನ್ನು ಆರಂಭದಲ್ಲಿಂಯೇ ಕಿತ್ತು ಹಾಕುವುದರ ಮೂಲಕ ಸಸಿಮಡಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.

* ಸಸಿ ಮಡಿಯಲ್ಲಿ ಬಾಧೆ ಕಾಣಿಸಿಕೊಂಡಾಗ, ಶೇಕಡಾ 0.2 ಸಾಮರ್ಥ್ಯದ ಕಾಪರ್‌ ಆಕ್ಸಿಕ್ಲೋರೈಡ್‌ ನಿಂದ ಸಸಿಮಡಿಗಳನ್ನು 2-3 ಬಾರಿ, 15 ದಿನಗಳ ನಂತರದಲ್ಲಿ ನೆನೆಸಬೇಕು.

* ಬೀಜ ಬಿತ್ತನೆಗೆ ಮುಂಚೆ ಟ್ರೈಕೋಡೆರ್ಮಾ /ಸೂಡೋಮಾನಾಸ್‌ ನಿಂದ ಬೀಜೋಪಚಾರ ಮಾಡಬೇಕು.

* ಸಸಿಮಡಿಗೆ ಟ್ರೈಕೋಡೆರ್ಮಾ(100ಗ್ರಾಂ/ಚದರ ಮೀ.)ವನ್ನು ಹಾಕಬೇಕು.

ತೋಟಗಳಲ್ಲಿ ರೋಗಗಳ ನಿರ್ವಹಣೆ

ಅಜುಕಲ್‌ ಅಥವಾ ಬೀಜಕೋಶ ಕೊಳೆಯುವ ರೋಗ

ಈ ರೋಗವು ಫೃ ಲೋಫಘ್ತೊರಾ ನಿಕೋಟಿಯಾನಾ ಮತ್ತು ಫೈ ಲೋಫಘ್ತೊರಾ ಮಿಯಾಡ್ಕೆ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಈ ರೋಗವು ಮುಂಗಾರು ಮಳೆ ಆರಂಭದೊಂದಿಗೆ (ಜೂನ್‌ ನಲ್ಲಿ) ಪ್ರಾರಂಭವಾಗಿ, ಜುಲೈ – ಆಗಸ್ಟ್‌ ತಿಂಗಳುಗಳಲ್ಲಿ ಅತಿ ತೀವವಾಗುತ ದೆ. ಈ ರೋಗಕ್ಕೆ ವಾತಾವರಣ ಸಹಕಾರಿಯಾಗಿದರೆ ನವೆಂಬರ್‌ — ಡಿಸೆಂಬರ್‌ವರೆಗೂ ಮುಂದುವರಿಯುತ.ದೆ.

Also read  Arabica coffee futures fell on Brazil rains

ಕೊಳೆಯುವಿಕೆ ಲಕ್ಷ್ಮಾಣಗಳು ಗಿಡದ ಎಲ್ಲಾ ಭಾಗಗಳ ಮೇಲೆ ಕಂಡುಬರುತ್ತವೆ. ಮೊದಲ ಲನಕ್ಷ್ಮಣಗಳು ಎಳೆಯ ಎಲೆಗಳು ಅಥವಾ ಬೀಜಕೋಶಗಳ ಮೇಲೆ ತೇವಭರಿತ ಕಲೆಗಳಂತೆ ಕಾಣಿಸಿಕೊಳ್ಳುತ್ತವೆ. ಎಲೆಗಳಲ್ಲಿ ಈ ಕಲೆಗಳು ವಿಸ್ತಾರವಾಗಿ, ಸಾಯುತ್ತವೆ. ಕ್ರಮೇಣ ಎಲೆಗಳು ಮುದುಡಿ, ಉದುರುವುದಕ್ಕೆ ಪ್ರಾರಂಭಿಸುತ್ತವೆ. ಕಟ್ಟಕಡೆಗೆ, ಎಲೆಗಳು ತೊಟ್ಟಿನ ಭಾಗದಲ್ಲಿ ಮುರಿದು, ಜೋತು ಬೀಳುತ್ತವೆ. ಕೊಳೆಯುವಿಕೆಯು ಎಲ್ಲಾ ವಂಯಸ್ಸಿನ ಬೀಜಕೋಶಗಳನ್ನು ಬಾಧಿಸುತ್ತದೆ. ಬಾಧೆಗೊಳಗಾದ ಅಪ್ರಾಪ್ತ ವಯಸ್ಸಿನ ಬೀಜಕೋಶಗಳು ತಕ್ಬಣವೇ ಕೊಳೆಯುತ್ತವೆ ಮತ್ತು ಮೂರರಿಂದ ಐದು ದಿನಗಳಲ್ಲಿ ಉದುರುತ್ತವೆ. ವಯಸ್ಸಿಗೆ ಬಂದ ಬೀಜ ಕೋಶಗಳು ಒಣಗಿದ ನಂತರ ಸುಕ್ಕುಗಟ್ಟುತ್ತವೆ. ಪುಷ್ಪಗುಚ್ಛಗಳ ತುದಿಯಲ್ಲಿ ರೋಗ ಕಾಣಿಸಿಕೊಂಡು, ತುದಿಯಿಂದ ಕೆಳಗೆ ಮುಂದುವರಿಯುತ್ತದೆ. ಅಂತಹ ಭಾಗಗಳು ಕಡೆಗೆ ಒಣಗುತ್ತವೆ ಅಥವಾ ತೇವಾಂಶ ಹೌೆಚ್ಚಾಗಿದ್ದರೆ ಕೊಳೆಯುತ್ತವೆ. ರೋಗ ಉಲ್ಬಣವಾದಾಗ, ರೋಗವು ಬೇರು ಕಾಂಡಗಳಿಗೂ ಹಾಗೂ ಕವಲುಗಳಿಗೂ ಹರಡುತ್ತದೆ. ಕೊಳೆತ ಕವಲುಗಳು ಮುರಿಯುತ್ತವೆ ಮತ್ತು ಕತ್ತಿನ ಭಾಗದಲ್ಲಿ ಬೀಳುತ್ತವೆ. ಏಲಕ್ಕಿಯ ಎಲ್ಲಾ ತಳಿಗಳೂ ಸಹಕ ಈ ರೋಗಕ್ಕೆ ಒಳಗಾಗುತ್ತವೆ; ಆದರೂ ಮಲಬಾರ್‌ ತಳಿಯು ಈ ರೋಗಕ್ಕೆ ತೀವ್ರವಾಗಿ ತುತ್ತಾಗುತ್ತದೆ. ಈ ರೋಗವು ಮಣ್ಣು, ನೀರು ಮತ್ತು ಗಾಳಿಯಿಂದ ಹರಡುತ್ತದೆ.

ಅಜುಕಲ್‌ ರೋಗ ಬರಲು ಸಹಕರಿಸುವ ಇತರ ಅಂಶಗಳೆಂದರೆ ಅಧಿಕವಾಗಿ ಮತ್ತು ಸತತವಾಗಿ ಬೀಳುವ ಮಳೆ, ಮಣ್ಣಿ ನಲ್ಲಿನ ಹೆಚ್ಚಿನ ತೇವಾಂಶ, ದಟ್ಟವಾದ ನೆರಳು, ಗಿಡಗಳು ಗುಂಪು ಗಟ್ಟು ವ್ರದು ಮತ್ತು ಮಣ್ಣಿನಲ್ಲಿ ಈಗಾಗಲೇ ಇರುವ ರೋಗಾಣುಗಳು.

ನಿರ್ವಹಣೆ

* ಒಣಗಿದ ಏಲೆಗಳನ್ನು ಕತ್ತರಿಸುವುದು ಮತ್ತು ಗಿಡಗಳ ಬುಡವನ್ನು ಸ್ವಚ್ಛ ಮಾಡುವುದನ್ನು ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ (ಮೇ ತಿಂಗಳಲ್ಲಿ) ಮಾಡಬೇಕು.

* ನೆರಳಿನ ಮರಗಳ ರೆಂಬೆಗಳನ್ನು ಲಘುವಾಗಿ ಕತ್ತರಿಸುವುದರ ಮೂಲಕ ದಟ್ಟವಾದ ನೆರಳನ್ನು ಕದಿಮೆ ಮಾಡಬೆಕು.

* ತಗ್ಗು ಪ್ರದೇಶಗಳಲ್ಲಿ ಮತ್ತು ನೀರು ನಿಲ್ಲುವ ಜೌಗು ಪ್ರದೇಶಗಳಲ್ಲಿ ನೀರು ಬಸಿಯುವಂತೆ ವ್ಯವಸ್ಥೆ ಮಾಡಬೇಕು.

* ಅಜುಕಲ್‌ ರೋಗಕ್ಕೆ ತುತ್ತಾದ ಗಿಡದ ಭಾಗಗಳನ್ನು ತೆಗೆದು, ನಾಶಮಾಡಬೇಕು.

* ಶೇಕಡಾ ಒಂದು ಸಾಮರ್ಥ್ಯದ ಬೋರ್ಡೋ ಮಿಶ್ರಣ ಗಿಡದ ಎಲ್ಲಾ ಭಾಗಗಳಿಗೆ ಬೀಳುವಂತೆ ಬೋರ್ಡೋ ಮಿಶ್ರಣ (ಗಿಡವೊಂದಕ್ಕೆ ಅರ್ಧದಿಂದ ಒಂದು ಲೀಟರ್‌), ಮೊದಲ ಸಿಂಪರಣೆಯನ್ನು ಮೇ-ಜೂನ್‌ನಲ್ಲಿ (ಮಳೆಗಾಲ ಆರಂಭಕ್ಕಿಂತ ಮುಂಚೆ) ಮತ್ತು ನಂತರದ ಸಿಂಪರಣೆಯನ್ನು ಜುಲೈ – ಆಗಸ್ಟ್‌ನಲ್ಲಿಯೂ ಮಾಡಬೇಕು. ಮಳೆಗಾಲ ಮುಂದುವರಿದರೆ ರೋಗ ಮತ್ತು ಇನ್ನು ಇದ್ದರೆ ಮಾರನೆಯ ಸಿಂಪರಡೆನೆಯನ್ನು ಮಾಡಬೇಕು.

* ಅಲಿಯೇಟ್‌ ಶಿಲೀಂಧ್ರನಾಶಕವನ್ನು (ಶೇಕಡಾ 0.2) (200 ಗ್ರಾಂ./100 ಲೀ. ನೀರಿನಲ್ಲಿ) (ಪ್ರೆಟ್ಯಾಷಿಂಯಂ ಫಾಸ್ಫೋನೆಟ್‌) (ಶೇಕಡಾ 0.5-5 ಮಿ. ಲೀ/ ಲೀ. ನೀರಿನಲ್ಲಿ) ಸಹ ಎಲೆಗಳ ಮೇಲೆ (ಗಿಡವೊಂದಕ್ಕೆ 500-750 ಮಿ. ಲೀ) ಸಿಂಪರಿಸಬಹುದು.

* ಗಿಡದ ಬುಡಕ್ಕೆ ಕಾಪರ್‌ ಆಕ್ಸಿ ಕ್ಲೋರೈಡ್‌ (ಸಿಓಸಿ) (ಶೇಕಡಾ 0.2) ದ್ರಾವಣವನ್ನು ಸುರಿಯುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳನ್ನು ಕಡಿಮೆ ಮಾಡಲು ಮತ್ತು ರೋಗವು ಮುಂದೆ ಹರಡದಂತೆ ಮಾಡಲು ಸಹಕಾರಿಯಾಗುತ್ತದೆ.

* ಟ್ರೈಕೋಡರ್ಮಾ ವಿರಿಡೆ ಅಥವಾ ಟ್ರೈಕೋಡೆರ್ಮಾ ಹಾರ್ಜಿಂಯಾನಂ ಶಿಲೀಂದ್ರಗ ಳನ್ನು ಮಾಧ್ಯಮಗಳ ಮೇಲೆ ವೃದ್ಧಿ ಮಾಡಿ, ಇವುಗಳನ್ನು (ಗಿಡಗಳ ಸ್ವಚ್ಛತೆಂದುನ್ನು ಮಾಡಿದ ನಂತರ) ಮೇ ಮತ್ತು ಸೆಪೈೆಂಬರ್‌-ಅಕ್ಟೋಬರ್‌ ತಿಂಗಳುಗಳಲ್ಲಿ (100 ಕಿ. ಗ್ರಾಂ. ಸಗಣಿಯೊಂದಿಗೆ ಒಂದು ಕಿ.ಗ್ರಾಂ. ಮಿಶ್ರ ಮಾಡಿ) ಗಿಡಗಳ ಪಾತಿಗಳಲ್ಲಿ ಹಾಕಬಹುದು. ಒಂದು ವೇಳೆ ಮಣ್ಣಿಗೆ ಕಾಪರ್‌ ಆಕ್ಸಿ ಕ್ಲೋರೈಡ್‌ ಅಥವಾ ಇತರ ಶಿಲೀಂದಧ್ರನಾಶಕಗಳ ದ್ರಾವಣಗಳನ್ನು ಮಣ್ಣಿಗೆ ಸುರಿದಿದ್ದರೆ, 15 ದಿನಗಳ ನಂತರವೇ ಟ್ರೈಕೋಡೆರ್ಮಾವನ್ನು ಹಾಕಬೆಕು.

ಗಿಡಗಳ ಬುಡ ಕೊಳೆಯುವ ರೋಗ ಅಥವಾ ಬೇರುಕಾಂಡ ಕೊಳೆರೋಗ

ಇದೂ ಸಹ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಶಿಲೀಂಧ್ರ ರೋಗ, ಮಣ್ಣಿನಲ್ಲಿ ಹ್ಮಟ್ಟುವ ಶಿಲೀಂಧ್ರಗಳಾದ ವೆಕ್ಸಾನ್ಸ್‌, ರೈಜೋಕ್ಟೋನಿಯಾ ಸೋಲಾನಿ ಮತ್ತು ಘ್ಯುಸೇರಿಯಂ ಪ್ರಭೇದ (ಕೆಲವು ಸಂದರ್ಭಗಳಲ್ಲಿ) ಗಳಿಂದ ಉಂಟಾಗುತ್ತದೆ.

ರೋಗದ ಲಕ್ಷಣಗಳು

ಎಲೆಗಳು ಹಳದಿಯಾಗುವುದು ಮತ್ತು ಕವಲುಗಳು (ಕತ್ತಿ ನಿಂದ ಪ್ರಾರಂಭಿಸಿ) ಕೊಳೆಯುವುದು. ಕೊಳೆಯುವಿಕೆಯು ಬೇರು ಕಾಂಡಗಳು ಮತ್ತು ಬೇರುಗಳಿಗೂ ಹರಡುತ್ತದೆ. ಕೊಳೆತ ಬೇರು ಕಾಂಡಗಳು ಮೃದುವಾಗುವುದರ ಜೊತೆಗೆ ಕಡು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಕಟ್ಟಕಡೆಯದಾಗಿ ಇಡೀ ಗಿಡವೇ ಸಾಯುತ್ತದೆ. ಬಾಧೆಗೊಳಗಾದ ಕವಲುಗಳು ಸ್ವಲ್ಪ ಅಲುಗಾಡಿದರೇ ಸಾಕು ಬೀಳುತ್ತವೆ. ಕೆಲವು ಸಂದರ್ಭಗಳಲ್ಲಿ ಗಿಡದ ಕತ್ತಿನ ಭಾಗದಲ್ಲಿ ನೇರಳೆ ಬಣ್ಣ ಕಾಣಿಸಿಕೊಂಡು, ನಂತರ ಕೊಳೆಯುತ್ತದೆ.

ನಿರ್ವಹಣೆ

* ಅಜುಕಲ್‌ ರೋಗದಲ್ಲಿ ತಿಳಿಸಿರುವ ಸ್ವಚ್ಛತಾ ಕ್ರಮವನ್ನು ಅನುಸರಿಸುವುದರಿಂದಲೂ ನಿಯಂತ್ರಿಸಬಹುದು.
* ಗಿಡದ ಬುಡಕ್ಕೆ ಎರಡರಿಂದ ಮೂರು- ಐದು ಲೀಟರ್‌ ಕಾಪರ್‌ ಆಕ್ಸಿಕ್ಲೋರೈಡ್‌ ದ್ರಾವಣವನ್ನು (ಶೇಕಡಾ 0.2) ಸುರಿಯಬೇಕು. ರೋಗದ ತೀವ್ರತೆ ಮತ್ತು ರೋಗ ಹರಡುವಿಕೆಯನ್ನು ಆಧರಿಸಿ 30 ದಿನಗಳ ಅಂತರದಲ್ಲಿ ಇದೇ ದ್ರಾವಣವನ್ನು (ಎರಡು – ಮೂರು ಬಾರಿ) ಪನ: ಸಿಂಪರಣೆ ಮಾಡಬೇಕು.
* ರೋಗ ನಿರೋದಕ ತಳಿ- ಐ.ಐ.ಎಸ್‌.ಆರ್‌ ಅವೀನಾಶ್‌ ನೆಡುವುದು
* ಟ್ರೈಕೋಡೆರ್ಮಾ ವಿರಿಡೆ ಅಥವಾ ಟ್ರೈಕೋಡೆರ್ಮಾ ಹಾರ್ಜಿಯಾನಂ ಶಿಲೀಂಯ್ರಗ ಳನ್ನು ಮಾಧ್ಯಮಗಳ ಮೇಲೆ ವೃದ್ಧಿ ಮಾಡಿ ವುಗಳನ್ನು (ಗಿಡಗಳ ಸ್ವಚ್ಛತೆಯನ್ನು ಮಾಡಿದ ನಂತರ) ಮೇ ಮತ್ತು ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳುಗಳಲ್ಲಿ (100 ಕಿ.ಗ್ರಾಂ. ಸಗಣಿಯೊಂದಿಗೆ ಒಂದು ಕಿ.ಗ್ರಾಂ. ಮಿಶ್ರ ಮಾಡಿ) ಗಿಡಗಳ ಪಾತಿಗಳಲ್ಲಿ ಹಾಕಬಹುದು. ಒಂದು ವೇಳೆ ಮಣ್ಣಿಗೆ ಕಾಪರ್‌ ಆಕ್ಸಿ ಕ್ಲೋರೈಡ್‌ ಅಥವಾ ಇತರ ಶಿಲೀಂಧ್ರನಾಶಕಗಳ ದ್ರಾವಣಗಳನ್ನು ಮಣ್ಣಿಗೆ ಸುರಿದಿದ್ದರೆ, 15 ದಿನಗಳ ನಂತರವೇ ಟ್ರೈಕೋಡೆರ್ಮಾವನ್ನು ಹಾಕಬೆಕು.

ಚೆಂಥಾಲ್‌ ರೋಗ

ಈ ರೋಗವು ಕೊಲ್ಲೆಟೋಟ್ರೈಕಮ್‌ ಗ್ಲಿಯೋಸ್ಫೋರಾಯಿಡ್ಸ್‌ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಏಲಕ್ಕಿ ಬೆಳೆಯಲಾಗುತ್ತಿರುವ ಬಹುತೇಕ ಪ್ರದೇಶಗಳಲ್ಲಿ ರೋಗವನ್ನು ಕಾಣಬಹುದು. ರೋಗದ ಆರಂಭದಲ್ಲಿ ಎಳೆಯ ಎಲೆಗಳ ಮೇಲೆ ತೇವಭರಿತ ಕಲೆಗಳು ಕಾಣಿಸಿಕೊಳ್ಳುತ್ತವೆ. ನಂತರ ಕಲೆಗಳು ಹಳದಿಯಿಂದ ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ. ರೋಗ ತೀವ್ರವಾದಾಗ, ಎಲೆಗಳು ಮತ್ತು ಮಿಥ್ಯಾಕಾಂಡಗಳು ಬಾಡುತ್ತವೆ.

ನಿರ್ವಹಣೆ

* ಮುಂಗಾರು ಮಳೆ ಬರುವ ಮುಂಚೆ ರೋಗ ತಗುಲಿದ ಎಲೆ ಮತ್ತು ಕಾಂಡವನ್ನು ತೆಗೆದು ನಾಶ ಪಡಿಸುಹುದು.
* ತೋಟಗಳಲ್ಲಿ ಸಾಕಷ್ಟು ನೆರಳನ್ನು ಒದರಿಸುವುದರ ಮೂಲಕ ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.
* ಮುಂಜಾಗ್ರತ ತ್ರಿಮವಾಗಿ ಶೇ.1 ಬೋರ್ಡ್‌ ದ್ರಾವಣವನ್ನು ಪ್ರತಿ ಗಿಡಕ್ಕೆ 500 ಮೀ.ಲೀ. ಮೇ ಜೂನ್‌ ಮತ್ತು ಆಗಸ್ಟ್‌ -ಸೆಪ್ಟೆಂಬರ್‌ನಲ್ಲಿ ಕೊಡುವುದು.
* ಕಾರ್‌ಬೆಂಡಜಮ್‌ (ಶೇಕಡಾ 0.2) ಅಥವಾ ಕಾಪರ್‌ ಆಕ್ಸಿ ಕ್ಲೋರೈಡ್‌ (ಶೇಕಡಾ 0.2) ಶಿಲೀಂಧ್ರನಾಶಕಗಳಿಂದ ಈ ರೋಗವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು. 30 ದಿನಗಳ ಅಂತರದಲ್ಲಿ ಕನಿಷ್ಠ ಎರಡು ಬಾರಿ ಸಿಂಪರಣೆ ಮಾಡಬೇಕು.
* ರೋಗ ಬಂದ ಮೇಲೆ ಕೌರ್‌ಬೆಂಡಜಮ್‌ ಮತ್ತು ಮ್ಯಾನಕೊಜಮ್‌ (0.14%) ಅಥವಾ ಕಾರ್‌ಬೆಂಡಜಮ್‌ (0.2%) 500-750 ಮೀ.ಲೀ ಪ್ರತಿ ಗಿಡಕ್ಕೆ ಆಗಸ್ಟ್‌ ಸೆಪ್ಟೆಂಬರ್‌ ಮತ್ತು 30 ದಿನಗಳ ಅಂತರದಲ್ಲಿ ರೋಗದ ಬಾದೆ. ನೋಡಿ ಸಿಂಪಡಿಸಬೇಕು.

ಅಪ್ರಧಾನ ರೋಗಗಳು

ಎಲೆ. ಬೊಬ್ಬೆ ರೋಗವು ಪಾಯಿಯೋಡ್ಯಾಕ್ಟೈಲ್ಲಂ ಆಲ್ಫ್ಬೀನಿಯೇ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಮಿಥ್ಯಾಕಾಂಡ ಕೊಳೆರೋಗ, ಬೇರು ತುದಿ ಕೊಳೆ ರೋಗ, ಪುಷ್ಪಗುಚ್ಛ ಸೊರಗುವಿಕೆ ಘ್ಯುಸೇರಿಯಂ ಅಆಕ್ಸಿಸ್ಟೋರಂ ರೋಗಾಣುವಿನಿಂದ ಉಂಟಾಗುತ್ತವೆ. ಕಾರ್‌ಬೆಂಡಜಮ್‌ (ಶೇಕಡಾ 0.2) ಅಥವಾ ಹೆಕ್ಸಾಕೋನಾಜೋಲ್‌ (ಶೇಕಡಾ 0.2) ಅನ್ನು ಸಿಂಪರಿಸಿವುದರಿಂದ ಈ ರೋಗವನ್ನು ನಿಯಂತ್ರಿಸಬಹುದು.

ಹೆಕ್ಸಾಕೋನಾಜೋಲ್‌ (ಶೇಕಡಾ 0.2) ಅನ್ನು ಮಣ್ಣಿಗೆ ಸುರಿಯುವುದರಿಂದ ಈ ರೋಗ ನಿಯಂತ್ರಿಸಬಹುದು ಮತ್ತು 15-20 ದಿನಗಳ ಅಂತರದಲ್ಲಿ ಇದೇ ರೀತಿಯ ಉಪಚಾರಗಳನ್ನು ಪುನರಾವರ್ತನೆ ಮಾಡಬೇಕು.

ವೈರಾಣು ರೋಗಗಳು

ಕಟ್ಟೆ ರೋಗ

ಈ ರೋಗವು ಎಲ್ಲಾ ವಯಸ್ಸಿನ ಗಿಡಗಳನ್ನು ಬಾಧಿಸುತ್ತದೆ. ಆರಂಭದಲ್ಲಿ ಬಾಧೆಗೊಳಗಾದ ಕವಲುಗಳ ಎಳೆಯ ಎಲೆಯ ಮೇಲೆ ಕದಿರಿನ ಆಕಾರದ ಹಸಿರು ಭಾಗಗಳು ಬಿಳಿಚಿಕೊಂಡ ಮಚ್ಚೆಗಳು ಕಾಣಿಸಿಕೊಳ್ಳೃತ್ತವೆ. ನಂತರ, ಈ ಮಚ್ಚೆಗಳು ತೆಳುವಾದ ಬಿಳಿಚಿದ ಹಸಿರು ಬಣ್ಣದ ಪಟ್ಟಗಳಾಗಿ (ಅಂಚಿನಲ್ಲಿ ಕಡು ಹಸಿರು ಬಣ್ಣ) ರೂಪುಗೊಳ್ಳುತ್ತವೆ. ರೋಗ ಮುಂದುವರಿದಂತೆ, ನಚಿತರದ ಎಲೆಗಳೂ ಸಹ ಮಚ್ಚೆಗಳ ಲಕ್ಬಣಗಳನ್ನು ತೋರಿಸುತ್ತವೆ. ಎಲೆಗಳ ಕವಚಗಳು ಹಾಗೂ ಮಿಥ್ಯಾಕಾಂಡಗಳೂ ಸಹ ಮಚ್ಚೆ ರೋಗದ ಲಕ್ಬಣಗಳನ್ನು ತೋರಿಸುತ್ತವೆ. ಬಾಧೆಗೊಳಗಾಗುವುದಕ್ಕಿಂತ ಮುಂಚೆ ಇದ್ದ ವಯಸ್ಸಾಗಿರುವ ಎಲೆಗಳು ಈ ಲಕ್ಬಣಗಳನ್ನು ತೋರಿಸುವುದಿಲ್ಲ. ರೋಗವು ಅಂತರ್ವ್ಯಾಪಿಯಾಗಿರುತ್ತದೆ ಮತ್ತು ನಿಧಾನವಾಗಿ ಬಾಧೆಗೋಳಗಾದ ಗಿಡದ ಎಲ್ಲಾ ಕವಲುಗಳಿಗೆ ಹರಡುತ್ತದೆ. ರೋಗ ಕಾಣಿಸಿಕೊಂಡ ತಕ್ಬಣವೇ ಬೆಳವಣಿಗೆಯಲ್ಲಿ ಕುಂಠಿತವಾಗುವುದಿಲ್ಲ, ಆದರೆ ರೋಗ ಕಾಣಿಸಿಕೊಂಡ ಒಂದು ಅಥವಾ ಎರಡು ವರ್ಷಗಳೊಳಗಾಗಿ ಗಿಡದ ಗಾತ್ರದಲ್ಲಿ ಇಳಿಮುಖವಾಗುತ್ತದೆ. ರೋಗದ ಮುಂದುವರಿದ ಹಂತಗಳಲ್ಲಿ ಬಾಧೆಗೊಳಗಾದ ಗಿಡಗಳು ಕಡಿಮೆ ಉದ್ದದ ಮತ್ತು ತೆಳುವಾದ ಕವಲುಗಳ ಜೊತೆಗೆ ಕಡಿಮೆ ಉದ್ದವಿರುವ ಕೆಲವು ಪುಷ್ಪಗುಚ್ಛಗಳನ್ನು ಬಿಡುತ್ತವೆ. ಕಟ್ಟೆ ರೋಗಕ್ಕೆ ಒಳಗಾದ ಗಿಡಗಳು ಸಾಂಯುವುದಿಲ್ಲ, ಆದರೆ ಗಿಡಗಳು ಬಹಳ ಕಡಿಮೆ ಇಳುವರಿ ಕೊಡುತವೆ.. ರೋಗ ಪಾರಂಭವಾದ 3 ವರ್ಷಗಳೊಳಗಾಗಿ ಶೇಕಡಾ 70 ರಷು ಇಳುವರಿ ಕಡಿಮೆಯಾರಗುವದನು ಕಾಣಬಹುದು.

Also read  Bears corner sugar market

ರೋಗವು ಅಂತರ್ವ್ಯಾಪಿಯಾಗಿದ್ದು, ಏಲಕ್ಕಿ ಮಚ್ಚೆಯ ವೈರಾಣುವಿನಿಂದ ಉಂಟಾಗುತ್ತದೆ. ಬಾಧೆಗೊಳಗಾದ ಗಿಡದ ಎಲ್ಲಾ ಭಾಗಗಳಲ್ಲಿಯೂ (ಬಲಿತ ಬೀಜಗಳನ್ನು ಹೊರತುಪಡಿಸಿ) ವೈರಾಣುವಿನ ಅಣುಗಳು ಇರುತ್ತವೆ. ಈ ರೋಗವು ಬೀಜಗಳಿಂದಾಗಲೀ ಅಥವಾ ಯಾಂತ್ರಿಕವಾಗಿಯಾಗಲೀ ಅಥವಾ ಸಂಪರ್ಕದಿಂದಾಗಲೀ ಅಥವಾ ಕತ್ತರಿಸುವ ಸಲಕರಣೆಗಳಿಂದಾಗಲೀ ಹರಡುವುದಿಲ್ಲ. ಈ ರೋಗವು ಬಾಳೆಗಿಡದ ಹೇನು (ಪೆಂಟಬಲೋವಿಂಡು ಸ್ಥೆ ಗ್ರೋನೆರ್ವೋಸಾ) ಗಳಿಂದ ಹರಡುತ್ತದೆ. ಕೇವಲ ಒಂದೇ ಒಂದು ಹೇನು ಕೆಲವೇ ನಿಮಿಷಗಳಲ್ಲಿ ಈ ರೋಗವನ್ನು ಹರಡುತ್ತದೆ. ಈ ಹೇನಿನ ಎಲ್ಲಾ ಹಂತಗಳೂ (ಮರಿಗಳು, ರೆಕ್ಕೆ ಇರುವ ಮತ್ತು ರೆಕ್ಕೆಯಿಲ್ಲದ ವಯಸ್ಕ ಹೇನುಗಳು) ಸಹ ಈ ರೋಗವನ್ನು ಹರಡುತ್ತವೆ.

ಕೊಕ್ಕೆ ಕಂದು ರೋಗ (ಏಲಕ್ಕಿ ಪತ್ರನರಗಳು ಪಾರದರ್ಶಕವಾಗುವಿಕೆ)

ಇತ್ತೀಚೆಗೆ ಕರ್ನಾಟಕದ ಏಲಕ್ಕಿ ತೋಟಗಳಲ್ಲಿ ಹೊಸದೊಂದು ವೈರಾಣು ರೋಗವು ಹರಡುತ್ತಿರುವುದು ಕಂಡುಬಂದಿದೆ. ಇದನ್ನು “ಕೊಕ್ಕೆ ಕಂದು” ಎಂದು ಕರೆಯಲಾಗುತ್ತಿದೆ, ಇದರ ಅರ್ಥ ಕೊಕ್ಕೆ ಕವಲು ಎಂದು.

ರೋಗದ ಲಕ್ಷ್ಮಣಗಳನ್ನು ಕವಲುಗಳು ಮತ್ತು ಎಲೆಗಳ ಮೇಲೆ ಕಾಣಬಹುದು. ಎಲೆಗಳ ಮೇಲೆ ವಿಶಿಷ್ಟ ರೀತಿಯಲ್ಲಿ ಬಣ್ಣಬಣ್ಣದ ಕಲೆಗಳು ಆಗುತ್ತವೆ. ನಂತರ ಪತ್ರದ ನರಗಳು ಅತಿಯಾಗಿ ಪಾರದರ್ಶಕ ಆಗುತ್ತವೆ. ಎಲೆಗಳಲ್ಲಿ ಬದಿಂಯ ನರಗಳಿಗೆ ಸಮಾನಾಂತರವಾಗಿ ಹಳದಿ ಪಟ್ಟಿಗಳು ಅಥವಾ ಗೆರೆಗಳು ಉಂಟಾಗುತ್ತವೆ. ಕವಲಿನ ತುದಿಯಲ್ಲಿ ಎಲೆಗಳು ಗುಂಪಾಗಿ ಜೋಡಿಯಾಗುತದೆ ಮತ್ತು ಕವಲಿನಲ್ಲಿನ ಗೆಣ್ಣುಗಳ ಅಂತರವೂ ಕಡಿಮೆಯಾಗುತ್ತದೆ. ಕವಲಿನ ಎತ್ತರವೂ ಕಡಿಮೆಯಾಗುತ್ತದೆ. ರೋಗ ಬಾಧೆ ಜಾಸ್ತಿಯಾದಾಗ ಅಂತ್ಯದಲ್ಲಿ ಕವಲುಗಳು ಬೆಳವಣಿಗೆಯಲ್ಲಿ ಕುಂಠಿತವಾಗುತ್ತವೆ. ಕವಲಿನ ಒಳಗಿರುವ ಅತ್ಯಂತ ಎಳೆಯ ಎಲೆಯು ಎಲೆಯ ಕವಚದಲ್ಲಿ ಕೊಂಡಿಯಂತೆ ಆಗುವುದರಿಂದ ಕವಲಿನ ತುದಿಯು ಕೊಕ್ಕೆಯಂತೆ ಆಗುತ್ತದೆ. ಪುಷ್ಪಗುಚ್ಛಗಳ ಉದ್ದ ಮತ್ತು ಬೀಜಕೋಶಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತವೆ. ರೋಗ ಮಿತಿ ಮೀರಿದ ಹಂತದಲ್ಲಿ ಪುಷ್ಪಗುಚ್ಛಗಳು ಹಾಗೂ ಬೀಜಕೋಶಗಳು ಉತ್ಪಾದನೆಯಾಗುವುದಿಲ್ಲ, ಹೀಗಾಗಿ ಶೇಕಡಾ 100 ರಷ್ಟು ಇಳುವರಿ ನಷ್ಟವಾಗುತ್ತದೆ.

ರೋಗವು ಸಮೀಪವಿರುವ ತೋಟಗಳಿಗೆ ತ್ವರಿತವಾಗಿ ಹರೆಡುತ್ತದೆ, ರೋಗ ಪೀಡಿತವಾದ ಗಿಡಗಳು ಕಡಿಮೆ ಅವಧಿ (ಒಂದರಿಂದ ಎರಡು ವರ್ಷ) ಯೊಳಗೆ ಇಳಿಮುಖವಾಗುತ್ತವೆ. ಬೀಜಗಳಿಂದ ಅಥವ ರಸದಿಂದ ರೋಗ ಹರಡುವುದು ಪತ್ತೆಯಾಗಿಲ್ಲ. ಕಟ್ಟೆರೋಗ ಮತ್ತು ನೀಲಗಿರಿ ಅಂಗಾಂಶದ ಸಾವು ರೋಗಗಳಂತೆಯೆ ಈ ರೋಗವೂ ಸಹ ಬೇರುಕಾಂಡದಿಂದ ಹರಡುತ್ತದೆ. ಬಾಳೆ ಹೇನು (ಪೆಂಟಲೋನಿಯಾ ನೈಗ್ರೋನೆವ್ವೋಸಾ) ಈ ರೋಗ ಹರಡಲು ನೈಸರ್ಗಿಕ ವಾಹಕವಾಗುತ್ತದೆ. ಈ ರೋಗವು ಎಲಕ್ಕಿ ಗಿಡದ ಎಲೆಯ ನರ ಪಾರದರ್ಶಕ ವೈರಾಣುವಿನಿಂದ ಉಂಟಾಗುತ್ತದೆ.

ನೀಲಗಿರಿ ಅಂಗಾಂಶದ ಸಾವು ರೋಗ

ಈ ರೋಗವನ್ನು ನೀಲಗಿರಿ ಪ್ರದೇಶದಲ್ಲಿ ಗಮನಿಸಲಾಯಿತು, ನಂತರ ಅಣ್ಣಾಮಲೈನ ವಾಲ್ಪರಾಯಿಯಲ್ಲಿಯೂ, ಕೆಳಗಿನ ಪಳನೀಸ್‌ಮತ್ತು ಮುನ್ನಾರ್‌ ಪ್ರದೇಶಗಳಲ್ಲಿ ಗಮನಿಸಲಾಯಿತು. ಕಟ್ಟೆ ರೋಗಕ್ಕೆ ಹೋಲಿಸಿದಲ್ಲಿ ಈ ರೋಗ ಕಾಣಿಸಿಕೊಳ್ಳವುದು ಕಡಿಮೆ.ರೋಗಕ್ಕೆ ತುತ್ತಾದ ಗಿಡಗಳ ಎಲೆಗಳ ಮೇಲೆ ತಿಳಿ ಹಸಿರು ಮತ್ತು ಬಿಳಿಪಿನಿಂದ ಹಳದಿ ಗೆರೆಗಳು ಒಚಿದರ ಪಕ್ಕ ಒಂದರಂತೆ ಗೆರೆಗಳು ಮಚ್ಚೆಯಾಕಾರದ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಈ ಪಟ್ಟಿಗಳು ಕೆಂಪು ಮಿಶ್ರಿತ ಕಂದು ಬಣ್ಣದವಾಗಿ ಸಾಯುತ್ತವೆಯಲ್ಲದೆ ಅಂತ್ಯದಲ್ಲಿ ಹರಿದು ಛಿದ್ರವಾಗುತ್ತದೆ. ಎಲೆಗಳ ಅಂಚು ಅಲಯಾಗಿ ಮುದುಡುತ್ತವೆ. ಕೆಂಪು ವಿಶ್ರಿತ ಕಂದು ಬಣ್ಣದ ಸತ್ತು ಹೋದ ಜಾಗಗಳು ನಂತರ ಒಣಗುತ್ತವೆ. ಗಿಡದ ಕವಲುಗಳು ಎತ್ತರದಲ್ಲಿ ಕಡಿಮೆಯಾಗುತ್ತವೆ. ರೋಗ ಬಾಧೆ ಜಾಸ್ತಿಯಾದಾಗ ಗಿಡಗಳು ಬೆಳವಣಿಗೆಯಲ್ಲಿ ಕುಂಠಿತವಾಗುತ್ತವೆ. ಕವಲುಗಳು ಕಿರಿದಾಗುತ್ತವೆ, ಪುಷ್ಪಗುಚ್ಛಗಳು ಗಿಡ್ಡವಾಗುವುದರ ಜೊತೆಗೆ ಬೀಜಕೋಶಗಳು ಕಡಿ ಮೆಯಾಗುವುದಲ್ಲದೆ ಬೀಜಕೋಶಗಳು ಬಿರುಕು ಬಿಡುತ್ತವೆ. ರೋಗ ಬಹಳಷ್ಟು ಅತಿಯಾದಾಗ ಕೊನೆಯ ಹಂತದಲ್ಲಿ ಪುಷ್ಪಗುಚ್ಛಗಳೇ ಹುಟ್ಟುವುದಿಲ್ಲ.

ಈ ರೋಗವು ರೋಗಪೀಡಿತ ಗುಪ್ತಕಾಂಡಗಳಿಂದ ಸುಲಭವಾಗಿ ಹರಸುತ್ತದೆ. ಯಾವುದೇ ಕೀಟದಿಂದ ರೋಗ ಹರಡುವ್ಯದು ಇದುವರೆಗೆ ಪತ್ತೆಯಾಗಿಲ್ಲ.

ಎಲೆ ಮಚ್ಚೆ ರೋಗ

ಇದನ್ನು ಬಾಳೆ ಬ್ರಾಕ್ಟ್‌ ಮೊಸೈಕ್‌ ವೈರಸ್‌ ಎಂದು ಕರೆಯುತ್ತಾರೆ. ಎಲೆಗಳ ಮೇಲೆ ತಿಳಿ ಹಸಿರಿನ ವಿವಿಧಕಾರದ ಗೆರೆಗಳು ಅಥವಾ ಮಚ್ಚೆಗಳು ಕಂಡು ಬರುತ್ತವೆ. ಕಂದುಗಳ ಮೇಲೆ ತಿಳಿ ಬಣ್ಣದ ಸಣ್ಣ ಮಚ್ಚೆಗಳು ಎದ್ದು ಕಾಣುತ್ತವೆ. ಏಲಕ್ಕಿ ಮತ್ತು ಬಾಳೆ ಗಿಡಗಳಿಗೆ ಈ ರೋಗವು ರಸ ಹೀರುವ ಹೇನುಗಳಿಂದ ನಿಧನವಾಗಿ ಹರಡುತ್ತದೆ. ರೋಗ ತಗಲಿದ ಏಲಕ್ಕಿಗಿಡಗಳು ಮತ್ತು ರೋಗ ಪಿಡಿತ ಬಾಳೆ ಗಿಡಗಳು ರೋಗದ ಮೂಲ. ಈ ರೋಗದ ಪರಿಣಾಮ ಬೆಳೆಯ ಮೇಲೆ ಕೊಕ್ಕೆಕಂದು ರೋಗದ ಪರಿಣಾಮದಂತೆಯೇ ಕಂಡು ಬರುತ್ತದೆ. ಈ ಮೇಲಿನ ಯಾವುದೇ ನಂಜು ರೋಗಗಳು ಮಣ್ಣು ಗಾಲಿ ಬೀಜ ನೀರು ಮತ್ತು ಸಂಪರ್ಕದಿಂದ ಹರಡುವುದಿಲ್ಲ. ಈ ರೋಗಗಳು ಒಂದು ಅಥವಾ ಒಟ್ಟಾಗಿಯೂ ಗಿಡಗಳನ್ನು ಬಾದಿಸಿ ಹಾನಿಯೂಂಟು ಮಾಡುತ್ತವೆ.

ಏಲಕ್ಕಿ ತೋಟದಲ್ಲಿ ವೈರಾಸ್‌ ರೋಗ ಸಮಗ್ರ ನಿರ್ವಹಣೆ

* ಈ ರೋಗಗಳ ಮೇಲೆ ಸದಾ ಕಣ್ಣಾಗವಲು ಇಡಬೇಕು. ರೋಗ ಬಂದ ಗಿಡಗಳನ್ನು ಕೀತು ನಾಶ ಪಡಿಸಿರುವುದರಿಂದ ಈ ರೋಗಗಳ ಹರಡುವಿಕೆಂಯನ್ನು ತೆಡಗಟ್ಟಬಹುದು.
* ವೈರಸ್‌ ರೋಗಗಳಿಲ್ಲದ ಗಿಡಗಳನ್ನು ತೋಟದಲ್ಲಿ ನಾಟಿ ಮಾಡಬೇಕು.
* ಏಲಕ್ಕಿ ನರ್ಸರಿಯನ್ನು ( ಸಸಿ ಮಡಿ ಮತ್ತು ಕಂದು) ಏಲಕ್ಕಿ ತೋಟದಿಂದ ದೂರದಲ್ಲಿ ಮಾಡಬೇಕು.
* ವೈರಸ್‌ ರೋಗಗಳಿಲ್ಲದ ತೋಟದಿಂದ ಕಂದುಗಳನ್ನು ಕಿತ್ತು ತಂದು ಕಾಲಿಯಿರುವ ಜಾಗಕ್ಕೆ ನಾಟಿ ಮಾಡಬೇಕು.
* ಜಾಸ್ತಿ ಇರುವ ರೋಗವಿರುವ ತೋಟದಿಂದ ಯಾವುದೇ ಕಾರಣಕ್ಕೂ ಕಂದುಗಳನ್ನು ನಾಟಿ ಮಾಡಲು ನೆಗೆದು ಕೊಳ್ಳಬಾರದು.
* ಮರು ನಾಟಿ ಮಾಡುವಾಗ ಹಳೆಯ ಎಲ್ಲ ಏಲಕ್ಕಿ ಗಿಡಗಳನ್ನು ಕಿತ್ತು ತೆಗೆಯಬೇಕು.
*ಒಣಗಿದ ಎಲೆ ಕಾಂಡಗಳನ್ನು 3-4 ಬಾರಿ ತೆಗೆಯುವುದರಿಂದ ಎಫಿಡ್‌ (ಹೇನು) ಗಳ ಸಂಖ್ಯೆ ಕಡಿಮೆಂಖಾಗಿ ರೋಗ ಹರಡುವುದು ಕಡಿಮೆಯಾಗುತ್ತದೆ.
* ವೈರಸ್‌ ರೋಗ ಆಶ್ರಯ ಸಸ್ಯ (ಕೋಲೋಕೇಸಿಯಂ, ಕೆಲಡಿಂಯುಂ) ಇತ್ಯಾದಿಗಳನ್ನು ಕಿತ್ತು ನಾಶ ಪಡಿಸಬೇಕು.
* ಶೇ.0. ರ ಬೇವಿನ ಕೀಟ ನಾಶಕಗಳನ್ನು ಸಿಂಪಡಣೆ ಮಾಡುವುದರಿಂದ ಎಲೆಗಳ ಮೇಲೆ ಎಫಿಡ್‌ಗಳು ಕುರುವ್ರದು ಕಡಿಮೆಯಾಗಿ ಸಾಯುತ್ತವೆ.

ಕೊಯಿಲು ಮತ್ತು ಕೊಯ್ಲೋತ್ತರ ತಾಂತ್ರಿಕತೆ

ನಾಟಿ ಮಾಡಿದ ಒಂದು ಅಥವಾ ಎರಡು ವರ್ಷಗಳ ನಂತರ ಏಲಕ್ಕಿ ಗಿಡದಲ್ಲಿ ಹೂವು ಬಿಡುತ್ತದೆ. ಏಲಕ್ಕಿಯಲ್ಲಿ ಹೂವು ಬಿಡುವುದು ಸಾಮಾನ್ಯವಾಗಿ ಆರರಿಂದ ಎಂಟು ತಿಂಗಳವರೆಗೆ ವಿಸ್ತಾರಗೊಂಡು ಮುಂದುವರಿಯುತ್ತದೆ. ಉತ್ತಮ ವಾತಾವರಣದ ಪರಿಸ್ಥಿತಿ ಇದ್ದಲ್ಲಿ 120-135 ದಿನಗಳಲ್ಲಿ ಬೀಜಕೋಶ ಹುಣ್ಣಾಗುತ್ತದೆ. ಏಲಕ್ಕಿಯಲ್ಲಿ ಒಂದೇ ಸಾರಿ ಹೂಬಿಡುವುದಿಲ್ಲವಾದ್ದರಿಂದ 25-30 ದಿನಗಳ ಅಂತರಗಳಲ್ಲಿ ಬಹಳ ಸಾರಿ ಕೊಯಿಲು ಮಾಡಬೇಕಾಗುತ್ತದೆ. ಒಟ್ಟಾರೆ, ಕೇರಳ ಮತ್ತು ತಮಿಳುನಾಡುಗಳಲ್ಲಿ ಕೊಯಿಲು ಮಾಡುವುದು ಜೂನ್‌-ಜುಲೈನಿಂದ ಆರಂಭಿಸಿ, ಜನವರಿ ಇಫೆಬ್ರವರಿಯವರೆಗೂ ಮುಂದುವರಿಯುತ್ತದೆ. ಆದರೆ ಕರ್ನಾಟಕದಲ್ಲಿ ಆಗಸ್ಟ್‌ನಲ್ಲಿ ಪ್ರಾರಂಭಿಸಿ, ಡಿಸೆಂಬರ್‌-ಜನವರಿಯವರೆಗೂ ಮುಂದುವರಿಯುತ್ತದೆ.

ಕೊಯಿಲು ಮಾಡುವ ಹಂತ

ಉತ್ತಮ ಗುಣಮಟ್ಟದ ಏಲಕ್ಕಿಯನ್ನು ಪಡೆಯಲು ಸರಿಯಾದ ಬಲಿಯುವಿಕೆಯ ಹಂತದಲ್ಲಿ ಬೀಜಕೋಶಗಳನ್ನು ಕೊಯಿಲು ಮಾಡುವುದು ಅತ್ಯಾವಶ್ಯಕ. ಚಿಕ್ಕದಾದ ಇನ್ನೂ ಬಲಿಯಾದ ಬೀಜಕೋಶಗಳನ್ನು ಕೊಯಿಲು ಮಾಡುವುದರಿಂದ ಅಸಮಗಾತ್ರದ ಸುಕ್ಕುಗಟ್ಟಿದ ಮತ್ತು ಅನಪೇಕ್ಟಿತ ಬಣ್ಣದ ಬೀಜಕೋಶಗಳು (ಸಂಸ್ಕರಣೆಯ ನಂತರ) ಲಭಿಸುತ್ತವೆ. ಬೀಜಕೋಶಗಳೊಳಗೆ ಬೀಜಗಳು ಸಂಪೂರ್ಣ ಬೆಳವಣಿಗೆಯಾಗಲು ಅನುಕೂಲವಾಗುವಂತೆ ಚೆನ್ನಾಗಿ ಬಲಿತ ಹಂತದಿಂದ (ಕರಿಕಾಯಿ) ಸಂಪೂರ್ಣ ಹಣ್ಣಾಗಿರುವ ಬೀಜಕೋಶಗಳನ್ನು ಕೊಯಿಲು ಮಾಡಬೇಕು. ಇದರಿಂದ ಬೀಜಕೋಶಗಳ ಜೊತೆಗೆ ಬೀಜಗಳ ಹೆಚ್ಚಿನ ಇಳುವರಿ ಬರುತ್ತದೆ. ಆದರೂ ಹೆಚ್ಚಿಗೆ ಹಣ್ಣಾಗುವವರೆಗೂ ಕೊಯಿಲು ಮಾಡದೇ ನಂತರ ಕೊಯಿಲು ಮಾಡಿದರೆ ಇಲಿಗಳು ಮತ್ತು ಅಳಿಲುಗಳಿಂದ ತೋಟದಲ್ಲಿ ಬೀಜಕೋಶಗಳು ನಷ್ಟವಾಗುವ್ರದರ ಜೊತೆಗೆ ಕೊಯಿಲಿನ ನಂತರ ಬೀಜಕೋಶಗಳನ್ನು ಒಣಗಿಸುವಾಗ ಬೀಜಕೋಶಗಳು ಸೀಳುವುದರಿಂದ ಮಾರುಕಟೈಯಲ್ಲಿ ಕಡಿಮೆ ಬೆಲೆ ಲಭಿಸುತ್ತದೆ.

ಕೊಯಿಲು ಮಾಡಿದ ನಂತರ ಬೀಜಕೋಶಗಳಿಗೆ ಅಂಟಿಕೊಂಡಿರುವ ಮಣ್ಣನ್ನು ನೀರಿನಿಂದ ತೊಳೆದು ತೆಗೆಯುವುದರಿಂದ ಉತ್ತಮ ಗುಣಮಟ್ಟದ ಪದಾರ್ಥ ಬರುತ್ತದೆ. ಕೊಯಿಲು ಮಾಡಿದ ನಂತರ ಬೀಜಕೋಶಗಳನ್ನು ಬಹಳ ಕಾಲದವರೆಗೆ ದಾಸ್ತಾನು ಮಾಡುವುದರಿಂದ ಏಲಕ್ಕಿಯ ಗುಣಮಟ್ಟ ಕುಸಿಯುತ್ತದೆ.

Also read  ಎರಡೂವರೆ ವರ್ಷಗಳ ನಂತರ ಗಗನಕ್ಕೇರಿದ ಏಲಕ್ಕಿ ಬೆಲೆ

ಈ ಸಂಸ್ಕರಣಾ ಕ್ರಿಯೆಯಲ್ಲಿ ಪರೋಕ್ಸವಾಗಿ ಬಿಸಿ ಮಾಡುವುದರ ಮೂಲಕ ಹೊಸದಾಗಿ ಕೊಯಿಲು ಮಾಡಿದ ಹಸಿ ಏಲಕ್ಕಿಯಲ್ಲಿರುವ ಶೇಕಡಾ 80 ರಷ್ಟು ತೇವಾಂಶವನ್ನು ಶೇಕಡಾ 10-12ಕ್ಕೆ ಇಳಿಸಲಾಗುತ್ತದೆ. ಬೀಜಕೋಶಗಳನ್ನು ಒಣಗಿಸುವ ಕ್ರಿಯೆಯು ಕೊನೆಗೆ ಲಭ್ಯವಾಗುವ ಪದಾರ್ಥದ ಬಣ್ಣವನ್ನು ನಿರ್ಧರಿಸುತ್ತದೆ.

ಸಾಂಪ್ರಾದಾಯಕ ಸೌದೆಯಿಂದ ಸಂಸ್ಕರಿಸುವ ವಸೌಯು ಸೌದೆ ಉರಿಸುವ ಕುಲುಮೆ ಹೊಗೆ ಕೊಳವೆಗಳು ಮತ್ತು ಕೋಣೆ(ಕೊಠಡಿ)ಯಲ್ಲಿನ ಒಣಗಿಸುವ ತಟ್ಟೆಗಳನ್ನು ಹೊಂದಿರುತ್ತದೆ. ಕುಲುಮೆಯನ್ನು ಇಟ್ಟಿಗೆಗಳಿಂದ ಅಥವಾ ದಪ್ಪನೆಯ ಕಬ್ಬಿಣದ ತಗಡುಗಳಿಂದ ಮರದ ದಿಮ್ಮಿಗಳನ್ನು ಅದರೊಳಗೆ ಹಾಕಲು ಅನುಕೂಲವಾಗುವಂತೆ ನಿರ್ಮಿಸಲಾಗಿರುತ್ತದೆ.

ಒಣಗಿಸುವುದನ್ನು ಎಚ್ಚರಿಕೆಯಿಂದ ನಿಯಂತ್ರಣದಲ್ಲಿಡಬೇಕು ಮತ್ತು ತ್ವರಿತಗತಿಯಲ್ಲಿ ಒಣಗಿಸಬಾರದು. ಒಣಗಿಸುವಾಗ ಉಷ್ಣತೆ, ತೇವಾಂಶ ಮತ್ತು ಗಾಳಿಯಾಡುವಿಕೆ ಇವುಗಳನ್ನು ಆಗಿಂದಾಗ್ಗೆ ಪರೀಕ್ಸಿಸುತ್ತಿರಬೇಕು. ಕೊಯಿಲು ಮಾಡಿದ ಬೀಜಕೋಶಗಳನ್ನು ತಟ್ಟೆಗಳ ಮೇಲೆ ಒಂದು ಪದರವಾಗಿ ಹರಡಬೇಕು. ಒಣಗಿಸುವ ಕೋಣೆಂಯಲ್ಲಿ ಏಲಕ್ಕಿ ತುಂಬಿದ ತಟ್ಟೆಗಳನ್ನು ಚೌಕಟ್ಟುಗಳಲ್ಲಿ ಜೋಡಿಸಿಟ್ಟ ನಂತರ ಕೋಣೆಂಯ ಬಾಗಿಲನ್ನು ಮುಚ್ಚಬೇಕು. ಕುಲುಮೆಂಯುಲ್ಲಿ ಸೌದೆಗಳನ್ನು ಸುಡಬೇಕು. ಒಣಗಿಸುವ ಕೋಣೆಯಲ್ಲಿ ನೆಲದ ಮೇಲೆ ಕೆಲವ್ರ ಸೆಂಟಿ ಮೀಟರ್‌ ಎತ್ತರದಲ್ಲಿ ಅಳವಡಿಸಿರುವ ಕೊಳವೆಗಳ ಮೂಲಕ ಬಿಸಿಗಾಳಿಯು ಹಾದು ಹೋಗುವುದರಿಂದ ಕೋಣೆಯ ಉಷ್ಣತೆಯು 45-50″ ಸೆ. ಗೆ. ಏರುತ್ತದೆ. ಆರಂಭದಲ್ಲಿ ಈ ಉಷ್ಣತೆಯನ್ನು 3 ರಿಂದ ನಾಲ್ಕು ಗಂಟಿಯವರೆಗೆ ಕಾಪಾಡಬೇಕಂ. ಪೂ ಹಂತದಲ್ಲಿ ಬೀಜಕೋಶಗಳು ಬೆವರುತ್ತವೆ. ಹೆಚ್ಚಿದ ಉಷ್ಣತೆಯಿಂದ ತಮ್ಮಲ್ಲಿರುವ ತೇವಾಂಶವನ್ನು ಹೊರಗೆ ಹಾಕುತ್ತವೆ. ಒಣಗುತ್ತಿರುವ ಹಣ್ಣುಗಳಿಂದ ತೇವಾಂಶವು ಹೊರಗೆ ಹೋಗಲು ಅನುಕೂಲವಾಗುವಂತೆ ಕೋಣೆಯ ಗವಾಕ್ಚಿಗಳನ್ನು ತೆರೆಯಬೇಕು. ತೇವಾಂಶವನ್ನು ತ್ವರಿತವಾಗಿ ಹೊರಗೆ ಹೋಗುವಂತೆ ಮಾಡಲು ಗಾಳಿ ಹೊರದೂಡುವ ಫ್ಯಾನ್‌ಗಳನ್ನು ಉಪಂರೋಗಿಸಬೇಕು. ತೇವಾಂಶವನ್ನು ಸಂಪೂರ್ಣವಾಗಿ ತೆಗೆದ ನಂತರ ಗವಾಕ್ಚಿಗಳನ್ನು ಮುಚ್ಚಬೇಕು ಮತ್ತು ಕೋಣೆಯಲ್ಲಿರುವ ಉಷ್ಣತೆಯನ್ನು ಪುನ: 45-55″ ಸೆ. ನಷ್ಟನ್ನು 18-24 ಗಂಟೆಗಳವರೆಗೆ ಕಾಪಾಡಬೇಕು. ಮೂರುನಾಲ್ಕು ಗಂಟೆಗಳಿಗೊಮ್ಮೆ ಹೆಚ್ಚಿಗೆ ಇರುವ ತೇವಾಂಶ ಹೊರ ಹೋಗುವಂತೆ ಗಾಲಿ ಹೊರದೂಡುವ ಫ್ಯಾನ್‌ಗಳನ್ನು ಹಾಕಬೇಕು, ಇಲ್ಲದಿದ್ದರೆ ತೇವಾಂಶವ್ರ ಬೀಜಕೋಶಗಳ ಮೇಲೆಂಯು ಉಳಿದು, ಬೀಜಕೋಶಗಳ ಬಣ್ಣ ಹಾಳಾಗುತ್ತದೆ. ನಂತರ ಮತೊಮ್ಮೆ ಒಂದು-ಎರಡು ಗಂಟೆಗಳವರೆಗೆ ಉಷ್ಣತೆಯನ್ನು 60-65″ ಸೆ.) ಹೆಚ್ಚಿಸುವುದರಿಂದ ಒಣಗುವ ಕಾರ್ಯ ಮುಗಿಯುತ್ತದೆ. 65″ ಸೆ.ಗಿಂತ ಹೆಚ್ಚಿಗೆ ಉಷ್ಣತೆಯನ್ನು ಹೆಚ್ಚಿಸಬಾರದು. ಹೆಚ್ಚಿಸಿದರೆ ಬೀಜಕೋಶಗಳು ಸೀಳುತ್ತವೆ ಮತ್ತು ಆರುವ ತೈಲದ ಅಂಶ ಕಡಿಮೆಯಾಗುತ್ತದೆ.

ಸಮರ್ಥವಾದ ಮತ್ತು ದೊಡ್ಡದಾದ ಸ್ವಯಂಚಾಲಿತ ಒಣಗಿಸುವ ಯಂತ್ರಗಳನ್ನು ಕೆಲವು ಖಾಸಗಿ ವೃತ್ತಿಪರರು ತಯಾರಿಸಿದ್ದಾರೆ, ಇವುಗಳಲ್ಲಿ ಸೌದೆಗೆ ಬದಲಾಗಿ ಸೀಮೆಎಣ್ಣೆ. ದ್ರವ ಪೆಟ್ರೋಲಿಯಂ ಅನಿಲ(ಎಲ್‌ ಪಿ.ಜಿ.) ಡೀಸೆಲ್‌ ಅಥವಾ ಉರುವಲುಗಳ ಸಂಯೋಜನೆಯನ್ನು ಬಳಸುತ್ತಾರೆ. ಸುಧಾರಿತ ಒಣಗಿಸುವ ಉಯಂತ್ರಗಳಲ್ಲಿ ಪರ್ಯಾಯ ಉರುವಲುಗಳನ್ನು ಬಳಸಬಹುದು ಅಥವಾ ಇವುಗಳ ಜೊತೆಗೆ ಸೌದೆಯನ್ನೂ ಸಕ ಬಳಸಬಹುದು. ನಿಧಾನವಾಗಿ ಒಣಗುವಂತೆ ಮಾಡಲು ಬೇಕಾಗುವ ಉರುವಲು ಬಳಕೆಯನ್ನು ಸಂಪೂರ್ಣ ಸ್ವಯಂ ಚಾಲಿತ ಮಾಡಿರುತ್ತಾರೆ. ಸುಧಾರಿತ ಪದ್ಧತಿಗಳಲ್ಲಿ ಏಲಕ್ಕಿಯ ಉತ್ತಮ ಗುಣಮಟ್ಟ(ಬಣ್ಣ)ವನ್ನು ಪಡೆಯಬಹುದು ಮತ್ತು ಒಣಗಿಸುವ ಅವಧಿಯು ಕಡಿಮೆ(16-18 ಗಂಟೆ) ಇರುತ್ತದೆ. ಸುಧಾರಿತ ಒಣಗಿಸುವ ಉಯಂತ್ರಗಳಲ್ಲಿ ಒಣಗಿಸಿದ ಏಲಕ್ಕಿಗೆ ಮಾರುಕಟ್ಟೆಯಲ್ಲಿ, ಹರಾಜಿನಲ್ಲಿ ಮತ್ತು ಚಿಲ್ಲರೆ ವ್ಯಾಪಾರದಲ್ಲಿಯೂ ಅತಿ ಹೆಚ್ಚು ಬೆಲೆ ಸಿಗುತ್ತದೆ.

Also read  Black Pepper Cultivation – Nursery Operations from March to April

ಕರ್ನಾಟಕದಲ್ಲಿ ಕೊಯಿಲು ಮಾಡಿದ ಬೀಜಕೋಶಗಳನ್ನು ಸೂರ್ಯನ ನೇರ ಬಿಸಿಲಿನಲ್ಲಿಯೇ ಒಣಗಿಸಲಾಗುತ್ತಿದೆ. ಸೂರ್ಯನ ಬಿಸಿಲನ್ನು ಅವಲಂಬಿಸಿ 5-6 ದಿನಗಳು ಅಥವಾ ಇನ್ನೂ ಹೆಚ್ಚು ದಿನಗಳು ಬೇಕಾಗಬಹುದು. ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕೊಯಿಲು ಮಾಡುವುದರಿಂದ ಸಮನಾಗಿ ಒಣಗಿಸಲು ಸಾಧ್ಯವಾಗುವುದಿಲ್ಲ. ಈ ರೀತಿ ಒಣಗಿಸಿದ ಏಲಕ್ಕಿಯು ತನ್ನ ಹಸಿರು ಬಣ್ಣವನ್ನು ಉಳಿಸಿಕೊಳ್ಳುವುದಿಲ್ಲ, ಜೊತೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿಸುವಾಗ ಆಗಾಗ ಏಲಕ್ಕಿಯನ್ನು ಮತ್ತೆ ಮತ್ತೆ ಕಲಕುವ್ರದರಿಂದ ಬೀಜಕೋಶಗಳು ಸೀಳುವುದರಿಂದ ಗುಣಮಟ್ಟ ಹಾಳಾಗುತ್ತದೆ. ಸೂಂರ್ಹನ ಬಿಸಿಲಿನಲ್ಲಿ ಒಣಗಿಸುವಾಗ ಹರಡಿರುವ ಏಲಕ್ಕಿಯ ಮೇಲೆ ಕಪ್ಪು ಬಣ್ಣದ ಬ್ಲಾಂಕೆಟ್‌ ಅನ್ನು ಹರಡುವುದರಿಂದ ಬೀಜಕೋಶಗಳು ಬೇಗ ಒಣಗುತ್ತವೆ ಮತ್ತು ಹಸಿರು ಬಣ್ಣ ಹಾಗೆಯೇ ಉಳಿಯುತ್ತದೆ.

ಸ್ವಚ್ಛ ಮಾಡುವುದು, ವರ್ಗೀಕರಣ, ಚೀಲಗಳಲ್ಲಿ ತುಂಬಿಡುವುದು ಮತ್ತು ಉಗ್ರಾಣದಲ್ಲಿ ಇಡುವುದು

ಒಣಗಿಸಿದ ಬೀಜಕೋಶಗಳನ್ನು ಕೈಯಿಂದ ಅಥವಾ ಯಂತ್ರಗಳ ಸಹಾಯದಿಂದ ಹೊಳಪು ನೀಡಬೇಕು. ಒಣಗಿರುವ ಬೀಜಕೋಶಗಳನ್ನು ಬಿಸಿಯಿರುವ ಸ್ಥಿತಿಯಲ್ಲಿ ಗಟ್ಟಿಯಾದ ಮೇಲ್ಮೈಗೆ ಉಜ್ಜುವುದರಿಂದ ಹೊಳಪು ನೀಡಬಹುದು. ಕೈಯಿಂದ ನಡೆಸುವ ಅಥವಾ ಎಲೆಕ್ಟ್ರಿಕ್‌ ಮೋಟಾರ್‌ ನಿಂದ ನಡೆಯುವ ಹೊಳಪು ನೀಡುವ ಯಂತ್ರಗಳೂ ಸಹ ಲಭ್ಯವಿವೆ. ಮುಖ್ಯವಾದ ಗುಣಮಟ್ಟದ ಅಂಶಗಳಾದ ಬಣ್ಣ, ಒಂದು ಲೀಟರ್‌ ಬೀಜಕೋಶಗಳ ತೂಕ, ಗಾತ್ರ ಮತ್ತು ಖಾಲಿ ಇರುವ ಶೇಕಡಾವಾರು ಬೀಜಕೋಶಗಳೂ, ಆಕಾರ ಕೆಟ್ಟರುವ್ರದು, ಸುಕ್ಕುಗಟ್ಟರುವ ಮತ್ತು ಅಪ್ರಾಪ್ತ ಬೀಜಕೋಶಗಳು ಇವುಗಳ ಆಧಾರದ ಮೇಲೆ ಆಗ್‌ಮಾರ್ಕ್‌ ವರ್ಗೀಕರಣಗಳು ಮತ್ತು ಭಾರತೀಂದು ವಿಶಿಷ್ಠತೆಗಳು ಅಥವಾ ನಿರ್ಧಿಷ್ಟಮಾನಗಳನ್ನು ಮಾಡಲಾಗಿದೆ. ವರ್ಗೀಕರಣದ ನಂತರ ಏಲಕ್ಕಿ ಬೀಜಕೋಶಗಳನ್ನು ಬಹಳ ಕಾಲದವರೆಗೆ ಉಗ್ರಾಣದಲ್ಲಿ ಮಾಡಬಹುದು. ಉಗ್ರಾಣದಲ್ಲಿ ದಾಸ್ತಾನು ಮಾಡಿದಾಗಲೂ ಹಸಿರು ಬಣ್ಣವು ಹಾಗೆಯೇ ಇರಲು ಶೇಕಡಾ 10-12 ತೇವಾಂಶವಿರುವಂತೆ ಏಲಕ್ಕಿಯನ್ನು ಒಣಗಿಸಬೇಕು. ಗೋಣಿ ಚೀಲಗಳೊಳಗೆ 300 ಗೇಜ್‌ ದಪ್ಪವಿರುವ ಕಪ್ಪು ಬಣ್ಣದ ಪಾಲಿಥೀನ್‌ ಹಾಳೆಂಯನ್ನು ಅಂಟಿಸಿರುವ ಗೋಣಿ ಚೀಲಗಳಲ್ಲಿ ಏಲಕ್ಕಿಯನ್ನು ತುಂಬಿ, ದಾಸ್ತಾನು ಮಾಡಬಹುದು. ಒಣಗಿಸುವ ಮನೆಗಳಲ್ಲಿಟ್ಟ ಮರದ ಪೆಟ್ಟಿಗೆಗಳಲ್ಲಿ ದಾಸ್ತಾನು ಮಾಡಬಹುದು.

ಏಲಕ್ಕಿಯ ಇತರ ಪದಾರ್ಥಗಳು
ಏಲಕ್ಕಿ ಬೀಜ: ಒಣಗಿಸಿದ ಏಲಕ್ಕಿ ಹಣ್ಣುಗಳಿಂದ ಬೀಜವನ್ನು ಅಕಿ ಗಿರಣಿಯಲ್ಲಿ ಬೇರ್ಪಡಿಸುವುದು
ಏಲಕ್ಕಿ ಪುಡಿ: ಏಲಕ್ಕಿ ಬೀಜವನ್ನು ಪುಡಿ ಮಾಡಿ ಆಹಾರ ಪದಾರ್ಥಗಳಿಗೆ ಸುವಾಸನೆಚಿಸುನ್ನು ಕೂಡಲು ಬಳಸ್ಮತ್ತಾರೆ
ಏಲಕ್ಕಿ ಎಣ್ಣೆ: ಏಲಕ್ಕಿ ಎಣ್ಣೆಯನ್ನು ಏಲಕ್ಕೆ ಪುಡಿಯನ್ನು ಬಟ್ಟಿ ಇಳುವಿಸಿಕೆಯಿಂದ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ:
ವ್ಯವಸ್ಥಾಪಕರು
ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ
ಭಾ.ಕೃಅ.ಪ.-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ
ಕೋಜಿಕೋಡು — 673012, ಕೇರಳ ಸ
ಘೋ: 0495-2731410, 2730704 ಫ್ಯಾಕ್ಟ್‌ : 0495-2731187

Also read  ಕರಿಮೆಣಸಿನ ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ