ರಾಜ್ಯ ಬಜೆಟ್ 2019-ರೈತರಿಗೆ ನೀಡಿದ ಅನುದಾನ ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ
ರೈತ ಕಣಜ,ರೈತ ಸಿರಿ,ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ..ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ರೈತಪರ ಕಾಳಜಿಯನ್ನು ಅತೀವವಾಗಿ ವ್ಯಕ್ತಪಡಿಸಿದ್ದು ಎಲ್ಲ ಕ್ಷೇತ್ರದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೋಟ್ಯಂತರ ರೂ. ಅನುದಾನ ಘೋಷಣೆ ಮಾಡಿದ್ದಾರೆ.
ರೈತ ಪರ ಬಜೆಟ್-ರೈತರಿಗೆ ನೀಡಿದ ಅನುದಾನ ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ
‘ರೈತ ಸಿರಿ’
ಸಿರಿ ಧಾನ್ಯಗಳ ವಿಸ್ತೀರ್ಣ ಹೆಚ್ಚಿಸುವ ಸಲವಾಗಿ ‘ರೈತ ಸಿರಿ’ ಹೆಸರಿನ ನೂತನ ಯೋಜನೆಯನ್ನ ಘೋಷಿಸಿದ್ದಾರೆ.ರಾಜ್ಯದ ವಿವಿಧ ಭಾಗಗಳಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿರಿಧಾನ್ಯಗಳ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ರೈತ ಸಿರಿ ಯೋಜನೆ ಘೋಷಣೆ ಮಾಡಲಾಗಿದೆ. ಸಿರಿಧಾನ್ಯ ಉತ್ಪನ್ನಗಳ ಮಾರಾಟಕ್ಕೆ 10 ಕೋಟಿ ರೂ. ಅನುದಾನ ನೀಡಲಾಗಿದೆ.
‘ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ’
ಸಣ್ಣ ರೈತರಿಗೆ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹಿಸುವ ಜತೆಗೆ ಬೆಳೆಸಾಲ ಸಿಗುವಂತೆ ಮಾಡಲು ಸಿಎಂ ಕುಮಾರಸ್ವಾಮಿ ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಚಿನ್ನಾಭರಣಗಳನ್ನು ಅಡಮಾನ ಮಾಡಿ, ಶೇ.3ರ ಬಡ್ಡಿದರದಲ್ಲಿ ಸಣ್ಣ ರೈತರು ಬೆಳೆಸಾಲ ಪಡೆಯಬಹುದಾಗಿದೆ.ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಿದ್ದಾರೆ.
‘ರೈತ ಕಣಜ’
ರಾಜ್ಯದಲ್ಲಿ 12 ಅಧಿಸೂಚಿತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು “ರೈತ ಕಣಜ” ಯೋಜನೆ ಜಾರಿ; ರಾಜ್ಯದಲ್ಲಿನ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ವರ್ಷವಿಡೀ ಒಂದು ಶಾಶ್ವತ ಸಂಗ್ರಹಣಾ ಕೇಂದ್ರವನ್ನು ಪ್ರಾರಂಭ; 510 ಕೋಟಿ ರೂ. ಅನುದಾನ.
* ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ , ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನಿರಾವರಿ ಕಾರ್ಯಕ್ರಮಗಳಿಗೆ ಒಟ್ಟು 472 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
* ರೈತರಿಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಲು ನಿರ್ಧಾರಿಸಲಾಗಿದೆ.
* ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಆರ್ಥಿಕ ಸುಧಾರಣೆಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
* ಕೋಲಾರದಲ್ಲಿ ಟೊಮ್ಯಾಟೋ ಸಂಸ್ಕರಣ ಘಟಕ ಸ್ಥಾಪನೆಗೆ 20 ಕೋಟಿ ರೂ. ಒದಗಿಸಲಾಗಿದೆ.
* ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ರೂ, ಮಿಡಿ ಸೌತೆ ಬೆಳೆ ಉತ್ತೇಜನಕ್ಕೆ 2 ಕೋಟಿ ರೂ., ನಾಟಿ ಕೋಳಿ ಸಾಕಾಣಗೆ 5 ಕೋಟಿ ರೂ., ಕುರಿ ಸಾಕಾಣೀಕೆ ಪ್ರೋತ್ಸಾಹಕ್ಕೆ 2 ಕೋಟಿ ರೂ. ನೀಡಲಾಗುತ್ತದೆ.
* ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನಿರಾವರಿ ಕಾರ್ಯಕ್ರಮಗಳಿಗೆ ಒಟ್ಟು 472 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
* ಈರುಳ್ಳಿ, ಆಲೂಗಡ್ಡೆ ಸೇರಿದಂತೆ 12 ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುವ ರೈತ ಕೃಷಿ ಕಣಜ ಯೋಜನೆಗಾಗಿ 510 ಕೋಟಿ ರು ಮೀಸಲಿಡಲಾಗಿದೆ.
* ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ.
* ರೇಷ್ಮೆ ಕೃಷಿ ಬೆಳಗಾರರಿಗೆ ಗೌರವ ಧನ ನೀಡಲು ನಿರ್ಧರಿಸಲಾಗಿದೆ.
* ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್ಗೆ 1 ರೂ. ಹೆಚ್ಚಳ.ರಾಜ್ಯದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 500 ಸ್ವಯಂಚಾಲಿತ ಹಾಲು ಶೇಖರಣೆ ಯಂತ್ರ ಖರೀದಿಗೆ 5 ಕೋಟಿ ರೂ. ಅನುದಾನ.
* ರಾಜ್ಯದಲ್ಲಿ ಮುಂದಿನ 5 ವರ್ಷದಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ 600 ಗ್ರಾಮೀಣ ಸಂತೆಗಳಿಗೆ ಮೂಲಸೌಲಭ್ಯ ಒದಗಿಸಿ, ಕಿರು ಮಾರುಕಟ್ಟೆಗಳಾಗಿ ಅಭಿವೃದ್ಧಿ. ರೈತರಿಗೆ ನೇರ ಮಾರಾಟಕ್ಕೆ ಅವಕಾಶ ಹಾಗೂ ಸಾಗಣೆ ವೆಚ್ಚ ಉಳಿತಾಯ.
* ರಾಜ್ಯದಲ್ಲಿ ಮಂಗನ ಕಾಯಿಗೆ ಲಸಿಕೆಗೆ ಬೆಂಬಲ ನೀಡಲು 5 ಕೋಟಿ ರೂ. ಅನುದಾನ.