Featured NewsKrushi

ಶುಂಠಿ ಬೇಸಾಯ ಕ್ರಮಗಳು

 ಶುಂಠಿ (ಜಿಂಜಿಬರ್‌ ಆಪಿಸಿನೇಲ್‌) (ಕುಟುಂಬ : ಜಿಂಜಿಬರೆಸಿ) ಯು ಬಹುವಾರ್ಷಿಕ ಮೂಲಿಕೆ,ಇದರ ಬೇರು ಕಾಂಡಗಳನ್ನು ಸಂಬಾರವಾಗಿ ಉಪಯೋಗಿಸುತ್ತಾರೆ. ಭಾರತವು ವಿಶ್ವದಲ್ಲಿ ಶುಂಠಿ ಉತ್ಪಾದಿಸುವ ದೇಶಗಳಲ್ಲಿ ಅಗ್ರ ಸ್ಥಾನದಲ್ಲಿದೆ.

ಸಾಧಾರಣಾಗಿ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಶುಂಠಿಯನ್ನು ಬೆಳೆಯಲಾಗುತ್ತಿದೆ. ಕರ್ನಾಟಕ, ಒರಿಸ್ಸಾ, ಅಸ್ನಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಗುಜರಾತ್‌ ರಾಜ್ಯಗಳು, ಭಾರತದ ಶೇ. 65 ರಷ್ಟು ಶುಂಠಿಯನ್ನು ಉತ್ಪಾದಿಸುತ್ತವೆ.

ಶುಂಠಿಯು ಬೆಚ್ಚನೆ ಮತ್ತು ಆರ್ಧ ಹವಾಗುಣವನ್ನು ಬಯಸುತ್ತದೆ. ಇದನ್ನು ಸಮುದ್ರ ಮಟ್ಟದಿಂದ ಹಿಡಿದು 100 ಮೀಟರ್‌ ಎತ್ತರ ಪ್ರದೇಶದವರೆಗೂ ಬೇಸಾಯ ಮಾಡಬಹುದು.ಈ ಬೆಳೆಯನ್ನು ಮಳೆಯಾಧಾರಿತ ಮತ್ತು ನೀರಾವರಿ ಪ್ರದೇಶಗಳಲ್ಲಿ ಬೆಳೆಯಬಹುದು.

ಈ ಬೆಳೆಯನ್ನು ಉತ್ತಮವಾಗಿ ಬೆಳೆಯಬೇಕಾದರೆ ಬಿತ್ತನೆ ಮಾಡಿ ಚಿಗುರು ಬರುವವರೆಗೆ ಸಾಧಾರಣ ಮಳೆ, ಬೆಳೆಯುವ ಸಮಯದಲ್ಲಿ ಆಧಿಕ ಮಳೆ ಹಾಗೂ ಕೊಯ್ದು ಮಾಡುವ ಒಂದು ತಿಂಗಳ ಮೊದಲು ಒಣ ವಾತಾವರಣ ಅವಶ್ಯಕ.

ಶುಂಠಿಯನ್ನು ಉತ್ತಮ ಬಿಸಿಗಾಲುವೆ ವ್ಯವಸ್ಥೆ ಹೊಂದಿರುವ ವಿವಿಧ ರೀತಿಯ ಮಣ್ಣುಗಳಲ್ಲಿ ಅಂದರೆ ಮರಳು ಮಿಶ್ರಿತ ಗೋಡು ಮಣ್ಣು. ಜೇಡಿ ಮಿಶ್ರಿತ ಗೋಡು, ಕಪ್ಪು ಗೋಡು, ಜಂಬಿಟ್ಟು ಇತ್ಯಾದಿ ಮಣ್ಣುಗಳಲ್ಲಿ ಬೇಸಾಯ ಮಾಡಬಹುದು.

60-6.5 ರಸಸಾರ ಹೊಂದಿರುವ ಹ್ಯೂಮಸ್‌ ಮಿಶ್ರಿತ, ಸುಲಭವಾಗಿ ಮಡಿಯಾಗುವ ಗೋಡು ಮಣ್ಣು ಈ ಬೆಳೆಗೆ ಸೂಕ್ತ. ಈ ಬೆಳೆಯು ಜಾಸ್ತಿ ಪೋಷಕಾಂಶಗಳನ್ನು ಮಣ್ಣಿನಿಂದ ತೆಗೆದುಕೊಂಡು ಬೆಳೆಯುವುದರಿಂದ, ಪ್ರತಿ ವರ್ಷ ಅದೇ ಪ್ರದೇಶದಲ್ಲಿ ಶುಂಠಿ ಬೆಳೆಯಬಾರದು. ಈ ಬೆಳೆಯು 19-28 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶ ಹಾಗೂ ಶೇ. 70-90 ರಷ್ಟು ಆಧ್ರತೆಯ ಪ್ರದೇಶದಲ್ಲಿ ಉತ್ತಮವಾಗಿ ಬೆಳೆಯುತ್ತದೆ.

ತಳಿಗಳು

ಭಾರತದಲ್ಲಿ ಹಲವು ಸ್ಥಳೀಯ ಶುಂಠಿ ತಳಿಗಳನ್ನು ಬೇಸಾಯ ಮಾಡಲಾಗುತ್ತಿದ್ದು ಪ್ರತಿಯೊಂದು ತಳಿಯೂ ಅದು ಬೇಸಾಯ ಮಾಡಲಾಗುತ್ತಿರುವ ಪ್ರದೇಶ ಅಥವಾ ವಲಯವನ್ನು ಸೂಚಿಸುತ್ತದೆ. ಮಾರನ್‌, ಕುರುಪ್ಪಮ್‌ಪಾಡಿ, ಎರ್‌ನಾಡ್‌, ವೈನಾಡ್‌, ಹಿಮಾಚಲ ಮತ್ತು ನಾಡಿಯ ಇವುಗಳು ಪ್ರಮುಖ ಸ್ಥಳೀಯ ತಳಿಗಳು. ವಿದೇಶಿ ತಳಿಯಾದ ರಿಯೋ-ಡಿ-ಜನೈೆರೋ ತಳಿಯು ಅತ್ಯಂತ ಜನಪ್ಪಿಯವಾಗಿದೆ.ಐ.ಐ.ಎಸ್‌.ಆರ್‌ ವರದ ತಳಿಯ ತಾಜಾ ಶುಂಠಿ,ಒಣ ಶುಂಠಿ ಹಾಗೂ ಕ್ಯಾಂಡಿ ಮಾಡಲು ಸೂಕ್ತವಾಗಿದೆ, ಐಐ.ಎಸ್‌.ಆರ್‌ ರಜತ ಹೆಚ್ಚಿನ ಅಗತ್ಯ ತೈಲವನ್ನು ಹೊಂದಿರುವ ತಳಿ.

ಭೂಮಿ ಸಿದ್ಧತೆ

ಬೇಸಿಗೆಯಲ್ಲಿ ಬೀಳುವ ಪ್ರಾರಂಭಿಕ ಮಳೆಗೆ ಭೂಮಿಯನ್ನು ಸಿದ್ಧಪಡಿಸಿ ಸುಮಾರು 4 ರಿಂದ 5 ಬಾರಿ ಭೂಮಿಯನ್ನು ಉಳುಮೆ ಮಾಡಿ ಹದಕ್ಕೆ ತರಬೇಕು. ಭೂಮಿ ಸಿದ್ಧಪಡಿಸಿದ ನಂತರ 1 ಮೀಟರ್‌ ಆಗಲ ಓಟ ಸೆಂ.ಮೀ ಏತ್ತರ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದದ ಮಡಿಗಳನ್ನು 50 ಸೆಂ.ಮೀ ಅಂತರ ಇರುವಂತೆ ಮುಡಬೇಕು. ನೀರಾವರಿ ಪ್ರದೇಶದಲ್ಲಿ 40 ಸೆಂ.ಮೀ ಆಂತರ ಬಿಟ್ಟು ಮಾಡಬೇಕು. ಗೆಡ್ಡೆಕೊಳೆರೋಗ ಮತ್ತು ಬೇರು ಗಂಟು ಹುಳು ಬಾಧೆ ಈ ಪ್ರದೇಶದಲ್ಲಿ ಸಾದಾರಣವಾಗಿ ಕಂಡು ಬರುತ್ತಿದ್ದರೆ, ಮಡಿಗಳಿಗೆ ಪಾಲಿಥೀನ್‌ ಹಾಳೆಯನ್ನು ಹೊದಿಸಿ 40 ದಿನಗಳ ಕಾಲ ಬಿಸಿಲಿನಲ್ಲಿ ಬಿಡುವುದನ್ನು ಶಿಫಾರಸ್ಸು ಮಾಡಲಾಗಿದೆ.

ನೆಡುವ ಕ್ರಮ

ಶುಂಠಿಯ ಸಸ್ಯ ಅಭಿವೃದ್ಧಿಯನ್ನು ಕತ್ತರಿಸಿ ತೆಗೆದ ಬೇರು ಕಾಂಡ ಭಾಗದಿಂದ ಮಾಡಲಾಗುತ್ತದೆ.ಎಚ್ಚರದಿಂದ ಸುರಕ್ಷಿತವಾಗಿ ಶೇಜರಿಸಿರುವ ಬೇರುಕಾಂಡಗಳನ್ನು ಸಣ್ಣ ತುಂಡುಗಳಾಗಿ, 25-5.0 ಸೆಂ.ಮೀ ಉದ್ದ. 20-25 ಗ್ರಾಂ ತೂಕ ಮತ್ತು ಕನಿಷ್ಠ ಒಂದು ಅಥವಾ ಎರಡು ಗಿಣ್ಣು ಮೊಗ್ಗು ಇರುವಂತೆ ಕತ್ತರಿಸಬೇಕು. ಬಿತ್ತನೆ ಬೀಜದ ಪ್ರಮುಣವು ಬೆಳೆಯುವ ಬೇರೆ ಬೇರೆ ಪ್ರದೇಶದ ಮೇಲೆ ಅವಲಂಬಿಸಿರುತ್ತದೆ. ಕೇರಳದಲ್ಲಿ 500-100 ಕಿ.ಗ್ರಾಂ ಬೀಜ ಪ್ರತಿ ಹೆಕ್ಕೇರಿಗೆ ಬೇಕಾಗುತ್ತದೆ. ಎತ್ತರದ ಪ್ರದೇಶದಲ್ಲಿ ಪ್ರತಿ ಹೆಕ್ಕೇರಿಗೆ 2000-2500 ಕಿ.ಗ್ರಾಂ ಬೇಕಾಗುತ್ತದೆ.

ಬೇರು ಕಾಂಡಗಳನ್ನು 30 ನಿಮಿಷಗಳ ಕಾಲ ಶೇ. 03 ರ ಮ್ಯಾಂಕೋಜೆಬ್‌ ದ್ರಾವಣದಲ್ಲಿ (3 ಗ್ರಾಂ/ಲೀಟರ್‌ ನೀರು) ಅದ್ದಿ ತೆಗೆದು ನೆರಳಿನಲ್ಲಿ 3-4 ಗಂಟೆ ಒಣಗಿಸಿ, 20-25 ಸೆಂಮೀ ಅಂತರದ ಸಾಲುಗಳಲ್ಲಿ, 20-25 ಸೆಂಮೀ ಅಂತರದಲ್ಲಿ ಬಿತ್ತನೆ ಮಾಡಬೇಕು. ಬೀಜ ಶುಂಠಿಯನ್ನು ಕೈಯಿಂದ ಮಾಡಿದ ಸಣ್ಣ ಗುಂಡಿಯಲ್ಲಿ ಹಾಕಿ, ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಗೂ ಸ್ವಲ್ಪ ಮಣ್ಣನ್ನು ಸಹ ಗುಂಡಿಯಲ್ಲಿ ಹಾಕಿ ಮಡಿಯನ್ನು ಸಮ ಮಾಡಬೇಕು.

ಗೊಬ್ಬರ ನಿರ್ವಹಣೆ

ಬಿತ್ತನೆ ಸಮಯದಲ್ಲಿ 25-30 ಟನ್‌ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್‌ ಅನ್ನು ಪ್ರತಿ ಹೆಕ್ಮೇರಿಗೆ ಮಡಿಗಳಿಗೆ ಎರೆಚಿ ಅಥವಾ ಬಿತ್ತನೆ ಮಾಡುವಾಗ ಗುಂಡಿಗಳಿಗೆ ಹಾಕುವುದು. ಎರಡು ಟನ್‌ ಬೇವಿನ ಹಿಂಡಿಯನ್ನು ಶುಂಠಿ ಬಿತ್ತನೆ ಮಾಡುವಾಗ ಹಾಕಿದರೆ ಮೆದು ಕೊಳೆರೋಗ / ಬೇರುಗಂಟು ಹುಳು ಕಡಿಮೆಯಾಗಿ ಇಳುವರಿ ಉತ್ತಮವಾಗಿರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಶುಂಠಿ ಬೆಳೆಗಾಗಿ ಶಿಫಾರಸ್ಸು ಮಾಡಲಾದ ಪೋಷಕಾಂಶಗಳ ಪ್ರಮಾಣ ಪ್ರತಿಯನ್ನು ಕೋಷ್ಟಕ 2 ರಲ್ಲಿ ಕೊಡಲಾಗಿದೆ.

ಮಣ್ಣಿನ ಫಲವತ್ತತೆಯು ಮಣ್ಣಿನ ವಿಧ,ಕೃಷಿ ಪರಿಸರ ಹಾಗೂ ನಿರ್ವಹಣಾ ಪದ್ಧತಿಗೆ ಅನುಸಾರವಾಗಿ ಬದಲಾಗುವುದರಿಂದ ಮಣ್ಣು ಪರೀಕ್ಷೆಯ ಆಧಾರದ ಮೇಲೆ ನಿರ್ದಿಷ್ಟ ಜಾಗಕ್ಕೆ ಅನ್ವಯವಾಗುವಂತೆ ಪೋಷಕಾಂಶಗಳನ್ನು ಒದಗಿಸಬೇಕು.

ರಾಸಾಯನಿಕ ಗೊಬ್ಬರವನ್ನು 2-3 ಕಂತುಗಳಲ್ಲಿ ನೀಡಬೇಕು. ನಾಟಿ ಮಾಡುವ ಸಮಯದಲ್ಲಿ ಪೂರ್ತಿ ಪ್ರಮಾಣದ ರಂಜಕವನ್ನು ನೀಡಬೇಕು ಸಮ ಪ್ರಮಾಣದ ಸಾರಜನಕ ಮತ್ತು ಪೊಟ್ಯಾಷ್‌ ಅನ್ನು ನಾಟಿ ಮಾಡಿದ 45, 90 (ಮತ್ತು 120) ದಿನಗಳ ನಂತರ ನೀಡಬೇಕು.

ಸತುವಿನ ಕೊರತೆ ಇರುವ ಮಣ್ಣಿನಲ್ಲಿ ಉತ್ತಮ ಇಳುವರಿಯನ್ನು ಪಡೆಯಲು 6 ಕಿ.ಗ್ರಾಂ ಸತು/ಹೆ (30 ಕಿ.ಗ್ರಾಂ ಸತುವಿನ ಸಲ್ಫೇಟ್‌/ಹೆ) ಅನ್ನು ಒದಗಿಸಬೇಕು. ಉತ್ತಮ ಇಳುವರಿಗಾಗಿ ಶುಂಠಿಗೆ ಅನ್ವಯವಾಗುವಂತಹ ಲಘು ಪೋಷಕಾಂಶಗಳನ್ನು (5 ಗ್ರಾಂ/ಲೀ) ನಾಟಿ ಮಾಡಿದ 60 ಮತ್ತು 90 ದಿನಗಳ ನಂತರ ಏಲೆಗಳಿಗೆ ಸಿಂಪಡಿಸಬೇಕು.

ಹೊದಿಕೆ

ವಸ್ತುವಿನ ಅಂಶವನ್ನು ಹೆಚ್ಚಿಸುವುದಲ್ಲದೆ ಬೆಳೆಯ ಅವಧಿಯ ನಂತರದ ಸಮಯದಲ್ಲಿ ತೇವಾಂಶ ಸಂರಕ್ಷಣೆಗೆ ಸಹಾಯ ಮಾಡುತ್ತದೆ. ಮೊದಲಿಗೆ ನಾಟಿ ಸಮಯದಲ್ಲಿ ಹೆಕ್ಳೇರಿಗೆ 10 ರಿಂದ 12 ಟನ್‌ ಪ್ರಮಾಣದಲ್ಲಿ ಹಸಿರೆಲೆ ಹೊದಿಕೆಯನ್ನು ಬಳಕೆ ಮಾಡುವುದು. ಕಳೆಗಳ ನಿರ್ವಹಣೆಗಾಗಿ ಒಣಗಿದ ತೆಂಗಿನ ಗರಿ ಅಥವಾ ಭತ್ತದ ಹುಲ್ಲಿನ (2-3 ಕಿ.ಗ್ರಾಂ/ಮಡಿ) ಹೊದಿಕೆ ನೀಡಬೇಕು. ನಾಟಿ ಮಾಡಿದ 45 ನೇ ಮತ್ತು 9 ನೇ ದಿನಗಳಲ್ಲಿ ಕಳೆ ತೆಗೆದು ರಸಗೊಬ್ಬರ ನೀಡಿ, ಮಣ್ಣು ಏರಿಸಿ ಕೊಟ್ಟ ತಕ್ಷಣ ಹೆಕ್ಕೇರಿಗೆ 75 ಟನ್‌ ಪ್ರಮಾಣದಲ್ಲಿ ಹಸಿರೆಲೆಯನ್ನು ಹರಡುವುದು. ಹೊದಿಕೆ ಕೊಡುವುದರಿಂದ ಧೃಡವಾದ ಗೆಡ್ಡೆಗಳನ್ನು ಪಡೆಯಬಹುದು.

ಶುಂಠಿ ಬೆಳೆಯ ಮಡಿಗಳಲ್ಲಿ ಮಳೆಯಿಂದ ಮಣ್ಣಿನ ಕೊಚ್ಚಣೆಯನ್ನು ತಡೆಯಲು ಹನಸಿರೆಲೆಗಳಿಂದ ಅಥವಾ ಸಾವಯವ ತ್ಯಾಜ್ಯ ವಸ್ತುಗಳಿಂದ ಹೊದಿಕೆ ಕೊಡುವುದು ಅವಶ್ಯಕ. ಈ ರೀತಿಯ ಹೊದಿಕೆಯು ಮಣ್ಣಿನ ಸಾವಯವ 

ನೀರಾವರಿ

ಬೆಳೆಯಲಾಗುತ್ತದೆ. ಶುಂಠಿ ಮೊಳಕೆಯೊಡೆಯುವ ಸಮಯ ಬೇರು ಗೆಡ್ಡೆ ಬಿಡುವಾಗ (ನಾಟಿಮಾಡಿದ 90 ದಿನಗಳ ನಂತರ) ಮತ್ತು ಬೇರು ಗೆಡ್ಡೆ ಬೆಳೆಯುವ ಹಂತದಲ್ಲಿ (ನಾಟಿ ಮಾಡಿದ 135 ದಿನಗಳ ನಂತರ) ನೀರು ಕೊಡುವುದು ಅತ್ಯವಶ್ಯಕ. ನಾಟಿ ಮಾಡಿದ ನಂತರ ಒಂದು ಬಾರಿ ನೀರು ಕೊಟ್ಟು, ನಂತರ ಹವಾಮಾನ ಮತ್ತು ಮಣ್ಣಿನ ವಿಧಕ್ಕೆ ಅನುಸಾರವಾಗಿ 7 ರಿಂದ 10 ದಿನಗಳ ಅಂತರದಲ್ಲಿ ನೀರಾವರಿ ಮಾಡಬೇಕು. ನೀರಿನ ಉಳಿತಾಯ ಹಾಗೂ ಉತ್ತಮ ಇಳುವರಿಗಾಗಿ ಸ್ಟಿಂಕ್ಸರ್‌ ಹಾಗೂ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು.

ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ (5-7 ತಿಂಗಳು ಏಕರೂಪದಲ್ಲಿ ವಿತರಣೆಯಾಗುವ ಮಳೆ) ಶುಂಠಿಯನ್ನು ಮಳೆಯಾಶ್ರಿತ ಬೆಳೆಯಾಗಿ ಹಾಗೂ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಇದನ್ನು ನೀರಾವರಿ ಬೆಳೆಯಾಗಿ 

ಅಂತರ ಬೇಸಾಯ

ರಾಸಾಯನಿಕ ಗೊಬ್ಬರ ಮತ್ತು ಹೊದಿಕೆಗಳನ್ನು ಶುಂಠಿ ಮಡಿಗೆ ಕೊಡುವ ಮೊದಲು ಕಳೆ ತೆಗೆಯುವುದು ಸೂಕ್ತ. ಶುಂಠಿ ಬೆಳೆಯ ಅವಧಿಯಲ್ಲಿ ಕಳೆಯ ಪ್ರಮಾಣ ಮತ್ತು ಬೆಳವಣಿಗೆಯನ್ನು ನೋಡಿಕೊಂಡು 2-3 ಬಾರಿ ಕಳೆ ನಿಯಂತ್ರಣ ಮಾಡಬೇಕಾಗುತ್ತದೆ. ನೀರು ನಿಲ್ಲುವ ಪ್ರದೇಶಗಳಲ್ಲಿ ನೀರು ಬಸಿದು ಹೋಗಲು ಬಸಿಗಾಲುವೆಯನ್ನು ನಿರ್ಮಿಸಬೇಕು. ಬೇರು ಗೆಡ್ಡೆಗಳು ಮಣ್ಣಿನಿಂದ ಹೊರಬರುವು್ರದನ್ನು ತಡೆಯಲು ಹಾಗೂ ಅವುಗಳ ಉತ್ತಮ ಬೆಳವಣಿಗೆಗಾಗಿ ಮಣ್ಣು ಕೊಡುವುದು ಅವಶ್ಯಕ. ನಾಟಿ ಮಾಡಿದ 45 ಮತ್ತು 90 ದಿನಗಳ ನಂತರ ಕಳೆ ನಿಯಂತ್ರಣ ಮತ್ತು ರಾಸಾಯನಿಕ ಗೊಬ್ಬರ ಕೊಟ್ಟಮೇಲೆ ಮಣ್ಣು ಏರಿಸಿ ಕೊಟ್ಟು, ಎಲೆಗಳಿಂದ ತೆಳುವಾಗಿ ಮುಚ್ಚುವುದು ಅವಶ್ಯಕ.

ಶುಂಠಿ ಬೆಳೆದ ನಂತರ ಬೇರೆ ಬೆಳೆ ಬೆಳೆಯುವುದು ಸಾಮಾನ್ಯ ಪದ್ಧತಿ. ಶುಂಠಿಯ ನಂತರ ಮರಗೆಣಸು, ರಾಗಿ,ಭತ್ತ, ಎಳ್ಳು. ಜೋಳ ಮತ್ತು ತರಕಾರಿ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಶುಂಠಿಯ ಜೊತೆ ರಾಗಿ, ತೊಗರಿ ಮತ್ತು ಆರಳನ್ನು ಮಿಶ್ರ ಬೆಳಯಾಗಿ ಬೆಳೆಯುತ್ತಾರೆ. ಶುಂಜಿಯನ್ನು ಮಿಶ್ರ ಬೆಳೆಯಾಗಿ ತೆಂಗು, ಅಡಿಕೆ, ಕಾಫಿ ಮತ್ತು ಕಿತ್ತಳೆ ತೋಟಗಳಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಬೆಳೆಯುತ್ತಾರೆ. ಶುಂಠಿಯ ನಂತರ ಟೊಮೆಟೋ, ಆಲುಗೆಡ್ಡೆ, ಮೆಣಸು, ಬದನೆ ಇತ್ಯುದಿ ಬೆಳೆಯನ್ನು ಬೆಳೆಯಬಾರದು. ಏಕೆಂದರೆ ಸೊರಗನ್ನು ಉಂಟುಮಾಡುವ ರಾಲ್‌ಸ್ಟೋನಿಯ ಸೊಲನೇಸಿಯಾರಮ್‌ ಬ್ಯಾಕ್ಟೀರಿಯಾ ಮಣ್ಣಿನಲ್ಲಿ ಉಳಿದುಕೊಂಡು ನಂತರ ಮತ್ತೆ ಅದೇ ಮಣ್ಣಿನಲ್ಲಿ ಶುಂಠಿ ಬೆಳೆದಾಗ ಶುಂಠಿಗೂ ರೋಗ ತಗುಲುವ ಸಾಧ್ಯತೆಯಿದೆ.

ಸತ್ಯ ಸಂರಕ್ಷಣೆ

ರೋಗಗಳು

ಮೆದು (ಬೇರುಕಾಂಡ) ಕೊಳೆರೋಗ

ಮುಂಗಾರು ಮಳೆ ಪ್ರಾರಂಭವಾಗಿ ಮಣ್ಣಿನಲ್ಲಿ ತೇವಾಂಶ ಅಧಿಕವಾದಾಗ ಶಿಲಿಂಧ್ರಗಳ ಸಂಖ್ಯೆ ಮಣ್ಣಿನಲ್ಲಿ ಹೆಚ್ಚಾಗುತ್ತದೆ. ಬೇರು ಕಾಂಡದಿಂದ ಬರುತ್ತಿರುವ ಎಳೆಯ ಕಾಂಡಗಳು ಈ ರೋಗಕ್ಕೆ ಬೇಗ ತುತ್ತಾಗುತ್ತದೆ. ಈ ರೋಗವು ಕಾಂಡದ ಕುತ್ತಿಗೆ ಭಾಗದಲ್ಲಿ ಶುರುವಾಗಿ, ಮೇಲೆ ಮತ್ತು ಕೆಳಗಿನ ಭಾಗಕ್ಕೆ ಹರಡುತ್ತದೆ.ಈ ರೋಗವು ಸೊಂಕಿಗೆ ತುತ್ತಾದ ಕಾಂಡದ ಭಾಗವು ನೀರಿನಲ್ಲಿ ನೆನೆಸಿದಂತಾಗಿ ನಂತರ ಕೆಟ್ಟ ವಾಸನೆಯೊಂದಿಗೆ ಗೆಡ್ಡೆಗಳು ಕೊಳೆತು ಮೆದು ಕೊಳೆರೋಗವನ್ನುಂಟುಮಾಡುತ್ತದೆ. ನಂತರದ ಹಂತದಲ್ಲಿ ಬೇರುಗಳು ಕೂಡ ಸೊಂಕಿಗೊಳಗಾಗಿ ಕೊಳೆಯುತ್ತವೆ. ರೋಗದ ಬಾಧೆಗೊಳಗಾದ ಸಸ್ಯಗಳ ಹೊಸ ಏಲೆಗಳು ತೆಳು ಹುಸಿರು ಬಣ್ಣಕ್ಕೆ ತಿರುಗಿ ಏಲೆಗಳ ತುದಿಗಳಿಂದ ಪ್ರಾರಂಭವಾಗಿ ಅಂಚುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಜೋಲು ಬಿದ್ದು ಕುಂಡದ ಬುಡಭಾಗದಿಂದ ಕಳಚಿ ಬಿದ್ದು, ಸೊರಗಿ ಒಣಗುತ್ತವೆ.

ಮೆದು ಕೊಳೆರೋಗವು ತೀವ್ರ ಸ್ವರೂಪದಲ್ಲಿ ಶುಂಠಿಯ ಬೇರು ಕಾಂಡಕ್ಕೆ ಕಾನಿ ಮಾಡುವ ರೋಗವಾಗಿದೆ. ಈ ರೋಗವು ಮಣ್ಣಿನಿದ ಬರುತ್ತದೆ. ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಫಿಧಿಯಂ ಮಿರಿಯೋಟೈಲವ್‌್‌ ಎಂಬ ಶಿಲಿಂಧ್ರ ಈ ರೋಗವನ್ನುಂಟುಮಾಡುತ್ತದೆ.

ರೋಗವನ್ನು ಸ್ವಲ್ಪ ಹತೋಟಿ ಮಾಡಬಹುದು. ನೀರು ನಿಲ್ಲುವ ಪ್ರದೇಶದಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಶುಂಠಿ ನಾಟಿ ಮಾಡುವ ಮೊದಲು, ತೇವವಿರುವ ಮಣ್ಣನ್ನು ಪಾಲಿಥೀನ್‌ ಹಾಳೆಯಿಂದ ಮುಟ್ಟಿ, 45-50 ದಿನಗಳ ವರೆಗೆ ಸೂರ್ಯನ ಶಾದಲ್ಲಿ ಒಣಗಿಸಬೇಕು. ಪ್ರತಿ ಸಸಿಮಡಿಗೆ 1 ಕೆ.ಜಿ ಟ್ರೈಕೋಡರ್ಮ ಕಾರಜಿಯಾನಮ್‌ ಮತ್ತು ಬೇವಿನ ಹಿಂಡಿ ಹಾಕುವ್ರದರಿಂ್ರದ ರೋಗವನ್ನು ಕಡಿಮೆಮಾಡಬಹುದು. ಒಂದು ಬಾರಿ ತೋಟದಲ್ಲಿ ರೋಗ ಕಂಡುಬುದರೆ, ರೋಗ ತಗುಲಿದ ಗೆಡ್ಡೆಗಳನ್ನು ಕಿತ್ತು. ಆ ಮಡಿ ಹಾಗೂ ಸುತ್ತಲಿರುವ ಮಡಿಗಳಿಗೆ ಶೇ. 03 ಮ್ಯಾಂಕೊಜೆಬ್‌ ಅಥವಾ ಶೇ. 0.2 ರ ಕಾಪರ್‌ ಆಕ್ಸಿಕ್ಲೋರೈಡ್‌ ನ ದ್ರಾವಣದಿಂದ ನೆನೆಸುವುದರಿಂದ ರೋಗ ಹರಡುವುದನ್ನು ತಡೆಯಬಹುದು.

ರೋಗವು ಬಿಣುದ ಗೆಡ್ಡೆಯಿಂದ ಹರಡುವ ಕಾರಣದಿಂದ, ಬಿಜದ ಗೆಡ್ಡೆಗಳನ್ನು ರೋಗರಹಿತ ತೋಟಗಳಿಂದ ತೆಗೆದುಕೊಳ್ಳಬೇಕು. ಬಿಣುದ ಗೆಡ್ಡೆಗಳನ್ನು ಶೇ. 03 ರ ವಶ್ಯುಂಕೊಜೆಬ್‌ ಅಥವಾ ಶೇ. 0.125 ರ ಮೆಟಾಲಾಕ್ಟಿಲ್‌ ಕಾ ಮ್ಯಾಯೊಜೆಬ್‌ ದ್ರಾವಣದಲ್ಲಿ 3 ನಿಮಿಷಗಳ ಕಾಲ ಅದ್ದಿ ನಂತರ ಶೇಖರಣೆ ಮಾಡುವುದು. ಬಿತ್ತನೆಯ ನಂತರವು 30- 60 ದಿನಗಳ ಅಂತರದಲ್ಲಿ ಇದೇ ದ್ರಾವಣದಿಂದ ಭೂಮಿಯನ್ನು ನೆನೆಸುವ್ರದರಿಂದ ರೋಗವನ್ನು ಕುಶೋಟಿ ಮಾಡಲು  ಸಾಧ್ಯವಾಗುತ್ತದೆ. ಶುಂಠಿ ಬೆಳೆಯಲು ನೀರು ಚೆನ್ನಾಗಿ ಬಸಿದು ಕೋಗುವ ಸ್ಥಳವನ್ನು ಆಯ್ಕೆ ಮಾಡುವುದರಿಂದ ಈ

ಬ್ಯಾಕ್ಮೀರಿಯಾ ಸೊರಗು ರೋಗ

ಈ ರೋಗವು ಸೂಡೋಮೊನಾಸ್‌ ಸೊಲನೇಸಿಯಾರಮ್‌ (ಬಯೋವಾರ್‌-3) ಎಂಬ ಬ್ಯಾಕ್ಟೀರಿಯಾದಿಂದ ಹಾಗೂ ಮಣ್ಣು ಮತ್ತು ಬಿತ್ತನೆ ಬೀಜದಿಂದ ಬರುತ್ತದೆ. ಈ ರೋಗವು ಮುಂಗಾರು ಮುಳೆ ಪ್ರಾರಂಭವಾಗುವ ಸಮಯದಲ್ಲಿ, ಸಸ್ಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಕಂಡುಬರುತ್ತದೆ. ನೀರಿನಲ್ಲಿ ನೆನೆಸಿದಂತಹ ಮಜ್ಜೆಗಳು ಮಿಥ್ಯಕಾಂಡದ ಕುತ್ತಿಗೆ ಭಾಗದಲ್ಲಿ ಕಾಣಿಸಿಕೊಂಡು ನಂತರ ಮೇಲ್ಭಾಗ ಮತ್ತು ಜೇರುಗಳಿಗೆ ಹರಡುತ್ತವೆ. ಕೆಳಭಾಗದ ಎಲೆಗಳು ಸ್ವಲ್ಪ ಪ್ರಮಾಣದಲ್ಲಿ ಜೋಲು ಬಿದ್ದು, ಎಲೆಯ ಅಂಚುಗಳಲ್ಲಿ ಮುರುಟುಗೊಳ್ಳುವಿಕೆಯು ಕಂಡುಬರುತ್ತದೆ. ನಂತರ ಕಾಂಡದ ಮೇಲ್ಭಾಗಕ್ಕೆ ಹರಡಿಕೊಳ್ಳುತ್ತದೆ. ರೋಗದ ತೀವ್ರತೆಯು ಹೆಚ್ಚಾದಂತೆ ಎಲೆಗಳು ಸಂಪೂರ್ಣವಾಗಿ ಹಳದಿಯಾಗಿ ಸೊರಗುತ್ತದೆ. ಬಾಧೆಗೊಳಗಾದ ಮಿಥ್ಯಕಾಂಡದ ನಿರ್ವಹಣಾಂಶದಲ್ಲಿ ಕಪ್ಪು ಬಣ್ಣದ ಗೀರುಗಳು ಗೋಚರಿಸುತ್ತದೆ. ಇಂತಹ ಕಾಂಡ ಅಥವಾ ಗೆಡ್ಡೆಗಳನ್ನು ನಿಧಾನವಾಗಿ ಕೈಯಿಂದ ಅದುಮಿದಾಗ ಬಿಳಿಯ ಕೀವಿನಂತಹ ಅಂಶ ನಿರ್ವಹಣಾ ನಾಳಗಳಿಂದ ಹೊರಬರುತ್ತದೆ. ಗೆಡ್ಡೆಗಳು ಕೊಳೆತು ದುರ್ಗಂಧವನ್ನು ಹೊರಸೂಸುತ್ತವೆ.

ಮೆದುಕೊಳೆರೋಗದ ನಿರ್ವಕ್‌ಣೆಗೆ ಸೂಕ್ತವಾದ ಬೇಸಾಯ ಕ್ರಮಗಳು ಮತ್ತು ಗೆಡ್ಡೆ ಉಪಚಾರ ಕ್ರಮಗಳು ಈ ರೋಗದ ನಿರ್ವಹಣೆಗೂ ಅನ್ವಯವಾಗುತ್ತದೆ. ಬೀಜ ಶುಂಠಿಯನ್ನು ರೋಗ ಮುಕ್ತ ತೋಟದಿಂದ ಆಯ್ದುಕೊಳ್ಳುವುದೇ ಈ ರೋಗದ ನಿಯಂತ್ರಣಕ್ಕೆ ಏಕೈಕ ಪ್ರಮುಖ ಹೆಜ್ಜೆ. ಪ್ರತಿ ವರ್ಷವೂ ಶುಂಠಿಯನ್ನು ಒಂದೇ ಭೂಮಿಯಲ್ಲಿ ಬೆಳೆಯುವುದು ಸೂಕ್ತವಲ್ಲ. ಆಲೂಗೆಡ್ಡೆ, ಟೊಮೆಟೋ, ಮೆಣಸು ಹಾಗೂ ಇನ್ನಿತರ ಸೊಲನೇಸಿಯಸ್‌ ಬೆಳೆಗಳನ್ನು ಬೆಳೆದ ಭೂಮಿಯಲ್ಲಿ ಶುಂಠಿಯನ್ನು ಬೆಳೆಯಬಾರದು. ತೋಟದಲ್ಲಿ ಈ ರೋಗ ಕಂಡುಬಂದಲ್ಲಿ, ಬಾಧೆಗೊಳಗಾದ ಗಿಡಗಳ ಮಣ್ಣು ಬೇರೆ
ಮಡಿಗಳಿಗೆ ಬೀಳದಂತೆ ಎಚ್ಚರವಹಿಸಿ ಕೀಳಬೇಕು. ನಂತರ ಸುತ್ತಮುತ್ತಲಿನ ಮಡಿಗಳನ್ನು ಶೇ. 0.2 ರ ಕಾಪರ್‌ ಆಕ್ಸಿಕ್ಲೋರೈಡ್‌ ನಿಂದ ನೆನೆಸಬೇಕು. ಕಿತ್ತ ಗಿಡಗಳನ್ನು ಬೆಳೆ ಪ್ರದೇಶದಿಂದ ದೂರ ಸಾಗಿಸಿ ಸುಟ್ಟು ನಾಶಪಡಿಸಬೇಕು.

ಎಲೆ ಚುಕ್ಕೆ ರೋಗ

ರೋಗಬಾಧೆ ಹೆಚ್ಚಾಗಿ ಕಂಡುಬರುತ್ತದೆ. ಈ ರೋಗವನ್ನು ಶೇ. 1 ರ ಬೋರ್ಡೋ ದ್ರಾವಣ ಅಥವಾ ಶೇ. 0.2ರ ಮ್ಯಾಂಕೋಜೆಬ್‌ ಅಥವಾ ಶೇ. 0.2 ರ ಕಾರ್ಬೆಂಡಿಜಿಮ್‌ ಸಿಂಪಡಣೆ ಮಾಡುವುದರಿಂದ ಕುಶೋಟಿ ಮಾಡಬಹುದು. ಎಲೆಗಳ ಕೆಳಭಾಗಕ್ಕೆ ಸಿಂಪಡಣಾ ಮಿಶ್ರಣ ತಗುಲುವಂತೆ ಸಿಂಪಡಿಸುವುದು ಬಹಳ ಮುಖ್ಯ.

ಎಲೆ ಚುಕ್ಕೆ ರೋಗವು ಫಿಲ್ಲೊಸ್ಟಿಕ್ಟ ಜಿಂಜಿಬರಿ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ರೋಗದ ಲಕ್ಷಣಗಳು ಪ್ರಾರಂಭದಲ್ಲಿ ನೀರಿನಲ್ಲಿ ನೆನೆದಂತಕಹ ಮಜ್ಜೆಗಳಿಂದ ಕೂಡಿದ್ದು ನಂತರ ಕಂದು ಬಣ್ಣದ ಅಂಚು ಹೊಂದಿದ ಬಿಳಿಯ ಮಚ್ಚೆಗಳಾಗಿ ಬದಲಾಗುತ್ತದೆ. ಈ ಕಂದು ಬಣ್ಣದ ಅಂಚು ಹಳದಿ ಬಣ್ಣದ ಪರಿಧಿಯನ್ನು ಒಳಗೊಂಡಿರುತ್ತವೆ. ಈ ಮಚ್ಚೆಗಳು ಬೆಳೆದು ಒಂದಕ್ಕೊಂದು ಸೇರಿ ಎಲೆಗಳು ಒಣಗುವಂತೆ ಮಾಡುತ್ತದೆ. ಶಿಲೀಂಧ್ರ ರೋಗಾಣುಗಳು ತುಂತುರು ಮಳೆ ಅಥವಾ ನಡಿಹನಿಗಳ ಮೂಲಕ ಪ್ರಸಾರವಾಗುತ್ತದೆ. ಶುಂಠಿಂಯನ್ನು ನೆರಳಿಲ್ಲದ ಪ್ರದೇಶದಲ್ಲಿ ಬೆಳೆದಾಗ ಈ

ಜಂತು ಹುಳುಗಳು

ತಿರುದಿ ನೀನಲ್ಲ ನನದಧಂತ ಕಾಣುತದ್ದು ಇಂತು ರುಳುಧಜ್ನ ಬಾಧ್ಯ ಜಾನಿ ಇದರ ಠೀ ಗಡೆಗಳ್ದು ಬೀಗ್ನ ಕೊಳೆರೋಗ ತುತ್ತಾಗುತ್ತವೆ.

ಬೇರುಗಂಟು ಜಂತುಹುಳು (ಮೆಲೊಡೋಗ್ಯನ್‌ ಇಂಕಾಗ್ನಿಟ)ಂ, ತೋಡುವ ಜಂತುಹುಳು (ರಡೋಫಿಲಿಸ್‌ ಸಿಮಿಲಿಸ್‌) ಮತ್ತು ಮಜ್ಜೆ ಜಂತುಹುಳು (ಪ್ರಟೋಲಿಂಕಸ್‌ ಪ್ರಬೇಧ) ಇವು ಪ್ರಮುಖವಾಗಿ ಶುಂಠಿ ಬೆಳೆಯಲ್ಲಿ ಕಂಡುಬರುವ ಜಂತುಹುಳುಗಳು. ಕುಂಠಿತ ಬೆಳವಣಿಗೆ, ಎಲೆಗಳು ಹಳದಿಯಾಗುವುದು, ಕಡಿಮೆ ಕವಲುಗಳು ಮತ್ತು ಎಲೆಗಳು ಬಾಡುವುದು ಇದು ಸಸ್ಯದ ಮೇಲ್ಭಾಗದಲ್ಲಿ ಕಂಡುಬರುವ ಲಕ್ಷಣಗಳು. ಬಾಧೆಗೊಳಗಾದ ಬೇರುಗಳಲ್ಲಿ ಗಂಟು ಹಾಗೂ ಮಜ್ಜೆಗಳು ಕಾಣಿಸಿಕೊಂಡು ಬೇರುಗಳು ಕೊಳೆಯುತ್ತವೆ. ಜಂತುಹುಳುಗಳಿಗೆ ತುತ್ತಾದ ಗೆಡ್ಡೆಯು, ಕಂದು ಬಣ್ಣಕ್ಕೆ

ಜಂತುಹುಳು ಬಾಧೆಯನ್ನು ಹತೋಟಿ ಮಾಡಲು ಜಂತುಹುಳುಗಳಿಲ್ಲದ ಬೀಜ ಶುಂಠಿಯನ್ನು ಆಯ್ಕೆ ಮಾಡುವುದು. ಬೀಜ ಶುಂಠಿ ಜಂತುಹುಳುಗಳ ಬಾಧೆಗೆ ತುತ್ತಾಗಿದ್ದರೆ, ಅದನ್ನು ಬಿಸಿ ನೀರಿನಲ್ಲಿ (೫ ಡಿಗ್ರಿ ಸಿ) 10 ನಿಮಿಷ ನೆನೆಸುವುದು ಮತ್ತು ಶುಂಠಿ ಮಡಿಗಳನ್ನು ಪಾಲಿಥೀನ್‌ ಹಾಳೆಗಳಿಂದ ಮುಚ್ಚ, 40 ದಿನಗಳ ಕಾಲ ಬಿಸಿಲಿನಲ್ಲಿಒಣಗಿಸುವುದು, ಜಂತುಹುಳು ಬಾದೆ ಹೆಚ್ಚು ಇರುವ ಪ್ರದೇಶಗಳಲ್ಲಿ ಜಂತುಹುಳು ನಿರೋಧಕ ತಳಿ ಐ.ಐ.ಎಸ್‌.ಆರ್‌ ಮಹಿಮ ವನ್ನು ಬೆಳೆಸುವುದು ಸೂಕ್ತ.

ಜೈವಿಕ ಜಂತುಹುಳು ನಾಶಕವಾದ ಮೊಜೋನಿಯಾ ಕ್ಲೆ ಮ್ಮೆಡೋಸ್ಟೋರಿಯಂ (20 ಗ್ರಾಂ/ಪ್ರತಿ ಮಡಿಗೆ 106 ಸಿ.ಎಫ್‌.ಯು/ಗ್ರಾಂ) ಶುಂಠಿ ಮಡಿಗೆ ಬಿತ್ತನೆ ಸಮಯದಲ್ಲಿ ಸೇರಿಸುವುದು.

ಕೀಟಗಳು

ಕಾಂಡ ಕೊರಕ

ಶುಂಠಿ ಬೆಳೆಯನ್ನು ಬಾಧಿಸುವ ಕೀಟಗಳಲ್ಲಿ ಕಾಂಡಕೊರಕ (ಕೊನೊಗಿಧಥಿಸ್‌ ಪಂಕ್ಚಿಫೆರಾಲಿಸ್‌) ಪ್ರಧಾನವಾಗಿದೆ. ಕೀಟದ ಮರಿಹುಳುಗಳು ಮಿಥ್ಯಕಾಂಡವನ್ನು ಕೊರೆದು ಒಳಗಿರುವ ಅಂಗಾಂಶವನ್ನು ತಿನ್ನುವುದರಿಂದ ಕಂದುಗಳು ಕ್‌ಳದಿ ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತದೆ. ಈ ಕೀಟವು ಕೊರೆದಿರುವ ರಂಧ್ರದಿಂದ ತ್ಯಾಜ್ಯ ವಸ್ತುಗಳು (ಹಿಕ್ಕೆ) ಹೊರಬರುವುದು ಮತ್ತು ಹಳದಿಯಾಗಿ ಸೊರಗಿದ ಪ್ರಧಾನ ಕಾಂಡ ಈ ಕೀಟ ಬಾಧೆಯ ಮುಖ್ಯ ಲಕ್ಷಣವಾಗಿದೆ. ಪ್ರೌಢ ಕೀಟ ಸಣ ಪತಶಂಗವಾಗಿದು, 20 ಮಿ.ಮೀ ಉದದ ಕಿತಳೆ ಹಳದಿ ಬಣದ ರೆಕ್ಕೆಗಳ ಮೇಲೆ ಕಪು ಚುಕ್ಕೆಗಳನ್ನು ಹೊಂದಿರುತ್ತದೆ. ಸಂಪೂರ್ಣವಾಗಿ ಬೆಳೆದ ಮರಿಹುಳುಗಳು ತಿಳಿ ಕಂದು ಬಣ್ಣದ್ದಾಗಿದ್ದು, ತಳ್ಳನೆಯ ಕೂದಲನ್ನು ಹೊಂದಿರುತ್ತವೆ. ಈ ಕೀಟ ಬಾಧೆಯು ಸೆಪ್ಟೆಂಬರ್‌ -ಅಕ್ಟೋಬರ್‌ ನಲ್ಲಿ ಅಧಿಕವಾಗಿರುತ್ತದೆ. ಜುಲೈ-ಅಕ್ಟೋಬರ್‌ ತಿಂಗಳಲ್ಲಿ 21 ದಿನಗಳ ಅಂತರದಲ್ಲಿ ಶೇ. 0.1 ರ ಮೆಲಾಥಿಯಾನ್‌ ಸಿಂಪಡಿಸುವುದರಿಂದ ಕಾಂಡಕೊರಕವನ್ನು ಹತೋಟಿ ಮಾಡಬಹುದು. ತುದಿ ಎಲೆಗಳ ಅಂಚಿನಲ್ಲಿ ಕೀಟಗಳು ಎಲೆಯನ್ನು ತಿನ್ನುವ ಲಕ್ಷಣಗಳು ಕಂಡಾಗಲೇ ಮೊದಲನೆಯ ಸಿಂಪಡಣೆಯನ್ನು ಮಾಡಬೇಕು. ಜುಲೈ-ಆಗಸ್ಟ್‌ ತಿಂಗಳಲ್ಲಿ (15 ದಿನಗಳ ಅಂತರದಲ್ಲಿ) ಬಾಧೆಗೊಳಗಾದ ಕಾಂಡಗಳನ್ನು ಕತ್ತರಿಸಿ ನಾಶಪಡಿಸುವುದು ಮತ್ತು ಸೆಪ್ಟೆಂಬರ್‌ -ಅಕ್ಟೋಬರ್‌ ನಲ್ಲಿ ಶೇ. 0.1 ರ ಮೆಲಾಥಿಯಾನ್‌ ಸಿಂಪಡಿಸುವುದರಿಂದ ಈ ಕೀಟಬಾಧೆಯನ್ನು ಹತೋಟಿ ಮಾಡಬಹುದು.

ಗೆಡ್ಡೆ ಶಲ (ಬೇರು ಕಾಂಡ ಶಲ್ಪ)

ಗೆಡ್ಡೆ ಶಲ್ಕಗಳು (ಅಸ್ಟಿಡಿಯೆಲ್ಲಾ ಹಾರ್ಟಿ) ತೋಟದಲ್ಲಿ ಗೆಡ್ಡೆಗಳಿಗೆ ಮತ್ತು ಸಂಗಹಿಸಿದ ಬೀಜ ಶುಂಠಿಗೆ ಹಾನಿಯನ್ನುಂಟು ಮಾಡುತ್ತವೆ. ಪ್ರೌಢ ಹೆಣ್ಣು ಶಲ್ಕಗಳು ಸಣ್ಣದಾಗಿದ್ದು, ವೃತ್ತಾಕಾರದ ತಿಳಿಕಂದು-ಬೂದು ಬಣಹೊಂದಿದ್ದು, ಬೇರು ಗೆಡ್ಡೆಗಳ ಮೇಲೆ ಮೊರೆಯ ರೀತಿ ಕಂಡುಬರುತ್ತದೆ. ಈ ಕೀಟಗಳು ಗೆಡ್ಡೆಗಳ ರಸವನ್ನು ಹೀರುತ್ತದೆ. ತೀವ್ರ ಬಾಧೆಗೊಳಗಾದ ಶುಂಠಿ ಬೀಜಗಳು ಸಂಪೂರ್ಣವಾಗಿ ಒಣಗಿ, ಚಿಗುರುವಿಕೆ ಕುಂಟಿತವಾಗುತ್ತದೆ.

ಈ ಕೀಟದ ಹತೋಟಿ ಮಾಡಲು ಸರಿಯಾದ ಸಮಯದಲ್ಲಿ ಕಟಾವ್ರ ಮಾಡಬೇಕು. ತೀವ್ರ ಬಾಧೆಗೊಳಗಾದ ಶುಂಠಿ ಬೀಜಗಳನ್ನು ನಾಶಮಾಡುವುದು ಮತ್ತು ಸಂಗ್ರಹಣೆಯ ಮೊದಲು ಹಾಗೂ ಬಿತ್ತನೆಗೂ ಮೊದಲು ಶೇ. 0.075 ರ ಕ್ವಿನಾಲ್‌ಫಾಸ್‌ ದ್ರಾವಣದಲ್ಲಿ 20-30 ನಿಮಿಷ ಅದ್ದಿಡಬೇಕು. ಶುಂಠಿ ಬೀಜೋಪಚಾರದ ನಂತರ ಇವುಗಳನ್ನು ಮರದ ಪಡಿ ಮತ್ತು ಸ್ರೆ ಹ್ನೋಸ್‌ಸಸುರ್ಕ್‌ ಪೋಮಿಯ ಮರದ ಒಣಗಿದ ಎಲೆಗಳನ್ನು ಹಾಕಿ ಮುಚ್ಚಿ ಸಂಗ್ರಹಿಸಿಡಬೇಕು.

ಇತರ ಕೀಟಗಳು

ಸಾಮಾನ್ಯವಾಗಿ ಮುಂಗಾರಿನ ಸಮಯದಲ್ಲಿ ಎಲೆ ಸುತ್ತ ಮರಿ ಹುಳುಗಳು ಎಲೆಗಳನ್ನು ಕತ್ತರಿಸಿ, ಅದರ ಒಳಗೆ ಸೇರಿ ನಂತರ ಎಲೆಗಳನ್ನು ಸುತ್ತಿಕೊಂಡು ಒಳಗಿನ ಅಂಗಾಂಶಗಳನ್ನು ತಿನ್ನುತ್ತವೆ. ಪ್ರೌಢ ಕೀಟಗಳು ಮಧ್ಯಮ ಗಾತ್ರದ ಚಿಟ್ಟೆಗಳಾಗಿದ್ದು ಕಂದು-ಕಪ್ಪು ಬಣ್ಣದ ರೆಕ್ಕೆಯ ಮೇಲೆ ಬಿಳಿಯ ಚುಕ್ಕೆಗಳನ್ನು ಹೊಂದಿರುತ್ತವೆ. ಮರಿಹುಳುಗಳು ಕಡು ಹಸಿರು ಬಣ್ಣದಾಗಿರುತ್ತವೆ. ಶೇ. 01 ರ ಮೆಲಾಥಿಯಾನ್‌ ಸಿಂಪಡಣೆ ಮಾಡುವುದರಿಂದ ಈ ಕೀಟಗಳನ್ನು ಹತೋಟಿ ಮಾಡಬಹುದು.

ಬೇರು. ಗೊಣ್ಣೆಹುಳುಗಳು ಬೆಳೆಯುತ್ತಿರುವ ಎಲೆ, ಗೆಡ್ಡೆ, ಬೇರು, ಮಿಥ್ಯ ಕಾಂಡಗಳನ್ನು ತಿನ್ನುವುದರಿಂದ ಕಾಂಡವು ಹಳದಿಯಾಗಿ ನಂತರ ಒಣಗುತ್ತವೆ. ಶೇ. 0.075ರ ಕ್ಲೋರೋಪೈರಿಫಾಸ್‌ ದ್ರಾವಣವನ್ನು ಬಾಧೆಗೊಳಗಾದ ಮಡಿಯ ಮಣ್ಣಿಗೆ ಸುರಿಯುವುದರಿಂದ ಈ ಕೀಟ ಬಾಧೆಯನ್ನು ನಿಯಂತ್ರಿಸಬಹುದು.

ಸಾವಯವ ಉತ್ಪಾದನೆ
ಬದಲಾವಣೆ ನಿಯಮ

ಸಾವಯವ ಉತ್ಪಾದನೆಯಲ್ಲಿ ಶುಂಠಿ ಬೆಳೆಯಬೇಕಾದರೆ ಸುಮಾರು 18 ತಿಂಗಳು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರಬೇಕು. ಹಾಗಿದ್ದಲ್ಲಿ ಎರಡನೇ ಬೆಳೆಯನ್ನು ಸಾವಯವ ಶುಂಠಿಯಾಗಿ ಪರಿವರ್ತಿಸಬಹುದು. ರಾಸಾಯನಿಕಗಳನ್ನು ಬಳಸದೇ ಇರುವ ಭೂಮಿಯಲ್ಲಿ, ಆ ಭೂಮಿಯ ಇತಿಹಾಸದ ಬಗ್ಗೆ ಚೆನ್ನಾಗಿ ಅರಿವಿದ್ದರೆ, ಸಾವಯವ ಕೃಷಿ ಮಾಡಲು ಬೇಕಾದ ಬದಲಾವಣೆ ಕಾಲವನ್ನು ಕಡಿಮೆ ಮಾಡಬಹುದು. ಪೂರ್ಣ ತೋಟದಲ್ಲಿ ಸಾವಯವ ಕೃಷಿ ಪದ್ಧತಿಯನ್ನೇ ಅಳವಡಿಸಿಕೊಳ್ಳುವುದು ಉತ್ತಮ. ಆದರೆ ವಿಸ್ತಾರವಾದ ತೋಟವಿದ್ದಲ್ಲಿ,ಸಲ್ಪ ಭಾಗದ ಬೆಳೆಯನ್ನು ಬಿಟ್ಟು ಬದಲಾವಣೆ ನಿಯಮವನ್ನು ಮಾಡಬೇಕಾಗುತದೆ.

ಶುಂಠಿಯನ್ನು ಆಹಾರ-ತೋಟಗಾರಿಕೆ, ಅರಣ್ಯ-ತೋಟಗಾರಿಕೆ ಬೆಳೆಗಳ ಜೊತೆಯೂ ಬೆಳೆಯಬಹುದಾಗಿದೆ.ಇದನ್ನು ತೆಂಗು, ಅಡಿಕೆ, ಮಾವು, ರಬ್ಬರ್‌ ಇತ್ಯಾದಿ ಪದ್ಧತಿಯಲ್ಲಿ ಬೆಳೆದರೆ ಇದರಿಂದ ಸಿಗುವ ತ್ಯಾಜ್ಯವನ್ನು ಸಾವಯವ ವಸ್ತುಗಳನ್ನಾಗಿ ಪೂರ್ಣಬಳಕೆ ಮಾಡಬಹುದು. ಇದನ್ನು ಮಿಶ್ರ ಬೆಳೆಯಾಗಿ ಅಥವಾ ಪರ್ಯಾಯ ಬೆಳಯಾಗಿ ಹಸಿರು ಎಲೆ/ದ್ವಿದಳ೪ ಧಾನ್ಯ ಹಾಗೂ ಇನ್ನಿತರ ಬೆಳೆಗಳೊಂದಿಗೆ ಬೆಳೆಯುವುದರಿಂದ ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿಸುವುದರ ಜೊತೆಗೆ, ಕೀಟ ಹಾಗೂ ರೋಗದ ಕಹುತೋಟಿಯೂ ಸಾಧ್ಯವಾಗುತ್ತದೆ. ಮಿಶ್ರ ಬೆಳೆಯಾಗಿ ಬೆಳೆಯುವಾಗಬೇರೆ ಬೆಳೆಗಳನ್ನು ಸಾವಯವ ಉತ್ಪಾದನೆಯ ಸೂತ್ರಗಳಿಗೆ ಅಳವಡಿಸುವುದು ಅವಶ್ಯಕ.

ಸಾವಯವ ಕೃಷಿ ಪ್ರದೇಶದಿಂದ ರಾಸಾಯನಿಕ ಉತ್ಪಾದನೆಯ ತೋಟವನ್ನು ಸ್ವಲ್ಪ ದೂರದಲ್ಲಿರಿಸಿ, ಸೂಕ್ತ ಎತ್ತರದ ಜೇಲಿಗಳನ್ನು ಹಾಕುವುದರಿಂದ ಕಲಬೆರಕೆಯಾಗುವುದನ್ನು ತಡೆಯಬಹುದು. ಇಳಿಜಾರು ಪ್ರದೇಶದಲ್ಲಿ ಬೇರೆ ತೋಟದಿಂದ ಹರಿದು ಬರುವ ನೀರು, ಮಣ್ಣು ಮತ್ತು ಗಾಳಿಯಿಂದಾಗುವ ರಾಸಾಯನಿಕ ಸಾಗುವಳಿಯನ್ನು ತಡೆಯಬೇಕು. ಶುಂಠಿ ಮಡಿಗಳ ಮಧ್ಯ ಗುಂಡಿಗಳನ್ನು ಮಾಡಿ, ನೀರು ಮತ್ತು ಮಣ್ಣು ಹರಿಯುವುದನ್ನು ತಡೆಯಬೇಕು.ನೀರು ನಿಲ್ಲುವ ಕಣಿವೆ ತೋಟಗಳಲ್ಲಿ ಚರಂಡಿಗಳನ್ನು ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು.

ನಿರ್ವಹಣಾ ಕ್ರಮಗಳು

ಸಾವಯವ ಉತ್ಪಾದನೆಯಲ್ಲಿ ಮಣ್ಣು, ವಾತಾವರಣ, ಕೀಟ, ರೋಗ, ಜಂತುಹುಳು ಬಾಧೆಯನ್ನು ತಡೆದುಕೊಳ್ಳುವ ಸಾಂಪ್ರದಾಯಿಕ ತಳಿಗಳನ್ನು ಬೆಳೆಯುವುದು ಸೂಕ್ತ. ತೋಟದಲ್ಲಿ ಸಿಗುವ ತ್ಯಾಜ್ಯ ವಸ್ತುಗಳಾದ ಹಸಿರು ಎಲೆ, ಬೆಳೆಗಳ ತ್ಯಾಜ್ಯ ವಸ್ತುಗಳು, ಹುಲ್ಲು, ಸಗಣಿ, ಗಂಜಲ, ಕೋಳಿ ಹಾಗೂ ಇತರೆ ಪ್ರಾಣಿಗಳ ತ್ಯಾಜ್ಯಗಳನ್ನು ಉಪಯೋಗಿಸಿ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಮಾಡಿ ತೋಟದಲ್ಲಿ ಉಪಯೋಗಿಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ರೋಗನಾಶಕಗಳನ್ನು ಸಾವಯವ ಪದ್ಧತಿಯಲ್ಲಿ ಬಳಸಬಾರದು. ಪ್ರತಿ ಹೆಕ್ಟೇರಿಗೆ 25-30 ಟನ್‌ ಕೊಟ್ಟಿಗೆ ಗೊಬ್ಬರ, 5 ಟನ್‌ ಎರೆಹುಳು ಗೊಬ್ಬರ, 12-15 ಟನ್‌ ಹಸಿರೆಲೆಗಳನ್ನು 45 ದಿನಗಳ ಅಂತರದಲ್ಲಿ ಕೊಡುವುದು. ಇವುಗಳ ಜೊತೆಗೆ 2 ಟನ್‌ ಬೇವಿನ ಹಿಂಡಿ, 5 ಟನ್‌ ತೆಂಗಿನ ಹೊಟ್ಟಿನಿಂದ ಮಾಡಿದ ಗೊಬ್ಬರ, ಜೀವಾಣುಗಳಾದ ಅಜೋಸ್ಫೈರಿಲಂ, ರಂಜಕ ಕರಗಿಸುವ ಬ್ಯಾಕ್ಟೀರಿಯಾ ಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಮತ್ತು ಬೆಳೆಯ ಇಳುವರಿ ಹೆಚ್ಚಾಗುತ್ತದೆ. ಸಸ್ಯಾಭಿವೃದ್ಧಿಗೆ ಅನುಕೂಲಕರವಾದ ರೈಜೋಬ್ಯಾಕ್ಟೀರಿಯಾವಾದ ಬ್ಯಾಸಿಲಸ್‌ ಅಮೈಲೋಲಿಕ್ವಿಪೇಸಿಯನ್ಸ್‌ (ಜಿ.ಆರ್‌.ಬಿ-35) ಅನ್ನು
ಸಸ್ಯದ ಬೆಳವಣಿಗೆ ಹಾಗೂ ರೋಗದ ಹತೋಟಿಗೆ ಬಳಸಬಹುದು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸುಣ್ಣ ಅಥವಾ ಡೋಲಮೈಟ್‌, ರಂಜಕ ಗೊಬ್ಬರ, ಮರದ ಬೂದಿಯನ್ನು ಬೇಕಾದ ಪ್ರಮಾಣದಲ್ಲಿ ಕೊಡುವುದರಿಂದ ರಂಜಕ ಮತ್ತು ಪೊಟ್ಯಾಷ್‌ ಪೂರೈಕೆಯಾಗುತ್ತದೆ. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದಲ್ಲಿ ಇಳುವರಿ ಕಡಿಮೆಯಾಗುತ್ತದೆ. ಹಾಗಾಗಿ ಶುಂಠಿಗೆ ಅನ್ವಯವಾಗುವ ಸೂಕ್ಷ್ಮ ಪೋಷಕಾಂಶಗಳನ್ನು (5 ಗ್ರಾಂ/ಲೀ) ನಾಟಿಮಾಡಿದ ನಂತರ ಎರಡು ಬಾರಿ ಅಂದರೆ 60 ಮತ್ತು 90 ದಿನಗಳಲ್ಲಿ ಎಲೆಗಳಿಗೆ ಸಿಂಪಡಣೆ ಮಾಡಬೇಕು.

ಜೈವಿಕ ಕ್ರಿಮಿನಾಶಕಗಳು, ಜೈವಿಕ ಶಿಲೀಂಧ್ರನಾಶಕಗಳು, ಬೇಸಾಯ ಕ್ರಮಗಳು ಮತ್ತು ಗಿಡಗಳ ಶುದ್ಧೀಕರಣವನ್ನು ಅನುಸರಿಸಿ ಕೀಟ, ರೋಗ ಮತ್ತು ಜಂತುಹುಳುಗಳ ಹತೋಟಿ ಮಾಡುವುದು ಸಾವಯವ ಪದ್ಧತಿಯಲ್ಲಿ ಮುಖ್ಯವಾದ ಅಂಶ. ಕಾಂಡಕೊರಕಕ್ಕೆ ತುತ್ತಾದ ಶುಂಠಿ ಕಾಂಡಗಳನ್ನು ಜುಲೈ-ಆಗಸ್ಟ್‌ (15 ದಿನಗಳಿಗೊಮ್ಮೆ) ತಿಂಗಳಲ್ಲಿ ಕತ್ತರಿಸಿ ತೆಗೆದು ಸುಡುವುದು ಮತ್ತು ಶೇ. 0.5 ರ ನೀಮ್‌ ಗೋಲ್ಡ್‌ ಅಥವಾ ಶೇ.0.5 ರ ಬೇವಿನ ಎಣ್ಣೆಯನ್ನು ಸೆಪ್ಟೆಂಬರ್‌-ಅಕ್ಟೋಬರ್‌(21 ದಿನಗಳಿಗೊಮ್ಮೆ) ನಲ್ಲಿ ಸಿಂಪಡಿಸುವುದರಿಂದ ಕಾಂಡಕೊರಕವನ್ನು ತಡೆಯಬಹುದು. ಶುಂಠಿ ಗೆಡ್ಡೆ ಕೊಳೆ ರೋಗವನ್ನು ಹತೋಟಿ ಮಾಡಲು ರೋಗ ರಹಿತ ಶುಂಠಿ ಗೆಡ್ಡೆಗಳನ್ನು ಉಪಯೋಗಿಸುವುದು, ಮಣ್ಣನ್ನು ಸೂರ್ಯನ ಶಾಬಕ್ಕೆ ಒಡ್ಡುವುದು, ಟ್ರ ಖಸೋಡರ್ಮ ಶಿಲೀಂಧ್ರ ಸುಡೋಮೋನಾಸ್‌ ಬ್ಯಾಕ್ಟೀರಿಯಾಗಳನ್ನು ಮಣ್ಣಿಗೆ ಸೇರಿಸುವುದು, ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಕುವುದು, ಉತ್ತಮವಾದ ಬೇವಿನ ಹಿಂಡಿಯನ್ನು ಬಿತ್ತನೆ ಮಾಡುವಾಗ ಮತ್ತು ನಿಯಮಿತ ಕಾಲದಲ್ಲಿ ಹಾಕುವುದು ಇತ್ಯಾ,. ಶುಂಠಿ (-/೧ೀ5॥00) – ಈ6॥ 1 ತಗುಲುವ ರೋಗವನ್ನು ಹತೋಟಿ ಮಾಡಲು ಶೇ. 1 ಕೊಳೆತ ಕೊಟ್ಟಿಗೆ ಗೊಬ್ಬರ ಹಾಕುವುದು, ಉತ್ತಮವಾದ ಬೇವಿನ ಹಿಂಡಿಯನ್ನು ಬಿತ್ತನೆ ಮಾಡುವಾಗ ಮತ್ತು ನಿಯಮಿತ ಕಾಲದಲ್ಲಿ ಹಾಕುವುದು ಇತ್ಯಾದಿ ಮಾಡುತ್ತಿರಬೇಕು. ಎಲೆಗಳಿಗೆ ತಗುಲುವ ರೋಗವನ್ನು ಹತೋಟಿ ಮಾಡಲು ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಣೆ ಮಾಡಬೇಕು. ಸಾವಯವ ಉತ್ಪಾದನೆಯಲ್ಲಿ ಒಂದು ವರ್ಷಕ್ಕೆ ತಾಮ್ರವನ್ನು 8 ಕೆಜಿ ಗಿಂತ ಹೆಚ್ಚಾಗಿ ಉಪಯೋಗಿಸಬಾರದು. ಬೇವಿನ ಹಿಂಡಿಯ ಜೊತೆಗೆ ಜೈವಿಕ ನಾಶಕವಾದ ಪೊಚೋನಿಯ ಕ್ಲಾಮೈಡೋಸ್ಟೋರಿಯಂ ಅನ್ನು ಜಂತುಹುಳು ಹತೋಟಿ ಮಾಡಲು ಉಪಯೋಗಿಸಬಹುದು.

ಪ್ರಮಾಣೀಕರಿಸುವುದು

ವಿವಿಧ ಸಂಸ್ಥೆಗಳು ಸಾವಯವ ಉತ್ಪಾದನೆಯ ಮಟ್ಟವನ್ನು ಪರೀಕ್ಷಿಸಿ, ಪ್ರಮಾಣೀಕರಿಸಿ ಧೃಡೀಕರಣ ಚೀಟಿಯನ್ನು ನೀಡುತ್ತವೆ. ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರಿಗೆ ಸಹಾಯ ಮಾಡಲು ಅಪೀಡ (ಎ.ಪಿ.ಇ.ಡಿ.ಎ) ಮಂಡಳಿಯ ಮೂಲಕ ಸಾವಯವ ಉತ್ಪಾದನೆಯನ್ನು ಪರೀಕ್ಷಿಸಿ ಗುರುತು ಚೀಟಿಯನ್ನು ನೀಡಲು ಪ್ರಯತ್ನಿಸುತ್ತಿದೆ.ಪ್ರಮಾಣೀಕರಿಸುವ ಸಂಸ್ಥೆಗಳಿಂದ ಅಯೋಜಿಸಿರುವ ಪರೀಕ್ಷಕರು ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳ ಕೃಷಿ ಚಟುವಟಿಕೆಗಳನ್ನು ದಾಖಲೆಗಳಲ್ಲಿ ಬರೆಯುವುದರೊಂದಿಗೆ, ನಿಯಮಿತವಾಗಿ ಬೆಳೆ ಪ್ರದೇಶವನ್ನು ಪರೀಕ್ಷಿಸುತ್ತಿರುತ್ತಾರೆ.
ಸಾಂಪ್ರದಾಯಿಕ ಅಥವಾ ಸಾವಯವ ಉತ್ಪಾದನೆಯಲ್ಲಿ, ಕೃಷಿ ಚಟುವಟಿಕೆಗಳು ಹಾಗೂ ದಾಖಲೆಗಳು ಉತ್ಪಾದನೆಯನ್ನು ಪ್ರಮಾಣೀಕರಿಸುವುದಕ್ಕೆ ಬಹಳ ಮುಖ್ಯ ಸಾಮೂಹಿಕ ಸಾವಯವ ಉತ್ಪಾದನೆ ಮಾಡುವ ಗುಂಪುಗಳಿಗೆ ಸಾವಯವ ಉತ್ಪಾದನೆ ಪ್ರಮಾಣೀಕರಿಸುವುದು ಒಂದೇ ಪ್ರದೇಶದಲ್ಲಿ ಬೆಳೆದಿದ್ದರೆ ಸಾಧ್ಯವಾಗುತ್ತದೆ.

ಕಟಾವು

ವಿಸ್ತಾರವಾದ ತೋಟಗಳಲ್ಲಿ ಟ್ರಾಕ್ಚರ್‌ ಅಥವಾ ಪವರ್‌ ಟಿಲ್ಲರ್‌ ಚಾಲಿತ ಕಟಾವಿನ ಸಾಧನವನ್ನು ಬಳಸಬಹುದು.ಗೆಡ್ಡೆಗಳಲ್ಲಿ ಅಂಟಿಕೊಂಡಿರುವ ಮಣ್ಣು. ಬೇರು ಹಾಗೂ ಎಲೆಗಳನ್ನು ಬೇರ್ಪಡಿಸಬೇಕು. ಶುಂಠಿಯನ್ನು ಭೂಮಿಯ ಅಡಿಯಲ್ಲೇ ಬಿಟ್ಟು ಕಟಾವು ಮಾಡುವ ಕ್ರಮಗಳೂ ್ಹಚಾಲ್ತಿಯಲ್ಲಿದೆ. ಭಾರತದಲ್ಲಿ ಹಸಿ ಶುಂಠಿಯ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಸುಣ್ಣದಲ್ಲಿ ಅದ್ದಿರುವ ಹಾಗೂ ಅದ್ದದ ಇನ್ನಿತರ ರೀತಿಯ ಶುಂಠಿಯನ್ನು ರಫ್ತಿಗಾಗಿ ಬಳಸಲಾಗುತ್ತದೆ. ಸಂಸ್ಕರಣೆಗೆ ಯೋಗ್ಯವಿರುವ ಶುಂಠಿಯ ಮೂರು ಮುಖ್ಯ ಅಂಶಗಳಾದ ಶುಂಠಿಯ ನಾರು, ಎಣ್ಣೆ ಮತ್ತು
ಖಾರದ ಮೇಲೆ ಅವಲಂಭಿಸಿರುತ್ತದೆ. ಚೆನ್ನಾಗಿ ಬಲಿತ ಶುಂಠಿಯಲ್ಲಿ ಈ ಮೂರು ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಶುಂಠಿಯು ಬೀಜ ಬಿತ್ತಿದ ಸುಮಾರು 210-240 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ತರಕಾರಿಗಾಗಿ ಬೆಳೆದ ಶುಂಠಿಯನ್ನು ಅಗತ್ಯಕ್ಕನುಸಾರವಾಗಿ 18) ದಿನಗಳಲ್ಲಿ ಕಟಾವು ಮಾಡಬಹುದು. ಆದರೆ ಒಣ ಶುಂಡಿಗಾಗಿ, ಚೆನ್ನಾಗಿಬಲಿತ ಗೆಡ್ಡೆಗಳನ್ನು, ಅಂದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ತುದಿಯಿಂದ ಒಣಗಲು ಪ್ರಾರಂಭಿಸಿದಾಗ ಕೊಯ್ಲು ಮಾಡಬೇಕು. ಕಟಾವಿಗೆ ಒಂದು ತಿಂಗಳಿನ ಮೊದಲೇ ನೀರಾವರಿ ನೀಡುವುದನ್ನು ನಿಲ್ಲಿಸಬೇಕು. ಗೆಡ್ಡೆಗಳನ್ನು ಗುದ್ದಲಿ, ಸನಿಕೆ ಅಥವಾ ಇತರ ಆಯುಧ ಬಳಸಿ ನಿಧಾನವಾಗಿ ಭೂಮಿಯಿಂದ ಹೊರತೆಗೆದು ಒಂದು ಕಡೆ ಸಂಗ್ರಹಿಸಿಡಬೇಕು. 

ವಿವಿಧ ಬಳಕೆಗಾಗಿ ಶುಂಠಿ ಕಟಾವ್ರ ಮಾಡುವ ಹಂತ.
ಬಳಕೆಯ ವಿಧ                                                                      ಕಟಾವಿನ ಹಂತ(ಬಿತ್ತನೆಯ ನಂತರದ ತಿಂಗಳುಗಳಲ್ಲಿ)

ತರಕಾರಿಗಾಗಿ, ಶುಂಠಿ ಸಂಸ್ಕರಣೆಗಾಗಿ, ಮೆದು ಪಾನೀಯ,                5-6
ಕ್ಯಾಂಡಿ

ಒಣ ಶುಂಠಿ, ಶುಂಠಿ ತೈಲ, ಸಂಪೂರ್ಣ ಒಣಗಿದ ಮತ್ತು                  7-8
ಸುಣ್ಣದಲ್ಲಿ ಅದ್ದುವ ಶುಂಠಿಗಾಗಿ, ಖಾರದ ಉಪಯೋಗಕ್ಕಾಗಿ

ಸಂಸ್ಕರಣೆ

ಒಣ ಶುಂಠಿಯ ಸಂಸ್ಕರಣೆಯು ಪ್ರಮುಖವಾಗಿ ಎರಡು ಹಂತಗಳನ್ನೊಳಗೊಂಡಿರುತ್ತದೆ. ಶುಂಠಿಯ ಹೊರ ಸಿಪ್ಪೆಯನ್ನು ಸುಲಿಯುವುದು ಮತ್ತು ತೇವಾಂಶವನ್ನು ಕಡಿಮೆಗೊಳಿಸಲು ಬಿಸಿಲಿನಲ್ಲಿ ಒಣಗಿಸುವುದು.

ಸಿಪ್ಪೆ ಸುಲಿಯುವುದು

ಶುಂಠಿ ಚೆನ್ನಾಗಿ ಒಣಗಲು ಮೊದಲಿಗೆ ಹೊರ ಸಿಪ್ಪೆಯನ್ನು ತೆಗೆಯಬೇಕು. ಈ ಶುಂಠಿಯ ಸಿಪ್ಪೆ ತೆಗೆಯಲು ಚೂಪಾಗಿ ಸೀಳಿದ ಬಿದಿರು ಕಡ್ಡಿಯನ್ನು ಬಳಸಬೇಕು. ಸಿಪ್ಪೆಯ ಕೆಳಭಾಗದಲ್ಲಿಯೇ ತೈಲ ಗ್ರಹಿಸುವ ಗ್ರಂಥಿಗಳಿರುವುದರಿಂದ ಅವುಗಳಿಗೆ ಗಾಯವಾಗದಂತೆ ಎಚ್ಚರವಹಿಸಬೇಕು. ಹಾಗಾಗಿ ಗಟ್ಟಿಯಾಗಿ ಉಜ್ಜಬಾರದು. ಗಟ್ಟಿಯಾಗಿ ಉಜ್ಜಿದಲ್ಲಿ ಒಣ ಶುಂಠಿಯಲ್ಲಿ ತೃಲದ ಅಂಶ ಕಡಿಮೆಯಾಗುತ್ತದೆ. ಸಿಪ್ಪೆ ತೆಗೆದ ಶುಂಠಿಯನ್ನು ಒಣಗಿಸುವ ಮೊದಲು ಚೆನ್ನಾಗಿ ತೊಳೆಯಬೇಕು. ನಂತರ ಒಣ ಶುಂಠಿಯ ಸುವಾಸನೆ, ರುಚಿ ಹಾಗೂ ಖಾರದ ಅಂಶವನ್ನು ಪರೀಕ್ಷಿಸಲಾಗುತ್ತದೆ.ಜಮೈಕನ್‌ ಶುಂಠಿಗೆ ಹೋಲಿಸಿದರೆ ಭಾರತದಲ್ಲಿ ಗಟ್ಟಿಯಾಗಿ, ಆಳವಾಗಿ ಸಿಪ್ಪೆ ಸುಲಿಯಲಾಗುತ್ತದೆ ಹಾಗೂ ಶುಂಠಿಯ ಬೆರಳುಗಳ ನಡುವಿನ ಸಿಪ್ಪೆಯನ್ನೂ ಪೂರ್ಣವಾಗಿ ಸುಲಿಯುವುದಿಲ್ಲ. ಈ ರೀತಿಯ ಶುಂಠಿಯನ್ನು ಕಠಿಣವಾಗಿ ಸುಲಿದ ಹಾಗೂ ಸುಣ್ಣದಲ್ಲಿ ಅದ್ಧದ ಶುಂಠಿ ಎಂದು ಕರೆಯಲಾಗುತ್ತದೆ. ಕೇರಳದಲ್ಲಿ ಬಹುಪಾಲು ಈ ಗುಣಮಟ್ಟದ ಶುಂಠಿಯ ಉತ್ಪಾದನೆಯಾಗುತ್ತದೆ.

ಒಣಗಿಸುವುದು

ಕಟಾವು ಮಾಡಿದ ಹಸಿ ಶುಂಠಿಯಲ್ಲಿ ತೇವಾಂಶ ಶೇ. 80-82 ರಷ್ಟಿರುತ್ತದೆ. ಉತ್ತಮ ಸಂಗ್ರಹಣೆಗಾಗಿ ಶೇ.10 ರಷ್ಟು ತೇವಾಂಶವಿರುವಂತೆ ಒಣಗಿಸಬೇಕು. ಸಾಮಾನ್ಯವಾಗಿ ಶುಂಠಿಯನ್ನು 8-10 ದಿನಗಳು ನೆಲದಲ್ಲಿ ಚೆನ್ನಾಗಿ ಹರಡಿ ಒಣಗಿಸಲಾಗುತ್ತದೆ. ಬಿಸಿಲಿನಲ್ಲಿ ಒಣಗಿಸಿದ ಶುಂಠಿಯ ಸಿಪ್ಪೆ ಸ್ವಲ್ಪ ಸುಕ್ಕುಗಟ್ಟಿದಂತಾಗಿ ಕಂದು ಬಣ್ಣದ್ದಾಗಿರುತ್ತದೆ. ತಳಿ ಮತ್ತು ಬೆಳೆದ ಪ್ರದೇಶಕ್ಕೆ ಅನುಗುಣವಾಗಿ ಒಣ ಶುಂಠಿಯ ಇಳುವರಿ ಶೇ. 19-25 ರಷ್ಟಿರುತ್ತದೆ.ಹೊಳಪು ಕೊಡುವುದು, ಶುದ್ಧೀಕರಿಸುವುದು ಮತ್ತು ವರ್ಗೀಕರಿಸುವುದು.ಶುಂಠಿಯನ್ನು ಒಣಗಿಸುವಾಗ ಆಗುವ ಒಣ ಸಿಪ್ಪೆ ಮತ್ತು ಸುಕ್ಕು ಗಟ್ಟಿದ ಸಿಪ್ಪೆಯನ್ನು ತೆಗೆಯಲು ಇದಕ್ಕೆ ಹೊಳವು ನೀಡಲಾಗುತ್ತದೆ. ಇದನ್ನು ಗಟ್ಟಿ ಮೇಲ್ಮೈ ಮೇಲೆ ಉಜ್ಜಲಾಗುತ್ತದೆ. ಕೈಗಳಿಂದ ಕಡ್ಡಿಗಳು, ಇನ್ನಿತರ ವಸ್ತುಗಳನ್ನು ಹೊರತೆಗೆದು ಶುದ್ಧೀಕರಿಸಲಾಗುತ್ತದೆ. ಶುದ್ಧೀಕರಿಸಿದ ನಂತರ ಶುಂಠಿಯ ಗಾತ್ರ. ಬಣ್ಣ, ಆಕಾರ ಮತ್ತು ಸುಣ್ಣದ ಅಂಶದ(ಸುಣ್ಣದಲ್ಲಿ ಅದ್ಧಿದ ಶುಂಠಿಯಲ್ಲಿ) ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.

ಸಂಗ್ರಹಣೆ

ಉಗ್ರಾಣದಲ್ಲಿ ಒಣ ಶುಂಠಿಯನ್ನು ಚೀಲದಲ್ಲಿ ಸಂಗ್ರಹಿಸಿಟ್ಟಾಗ ಸಿಗರೇಟ್‌ ಹುಳು (ಲಸಿಯೋಡರ್ಮ೯ ಸೆರಿಕೋನೆ) ಎಂಬ ಕೀಟದ ಬಾಧೆಗೆ ತುತ್ತಾಗುತ್ತದೆ. ಸಂಪೂರ್ಣ ಒಣಗಿಸಿದ ಶುಂಠಿಯನ್ನು ಗಾಳಿಯಾಡದ ಡಬ್ಬಿಗಳಲ್ಲಿ ಅಥವಾ ದಪ್ಪನೆಯ ಪಾಲಿಥೀನ್‌ ಚೀಲಗಳಲ್ಲಿ ಸಂಗ್ರಹಿಸಿಡಬಹುದು. ದೀರ್ಫ ಕಾಲ ಸಂಗ್ರಹಣೆ ಮಾಡಿದಲ್ಲಿ ಶುಠಿಯ ಸುವಾಸನೆ,ರುಚಿ ಮತ್ತು ಖಾರದ ಅಂಶ ಕಡಿಮೆಯಾಗುತ್ತದೆ.

ಸುಣ್ಣದಲ್ಲಿ ಅದ್ದಿದ ಶುಂಠಿ (ಬ್ಲೀಚಿಂಗ್‌)

ಸಿಪ್ಪೆ ಸುಲಿದ ಹಸಿ ಶುಂಠಿಯನ್ನು ಸುಣ್ಣದ ನೀರಿನಲ್ಲಿ (1 ಕೆ.ಜಿ ಸುಣ್ಣ/120 ಲೀ ನೀರು) ಅದ್ದಿ ನಂತರ ಬಿಸಿಲಿನಲ್ಲಿ ಒಣಗಿಸಿ, ಅದ್ದಿದ ಶುಂಠಿಯನ್ನು ತಯಾರು ಮಾಡಲಾಗುತ್ತದೆ. ನೀರು ಒಣಗಿದ ಮೇಲೆ ಪನಃ ಇದನ್ನು ಸುಣ್ಣದ ನೀರಿನಲ್ಲಿ ಅದ್ದಲಾಗುತ್ತದೆ. ಪೂರ್ಣ ಶುಂಠಿ ಬಿಳಿಯಾಗುವವರೆಗೆ ಈ ಕ್ರಿಯೆಯನ್ನು ಪನರಾವರ್ತಿಸಬೇಕು. ಒಣ ಶುಂಠಿಯನ್ನು ಕೂಡ ಈ ವಿಧಾನದಿಂದ ಬ್ಲೀಚೆಂಗ್‌ ಮಾಡಬಹುದು. ಈ ರೀತಿ ಸುಣ್ಣದಲ್ಲಿ ಅದ್ಭುವ್ರದರಿಂದ ಸಂಗ್ರಹಣೆ ಮತ್ತು ಸಾಗುವಳಿ ಸಮಯದಲ್ಲಿ,ರೋಗ ಮತ್ತು ಕೀಟದ ಹಾನಿಗೆ ಒಳಗಾಗುವುದನ್ನು ತಪ್ಪಿಸಬಹುದು.

Also read  Coffee Closes Lower On Demand Concerns

Leave a Reply