ಕಬ್ಬಿನ ಬೇಸಾಯ ಕ್ರಮಗಳು
ಕಬ್ಬು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು,ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪುಮಿಶ್ರಿತ ಮಣ್ಣು ಈ ಬೆಳೆಗೆ ಸೂಕ್ತ.ದೇಶದಲ್ಲಿ ಈ ಬೆಳೆಯನ್ನು 5.06 ದಶಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು,ಒಟ್ಟು ಉತ್ಪಾದನೆ 36,110 ದಶ ಲಕ್ಷ ಟನ್ ಇರುವುದು. ರಾಜ್ಯದಲ್ಲಿ ಈ ಬೆಳೆಯನ್ನು 4.20 ಲಕ್ಷ ಹೆಕ್ಟೇರ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು 379.0 ಲಕ್ಷ ಟನ್ ಉತ್ಪಾದನೆ ಇರುವುದು.
ಸೂಚನೆ: ಮಾರ್ಚ್‌ದಿ೦ದ ಜೂನ್ ತಿಂಗಳವರೆಗೆ ನಾಟಿಮಾಡುವುದು ಸೂಕ್ತವಲ್ಲ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು (ಪ್ರತಿ ಎಕರೆಗೆ)
1. ಬೀಜದ ತುಂಡುಗಳು
- 8-10 ತಿ೦ಗಳ ರೋಗರಹಿತ ನಾಟಿ ಕಬ್ಬಿನ ತುಂಡುಗಳನ್ನು ಉಗಿ ಉಷ್ಣೋಪಚಾರ ಸ್.ಟಿ. ಘಟಕದಲ್ಲಿ 50 ಸೆಂ. ನಲ್ಲಿ ಒಂದು ತಾಸು ಉಪಚರಿಸಿ ಉಪಯೋಗಿಸಬೇಕು ಅಥವಾ ಉಪಚರಿಸಿ ಬೆಳೆಸಿದ ನಾಟಿ ಕಬ್ಬನಿ೦ದ ತುಂಡುಗಳನ್ನು ಆಯ್ಕೆ ಮಾಡಬೇಕು.
- ಕಾರ್ಬನ್‌ಡೈಜಿಮ್ 50 ಡಬ್ರೂ.ಪಿ. (ಶೇ. 0.1 ಪ್ರಮಾಣದಲ್ಲಿ) 100 ಗ್ರಾಂ+ಕ್ಲೋರ್‌ಪೈರಿಪಾಸ್ 20 ಇ. ಸಿ. (ಶೇ. 0.1 ಪ್ರಮಾಣದಲ್ಲಿ) 100 ಮಿ.ಲೀ.+ ಯೂರಿಯಾ 100 ಗ್ರಾ೦ ಇವುಗಳನ್ನು 100 ಲೀಟರ್ ನೀರಿನಲ್ಲಿ ಹಾಕಿ 10 ನಿಮಿಷ ಬೀಜೋಪಚಾರ ಮಾಡಬೇಕು.
- ಎಕರೆಗೆ 10,000 ದಿ೦ದ 14,000 ಮೂರು ಕಣ್ಣಿನ ತುಂಡುಗಳು ಬೇಕಾಗುತ್ತವೆ.
2. ಸಾವಯವ ಗೊಬ್ಬರ
10 ಟನ್ ಕೊಟ್ಟಿಗೆ ಗೊಬ್ಬರ ಅಥವಾ
- 1 ಟನ್ ಎರೆಹುಳು ಗೊಬ್ಬರ ಅಥವಾ
- 5 ಟನ್ ಮಳ್ಳಿಗೊಬ್ಬರ (ಪ್ರೆಸ್‌ಮಡ್ ಕಾ೦ಪೋಸ್ಟ್)
ಸೂಚನೆ: ಸಾವಯವ ಗೊಬ್ಬರದಲ್ಲಿ 4 ಕಿ. ಗ್ರಾಂ ಅಜೋಸ್ತಿರಿಲಂ 4. 4 ಕಿ. ಗ್ರಾಂ ರಂಜಕ ಕರಗಿಸುವ ಸೂಕ್ಷಾಣುಜೀವಿಗಳನ್ನು ಬೆರೆಸಿ, 2 ರಿಂದ 3 ವಾರ ಮೊದಲು ಮಣ್ಣಿನಲ್ಲಿ ಸೇರಿಸಬೇಕು.
3.ಹಸಿರೆಲೆ ಗೊಬ್ಬರ
ನಾಟಿ ಮಾಡುವ ಪೂರ್ವದಲ್ಲಿ ಸಾಲು ಬಿಟ್ಟು ಸಾಲಿನ ಎರಡು ಮಗ್ಗಲು ಸಣಬನ್ನು ಅಥವಾ ಡೈ೦ಚಾ ಅಥವಾ ನವಧಾನ್ಯ ಗಳ (ಹೆಸರು, ಅಲಸಂದಿ, ಸೋಯಾ ಶಿವರ, ಉದ್ದು, ಡಲೆ, ಗುರೆಳ್ಳು, ಬಿಳಿಎಳ್ಳು. ರಾಜಗಿರಿ ಮತ್ತು ಕೋತಂಬರಿ) ಮಿಶ್ರಣವನ್ನು ಬಿತ್ತಿ, ಬೆಳೆ 45 ರಿಂದ 50 ದಿನಗಳಾದ ಸಾಲಿನಲ್ಲಿ ಮುಗ್ಗು ಹೊಡೆದು ಮುಚ್ಚಬೇಕು. ಸಾಧ್ಯವಾದರೆ ಇದೇ ರೀತಿ ಮತ್ತೊಂದು ಹಸಿರೆಲೆ ಬೆಳೆ ತೆಗೆದುಕೊಳ್ಳುವುದು ಉತ್ತಮ. ಎಕರೆಗೆ 24 ಕಿ. ಗ್ರಾಂ ಬೀಜ ಬೇಕಾಗುತ್ತದೆ.
4. ರಾಸಾಯನಿಕ ಗೊಬ್ಬರ
- ಸಾರಜನಕ 100 ಕಿ. ಗ್ರಾಂ
- ರಂಜಕ 30 ಕಿ. ಗ್ರಾಂ
- ಪೋಟ್ಯಾಷ್ 75 ಕಿ. ಗ್ರಾಂ
ಸೂಚನೆ: ಶೇ. 10, ಸಾರಜನಕ ಪೂರ್ತಿ ರಂಜಕ ಮತ್ತು ಪೋಟ್ಯಾಷ್ ಪೋಷಕಾಂಶಗಳನ್ನು ನಾಟಿ ಮಾಡುವಾಗ ಸಾಲುಗಳು ಮಧ್ಯದಲ್ಲಿ ಒದಗಿಸಬೇಕು. ಉಳಿದ ಸಾರಜನಕವನ್ನು ಮೇಲುಗೊಬ್ಬರವಾಗಿ ನಾಟಿಮಾಡಿದ
- 6 ನೇ ವಾರಕ್ಕೆ ಶೇ. 20
- 10ನೇ ವಾರಕ್ಕೆ ಶೇ. 30
- 14 ನೇ ವಾರಕ್ಕೆ ಶೇ. 40 (ಬೋದು ಒಡೆಯುವಾಗ)
ಸಾರಜನಕದ ಕೊರತೆಯಾದಾಗ ಎಲೆಗಳು ಹಳದಿಯಾಗುತ್ತವೆ. ಆದರೆ ಎಷ್ಟರಮಟ್ಟಿಗೆ ಎಲೆಗಳು ಹಳದಿಯಾದಾಗ ಸಾರಜನಕ ಕೊಡಬೇಕು ಎನ್ನುವುದನ್ನು ನಿರ್ದರಿಸುವಲ್ಲಿ ಎಲೆ ಬಣ್ಣದ ಪಟ್ಟಿ ಬಳಕೆ ಬಹಳ ಉಪಯುಕ್ತ. ನಾಟಿಯಾದ 45 ರಿಂದ 240 ದಿನಗಳವರೆಗೆ. ಪ್ರತಿ 15 ದಿನಗಳಿಗೊಮ್ಮೆ ಎಲೆಯ ಬಣ್ಣದ ಅಳತೆಮಾಡಬೇಕು.ಬೆಳೆಯ ಮೇಲಿನಿಂದ ಸಂಪೂರ್ಣವಾಗಿ ತೆರೆದ ಮೂರನೆ ಎಲೆಯ ಮಧ್ಯಭಾಗವನ್ನು ಸರಿಹೊಂದುವ ಬಣ್ಣದ ಛಾಯೆಯ ಮೇಲಿಟ್ಟು ಹೋಲಿಸಿ ಐದು ಕಡೆ ನೋಡಿ ಬಣ್ಣವನ್ನು ನಿರ್ಧರಿಸಬೇಕು. ಎಲೆಯ ಬಣ್ಣ ಪಟ್ಟಿಯ ಸರಾಸರಿ 5ನೇ ಸಂಖ್ಯೆಗಿಂತ ಕಡಿಮೆಯಾಗಿದ್ದಲ್ಲಿ ಪ್ರತಿ ಸಾರಿ ಎಕರೆಗೆ 20 ಕಿ. ಗ್ರಾಂ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.
ಸೂಚನೆ: 1. ಎಲೆಯ ಬಣ್ಣ, ಪಟ್ಟಿಯ 5 ನೇ ಸಂಖ್ಯೆಗಿಂತ ಹೆಚ್ಚಾಗಿದ್ದಲ್ಲಿ ಸಾರಜನಕ ನೀಡುವ ಅವಶ್ಯಕತೆಯಿಲ್ಲ. ಎಲೆ ಬಣ್ಣದ ಪಟ್ಟಿಯ ಬಳಕೆಗೆ ಸೂಚನೆಗಳು ಹಾಗೂ ಇತರೆ ಮಾಕಶಿತಿಗಾಗಿ ಭತ್ತದ ಬೆಳೆಯ ಪುಟ ಸಂಖ್ಯೆ 23 ರಿಂದ 24 ನ್ಸ್ನು ನೋಡಬೇಕು.2. ಈ ತಾಂತ್ರಿಕತೆಯನ್ನು ಈ ಕೆಳಗಿನ ತಳಿಗಳಲ್ಲಿ ಬಳಸಬಹುದು.
5. ನಾಟಿ ಮಾಡುವುದು
ಭೂಮಿಯನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ ನಾಟಿಗೆ ಸಿದ್ಧಪಡಿಸಿ 90 ಸೆಂ. ಮೀ. ಅಂತರದ 15-25 ಸೆಂ. ಮೀ. ಆಳವಾದ ಸಾಲು ಮತ್ತು ಬೋದುಗಳನ್ನು ಮಾಡಬೇಕು. ನಂತರ ಬೀಜೋಪಚಾರ ಮಾಡಿದ ಉತ್ತಮ ಕಣ್ಣುಗಳುಳ್ಳ ತುಂಡುಗಳನ್ನು ಸಾಲಿಗೆ ನೀರು ಬಿಟ್ಟು ಸಾಲಿನಲ್ಲಿ ತುಳಿಯಬೇಕು.
ನಾಟಿ ಪದ್ಧತಿಗಳು
1. ಆಳವಾದ ಕಪ್ಪು ಭೂಮಿಯಲ್ಲಿ 90 ಸೆಂ. ಮೀ. ಅಂತರದ ಬೋದು ಮತ್ತು ಸಾಲುಗಳನ್ನು ಮಾಡಬೇಕು.
2.ಮಧ್ಯಮ ಆಳದ ಕಪ್ಪು ಭೂಮಿಗೆ 60 ಅಥವಾ 90 ಸೆಂ. ಮೀ. ಸಾಲುಗಳನ್ನು ಮಾಡಿ, ಎರಡು ಸಾಲು ನಾಟಿ ಮಾಡಿ ಒಂದು ಸಾಲು ಹುಸಿ ಬಿಡಬೇಕು. ಅದರಲ್ಲಿ ಅಂತರ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಬಹುದು. ಈ ಪದ್ಧತಿಯಲ್ಲಿ ಇಳುವರಿ ಕಡಿಮೆಯಾಗದೆ, ಅ೦ದಾಜು ಶೇ. 40 ರಷ್ಟು ನೀರಿನ ಉಳಿತಾಯ ಆಗುವುದು. ಅಗಲದ ಸಾಲು ಪದ್ಧತಿಯಲ್ಲಿ 120 ಸೆಂ. ಮೀ. 150 ಸೆಂ. ಮೀ. ಅಥವಾ 180 ಸೆಂ. ಮೀ. ಅಂತರದಲ್ಲಿ ಒಂದು ಸಾಲೆನ್ನು ರಿಡ್ಡರದಿಂದ ತೆಗೆದು ಅದರಲ್ಲಿ ಒಂದು ಕಣ್ಣಿನ ಕಬ್ಬಿನ ಸಸಿ ‘ಅಥವಾ ಕಬ್ಬು ನಾಟಿ ಮಾಡುವುದರಿಂದ ಸಾಲುಗಳ ಮಧ್ಯ ಅಂತರ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಬಹುದಲ್ಲದೇ, ಹನಿ ನೀರಾವರಿಗೆ ಅನೂಕೂಲವಾಗುವುದು.
3, ಕೆಂಪು ಭೂಮಿ ಮತ್ತು ನೀರಿನ ಕೊರತೆಯಿದ್ದಲ್ಲಿ ಗುಣಿ ನಾಟಿ ಪದ್ಧತಿ ಲಾಭದಾಯಕ.ಒ೦ದು ಮೀಟರ್ ಉದ್ದ, ಒಂದು ಮೀಟರ್ ಅಗಲ ಮತ್ತು’ 45 ಸೆಂ. ಮೀ. | ಆಳದ ಗುಣಿಗಳನ್ನು ತೆಗೆಯಬೇಕು. ಗುಣಿಗಳು ಸಾಲಿನಿಂದ ಸಾಲಿಗೆ 90 ಸೆಂ.ಮೀ. ಹಾಗೂ ಸಾಲಿನಲ್ಲಿ 45 ಸೆಂ. ಮೀ. ಅ೦ತರ ಇರುವಂತೆ ನೋಡಿಕೊಳ್ಳಬೇಕು.ಗುಣಿಯ ತಳ ಭಾಗದಲ್ಲಿ 15 ಸೆಂ. ಮೀ. ಮಣ್ಣನ್ನು ಹಾಕಿ ನಂತರ 15 ಸೆಂ. ಮೀ. ಹಾಗೂ 4 ಸೆಂ. ಮೀ. ದಪ್ಪ ಕಾ೦ಪೋಸ್ಟ್ ಮತ್ತು ಹಸಿರೆಲೆ ಗೊಬ್ಬರ ಹಾಕಬೇಕು. ಇನ್ನು ಳಿದ 15 ಸೆಂ.ಮೀ. ಸ್ಥಳದಲ್ಲಿ ಉಳಿದ ಮಣ್ಣು, 150 ಗ್ರಾಂ ಯೂರಿಯಾ, 130 ಗ್ರಾಂ ಸೂಪರ್ ಫಾಸ್ಟೇಟ್ ಮತ್ತು 85 ಗ್ರಾಂ ಮ್ಯುರೇಟ್ ಆಫ್ ಪೋಟ್ಯಾಷಗಳನ್ನು ಸೇರಿಸಬೇಕು. ಇ೦ತಹ ಪತಿಯೊಂದು ಗುಣಿಯಲ್ಲಿ ನಾಟ ಮಾಡಲು ಎರಡು ಕಣ್ಣುಗಳುಳ್ಳ 20 ಬೀಜದ ತುಂಡುಗಳನ್ನು ಉಪಯೋಗಿಸಬೇಕು. ಸಾಲಿನಿಂದ ಸಾಲಿಗೆ ಇರುವ 90 ಸೆಂ. ಮೀ. ಸ್ಥಳವನ್ನು
ನೀರು ಬಿಡಲು ಕಾಲುವೆಯನ್ನಾಗಿ ಬಳಸಬೇಕು. ಪ್ರತಿ ಎರಡು ಗುಣಿ ಸಾಲುಗಳ ನಂತರ ಕಾಲುವೆಯನ್ನು ಮಾಡಿ ಉಪಯೋಗಿಸಬೇಕು. ಒಂದು ಎಕರೆಗೆ 1460 ಗುಣಿಗಳು ಬೇಕಾಗುತ್ತವೆ.
ನೀರಾವರಿ
1.ನಾಟಿ ಮಾಡಿದ ಮೇಲೆ 8 -10 ದಿನಕ್ಕೆ ತೆಳುವಾಗಿ ನೀರು ಕೊಡಬೇಕು.
2.ಹವಾಗುಣಕ್ಕೆ ಅನುಗುಣವಾಗಿ ಭೂಮಿಯ ಗುಣಮಟ್ಟ ಅನುಸರಿಸಿ ಈ ಕೆಳಗೆ ತಿಳಿಸಿದಂತೆ ನೀರು ಕೊಡುವುದು ಉತ್ತಮ.
ಅ. ಮೊಳಕೆ ಒಡೆಯುವಾಗ (8-35 ದಿನಗಳವರೆಗೆ) 7 ದಿನಕ್ಕೊಮ್ಮೆ.
ಬ. ಮರಿ ಒಡೆಯುವಾಗ (36-100 ದಿನಗಳವರೆಗೆ) 10 ದಿನಕ್ಕೊಮ್ಮೆ
ಕ. ಬೆಳವಣಿಗೆ ಹಂತದಲ್ಲಿ (101-270 ದಿನಗಳವರೆಗೆ) 7 ದಿನಕ್ಕೊಮ್ಮೆ.
ಡ. ಮಾಗುವಾಗ (271-365 ದಿನಗಳವರೆಗೆ) 15 ದಿನಕ್ಕೊಮ್ಮೆ .
ನೀರಿನ ಸಂಗಹ ಕಡಿಮೆಯಿದ್ದಲ್ಲಿ ಸಾಲು ಬಿಟ್ಟು ಸಾಲು ನೀರು ಹಾಯಿಸಬೇಕು.
ಬೇಸಿಗೆಯಲ್ಲಿ ಬರದ ನಿರ್ವಹಣೆ
1.ಸಾಲು ಬಿಟ್ಟು ಸಾಲಿನಲ್ಲಿ ರವದಿಯನ್ನು ಹಾಕಬೇಕು ಹಾಗೂ ಖಾಲಿ ಇರುವ ಸಾಲುಗಳಲ್ಲಿ ನೀರು ಹಾಯಿಸಬೇಕು.
2. ಒಂದು ಕಿ. ಗ್ರಾಂ ರವದಿ ಕಳಿಸುವ ಸೂಕ್ಷ್ಮಾಣುಜೀವಿಗಳನ್ನು ಪ್ರತಿ ಟನ್ ರವದಿಗೆ ಹಾಕಬೇಕು.
3. ಕೊನೆಯ ನೀರು ಕೊಡುವಾಗ ಎಕರೆಗೆ 20 ಕಿ. ಗ್ರಾಂ ಪೋಟ್ಯಾಷ್ ಗೊಬ್ಬರವನ್ನು ಕೊಟು. ಎಲ ಸಾಲುಗಳಿಗೆ ರವದಿ ಹೊದಿಸಬೇಕು.
4. ಶೇ. 2.5 ಯೂರಿಯಾ ಅಥವಾ ಶೇ. 2.5 ಮ್ಯುರಿಯೇಟ್ ಆಫ್ ಪೋಟ್ಯಾಷ್ ದ್ರಾವಣವನ್ನು ಬರದ ಸಮಯದಲ್ಲಿ ಪ್ರತಿ 15-20 ದಿನಕ್ಕೊಮ್ಮೆ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.
ಕಬ್ಬಿನಲ್ಲಿ ಹನಿ ನೀರಾವರಿ ಮತ್ತು ರಸಾವರಿ
ಕಬ್ಬು ಮುಖ್ಯವಾದ ವಾಣಿಜ್ಯ ಬೆಳೆಯಾಗಿರುವುದರಿ೦ದ ಹನಿ ನೀರಾವರಿಯನ್ನು ವಲಯ 3 ಮತ್ತು 8 ರಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಹನಿ ನೀರಾವರಿ ಪದತಿಯಲ್ಲಿ ನೀರನ್ನು ಉಳಿತಾಯ ಮಾಡಬಹುದಲ್ಲ್ಬದೆ, ವಿದ್ಕುತ್. ರಸಗೊಬ್ಬರ ಮತ್ತು ಕೃಷಿ ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡಬಹುದು. ಕಜಿನಲ್ಲಿ ಹನಿ ನೀರಾವರಿಯನ್ನು ಅಳವಡಿಸುವುದರಿಂದ ಖರ್ಚು ಹೆಚ್ಚಾದರೂ ಉಳಿತಾಯವಾದ ನೀರಿನಿ೦ದ ನೀರಾವರಿ ಕ್ಷೇತ್ರವನ್ನು ದ್ವಿಗುಣಗೊಳಿಸಿ ಇದರ ವೆಚ್ಚವನ್ನು 2 ರಿಂದ 3 ರ್ಷಗಳಲ್ಲಿ ಮರಳಿ ಪಡೆಯಬಹುದು. ಆದ್ದರಿಂದ ಕಜ್ಜಿನಲ್ಲಿ ಹನಿ ನೀರಾವರಿ ಮತ್ತು ರಸಾವರಿ ಪದ್ಧತಿಯನ್ನು ಸೂಕ್ತವಾಗಿ ಅಳವಡಿಸಬಹುದು.
ಕಬ್ಬಿನಲ್ಲಿ ಹನಿ ನೀರಾವರಿ ಪದ್ಧತಿಯಿಂದ ಶೇ. 40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ಹನಿ ನೀರಾವರಿ ಪದ್ಧತಿಯಲ್ಲಿ ಸಾಮಾನ್ಯ ಸಾಲುಗಳ ಪದ್ಧತಿಗೆ ಬದಲಾಗಿ 60-180-60 ಸೆಂ.ಮೀ (2-6-2 ಅಡಿ) ಜೋಡು ಸಾಲು ಪದ್ಧತಿಯನ್ನು ಅಥವಾ 5, 6, 7 ಅಡಿ ಅಂತರದ ಒ೦ದೇ ಸಾಲಿನಲ್ಲಿ ಅಳವಡಿಸುವುದರಿಂದ 6 ಅಡಿ ಅಂತರದಲ್ಲಿ ಒಂದು ಲ್ಯಾಟರಲ್ ಪೈಪನ್ನು ಅಳವಡಿಸಬಹುದು. ಹನಿ ನೀರಾವರಿಯಲ್ಲಿ ನೀರನ್ನು ಪ್ರತಿ ದಿನಕ್ಕೊಮ್ಮೆ ವಿವಿಧ ಹಂಗಾಮಿನಲ್ಲಿ ಕೋಷ್ಟಕದಲ್ಲಿ ತಿಳಿಸಿದಂತೆ ಒದಗಿಸಬೇಕು.
ಕಬ್ಬಿನಲ್ಲಿ ರಸಾವರಿ
ಕಬ್ಬಿನ ಬೆಳೆಗೆ ಶಿಫಾರಸ್ಸು ಮಾಡಿದ ಶೇ 10ರಷ್ಟು (10 ಕಿ.ಗ್ರಾಂ/ಎ) ಸಾರಜನಕ ಮತ್ತು ಪೋಟ್ಯಾಷ್ (7.5 ಕಿ.ಗ್ರಾಂ/ಎ) ಹಾಗೂ ಪೂರ್ಣ ರಂಜಕ (30 ಕಿ.ಗ್ರಾಂ ಪಾಸ್ಟಾರಿಕ್ ಆಸಿಡ್), 10 ಕಿ.ಗ್ರಾಂ/ಎ ಫೆರಸ್ ಮತ್ತು ಸತುವಿನ ಸುಲಫಟೆ ಒದಗಿಸುವ ರಸಗೊಬ್ಬರಗಳನ್ನು ಮೂಲ ಗೊಬ್ಬರವಾಗಿ ನಾಟಿ ಮಾಡಿದ ಮೊದಲ ಒಂದು ತಿಂಗಳಲ್ಲಿ ಹನಿನೀರಾವರಿ ಮುಖಾಂತರ ಕೊಡಬೇಕು. ನಂತರ ಶಿಫಾರಿಸ್ಸಿನ ಶೇ. 90 ರಷ್ಟು ಸಾರಜನಕ (90.5 ಕಿ.ಗ್ರಾಂ) ಮತ್ತು ಶೇ. 90 (675 ಕಿ.ಗ್ರಾಂ) ರಷ್ಟು ಪೋಟ್ಯಾಷ್ ಪೊಷಕಾಂಶಗಳನ್ನು ಯೂರಿಯಾ ಮತ್ತು ಬಿಳಿಬಣ್ಣದ ಮ್ಯುರೆಟ್ ಆಪ್ ಪೋಟ್ಯಾಷ್ ರೂಪದಲ್ಲಿ ರಸಾವರಿ ಮೂಲಕ ನಾಟಿ ಮಾಡಿದ 2ನೇ ತಿಂಗಳಿನಿಂದ 8 ಕ೦ತುಗಳಲ್ಲಿ ಪ್ರತಿ ತಿ೦ಗಳಿಗೆ (64 ಕಿ.ಗ್ರಾಂ ಯೂರಿಯಾ+36 ಕಿ.ಗ್ರಾಂ ಬಿಳಿಬಣ್ಣದ ಮ್ಯುರೆಟ್ ಆಪ್ ಪೋಟ್ಯಾಷ್) ಗೊಬ್ಬರಗಳನ್ನು ವೆಂಚುರಿ ಮೂಲಕ ಹನಿ ನೀರಾವರಿಯಲ್ಲಿ ಕೊಡಬೇಕು.
ಅಂತರ ಬೇಸಾಯ
ನಾಟಿ ಮಾಡಿದ 50, 65, 80 ಮತ್ತು 95 ನೇಯ ದಿನದಿಂದ ಬೋದುಗಳಲ್ಲಿ ಹಗುರವಾಗಿ ಕುಂಟಿ ಹಾಯಿಸಬೇಕು. ನಂತರ 120 ನೇಯ ದಿನಕ್ಕೆ ಆಳವಾಗಿ ಹರಗಿ ಕಬ್ಬಿನ ಎರಡು ಮಗ್ಗಲು ಮಣ್ಣು ಏರುವಂತೆ ಮಾಡಬೇಕು.
ಮಿಶ್ರ ಬೆಳೆಗಳು
* ನಾಟಿ ಮಾಡಿದ 8-10 ದಿನಗಳ ನಂತರ ಹುಳಿ ನೀರಿನ ಸಮಯದಲ್ಲಿ ಉಳ್ಳಾಗಡ್ಡೆಯ ಸಸಿಗಳನ್ನು ಬೋದಿನ ಎರಡು ಮಗ್ಗಲು ನಾಟಿ ಮಾಡಬೇಕು. ಇದು ಬೋದು ಒಡೆಯುವುದರ ಒಳಗೆ ಮಾಗುವುದು. ಇದರಿಂದ ಶೇ. 20-22 ರಷ್ಟು ಹೆಚ್ಚಿನ ಆದಾಯ ಪಡೆಯಬಹುದು.
ಅಥವಾ
* ಉಳ್ಳಾಗಡ್ಡಿ ಬದಲಾಗಿ ಸೋಯಾಅವರೆಯನ್ನು ಬೋದಿನ ಒಂದೇ ಮಗ್ಗಲಿಗೆ ಹಾಕುವುದರಿಂದ ಎಕರೆಗೆ 4-5 ಕ್ವಿ. ಸೋಯಾಅವರೆಯನ್ನು ಮೊದಲ 90 ದಿನಗಳಲ್ಲಿ ಪಡೆಯಬಹುದು.
ಕಳೆ ನಿಯಂತ್ರಣ
*. ನಾಟಿ ಮಾಡಿದ 2-3 ದಿನಗಳ ಒಳಗೆ ಪ್ರತಿ ಎಕರೆಗೆ 1.0 ಕಿ. ಗ್ರಾಂ ಅಟ್ರ್ಯಾಜಿನ್ 50 ಡಬ್ಬ್ಲು.ಪಿ. ಕಳೆನಾಶಕವನ್ನು 300 ಲೀಟರ್ ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಬೇಕು. ಇದು ಮೊದಲ 30-35 ದಿನಗಳವರೆಗೆ ಕಳೆಗಳನ್ನು ನಿಯಂತ್ರಿಸುತ್ತದೆ.
*. ನಾಟಿ ಮಾಡಿದ 60 ನೇಯ ದಿನಕ್ಕೆ ಎರಡು ಸಾಲುಗಳ ಮಧ್ಯ 10 ಕಿ. ಗ್ರಾಂ 2, 4-ಡಿ ಸೋಡಿಯಂ ಲವಣ 80% ಡಬ್ಲೂ.ಪಿ. ಕಳೆನಾಶಕವನ್ನು 300 ಲೀಟರ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಅಥವಾ
ನಾಟಿ ಮಾಡಿದ 30, 60 ಮತ್ತು 90 ದಿನಕ್ಕೆ ಕೈಗಳೆಮಾಡಿ. ಎಡೆ ಕುಂಟೆಯಿಂದ ಕಳೆ ನಿಯಂತ್ರಣ ಮಾಡಬೇಕು. ಅಂತರ ಬೆಳೆಯಾಗಿ ಸೋಯಾ ಅವರೆ ಅಥವಾ ಸಣಬನ್ನು ಬೆಳೆದಲ್ಲಿ ಕಳೆಯ ಪ್ರಮಾಣ ಕಡಿಮೆಯಾಗುವುದು ಈ ಬೆಳೆಗಳನ್ನು ಬೆಳೆದಾಗ ಮೇಲಿನ ಕಳೆನಾಶಕಗಳನ್ನು ಸಿ೦ಪರಣೆ ಮಾಡಬಹುದು.
ಸಸ್ಯ ಸಂರಕ್ಷಣೆ
ಕಬ್ಬು ಬೆಳೆಯಲ್ಲಿ ಉಣ್ಣೆ ಹೇನು ಕೀಟದ ಸಮಗ್ರ ನಿರ್ವಹಣೆ
ಈ ಕೀಟವು ಬೆಳಗಾವಿ ಜಿಲ್ಲೆಯಲ್ಲಿ 2002 ರ ಆಗಸ್ಟ್ ತಿ೦ಗಳಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊ೦ಡಿದ್ದು.ಈಗ ದಕ್ಷಿಣ ಪ್ರಸ್ಥಭೂಮಿಯ ಎಲ್ಲಾ ಕಬ್ಬು ಬೆಳೆಯುವ ಪ್ರದೇಶಗಳನ್ನು ವ್ಯಾಪಿಸಿಕೊಂಡಿದೆ.ಈ ಕೀಟದ ವೈಜ್ಞಾನಿಕ ಹೆಸರು ಸಿರಾಟೊವಾಕ್ಕುನಾ ಲ್ಯಾನಿಜೆರಾ, ಹೊಮೊಪ್ಪರಾ ಗಣದ ಎಫಿಡಿಡೆ ಕುಟುಂಬಕ್ಕೆ ಸೇರಿರುತ್ತದೆ. ಈ ಕೀಟವು ನಿರ್ಲಿಂಗ ರೀತಿಯಿಂದ (parthenogenetically) ಸ೦ತಾನೋತ್ಪತ್ತಿ ಮಾಡುವುದು ಒಂದು ಮುಖ್ಯವಾದ ಲಕ್ಷಣವಾಗಿದೆ. ಮರಿಗಳು ಹಸಿರುಯುಕ್ತ ಹಳದಿ ಬಣ್ಣದಾಗಿದ್ದು, ಬಹು ಚುರುಕಾಗಿರುತ್ತವೆ. ಪ್ರೌಢಾವಸ್ಥೆಯನ್ನು ಹೊಂದಿದ ಎರಡರಿಂದ ಮೂರು ದಿನಗಳ ಪ್ರಾಯದ ಹೆಣ್ಣು ಕೀಟವು ದಿನವೊಂದಕ್ಕೆ 15-35 ಮರಿಗಳಿಗೆ ಜನ್ಮ ನೀಡುತ್ತದೆ. ಬಾಲ್ಯಾವಸ್ಥೆಯು 20 ರಿಂದ 57 ದಿನಗಳವರೆಗೆ ಇರುತ್ತದೆ. ಒಂದು ಪೌಢ ಕೀಟವು 32 ರಿಂದ 57 ದಿನಗಳವರೆಗೆ ಬದುಕಬಲ್ಲದು. ಮೋಡ ಕವಿದ ವಾತಾವರಣ. ತಂಪಾದ ಹವೆ ಮತ್ತು ಹೆಚ್ಚಿನ ಆರ್ದ್ರತೆ ಇರುವ ವಾತಾವರಣವು ಈ ಜ್ ವೃದ್ಧಿಗೆ ಮತ್ತು ಪ್ರಸರಣಕ್ಕೆ ಅನುಕೂಲಕರ.
ಈ ಕೀಟವು ಗು೦ಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿದ್ದು ರಸ ಹೀರುವವು. ಇಂತಹ ಎಲೆಗಳು ಕ್ರಮೇಣ ತುದಿಯಿಂದ ಅ೦ಚುಗಳಲ್ಲಿ ಹಳದಿ ವರ್ಣಕ್ಷೆ ತಿರುಗಿ ತದನ೦ತರ ಒಣಗಲಾರಂಭಿಸುವವು. ಕೆಳಗಿನ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ್ ಬೆಳದು ದ್ಯುತಿಸಂಶ್ರೇಷಣಾ ಕ್ರಿಯೆಗೆ ತೊ೦ದರೆಯಾಗುವುದು. ಕಬ್ಬಿನ ಇಳುವರಿಯು ಶೇ. 22 ರಿಂದ 25 ರಷ್ಟು ಹಾಗೂ ಸಕ್ಕರೆಯ ಇಳುವರಿಯು ಶೇ. 24 ರಷ್ಟು ಕಡಿಮೆಯಾಗುತ್ತದೆ.
ಬಿಳಿ ಉಣ್ಣೆ ಹೇನಿನ ಸಮಗ್ರ ಹತೋಟಿಯ ಕ್ರಮಗಳು
ಈ ಕೀಟದ ಹತೋಟಿಯನ್ನು ಸಾಮೂಹಿಕವಾಗಿ ಕೈಗೊಳ್ಳುವುದು ಅತ್ಯವಶ್ಯಕ.
* ಬಾಧೆಗೊಳಗಾದ ಕಬ್ಬನ್ನು ನಾಟಿಗೆ ಉಪಯೋಗಿಸಬಾರದು.
* ಪಟ್ಟಾ ಪದ್ಧತಿಯನ್ನು ಅನುಸರಿಸಿ ಬೆಳೆದ ಬೆಳೆಯಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಸುಲಭ.
* ಕಬ್ಬಿನ ಗದ್ದೆಗಳಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು.
* ಸಾರಜನಕಂಮುಕ್ತ ಗೂಬ್ಬರವನ್ನು ಹೆಚ್ಚಾಗಿ ಬಳಸದೆ. ಉಳಿದ ಪೋಷಕಾಂಶಗಳೊಂದಿಗೆ ಸಮತೋಲನವಾಗಿ ಕಾಪಾಡಬೇಕು.
ಜೈವಿಕ ವಿಧಾನದಲ್ಲಿ ಮೈಕ್ರೋಮಸ್ ಇಗೋರೇಟಸ್ (ಹೇನು ಸಿ೦ಹ) ಅಥವಾ ಡೈಫಾ ಎಫಿಡಿವೋರಾದ ಕೋಶ, ಮರಿಗಳನ್ನು ಬಿಡುವುದು ಸೂಕ್ತ. ಪರತಂತ್ರ ಜೀವಿ ಏನ್‌ಕಾರ್ಸೀಯಾ ಪ್ಲಾವೋಸ್ಕೂಟೇಲಂ ಪರತಂತ್ರ ಜೀವಿಗಳನ್ನು ಬಿಡುವುದು ಮತ್ತು ಅಕ್ರೀಮೋನಿಯಂ ಜೈಲಾನಿಕಂ ಶಿಲೀ೦ಧ್ರದ ಬಳಕೆ ಸೂಕ್ತವಾಗಿವೆ.
ಡೈಫಾ ಎಫಿಡಿವೋರಾ ಮತ್ತು ಮೈಕ್ರೋಮಸ್ ಪರಭಕ್ಷಕ ಕೀಡೆಗಳನ್ನು ಬಿಡಲು ಅನುಸರಿಸಬೇಕಾದ ಕ್ರಮಗಳು
* ಈ ಪರಭಕ್ಷಕ ಕೀಟ ಹೊಂದಿರತಕ್ಕಂತಹ ಕಬ್ಬಿನ ಎಲೆಗಳನ್ನು ಗುರುತಿಸಿ, ಈ ಎಲೆಗಳನ್ನು ಪರಭಕ್ಷಕ’ ಕೀಟ ಸಮೇತವಾಗಿ ಇರುವಂತೆ. ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.
* ಈ ತುಂಡುಗಳನ್ನು ಹೆಚ್ಚು ಬಿಳಿ ಉಣ್ಣೆ ಹೇನುಬಾಧಿತ ಪದೇಶದಲ್ಲಿ ಕಬ್ಬು ಬೆಳೆಯ ಎಲೆಯ ಕಳಭಾಗದಲ್ಲಿ ಗುಂಡು ಸೂಜಿಯಿ೦ದ ಅ೦ಟಿಸಬೇಕು.
* ಪ್ರತಿ ಎಕರೆ ಪ್ರದೇಶಕ್ಕೆ ಸುಮಾರು 400-600 ಮರಿ ಅಥವಾ ಕೋಶ ಬಿಡುಗಡೆ ಮಾಡಬೇಕು. ಕಟಾವಿಗೆ ಸಿದ್ದವಾದ ಕಬ್ಬಿನ ಬೆಳೆಯಲ್ಲಿ ಪರಭಕ್ಷಕ ಕೀಟ ಬಿಡುಗಡೆ ಮಾಡಬಾರದು.
* ಪರಭಕ್ಷಕ ಕೀಟವನ್ನು ಬಿಡುಗಡೆಗೊಳಿಸುವ ಪೂರ್ವದಲ್ಲಿ ಅಥವಾ ನಂತರ ಕೀಟನಾಶಕಗಳ ಸಿ೦ಪರಣೆ ಅಥವಾ ಧೂಳೀಕರಣ ಮಾಡಬಾರದು.
* ಪರಭಕ್ಷಕ ಕೀಡೆಗಳನ್ನು ಬಿಟ್ಟ ಗದ್ದೆಗಳಲ್ಲಿ ಹಾಗೂ ಇವುಗಳ ಚಟುವಟಿಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಬ್ಬಿನ ರವದಿಯನ್ನು ಸುಡಬಾರದು.
* ಈ ಕೀಟದ ಬಾಧೆ ಬೆಳಯಲ್ಲಿ ಸಾಮಾನ್ಯವಾಗಿ ಅಲ್ಲಲ್ಲ ಕಂಡುಬರುವುದರಿಂದ, ಆ ಕ್ಷೇತ್ರಕ್ಕೆ ಹಾಗೂ ಸುತ್ತಲಿನ 5 ಮೀಟರ್ ಸುತ್ತಳತೆವರೆಗೆ ಕೆಳಗೆ ಸೂಚಿಸಿರುವ ಯಾವುದಾದರೊಂದು ಕೀಟನಾಶಕವನ್ನು `ತಾತ್ಕಾಲಿಕ ಹತೋಟಗಾಗಿ ಸಿಂಪಡಿಸಬೇಕು.
ಒ೦ದು ಗ್ರಾಂ ಅಸಿಫೇಟ್ 75 ಡಬ್ಲೂಪಿ. ಅಥವಾ 2 ಮಿ. ಲೀ. ಕ್ಷೋರ್‌ಫೈರಿಫಾಸ್ 20 ಇ. ಸಿ. ಅಥವಾ 2.00 ಮಿ. ಲೀ. ಮೆಲಾಥಿಯಾನ್ 50 ಇ. ಸಿ. ಅಥವಾ 1.5 ಮಿ. ಲೀ. ಮೆಟಾಸಿಸ್ಟಾಕ್ಸ್ 25 ಇ. ಸಿ. ಅಥವಾ 0.26 ಗ್ರಾಂ ಥಯಾಮಿಥಾಕ್ಸಾಮ್ 25 ಡಬ್ರೂ. ಜಿ. ಒಂದು ಲೀ. ನೀರಿನಲ್ಲಿ ಬೆರೆಸಿ ಸಿ೦ಪಡಿಸಬೇಕು. ಪ್ರತಿ ಎಕರೆಗೆ 400 ಲೀ. ಸಿ೦ಪರಣಾ ದ್ರಾವಣ ಬೇಕಾಗುವುದು. ಅಥವಾ ಶೇ. 5 ರ ಮೆಲಾಥಿಯಾನ್ ಧೂಳು ಪ್ರತಿ ಎಕರೆ 10 ಕಿ. ಗ್ರಾಂ ಅಥವಾ ಶೇ. 10 ರ ಫೊರೇಟ್ ಹರಳು 10 ಕಿ. ಗ್ರಾಂ ಪ್ರತಿ ಎಕರೆಗೆ ಬೇಕಾಗುವುದು.
* ಕೀಟನಾಶಕ ಸಿ೦ಪಡಿಸುವವರು ರಕ್ಷಾ ಕವಚಗಳನ್ನು ಧರಿಸಬೇಕು.
* ಸಿ೦ಪರಣೆ ಮಾಡಿದ ಕಬ್ಬನ್ನು ದನಕರುಗಳಿಗೆ ಮೇವಿಗಾಗಿ ಉಪಯೋಗಿಸಬಾರದು.
* ಬಿಳಿ ಉಣ್ಣೆ ಹೇನು ನಿರೋಧಕ ತಳಿ ಎಸ್‌ಎನ್‌ಕೆ – 044 ನ್ನು ಬೆಳೆಯುವುದು ಸೂಕ್ತ.
ಇಳುವರಿ
ಕಬ್ಬು ತಳಿಗನುಗುಣವಾಗಿ ನಾಟಿ ಮಾಡಿದ 10-14 ತಿಂಗಳುಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಕಬ್ಬನ್ನು ಸೂಲಂಗಿ (ಹೂವು) ಬಂದ ಎರಡು ತಿ೦ಗಳೂಳಗಾಗಿ ಕಟಾವು ಮಾಡಬೇಕು. ತಳಿ ಮತ್ತು ನಾಟಿ ಮಾಡಿದ ಕಾಲಕ್ಕನುಗುಣವಾಗಿ ಪಡೆಯಬಹುದಾದ ಇಳುವರಿ (ಟನ್ ಪ್ರತಿ ಎಕರೆಗೆ) ಈ ಕಳಗಿನಂತಿದೆ.
ಕೂಳೆ ಕಬ್ಬು ನಿರ್ವಹಣ
1. ಉತ್ತಮ ಕುಳೆ ಕಬ್ಬಿನ ಇಳುವರಿಗಾಗಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು
* ನಾಟಿ ಕಬ್ಬು ಆರೋಗ್ಯಯುತವಾಗಿರಬೇಕು.
* ನಾಟಿ ಕಬ್ಬನ್ನು ಏಪ್ರಿಲ್‌ದಿ೦ದ ಆಗಸ್ಟ್ ತಿಂಗಳಲ್ಲಿ ಕಟಾವು ಮಾಡುವುದನ್ನು ಬಿಟ್ಟು ಉಳಿದ ತಿಂಗಳುಗಳಲ್ಲಿ ಕಟಾವು ಮಾಡಬಹುದು.
* ನಾಟ ಕಬ್ಬು ಕಟಾವು ಮಾಡುವುದನ್ನು ಒ೦ದೇ ವಾರದಲ್ಲಿ (8-10 ದಿನಗಳ) ಮುಗಿಸಬೇಕು. ಕಟಾವು ಪೂರ್ವದಲ್ಲಿ (15 ದಿನ) ಬೆಳೆಗೆ ನೀರು ಹಾಯಿಸಬೇಕು.
2. ಕೋಲಿ ಸವರುವುದು
ಹರಿತವಾದ ಸಲಿಕೆ ಅಥವಾ ಕೊಯ (ಕುಡಗೋಲು) ದಿಂದ ಕಬ್ಬು ಕಡಿದ ನಂತರ ಉಳಿದಿರುವ ಉದ್ದ ಕೋಲಿಗಳನ್ನು ನೆಲಸಮನಾಗಿ ಕತ್ತರಿಸಬೇಕು. ಇದರಿಂದ ಒ೦ದೇ ಸಮನಾದ ಮೊಳಕೆ ಬರುತ್ತವೆ. ಬೇರುಗಳು ಆಳವಾಗಿ ನೆಲದಲ್ಲಿ ಹರಡಿ ಪೋಷಕಾಂಶ ಮತ್ತು ನೀರನ್ನು ಹೀರಿಕೊಳ್ಳುತ್ತವೆ.
3. ಕುಳೆ ಕಬ್ಬಿನಲ್ಲಿ ರವದಿಯ ನಿರ್ವಹಣೆ
ಒ೦ದು ಎಕರೆಗೆ 3-4 ಟನ್ ಒಣ ರವದಿ ದೊರೆಯುವುದು. ಇದನ್ನು ಸುಡದೆ ಕುಳೆ ಬೆಳೆಯಲ್ಲಿ ವ್ಯವಸ್ಥಿತವಾಗಿ ಹಾಕಿದಲ್ಲಿ ಮಣ್ಣಿನ ಸಾವಯವ ಪದಾರ್ಥ ಹಾಗೂ ಪೋಷಕಾಂಶಗಳ ಮಟ್ಟ ಹೆಚ್ಚುತ್ತದೆ. ರವದಿಯಲ್ಲಿ ಶೇ. 0. 35 ಸಾರಜನಕ,ಶೇ. 0.13 ರಂಜಕ ಮತ್ತು ಶೇ. 0.65 ಪೋಟ್ಯಾಷ್ ಇರುವುದು. ಕೂಳೆ ಕಬ್ಬಿನಲ್ಲಿ ರವದಿಯನ್ನು ಎರಡು ಸಾಲುಗಳ ಮಧ್ಯೆ ಹಾಕಬೇಕು. ಇದಕ್ಕೆ 20 ಕಿ. ಗ್ರಾಂ ಯೂರಿಯಾ ಮತ್ತು 20 ಕ ಗ್ರಾಂ ಸೂಪರ ಫಾಸ್ಟೇಟ್ ಗೊಬ್ಬರವನ್ನು ರಪದಿಯ ಮೇಲೆ ಹಾಕಬೇಕು. ನಂತರ 2-2.4 ಕಿ. ಗ್ರಾಂ ರವದಿ ಕಳಿಸುವ ಸೂಕ್ಷಾ ಖಜೀವಿ(ಟೈಕೋಡರ್ಮಾ ಎರಿಡ) ಸಗಣಿ ಕಲಿಸಿದ ನೀರಿನಲ್ಲಿ ಮಿಶ್ರಣ ಮಾಡಿ ರವದಿಯ ಮೇಲೆ ಸಿಂಪಡಿಸಬೇಕು . ಇದರಿಂದ ರವದಿ ಬೇಗನೆ ಕಳಿಯುವುದು. ಸಾಲು ಬಿಟ್ಟು ಸಾಲಿನಲ್ಲಿ ರವದಿ ಹೊದಿಸುವುದರಿ೦ಂದ ಮಣ್ಣಿನಲ್ಲಿ ತೇವಾಂಶ ಕಾಪಾಡುವುದರ ಜೊತೆಗೆ ಕಳೆಗಳ ನಿಯಂತ್ರಣವನ್ನು ಮಾಡಬಹುದು ಮತ್ತು ಖಾಲಿ ಇರುವ ಸಾಲುಗಳಲ್ಲಿ ಬೋದು ಏರಿಸಿ ನೀರು ಹಾಯಿಸುವುದು ಸೂಕ್ತ.
ಕೆಳಗಿನ ಸ್ಥಿತಿಗಳಲ್ಲಿ ರವದಿ ಸುಡುವುದು ಮಹತ್ವದ್ದು
1.ನಾಟಿ ಕಬ್ಬು ಕೀಟ ಮತ್ತು ರೋಗಗಳ ಬಾಧೆಗೆ ತುತ್ತಾದಾಗ. (ಉದಾ:- ಸ್ಕೇಲ್ಪ ಹಿಟ್ಟು ತಿಗಣೆ)
2.ಗೆದ್ದಲು ಹುಳದ ಬಾಧೆ ಕಂಡು ಬಂದಲ್ಲಿ ಅಥವಾ ಇಲಿಗಳ ಮತ್ತು ಹೆಗ್ಗಣಗಳ ಕಾಟ ಇದ್ದಲ್ಲಿ.
3.ನೀರು ಬಸಿಯುವ ಕೊರತೆಯಿಂದಾಗಿ ಹೆಚ್ಚುವರಿ ತೇವಾಂಶದಿಂದ ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ.
4. ಸಾಲೊಡೆಯುವುದು ಮತ್ತು ಮಣ್ಣನ್ನು ಮೃದುಗೊಳಿಸುವುದು
ಬೋದುಗಳ ಎರಡು ಮಗ್ಗಲಿಗೆ ಬಲರಾಮ ಅಥವಾ ತ್ರಿಶೂಲ ನೇಗಿಲ ಸಹಾಯದಿಂದ ಸಾಲುಗಳನ್ನು ಒಡಯುವುದರ ಮೂಲಕ ಮಣ್ಣು ಸಡಿಲವಾಗಿ ಮೇಲ್ಭಾಗದ ಹಳೆಯ ಬೇರುಗಳು ಹರಿದು ಹೊಸ ಬೇರು ಬರಲು ಅನುಕೂಲವಾಗುತ್ತದೆ. ಅಲ್ಲದೇ, ನೆಲದ ಮೇಲಿರುವ ಕಬ್ಬಿನ ಭಾಗಕ್ಕೆ ಮಣ್ಣು ಏರಿಸಿದ೦ಂತಾಗುತ್ತದೆ. ಈ ರೀತಿ ಮಾಡುವುದರಿಂದ ಕೂಳೆ ಕಬ್ಬು ಹೆಚ್ಚಿಗೆ ಮರಿ ಒಡೆಯುತ್ತದೆ.
5. ಹುಸಿ ನಾಟಿಮಾಡುವುದು
ನಾಟಿ ಕಬ್ಬು ಶಿಲೀಂಧ್ರ ರೋಗಗಳಿಗೆ, ಕೀಟಗಳಿಗೆ ತುತ್ತಾಗಿ ಸರಿಯಾಗಿ ಬೆಳೆಯದೇ ಇದ್ದಲ್ಲಿ ಶೇ. 30 ಕ್ಕಿಂತ ಹೆಚ್ಚು ಹುಸಿ ಗುಣಿಗಳು ಕೂಳೆ ಕಬ್ಬಿನಲ್ಲಿ ಕಂಡು ಬರುತ್ತವೆ. ಕೂಳೆ ಕಬ್ಬಿನ ಸಾಲಿನಲ್ಲಿ 60 ಸೆಂ. ಮೀ. ಅ೦ತರದಲ್ಲಿ ಯಾವುದೇ ಕಬ್ಬಿನಸಸಿಗಳು ಇರದೇ ಹೋದರೆ, ಅಂಥ ಸ್ಥಳಗಳಲ್ಲಿ ಹುಸಿ ತುಂಬುವುದು ಅವಶ್ಯ.
ಹುಸಿ ತು೦ಬಲು ಪಾಲಿಬ್ಯಾಗ್ ಸಸಿಗಳನ್ನು ತಯಾರಿಸಬೇಕಾದಲ್ಲಿ. ಕಬ್ಬು ಕಟಾವು ಮಾಡುವ ಒಂದು ತಿ೦ಗಳು ಮಾಚತವಾ? 10 ೫ 5 ಸೆಂ. ಮೀ. ಗಾತ್ರದ ಪಾಲಿ ಬ್ಯಾಗಿನಲ್ಲಿ 1:1:1 ಪ್ರಮಾಣದಲ್ಲಿ ಮಣ್ಣು, ಉಸುಕು ಮತ್ತು ಕೊಟ್ಟಿಗೆ ಗೊಬ್ಬರ ತುಂಬಿ ಡೆ ಕಣ್ಣಿನ ಬೀಜದ ತುಂಡುಗಳನ್ನು ಕಾರ್ಬನ್‌ಡೈ ಜಿಮ್ ದಾವಣದಲ್ಲಿ ಅದ್ದಿ ಕಣ್ಣು ಮೇಲೆ ‘ಬರುವಂತೆ ಅಡ್ಡಲಾಗಿ ಪಾಲಿದ್ಯಾಗ್‌ನಲ್ಲಿ ನಾಟಿ ಮಾಡಿ ಒಂದು ತಿಂಗಳ ಸಸಿ ತಯಾರಾದ ಮೇಲೆ ಹುಸಿ ತು೦ಬಲು ಉಪಯೋಗಿಸಬೇಕು. ಒಂಟಿ ಕಣ್ಣಿನ ಸಸಿಗಳನ್ನು ಸಸಿಮಡಿಗಳಲ್ಲಿಯೂ ತಯಾರಿಸಿಕೊಳ್ಳಬಹುದು. ಸಸಿ ನಾಟಿಮಾಡುವಾಗ ಹುಸಿ ಇರುವ ಸ್ಥಳದಲ್ಲಿ ಸಣ್ಣ ಗುಣಿ ಮಾಡಿ ಅದರಲ್ಲಿ ಸ್ವಲ್ಪ ಪ್ರಮಾಣದ ಸೂಪರ್ ಫಾಸ್ಫೇಟ್ ಹರಳನ್ನು ‘ಹಾಕೆ ಪಾಲಿಬ್ಯಾಗನ್ನು ಹರಿದು ನಾಟಿಮಾಡಬೇಕು. ಕೂಳೆ ಬೆಳೆಯಲ್ಲಿ ರೋಗಪೀಡಿತ ಕೂಳೆಗಳನ್ನು ಅಗೆದು ಹುಸಿ ಗುಣಿಗಳನ್ನು ತುಂಬುವುದು ಸೂಕ್ತ.
6. ಗೊಬ್ಬರದ ನಿರ್ವಹಣೆ
ಸಾವಯವ ಗೊಬ್ಬರ : ಎಕರೆಗೆ 10 ಟನ್
(ಬೋದು ಒಡೆಯುವ ಪೂರ್ವದಲ್ಲಿ ಸಾಲಿನ ಮಧ್ಯ ಕೊಡಬೇಕು)
ರಾಸಾಯನಿಕ ಗೊಬ್ಬರ (ಎಕರೆಗೆ)
ಸಾರಜನಕ 126 ಕಿ. ಗ್ರಾಂ
ರಂಜಕ 30 ಕಿ. ಗ್ರಾಂ
ಪೋಟ್ಯಾಷ್ 75 ಕಿ. ಗ್ರಾಂ
ಹಾಕುವ ಸಮಯ ಸಾರಜನಕ ರಂಜಕ ಪೋಟ್ಯಾಷ್
ಬೋದು ಒಡೆಯುವಾಗ 46 30 26
ಬೋದು ಒಡೆದ 30 ದಿವಸಕ್ಕೆ 40 – 24
ಬೋದು ಒಡೆದ 60 ದಿವಸಕ್ಕೆ 40 26 –
ಬೋದಿನ ಎರಡು ಮಗ್ಗಲಿಗೆ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಬೇಕು ಅಥವಾ ಕೂಳೆ ಪಕ್ಕದಲ್ಲಿ 10-12 ಸೆಂ. ಮೀ. ಆಳವಾದ ರಂಧ್ರದಲ್ಲಿ ರಸಗೊಬ್ಬರ ಹಾಕಿ ಮುಚ್ಚಬೇಕು. ಸತುವು ಮತ್ತು ಕಬ್ಬಿಣ ಲಘುಪೋಷಕಾಂಶಗಳ ಕೊರತೆಯಿದ್ದಲ್ಲಿ ಸ ರಸ್ ಸಲ್ಫೇಟ್ ಶೇ. 0.25 ದ್ರಾವಣ 4+ಶೇ. 0.5 ಸತುವಿನ ಸಲ್ಫೇಟ್ ದ್ರಾವಣ.+ ಶೇ. 1 ಯೂರಿಯಾ ದ್ರಾವಣವನ್ನು ಮಿಶ್ರಣಮಾಡಿ 10 ದಿನಗಳ ಅ೦ತರದಲ್ಲಿ 5-6 ಸಲ ಸಿಂಪರಣೆ ಮಾಡಬೇಕು. ಇಲ್ಲವಾದಲ್ಲಿ ಕಬ್ಬಿಣದ ಸಲ್ಫೇಟ್ 10 ಕಿ. ಗ್ರಾ೦.+ ಸತುವಿನ ಸಲ್ಪೇಟ್ 10 ಕಿ. ಗ್ರಾಂ ಮತ್ತು 20 ಕಿ. ಗ್ರಾಂ ಸಾವಯವ ಗೊಬ್ಬರದಲ್ಲಿಮಿಶ್ರಣ ಮಾಡಿ ಪ್ರತಿ ಎಕರೆಗೆ ಮಣ್ಣಿಗೆ ಸೇರಿಸಬೇಕು.
7. ಕಳೆ ನಿಯಂತ್ರಣ
ರವದಿ ಹೊದಿಕೆ ಇರುವಲ್ಲಿ ಕಳೆಯ ಪ್ರಮಾಣ ಕಡಿಮೆ ಇರುವುದು. ಕಳೆ ಬೀಜ ಮೊಳಕೆ ಒಡೆಯುವ ಪೂರ್ವದಲ್ಲಿ ಎಕರೆಗೆ 400 ಗ್ರಾಂ. ಅಟ್ರಾಜಿನ್ | ಕಳನಾಶಕವನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿ೦ಪರಿಸಬೇಕು.
8. ನೀರು ನಿರ್ವಹಣೆ
ನಾಟಿ ಕಬ್ಬಿನ ಬೆಳೆಗೆ ತಿಳಿಸಿದಂತೆ ಕ್ರಮಗಳನ್ನು ಅನುಸರಿಸಬೇಕು.
9. ಸಸ್ಯ ಸಂರಕ್ಷಣಾ ಕ್ರಮಗಳು
ನಾಟಿ ಕಬ್ಬಿನ ಬೆಳೆಗೆ ತಿಳಿಸಿದಂತೆ ಅನುಸರಿಸಬೇಕು.
ಇಳುವರಿ
ಚೆನ್ನಾಗಿ ನಾಟಿ ಕಬ್ಬಿನ ನಿರ್ವಹಣೆ ಹಾಗೂ ಮೇಲೆ ತಿಳಿಸಿದ ಬೆಳೆಯ ನಿರ್ವಹಣೆಯಿಂದ ಎಕರೆಗೆ 32-40 ಟನ್ ಕೂಳೆ ಕಬ್ಬಿನ ಇಳುವರಿ ಪಡೆಯಬಹುದು.