Featured NewsKrushi

ಇಂದು ರಾಜ್ಯ ಸರ್ಕಾರದ ಬಜೆಟ್:ರೈತ ವರ್ಗಕ್ಕೆ ಭರ್ಜರಿ ಕೊಡುಗೆ ಸಾಧ್ಯತೆ

ಇಂದು 2019-20ನೇ ಸಾಲಿನ ಆಯವ್ಯಯವನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕುಮಾರಸ್ವಾಮಿ ಮಂಡಿಸಲಿದ್ದಾರೆ.

ರಾಜ್ಯದ 22 ಲಕ್ಷ ರೈತರು ಆರ್ಥಿಕ ನೆರವಿಗೆ ಸಹಕಾರ ವಲಯವನ್ನು ಅವಲಂಬಿಸಿದ್ದಾರೆ. ಉಳಿದವರು ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗುತ್ತಿದ್ದಾರೆ. ಹೊಸ ಕಾರ್ಯಕ್ರಮಗಳ ಮೂಲಕ ಇನ್ನೂ 10 ಲಕ್ಷದಿಂದ 15 ಲಕ್ಷ ರೈತರನ್ನು ಸಹಕಾರಿ ಕ್ಷೇತ್ರದ ಕಡೆಗೆ ಸೆಳೆಯಲು ಅವರು ಚಿಂತನೆ ನಡೆಸಿದ್ದಾರೆ. ಹಾಗಾಗಿ ರೈತ ವರ್ಗಕ್ಕೆ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಾಂಶಗಳು

  • ‘ಯಶಸ್ವಿನಿ’ ಆರೋಗ್ಯ ಯೋಜನೆ ಮರು ಜಾರಿ ಬಹುತೇಕ ಖಚಿತ. ಕೇಂದ್ರದ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ‘ಆಯುಷ್ಮಾನ್‌ ಕರ್ನಾಟಕ ಆರೋಗ್ಯ ಯೋಜನೆ’ಯಡಿ ಎರಡನೇ ಹಂತದ ಚಿಕಿತ್ಸೆಗಾಗಿ ‘ಯಶಸ್ವಿನಿ’ ಯೋಜನೆ ಜಾರಿ ಮಾಡಲಿದೆ.
  • ಮೀಟರ್‌ ಬಡ್ಡಿಯಿಂದ ಬಡವರಿಗೆ ರಕ್ಷಣೆ ನೀಡಲು ‘ಋಣ ಮುಕ್ತ ಪರಿಹಾರ ಕಾಯ್ದೆ’.
  • ಬಿಪಿಎಲ್‌ ಕುಟುಂಬಗಳು ಕೈಸಾಲ ಪಡೆದು ಸಂಕಷ್ಟಕ್ಕೆ ಸಿಲುಕದಂತೆ ಮಾಡಲು ‘ದೀನ ಬಂಧು’ ಹೆಸರಿನಲ್ಲಿ ಯೋಜನೆ 
  • ಇತ್ತೀಚೆಗೆ ನಿಧನರಾದ ಸಿದ್ಧಗಂಗಾ ಶ್ರೀಗಳ ಹೆಸರು ಚಿರಸ್ಥಾಯಿ ಮಾಡಬೇಕೆಂಬ ಉದ್ದೇಶದಿಂದ  ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ‘ಸಿದ್ದಗಂಗಾ ಶ್ರೀ ಅನ್ನ ದಾಸೋಹ’ ಎಂದು ಪುನರ್‌ನಾಮಕರಣಗೊಳಿಸಿ ಘೋಷಿಸುವ ಪ್ರಸ್ತಾವವೂ ಇದೆ.
  • ಕೇಂದ್ರದ ಫಸಲ್ ಬಿಮಾ ಯೋಜನೆಯ ವಿರುದ್ದ ವರ್ಗ ಮುನಿಸಿಕೊಂಡಿರುವ ರೈತ ಸಮೂಹಕ್ಕೆ ಆಸರೆಯಾಗಲು, ರಾಜ್ಯ ಸರ್ಕಾರದಿಂದಲೇ ವಿಮಾ ಯೋಜನೆ ಆರಂಭಿಸುವ ಪ್ರಸ್ತಾವ ಇದೆ, ಇದಕ್ಕಾಗಿ ಬಿಹಾರ ರಾಜ್ಯದ ಮಾದರಿಯಲ್ಲಿ ಪ್ರತ್ಯೇಕ ನೋಡಲ್ ಏಜೆನ್ಸಿ ಹುಟ್ಟು ಹಾಕುವ ಬಗ್ಗೆ ಪ್ರಸ್ತಾಪಿಸಲಿದ್ದಾರೆ.
Also read  ಹತ್ತು ಸಾವಿರ ಗಡಿ ದಾಟಿದ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ : 8 ವರ್ಷದಲ್ಲಿ ಇದು ದಾಖಲೆಯ ಏರಿಕೆ !

Leave a Reply