Featured NewsKrushi

ಅಲೂಗಡ್ಡೆ ಬೆಳೆಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ

ಆಲೂಗೆಡ್ಡೆಯು ಒಂದು ಮುಖ್ಯ ವಾಣಿಜ್ಯ ತರಕಾರಿ ಬೆಳೆಯಾಗಿದೆ. ಈ ಬೆಳೆಯನ್ನು ಮಳೆಯಾಶ್ರಿತ ಮುಂಗಾರು ಬೆಳೆಯಾಗಿ ಮತ್ತು ನೀರಾವರಿ ಸೌಲಭ್ಯ ವಿದ್ದಲ್ಲಿ ಹಿ೦ಗಾರು ಹಂಗಾಮಿನಲ್ಲಿ ಬೆಳೆಯುತ್ತಾರೆ.

ಧಾರವಾಡ, ಬೆಳಗಾವಿ,ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಆಶ್ರಯದಲ್ಲಿ ಮತ್ತು ಕೋಲಾರ ಹಾಗೂ ಬೆ೦ಗಳೂರು ಜಿಲ್ಲೆಗಳಲ್ಲಿ ನೀರಾವರಿಯಲ್ಲಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಕ್ಟೇರ್‌ವಾರು ಇಳುವರಿ ಕೇವಲ 19 ಟನ್‌ಗಳಷ್ಟು ಮಾತ್ರ ಇದ್ದು, ಸರಾಸರಿ ಹೆಕ್ಟೇರ್‌ವಾರು ಇಳುವರಿಗಿ೦ತ (25 ಟನ್‌) ಕಡಿಮೆ ಇರುತ್ತದೆ. ಈ ಇಳುವರಿಯು ಕಡಿಮೆಯಾಗಲು ಪ್ರಬಲ ಕಾರಣವಾಗಿರುವ ರೋಗ ಮತ್ತು ಕೀಟಗಳ ಭಾದೆಗಳನ್ನು ಸರಿಯಾದ ಗುರುತಿಸುವಿಕೆ ಹಾಗೂ ಅವುಗಳ ನಿರ್ವಹಣೆ ತಿಳಿದುಕೊ೦ಡು ಹತೋಟಿ ಮಾಡಿದ್ದಲ್ಲಿ ಹೆಚ್ಚು ಇಳುವರಿ ಪಡೆಯಬಹುದು.

ಇವುಗಳು ಪ್ರಮುಖ ರೋಗ ಹಾಗೂ ಕೀಟಗಳಾಗಿವೆ

 • ಮೊದಲ ಅಂಗಮಾರಿ ರೋಗ,
 • ಕೊನೆ ಅಂಗಮಾರಿ ರೋಗ.
 • ಬೂದಿ ರೋಗ,
 • ದುಂಡಾಣು ಸೊರಗು ರೋಗ,
 • ಎಲೆ ಮುದುಡು ರೋಗ ಹಾಗೂ ಸಸ್ಯ ಹೇನುಗಳು

1.ಮೊದಲ ಅಂಗಮಾರಿ ರೋಗ / ಅನ್ಲಿಬ್ಲೈಟ್‌ (ಆಲ್ವನ್ನೇರಿಯ ಸೊಲಾನಿ)

ಲಕ್ಷಣ:

ಎಲೆ ಹಾಗೂ ಕಾಂಡದ ಮೇಲೆ ಕಪ್ಪುಮಿಶ್ರಿತ ಕಂದು ಬಣ್ಣದ ಚುಕ್ಕೆಗಳ ಒಳಗೆ ವರ್ತಲಾಕಾರದ ಗೀರುಗಳು ಕಾಣಬಹುದು . ಚುಕ್ಕೆಗಳು ಒಂದಕ್ಕೊಂದು ಸೇರಿ ಸುಟ್ಟ ಮಚ್ಚೆಯಂತೆ ಕಾಣಿಸಿಕೊಳ್ಳುತ್ತವೆ. ಗಡ್ಡೆಗಳ ಮೇಲೂ ಸಹ ಕಪ್ಪು ಬಣ್ಣದ ಚುಕ್ಕೆಗಳು ಕಾಣುತ್ತವೆ.

ಹತೋಟಿ

 • ಸ್ವಚ್ಚ ಬೇಸಾಯ ಅನುಸರಿಸಬೇಕು.
 • 2. 2.5 ಗ್ರಾಂ ಮ್ಯಾಂಕೋಜೆಬ್‌ ಅಥವಾ ಜೈನಬ್‌ಅನ್ನು ಪ್ರತಿ ಲೀಟರ್‌ ನೀರಿಗೆ ಬೆರಸಿ 15 ದಿನಕ್ಕೊಮ್ಮೆಯಂತೆ ಸಿಂಪಡಿಸಬೇಕು.

2. ಕೊನೆಯ ಅಂಗಮಾರಿ / ಲೇಟ್‌ ಬ್ಲೈಟ್‌

ಲಕ್ಷಣ :

ಈ ರೋಗವು ಮೋಡ ಕವಿದ ವಾತಾವರಣ ಹಾಗೂ ಹಾಗೂ ತುಂತುರು ಮಳೆಯಾದಲ್ಲಿ ಉಲ್ಬಣವಾಗುವುದು. ರೋಗಕ್ಕೆ ತುತ್ತಾದ ಗಿಡಗಳ ಎಲೆಯ ತುದಿಯ ಕೆಳಭಾಗದಲ್ಲಿ ನೀರಿನಿಂದ ತೊಯ್ದಂತಹ ಮಚ್ಜೆಗಳು ಕ೦ಡು ಬ೦ದು, ಕ್ರಮೇಣ ಬಳಿ ಬೂಸ್ಟ್‌ ಬೆಳೆಯುತ್ತದೆ. ಈ ಎಲೆಯ ಮೇಲ್ಭಾಗದಲ್ಲಿ ತಿಳಿಕೆಂಪು ಅಥವಾ ಕಪ್ಪು ಮಚ್ಚೆಗಳು ಕಂಡು ಬರುತ್ತವೆ. ರೋಗದ ತೀವ್ರತೆಗೆ ಅನುಗುಣವಾಗಿ ಎಲೆಯ ತೊಟ್ಟು ,ಕಾ೦ಡಗಳ ಮೇಲೂ ಈ ರೀತಿಯ ಚುಕ್ಕೆಗಳು ಕಾಣಿಸಿಕೊಂಡು ಎಲೆಗಳು ಕಪ್ಪಾಗಿ ಜೋತು ಬೀಳುತ್ತದೆ .

ಹತೋಟಿ

ಬೀಜೋಪಚಾರ

 • ರೋಗರಹಿತ ಬಿತ್ತನೆ ಗಡ್ಡೆಗಳನ್ನು ಆಯ್ದುಕೊಳ್ಳಬೇಕು.
 • ಕತ್ತರಿಸಿದ ಬೀಜದ ಗಡ್ಡೆಯನ್ನು ಸ೦ಯುಕ್ತ ಶಿಲೀ೦ಂದ್ರನಾಶಕವಾದ ಮೆಟಲ್ಯಾಕ್ಸಿಲ್‌ + ಮ್ಯಾಂಕೋಜೆಬ್‌ 2 ಗ್ರಾಂ ಪ್ರತಿ ಲೀಟರ್‌ ನೀರಿನಲಿ ಕರಗಿಸಿ ತಯಾರಿಸಿದ ಪ್ರಮುಖ ದ್ರಾವಣದಲ್ಲಿ 5 ನಿಮಿಷ ಅದ್ದಿ ಉಪಚರಿಸಿ ಬಿತ್ತನೆ ಮಾಡಬೇಕು.
 • ಗೆಡ್ಡೆಗಳನ್ನು ಬಿತ್ತನೆ ಮಾಡುವ ಮೊದಲು ಭೂಮಿಗೆ ಜೈವಿಕ ರೋಗನಾಶಕಗಳಾದ ಟ್ರೈಕೋಡರ್ಮ 1 ಕೆ.ಜಿ. + ಸುಡೋಮೊನಾಸ್‌ 1 ಕೆ.ಜಿ. + 5 ಕೆ.ಜಿ. ಬೇವಿನ ಹಿಂಡಿಯನ್ನು 45 ಕೆ.ಜಿ. ಕೊಟ್ಟಿಗೆ ಗೊಬ್ಬರಕ್ಕೆ ಹಾಕಿ ಮೂರು ದಿನಗಳಿಗೊಮ್ಮೆ ನೀರು ಚಿಮುಕಿಸಿ 
  15 ದಿನಗಳವರೆಗೆ ನೆರಳಿನಲ್ಲಿ ಶೇಖರಿಸುವುದರಿ೦ಂದ ಜೀವಾಣುಗಳು ವೃದ್ಧಿಯಾಗುತ್ತದೆ. ತದನಂತರ ಈ ಮಿಶ್ರಣವನ್ನು 1 ಟನ್‌ ತಿಪ್ಪೆಗೊಬ್ಬರಕ್ಕೆ ಮಿಶ್ರಣಮಾಡಿ ಭೂಮಿಗೆ ಹಾಕಿ ಬಿತ್ತುವುದರಿಂದ ರೋಗವಲ್ಲದೆ ಮಣ್ಣಿನಿಂದ ಹರಡುವ ರೋಗಗಳನ್ನು ಹತೋಟಿಯಲ್ಲಿ ಇಡಬಹುದು.
 • ಸೂಕ್ತವಾದ ಶೀಲೀ೦ದ್ರನಾಶಕಗಳ ಬಳಕೆ.
  ಮ್ಯಂಕೋಜೆಬ್‌ ಅಥವಾ ಮೆಟರ್ಯಾಮ್‌ 2.5 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರಸಿ ಸಿ೦ಪಡಿಸುವುದು.
  ಇದಾದ 5 ದಿನಗಳ ನ೦ತರ ಮೆಟಾಲಾಕ್ಸಿಲ್‌ + ಮ್ಯಾಂಕೋಜಿಬ್‌ ಅಥವಾ ಸೈಮಾಕ್ಸಿನಿಲ್‌ + ಮ್ಯಾಂಕೋಜೆಬ್‌ 2 ಗ್ರಾಂ ಪ್ರತಿ ಲೀಟರ್‌ ನೀರಿನೊಂದಿಗೆ ಸಿಂಪಡಿಸುವುದು.
 •  ರೋಗ ಕಡಿಮೆಯಾಗದಿದ್ದಲ್ಲಿ ಇದೇ ಸಿಂಪರಣೆಯನ್ನು ಪುನವರ್ತಿಸದೇ ಡೈಮೆಥೋಮಾರ್ಫ್‌ 1 ಗಾಂ ಜೊತೆಗೆ ಮೆಟರ್ಯಾಮ್‌ 2 ಗ್ರಾಂ ಒಂದು ಲೀಟರ್‌ ನೀರಿಗೆ ಬೆರೆಸಿ ಎಲೆ ಹಾಗೂ ಕಾಂಡದ ಎಲ್ಲಾ ಭಾಗಗಳನ್ನು ನೆನೆಯುವಂತೆ ಸಿ೦ಪಡಿಸಬೇಕು.

3.ಬೂದಿ ರೋಗ

ಲಕ್ಷಣ:

ಈ ರೋಗವು ಎಲೆ ಕೆಳಬಾಗದಲ್ಲಿ ಬೂದಿಯಂತೆ ಕಾಣಿಸಿಕೊಂಡು ಇನ್ನಿಷ್ಟು ಉಲ್ಬಣಗೊಂಡಾಗ ಎಲೆಗಳ ಮೇಲ್ಭಾಗದಲ್ಲಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ವಾತಾವರಣದಲ್ಲಿನ ತೇವಾಂಶ ಹೆಚ್ಚಾಗಿದ್ದು ಹಗಲಿನಲ್ಲಿ ಉಷ್ಣಾಂಶವು ಹೆಚ್ಚಾಗಿರುವಾಗ ಈ ರೋಗದ ತೀವತೆ ಹೆಚ್ಚಾಗುತ್ತದೆ.

ಹತೋಟಿ
ಕಾರ್ಬಡೈಜಿಮ್‌ 1 ಗ್ರಾಂ ಅಥವಾ ಡಿನೋಕ್ಯಾಪ್‌ 48 ಇ.ಸಿ. 1 ಎಂ.ಎಲ್‌. ಅಥವಾ ಹಕ್ಸಾಕೋನಜಾಲ್‌ 1.5 ಎಂ.ಎಲ್‌ ಪ್ರತಿ ಲೀಟರ್‌ ನೀರಿನೊಂದಿಗೆ ಸಿ೦ಪಡಿಸಿ.

4. ದುಂಡಾಣು ಸೊರಗು ರೋಗ

ಲಕ್ಷಣ:

ಮೊದಲು ಎಲೆಗಳು ಬಾಡುತ್ತವ. ಮುಂದಿನ ದಿನಗಳಲ್ಲಿ ಗಿಡಗಳು ಪೂರ್ತಿಯಾಗಿ ಸಾಯುವುದನ್ನು ಕಾಣಬಹುದು. ಬಾಡಿದ ಗಿಡದ ಬೇರುಗಳನ್ನು ಉದ್ದವಾಗಿ ಸೀಳಿದಾಗ ಒಳಭಾಗ ಕಂದು ಬಣ್ಣಕ್ಕೆ ತಿರುಗಿರುತ್ತದೆ. ರೋಗ ಭಾದಿತ ಗಡ್ಡೆಗಳನ್ನು ಕತ್ತರಿಸಿ ವೀಕ್ಷಿಸಿದರೆ ಕಂಡು ಬಣ್ಣದ ಬಳೆಯಾಕಾರದ ಮಚ್ಚೆ ಕಾಣುತದೆ .

ಹತೋಟಿ

 • ಸ್ವಚ್ಚ ಬೇಸಾಯವನ್ನು ಅನುಸರಿಸಬೇಕು.
 • ಆಲೂಗೆಡ್ಡೆ ಕಟಾವಿನ ನ೦ತರ ಬೆಳೆ ಪರಿವರ್ತನೆಯಾಗಿ ಮುಸುಕಿನ ಜೋಳ, ಬೀನ್ಸ್‌ ಬೆಳೆಗಳನ್ನು ಬೆಳೆಯಬಹುದು. (ಆಲೂಗೆಡ್ಡೆ ಜಾತಿಗೆ ಸೇರಿದ ಟೊಮ್ಯಾಟೊ, ಬದನೆ,ಮೆಣಸಿನಕಾಯಿ ಬೆಳಯುವುದು ಸೂಕ್ತವಲ್ಲ).
 • ರೋಗರಹಿತ ಗೆಡ್ಡೆಗಳನ್ನು ಆಯ್ಕೆಮಾಡಬೇಕು.
 • ಕತ್ತರಿಸಿದ ಬೀಜದ ಗೆಡ್ಡೆಗಳನ್ನು 0.5 ಗ್ರಾಂ ಸ್ಪೆಪ್ಪೊಸೈಕ್ತಿನ್‌ ಅನ್ನು 1 ಲೇಟರ್‌ ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ 5 ನಿಮಿಷ ಅದ್ದಿ ನಾಟಿ ಮಾಡಬೇಕು.
 •  ರೋಗದ ಗಿಡಗಳನ್ನು ಕಿತ್ತು ನಾಶಪಡಿಸುವುದು.
 • ರೋಗದ ಗಿಡಗಳಿಗೆ 0.5 ಗ್ರಾಂ ಸ್ಪೆಪ್ಟೊಸೈಕಿನ್‌ ಜೊತೆಗೆ 3 ಗ್ರಾಂ ತಾಮ್ರದ ಆಕ್ಷಿಕ್ಲೋರೈಡ್‌(ಲಿ೦೦) ಒಂದು ಲೀಟರ್‌ ನೀರಿನಲ್ಲಿ ಬೆರಸಿ ದ್ರಾವಣವನ್ನು ಗಿಡದ ಬುಡಕ್ಕೆ ನೆನೆಯುವಂತೆ ಹಾಕುವುದು.

5. ಸಸ್ಯಹೇನು / ನಂಜು ರೋಗ

ಈ ರೋಗವು ಎಲ್ಲಾ ಕಾಲದಲ್ಲಿ ಕಂಡು ಬರುತ್ತದೆ. ಆದರೆ ಬೇಸಿಗೆಂರುಲ್ಲಿ ತೀವ್ರತೆ ಹೆಚ್ಚಾಗಿರುತ್ತದೆ. ರೋಗದ ಗಿಡಗಳು ಮುದುಡಿಕೊಳ್ಳುತ್ತವೆ ಹಾಗೂ ಗಿಡದ ಬೆಳವಣಿಗೆ ಕು೦ಠಿತಗೊಂಡು ಗಡ್ಡೆಗಳು ಕಟ್ಟುವುದಿಲ್ಲ.

ಹೇನುಗಳು ಎಲೆ ಕೆಳಭಾಗದಿಂದ ರಸವನ್ನು ಹೀರುವುದರಿಂದ ಎಲೆಗಳು ಕೆಳಮುಖವಾಗಿ ಮುರುಟಾಗುತ್ತವೆ. ಕಪ್ಪು ಬೂಷ್ಟೆ ಬೆಳವಣಿಗೆಯಾಗುತ್ತದೆ. ನ೦ಜು ರೋಗವನ್ನು ಸಹ ಹರಡುತ್ತದೆ.

ಹತೋಟಿ

 • ಪ್ರಾರಂಭಿಕ ಹಂತದಲ್ಲಿ ಗಿಡಗಳನ್ನು ಗುರುತಿಸಿ ನಾಶಮಾಡುವುದು.
 •  ಅ೦ತರ್‌ವ್ಯಾಪ್ತಿ ಕೀಟನಾಶಕಗಳಾದ ಡೈಮಿಥೋಯೆಟ್‌ 30 ಇ.ಸಿ.,1.7 ಎಂ.ಎಲ್‌. ಅಥವಾ 0.5 ಎಂ.ಎಲ್‌. ಪಾಸ್ಪೋಮಿಡಾನ್‌ 85 ಡಬ್ಬ್ಯೂ.ಎಸ್‌.ಪಿ. ಪ್ರತಿ ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಿ.

6. ಹಳದಿ ನುಸಿ

ಈ ಕೀಟವು ಎಲೆಗಳಿಂದ ರಸವನ್ನು ಹೀರುತ್ತವೆ. ಇದರಿಂದ ಎಲೆಗಳು ಕೆಳಭಾಗಕ್ಕೆ ಮುರುಟಾಗುತದೆ. ಮೊಗ್ಗುಗಳು ,ಎಲೆ ಭಾಗಗಳು ಗಟ್ಟಿಯಾಗಿ ವಿಕಾರವಾಗುತ್ತದೆ.ಕೀಟದ ಹಾವಲಿ ಜಾಸ್ತಿಯಾದಾಗ ಎಲೆಗಳ ಕೆಳಗೆ ತಾಮದ ಬಣ್ಣ ಬಂದು ಗಿಡಗಳು ಬಾಡುತವೆ

ಹತೋಟಿ

 •  ಸೂಕ್ತವಾದ ನುಸಿನಾಶಕಗಳನ್ನು ಸಿಂಪಡಿಸಬೇಕು. ಡೈಕೋಫಾಲ್ 2.5 ಎಂ.ಎಲ್‌. ಅಥವಾ ಪ್ರೊಪರ್‌ಗೈಟ್‌ 3 ಎಂ.ಎಲ್‌. ಪ್ರತಿ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ, ಚಿಕ್ಕಮಗಳೂರು
ದೂರವಾಣಿ : 08263-228198

Also read  ಹನಿ ನೀರಾವರಿ ಪದ್ಧತಿಯಲ್ಲಿ ಕಾಫಿ ಬೆಳೆ

Leave a Reply