ಉಡುಪಿ:ಕರಾವಳಿಯಲ್ಲಿ ಬಿರುಸುಗೊಂಡ ಮಳೆ, ನಾಟಿ ಕಾರ್ಯ ಚುರುಕು
ಕರಾವಳಿಯಲ್ಲಿ ಈ ಬಾರಿ ಮುಂಗಾರು ಮಳೆ ಬೇಗನೆ ಆರಂಭಗೊಂಡಿದ್ದು, ರೈತನ ಕೃಷಿ ಚಟುವಟಿಕೆಯೂ ಸಹ ವೇಗ ಪಡೆದಿದ್ದರು, ನಾಟಿ ಕಾರ್ಯ ಚುರುಕಾಗಿದೆ.
ಬ್ರಹ್ಮಾವರ ಮತ್ತು ಕೋಟ ಹೋಬಳಿಯ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಆಧುನಿಕ ಯಂತ್ರೋಪಕರಣಗಳ ಜತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯಾದ ಕೋಣದ ಮೂಲಕ ಉಳುಮೆ, ನಾಟಿ ಕಾರ್ಯ ನಡೆಯುತ್ತಿದೆ. ಸ್ಥಳೀಯ ಕಾರ್ಮಿಕರ ಕೊರತೆಯ ಕಾರಣ ಪರ ಜಿಲ್ಲೆಗಳ ಕಾರ್ಮಿಕರಿಂದ ನಾಟಿ ಕಾರ್ಯವನ್ನು ಮಾಡಲಾಗುತ್ತಿದೆ.