ಕಾಳುಮೆಣಸಿನಲ್ಲಿ ಅನುಸರಿಸಬೇಕಾದ ಮಾಸಿಕ ಕಾರ್ಯಚಟುವಟಿಕೆಗಳು
ಜನವರಿ
- ಉತ್ತಮ ಗುಣಮಟ್ಟಕ್ಕಾಗಿ ಪೋಟ್ಯಾಷಿಯಂ ನೈಟ್ರೇಟ್ (1 ಕೆ.ಜಿ. 200 ಲೀಟರ್ ನೀರಿಗೆ) ದ್ರಾವಣವನ್ನು ಗೊಂಚಲುಗಳ ಮೇಲೆ ಸಿಂಪಡಿಸುವುದು.
ಫೆಬ್ರವರಿ
- ಬುಡದಲ್ಲಿ ಬೆಳೆದಿರುವ ಹರಿಯುವ ಬಳ್ಳಿಗಳನ್ನು ಕತ್ತರಿಸಿ ತೆಗೆದು ನರ್ಸರಿ ಬಳಸುವುದು.
ಮಾರ್ಚ್
- ಕಾಳು ಮೆಣಸಿನ ಕಟಾವನ್ನು ಪ್ರಾರಂಭಿಸುವುದು
ಏಪ್ರಿಲ್
- ಪೂರ್ತಿ ಒಣಗಿರುವ ಬಳ್ಳಿಗಳನ್ನು ಕಿತ್ತು ಸುಟ್ಟು ಹಾಕುವುದು.
- ಮೊದಲ ಮಳೆಯ ನಂತರ ಬಳ್ಳಿಗಳ ಬುಡಕ್ಕೆ 250 ಗ್ರಾಂ ಸುಣ್ಣವನ್ನು ಕೊಡುವುದು.
- ಬಳ್ಳಿಗಳಿಗೆ 40-50 ಲೀಟರ್ ನಷ್ಟು ನೀರನ್ನು ಬಳ್ಳಿಯ ಬುಡಕ್ಕೆ ಕೊಡುವುದು.
ಮೇ
- ಅತಿಯಾಗಿ ನೆರಳಿರುವ ಮರದ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
- ಪ್ರತಿ ವಾರಕ್ಕೊಮ್ಮೆ ಪ್ರತಿ ಬಳ್ಳಿಗೆ 40-50 ಲೀಟರ್ ನಷ್ಟು ನೀರು ಕೊಡುವುದು.
- ಪ್ರತಿ ಬಳ್ಳಿಗೆ 20 ಗ್ರಾಂ ಘೋರೇಟ್ ಹರಳುಗಳನ್ನು ತಿಡವ ಬುಡಕ್ಕೆ ಹಾಕುವುದು.
- 1 ಕೆ.ಜಿ. 19:19:19, 100 ಗ್ರಾ೦ ಬೋರಾನ್, 250 ಗ್ರಾಂ ಸತುವಿನ ಸಲ್ಫೇಟ್, 200 ಗ್ರಾ೦ ಮೆಗ್ನಿಷಿಯಂ ಸಲ್ಫೇಟ್ 200 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಬಳ್ಳಿಗಳಿಗೆ ಸಿಂಪಡಿಸುವುದು.
ಜೂನ್
- 75:125:150 ಗ್ರಾಂ ಸಾ.ರಂ.ಪೋ ರಸಾಯನಿಕ ಗೊಬ್ಬರವನ್ನು ಬುಡಕ್ಕೆ ಹಾಕುವುದು.
- ಮೊದಲ ವಾರದಲ್ಲಿ ಬಳ್ಳಿಯ ಬುಡಕ್ಕೆ 50 ಗ್ರಾಮ ಟ್ರೈಕೋಡರ್ಮಾ ಮತ್ತು 25 ಗ್ರಾಂ ಮೈಕ್ರೋಬಿಯಲ್ ಕನ್ಸರ್ಷಿಯಂ,0.5 ಕೆ.ಜಿ. ಬೇವಿನ ಹಿಂಡಿಯೊಂದಿಗೆ ಮಿಶ್ರ ಮಾಡಿ ಹಾಕುವುದು.
ಜುಲೈ
- ಶೇ. 1% ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು
ಆಗಸ್ಟ್
- ಶೀಘ್ರ ಸೊರಗು ರೋಗ ಲಕ್ಷಣಗಳು ಕಂಡ ಬಳ್ಳಿಗಳಿಗೆ ಸಿ.ಓ.ಸಿ. 3 ಗ್ರಾಂ ಪ್ರತೀ ಲೀಟರ್ ನೀರಿಗೆ ಅಥವಾ ಮೆಟಲ್ಯಾಕ್ಸಿಲ್- ಮ್ಯಾಂಕೋಜೆಬ್ 2 ಗ್ರಾಂ ಪ್ರಿ ಲೀಟರ್ ನೀರಿಗೆ ಸಿಂಪಡಿ
ಸೆಪ್ಟೆಂಬರ್-ಅಕ್ಟೋಬರ್
- 2ನೇ ಬೋರ್ಡೋ ಸಿಂಪಡನೆ ಶೇ. 1% ರಂತೆ
ಗೊಬ್ಬರ 75:125:150 ಗ್ರಾಂ ಸಾ.ರಂ.ಪೋ. ಪ್ರತಿ ಬಳ್ಳಿಗೆ ಹಾಕುವುದು
ನವೆಂಬರ್
- ನೀರಿನಲ್ಲಿ ಕರಗುವ 19:19:19 ಗೊಬ್ಬರ 5 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಸಿ೦ಪಡಿಸುವುದು
ಡಿಸೆಂಬರ್
- ಮಳೆಯನ್ನು ಆಧರಿಸಿ ನೀರನ್ನು ಬಳ್ಳಿಯ ಬುಡಕ್ಕೆ ಕೊಡಬೇಕು.