CoffeeFeatured News

ಮಲೆನಾಡಲ್ಲಿ ಆತಂಕ ಸೃಷ್ಟಿಸುತಿರುವ ಕಾಫಿ ಬೆಳೆಗಾರರ ನೆಚ್ಚಿನ ಸಿಲ್ವರ್ ಮರ

ಎಂತಹ ಮಳೆ-ಗಾಳಿಗೂ ಜಗ್ಗದ-ಬಗ್ಗದ ಕಾಫಿತೋಟ,ಬೆಟ್ಟ-ಗುಡ್ಡಗಳು ಕೊಚ್ಚಿ ಹೋಗಲು ಸಿಲ್ವರ್ ಮರಗಳೇ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ವರ್ಷದ ಮಹಾ ಜಲಪ್ರಳಯದ ವೇಳೆ ಅತಿ ಹೆಚ್ಚು ತೋಟ, ಗ್ರಾಮಗಳಿಗೆ ಹಾನಿಯುಂಟಾಗಿರೋದು ಸಿಲ್ವರ್ ಮರಗಳ ಹಾಸು-ಪಾಸಿನದ್ದೇ ಬಹುಪಾಲು ಅನ್ನೋದು ಗಮನಾರ್ಹ.

ಇನ್ನು ಮಲೆನಾಡಲ್ಲಿ ಕಾಡು ಜಾತಿಯ ಮರಗಳಿರುವ ಪ್ರದೇಶಗಳಲ್ಲಿ ಅನಾಹುತವಾಗಿರುವುದು ತೀರಾ ವಿರಳ. ಹೀಗಿರುವಾಗ, ಸ್ವಿಲ್ವರ್ ಮರಗಳಿಂದ ಭವಿಷ್ಯದಲ್ಲಾಗೋ ಅನಾಹುತಗಳನ್ನ ಮಲೆನಾಡಿಗರು ಯೋಚಿಸಬೇಕಾಗಿದೆ. ಭೂಮಿಯ ಆಳಕ್ಕೆ ಬೇರು ಬಿಡದ ಸಿಲ್ವರ್ ಮರಗಳು, ಮಣ್ಣು ಸವಕಳಿ ತಡೆಯುವಲ್ಲಿ,ಭೂ ಸಡಿಲಿಕೆ ಹಿಡಿದಿಟ್ಟುಕೊಳ್ಳುವಲ್ಲಿ ಸೋತಿದೆ.ಬೆಳೆಯ ಫಲವತ್ತತೆಗೂ ಇದರ ಸಹಕಾರ ಶೂನ್ಯ.ಹಣದಾಸೆಗೆ ಸಿಲ್ವರ್ ಬೆಳೆದ ಕಾಫಿ ತೋಟದ ಮಾಲೀಕರಿಗೆ ಅದೇ ಸಿಲ್ವರ್ ಮರಗಳೇ ತೋಟಗಳ ವಿನಾಶಕ್ಕೆ ಕಾರಣವಾಗಿರುವುದು ಚರ್ಚೆಗೆ ಕಾರಣವಾಗಿದೆ.

ಪಶ್ಚಿಮಘಟ್ಟ ವ್ಯಾಪ್ತಿಯ ಬಹುತೇಕ ಭಾಗದ ಕಾಫಿ ತೋಟಗಳಲ್ಲಿ ಶೇ.67ರಷ್ಟು ಅಪಾಯಕಾರಿ ಸಿಲ್ವರ್ ಮರಗಳು ಸ್ವದೇಶಿ ಮರಗಳ ಸ್ಥಾನವನ್ನ ಆಕ್ರಮಿಸಿಕೊಂಡಿರೋದು ದುರಂತ.ಮಲೆನಾಡಿಗರು,ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಕುರಿತು ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

“ಕಾಡು ಜಾತಿಗಳು ಮರಗಳಿಗೆ ಭೂ ಕುಸಿತ ತಡೆಯುವ ಶಕ್ತಿ ಇರ್ತಿತ್ತು, ಈಗ ಬೆಳೆಯುತ್ತಿರುವ ಸಿಲ್ವರ್ ಮರಗಳಿಗೆ ಆ ಶಕ್ತಿ ಇಲ್ಲ, ಹಾಗಾಗಿ ನಾವು ಕಾಡನ್ನು ಉಳಿಸುವಂತಹ ಕೆಲಸ ಮಾಡಬೇಕು, ಜನರು ಎಚ್ಚೆತ್ತಕೊಳ್ಳಬೇಕು”-ಮಹೇಶ್,ಗಣಿ ಮತ್ತು ಭೂ ವಿಜ್ಞಾನಿ .

ಲಾಭದಾಸೆಗೆ ಮಲೆನಾಡ ಮಣ್ಣಲ್ಲಿ ಬೆಳೆದು ನಿಂತಿರೋ ಸಿಲ್ವರ್ ಮರಗಳ ಅಸಲಿಯತ್ತು ಸರ್ಕಾರಕ್ಕೂ ಗೊತ್ತು. ಆದರೂ, ಹಗಲುಗುರುಡಾರಾಗಿದ್ದಾರಷ್ಟೇ. ಯಾಕಂದ್ರೆ, ರಾಜ್ಯ-ದೇಶದ ಹಲವು ರಾಜಕಾರಣಿಗಳ ತೋಟ ಕಾಫಿನಾಡಲ್ಲಿದ್ದು, ಅಲ್ಲಿ ಅವರು ಬೆಳೆದಿರೋದು ಅದೇ ಸಿಲ್ವರ್ ಮರಗಳನ್ನ. ಎಲ್ಲಾ ಗೊತ್ತಿದ್ದು ಸರ್ಕಾರ ಕಣ್ಮುಚ್ಚಿ ಕುಳಿತಿರೋದ್ರಿಂದ ಇಂದು ಮಲೆನಾಡಿಗೆ ಈ ಸ್ಥಿತಿ ಬಂದಿರೋದ್ರಲ್ಲಿ ಅನುಮಾನವಿಲ್ಲ.

Also read  ಬರದಿಂದಾಗಿ ವಿಯೆಟ್ನಾಂನಲ್ಲಿ ಉತ್ಪಾದನೆ ಕುಸಿತ:ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ

Leave a Reply