ಕಾಫಿ ಹಣ್ಣುಗಳನ್ನು ತಿನ್ನುತ್ತಿರುವ ಕಾಡಾನೆಗಳು:ಕಾಫಿ ಬೆಳೆಗಾರರು ಕಂಗಾಲು
ಕೊಡಗು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು,ಹಾಸನ ಜಿಲ್ಲೆಗಳಲ್ಲಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಕಾಡಾನೆಗಳು ಕಾಫಿ ತಿನ್ನುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.ಇದರಿಂದ ಕಾಫಿಗೆ ಹೊಸ ಸವಾಲು ಉಂಟಾಗಿದ್ದು ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಾಫಿ ತೋಟಗಳಲ್ಲಿ ಬೆಳೆಸುತ್ತಿದ್ದ ಬಾಳೆ,ಅಡಿಕೆ,ಹಲಸು ಆನೆಗಳ ಮುಖ್ಯ ಆಹಾರ ಆದರೆ ಆನೆಗಳ ನಿರಂತರ ಧಾಳಿಯಿಂದ ಖಾಲಿಯಾದ ಹಣ್ಣುಗಳು ಮತ್ತು ಬೆಳೆಯನ್ನು ಯಾವ ಕಾಫಿ ಬೆಳೆಗಾರರು ಮುಂದೆ ಬರುತಿಲ್ಲ ಅದರಿಂದ ನಾಡಿಗೆ ಬರುತಿರುವ ಆನೆಗಳಿಗೆ ಹೊಟ್ಟೆ ತುಂಬಿಕೊಳ್ಳಲು ಉಳಿದಿರುವುದು ಕಾಫಿ ಮಾತ್ರ ಹಾಗಾಗಿ ಆನೆಗಳು ಹಣ್ಣಾದ ಕಾಫಿ ತಿನ್ನುತಿವೆ. ವರದಿ ಪ್ರಕಾರ ಆನೆಗಳು ಬಾರಿ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುತಿವೆ. ಆನೆ ಲದ್ದಿಯಲ್ಲಿ ಎರಡು ಕೆ.ಜಿಯಷ್ಟು ಕಾಫಿ ಬೀಜ ಸಿಗುತ್ತಿದೆ.ಬ್ರೆಜಿಲ್ ಸೇರಿದಂತೆ ಅನೇಕ ಕಡೆ ಆನೆ ಲದ್ದಿಯಲ್ಲಿನ ಬೀಜದಿಂದ ತಯಾರಿಸುವ ಕಾಫಿಗೆ ಬೇಡಿಕೆ ಇದೆ. ಆದರೆ, ಭಾರತದಲ್ಲಿ ಇನ್ನೂ ಇದಕ್ಕೆ ಮಾರುಕಟ್ಟೆ ಇಲ್ಲ.
ಆನೆಗಳು ಈ ಹಿಂದೆ ಕಾಫಿಯನ್ನು ಮುಟ್ಟುತ್ತಿರಲಿಲ್ಲ. ಈಗ ಅವು ಕಾಫಿಯನ್ನು ಇಷ್ಟ ಪಡುತ್ತಿವೆ. ಒಂದೊಂದು ಲದ್ದಿಯಲ್ಲಿ ಕನಿಷ್ಠವೆಂದರೂ ಎರಡು ಕೆ.ಜಿಯಷ್ಟು ಕಾಫಿ ಬೀಜ ಇರುತ್ತದೆ.- ನಂದ ಸುಬ್ಬಯ್ಯ, ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ
ಸಿದ್ದಾಪುರದ ಬೆಳೆಗಾರ ಸುಬ್ಬಯ್ಯ ಅವರ ಪ್ರಕಾರ ಆನೆಗಳು ಕೇವಲ ತೋಟದಲ್ಲಿ ಮಾತ್ರ ಕಾಫಿ ತಿನ್ನುತ್ತಿಲ್ಲ. ತೋಟದಿಂದ ಕುಯ್ದು ತಂದು ಅಂಗಳದಲ್ಲಿ ಗುಡ್ಡೆ ಹಾಕಿದ ಕಾಫಿಯನ್ನು ರಾತ್ರಿ ವೇಳೆ ಬಂದು ತಿನ್ನುತ್ತಿವೆಯಂತೆ. ಹಣ್ಣಾದ ಕಾಫಿ ಗುಡ್ಡೆ ಗುಡ್ಡೆಯಾಗಿ ಅಂಗಳದಲ್ಲಿ ದೊರೆಯುತ್ತಿರುವುದು ಅದಕ್ಕೆ ತಿನ್ನಲು ಸುಲಭ. ಈ ಕಾರಣದಿಂದಾಗಿ ಕಾಫಿಯನ್ನು ಗುಡ್ಡೆಯಾಗಿ ಹಾಕದೆ ಅಂಗಳದಲ್ಲಿ ಹರಡುತ್ತಿದ್ದೇವೆ. ಹೀಗೆ ಮಾಡಿದರೆ ಅದಕ್ಕೆ ಸೊಂಡಿಲಿನಲ್ಲಿ ಆಯ್ದು ತಿನ್ನುವುದು ಕಷ್ಟ ಎಂದು ಹೇಳುತ್ತಾರೆ.
ವರದಿ:ವಿಜಯ ಕರ್ನಾಟಕ (೩೧-೦೧-೨೦೨೦)