CoffeeFeatured News

ಭಾರತದ ಕಾಫಿ ಉತ್ಪಾದನೆ 2025ರಲ್ಲಿ ಹೆಚ್ಚಳ ಕಾಣಲಿದೆ :ಕಾಫಿ ಮಂಡಳಿ

ಕೊಡಗು,ಚಿಕ್ಕಮಗಳೂರು ಹಾಗು ಹಾಸನದ ಕಾಫಿ ಬೆಳೆಯುವ ಪ್ರದೇಶದಲ್ಲಿ ಬಿದ್ದ ಸಾಕಷ್ಟು ಹೂವಿನ ಮಳೆಯಿಂದಾಗಿ ಮುಂದಿನ ವರ್ಷದ ಇಳುವರಿ ಕಳೆದ ಎರಡು ವರ್ಷಗಳ ಇಳುವರಿಗಿಂತ ಹೆಚ್ಚಿನದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೆ.ಜಿ. ಜಗದೀಶ ಹೇಳಿದ್ದಾರೆ. ಆದರ ತೋಟಗಳಿಗೆ ಮುಂದಿನ 6-7 ತಿಂಗಳುಗಳು ಸೂಕ್ತ ಹವಾಮಾನ ಲಭ್ಯವಾದರೆ ಫಸಲಿನ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಕಾಫಿ ಸಂಘಟನೆಯ (ICO) ಪ್ರಕಾರ, ಬಹುತೇಕ ಪ್ರಮುಖ ಕಾಫಿ ಉತ್ಪಾದಕ ದೇಶಗಳು ತೀವ್ರ ಹವಾಮಾನ ಬದಲಾವಣೆ ಎದುರಿಸುತ್ತಿರುವುದರಿಂದ ಜಾಗತಿಕ ಕಾಫಿ ಬೆಲೆಗಳು ಇನ್ನೂ ಒಂದು ವರ್ಷ ಉನ್ನತ ಮಟ್ಟದಲ್ಲಿಯೇ ಇರಬಹುದು.

ಭಾರತದ ಕಾಫಿ ಮೌಲ್ಯವರ್ಧನೆ ಬೇಕಾಗಿದೆ

ಭಾರತದಲ್ಲಿ ಉತ್ಪಾದನೆಯಾಗುವ 70% ಕಾಫಿ ಹಸಿರು ಬೀನ್ಸ್ ರೂಪದಲ್ಲಿಯೇ ರಫ್ತು ಆಗುತ್ತಿದ್ದು, ಇದರಿಂದ ಪ್ರೀಮಿಯಂ ಮೌಲ್ಯವನ್ನು ಭಾರತ ಕಳೆದುಕೊಳ್ಳುತ್ತಿದೆ ಎಂದು ಜಗದೀಶ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

“ನಾವು ವಿಶ್ವದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಉತ್ಪಾದಿಸುತ್ತಿದ್ದರೂ, ಇದನ್ನು ಮೌಲ್ಯವರ್ಧನೆ ಇಲ್ಲದೆ ಮಾರಾಟ ಮಾಡುತ್ತಿರುವುದು ನಷ್ಟವಾಗುತ್ತಿದೆ. ಬೇರೆಯವರು ಇದನ್ನು ಮಿಶ್ರಣ ಮಾಡಿ, ಮೌಲ್ಯವರ್ಧನೆ ಮಾಡಿ ಪ್ರೀಮಿಯಂ ಬೆಲೆಯಲ್ಲಿ ಮಾರುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.

ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ಅವರ ಪ್ರಕಾರ ಸ್ಥಳೀಯ ಮಾರುಕಟ್ಟೆಯನ್ನು ಸದೃಢಗೊಳಿಸುವುದು ರೈತರಿಗೆ ಮತ್ತು ಉದ್ಯಮಕ್ಕೆ ಲಾಭಕರ. ಸ್ಥಳೀಯ ಮಾರುಕಟ್ಟೆಯ ವೃದ್ಧಿ ಅಗತ್ಯವಿದೆ, ಇದರಿಂದ ಅಂತರಾಷ್ಟ್ರೀಯ ಬೆಲೆ ತಾರತಮ್ಯದಿಂದ ರೈತರಿಗೆ ರಕ್ಷಣೆ ದೊರೆಯಬಹುದು.

ಕೋವಿಡ್ ನಂತರ, ಜಾಗತಿಕ ಮಟ್ಟದಲ್ಲಿ ಕಾಫಿ ಸೇವನೆ ತೀವ್ರವಾಗಿ ಹೆಚ್ಚುತ್ತಿದೆ, ಭಾರತದಲ್ಲಿಯೂ ಈ ಪ್ರವೃತ್ತಿ ಕಾಣಿಸಿಕೊಂಡಿದೆ. ಭಾರತದ ಕಾಫಿ ಮಾರುಕಟ್ಟೆ ಹೆಚ್ಚು ಪ್ರೀಮಿಯಂ ಬೆಲೆಗೆ ತೆರಳಬೇಕಾದ ಅಗತ್ಯವಿದೆ!

Also read  Coffee Prices (Karnataka) on 18-08-2022