CoffeeFeatured News

ಮಳೆ ಹೆಚ್ಚಳ:ಕಾಯಿಕೊಳೆ ನಿಯಂತ್ರಣಕ್ಕೆ ಜಾಣತನವೇ ಮದ್ದು

ಕಾಫಿ ಉದುರುವಿಕೆ ನಿಯಂತ್ರಿಸಲು ಬೆಳೆಗಾರರು ಗಿಡಗಳ ಬುಡದಲ್ಲಿ ಇದ್ದ ಕಸ ಮತ್ತು ತರಗನ್ನು ಮೂರು ಅಡಿಯಷ್ಟು ಅಗಲಕ್ಕೆ ಬಿಡಿಸಿ ರಾಶಿ ಮಾಡಿಸಿದ್ದಾರೆ.

ಕಾಫಿ ಕಾಯಿಕೊಳೆ ರೋಗವನ್ನು ನಿಯಂತ್ರಿಸಲು ಕೆಲವು ಅಭ್ಯಾಸಗಳನ್ನು ತೋಟದಲ್ಲಿ ಮಾಡಬೇಕಾಗುತ್ತದೆ. ಗಿಡದ ನೆತ್ತಿಯ ಮೇಲೆ ಇರುವ ಅಡ್ಡರೆಕ್ಕೆ ಮತ್ತು ಚಿಗುರನ್ನು ತೆಗೆದು ಗಿಡದ ಒಳಗೆ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು. ಕಾಫಿ ಗಿಡವನ್ನು ಆವರಿಸಿರುವ ಸದೆ (ಕಳೆಗಿಡ) ನಿವಾರಿಸಿ ಗಿಡದ ರೆಕ್ಕೆಯ ಕೆಳಗಿನಿಂದಲೂ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು.

ಗಿಡದ ಬುಡದಲ್ಲಿ ಎಲ್ಲ ಕಸವನ್ನು ರಾಶಿ ಮಾಡಿ ಕಾಫಿ ಗಿಡದ ಬೇರಿಗೆ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು. ಮಳೆಯ ಆರ್ಭಟ ಕಡಿಮೆಯಾದ ಮೇಲೆ ಕಾಫಿ ಗಿಡಗಳಿಗೆ ಎಕರೆಗೆ ಒಂದು ಮೂಟೆಯಂತೆ ಯೂರಿಯಾ ನೀಡಬೇಕು ಎಂಬುದು ಕಾಫಿ ಮಂಡಳಿಯ ಶಿಫಾರಸು. ಯೂರಿಯಾ ಜತೆಗೆ ಎಕೆರೆಗೆ ಒಂದು ಮೂಟೆ ಪೊಟ್ಯಾಷ್ ಕೂಡ ನೀಡಿದರೆ ಕಾಯಿ ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಕೆಲ ಅನುಭವಿ ಬೆಳೆಗಾರರ ಅಭಿಪ್ರಾಯ.

‘ಕಳೆದ 2 ವರ್ಷದ ಮಳೆಗಾಲದ ಹವಾಮಾನ ಕಾಫಿ- ಅಡಿಕೆಗೆ ಚೆನ್ನಾಗಿತ್ತು. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಕಾಫಿ ಉದುರುವಿಕೆ ಹೆಚ್ಚಾಗಿದೆ’ ಎಂದು ಮಕ್ಕಿಮನೆಯ ಬೆಳೆಗಾರ ಕೃಷ್ಣಮೂರ್ತಿ ಹೆಬ್ಬಾರ್ ಹೇಳುತ್ತಾರೆ. 

Also read  Fixing Pepper Minimum Import Price is Wrong,says Exporters

2 thoughts on “ಮಳೆ ಹೆಚ್ಚಳ:ಕಾಯಿಕೊಳೆ ನಿಯಂತ್ರಣಕ್ಕೆ ಜಾಣತನವೇ ಮದ್ದು

Leave a Reply