ರೊಬಸ್ಟಾ ಕಾಫಿ ಬೆಲೆ ಇಳಿಕೆಯಿಂದ ಬೆಳೆಗಾರರಲ್ಲಿ ಆತಂಕ
ರೊಬಸ್ಟಾ ಕಾಫಿ ಜನವರಿ 2025 ರಲ್ಲಿ ಪ್ರತಿ ಕೆಜಿ ₹450–₹500 ರೂಪಾಯಿಗೆ ತಲಪಿದ್ದ ಬೆಲೆ ಇದೀಗ ಸುಮಾರು ₹380 ಕ್ಕೆ ಇಳಿಕೆಯಾಗಿವೆ. ಇದಕ್ಕೆ ಕಾರಣವಾಗಿರುವುದು ಇಂಡೋನೇಶಿಯಾ, ಬ್ರೆಜಿಲ್ ಮತ್ತು ಉಗಾಂಡಾ ,ಹೊಂಡುರಾಸ್ ದಂತಹ ದೇಶಗಳಿಂದ ಜಾಗತಿಕ ಕಾಫಿ ಪೂರೈಕೆಯ ಹೆಚ್ಚಳ.
ಹಿಂದಿನ ವರ್ಷ ವಿಯೆಟ್ನಾಂ ಮತ್ತು ಬ್ರೆಜಿಲ್ ದೇಶದಲ್ಲಿ ಉತ್ಪಾದನಾ ಕೊರತೆ ಇದ್ದುದರಿಂದ ಬೆಲೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಿದ್ದ 80% ರೈತರು ಬೆಳೆಗಾರರು ಉತ್ಪನ್ನಗಳನ್ನು ಸಂಗ್ರಹಿಸಿಕೊಂಡಿದ್ದಾರೆ ಆದರೆ ಈಗ ಕಡಿಮೆ ಬೆಲೆಗೆ ಮಾರಬೇಕಾ ಅಥವಾ ಬೆಲೆ ಪುನಃ ಏರಿಕೆಯಾಗುವುದಕ್ಕೆ ಕಾಯಬೇಕಾ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ.
ಸ್ಥಳೀಯ ಬೆಳೆಗಾರರು ಭಾರತದ ನೆರಳು ಆಶ್ರಿತ ಪರಿಸರದಲ್ಲಿ ಬೆಳೆಯುವ ಕಾಫಿಯ ಗುಣಮಟ್ಟ ಜಾಗತಿಕ ಮಾರುಕಟ್ಟೆಯ ಸರಾಸರಿ ಬೆಲೆಗೆ ಹೋಲಿಸಿದರೆ ಹೆಚ್ಚಾಗಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ವ್ಯಾಪಾರಿಗಳು ಇಂದಿನ ಬೆಲೆ ಇಳಿಕೆ ತಾತ್ಕಾಲಿಕವೇ ಆಗಿರಬಹುದು ಎಂದು ಭಾವಿಸಿದ್ದಾರೆ.
ಬ್ರೆಜಿಲ್ ಜಗತ್ತಿನ ಅತಿದೊಡ್ಡ ಅರೇಬಿಕಾ ಕಾಫಿ ಉತ್ಪಾದಕ, ಮತ್ತು ವಿಯೆಟ್ನಾಮ್ ರೋಬಸ್ಟಾ ಕಾಫಿಗೆ ಅಗ್ರಗಣ್ಯ ಉತ್ಪಾದಕ.