Krushi

ನಾಲ್ಕು ದಿನಗಳ ಕೃಷಿ ಜಾತ್ರೆ ಆರಂಭ:ಮೊದಲ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರ ಭೇಟಿ

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಗುರುವಾರ ನಾಲ್ಕು ದಿನಗಳ ಕೃಷಿ ಮೇಳ ಆರಂಭಗೊಂಡಿತು.

ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸಿ ನೆರೆದಿದ್ದ ರೈತರನ್ನುದ್ಧೇಶಿಸಿ ಮಾತನಾಡಿದರು.

ಮೇಳದ ಮೊದಲನೇ ದಿನ ಬೇರೆ ಬೇರೆ ಜಿಲ್ಲೆಗಳ ಸಾವಿರಾರು ರೈತರು ಮೇಳದಲ್ಲಿ ಕಾಣಿಸಿಕೊಂಡರು. ವರಧಿಗಳ ಪ್ರಾಕಾರ ಮೊದಲ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರದರ್ಶನವನ್ನು ವೀಕ್ಷಿಸಿದರು.

ಕೃಷಿ ಕಾರ್ಮಿಕರ ಕೊರತೆಯನ್ನೇ ಮೂಲವಾಗಿಸಿಕೊಂಡು ಕಂಪೆನಿಗಳು ಸಾಕಷ್ಟು ಆವಿಷ್ಕಾರ ಮಾಡಿವೆ. ದೊಡ್ಡ ದೊಡ್ಡ ಯಂತ್ರಗಳ ಜೊತೆಗೆ ಅಡಿಕೆ ಕೊನೆ ಕೊಯ್ಯವುದು, ಕಾಯಿ ಕೀಳುವ ಯಂತ್ರ, ಬದು ಮಾಡುವುದಕ್ಕೆ, ಗುಂಡಿ ತೋಡುವುದಕ್ಕೆ, ಕಳೆ ಕೀಳುವ ಅಗತ್ಯವಾದಂತಹ ಸಣ್ಣಪುಟ್ಟ ಉಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಿವೆ.

ಇಡೀ ಮೈದಾನದಲ್ಲಿ ಎಲ್ಲ ಬಗೆಯ ಉಪಕರಣಗಳನ್ನು ಪ್ರದರ್ಶನಕ್ಕಿಟ್ಟು, ಪ್ರಾತ್ಯಕ್ಷಿಕೆ ತೋರಿಸುತ್ತಿವೆ. ಕೃಷಿಯಷ್ಟೇ ಅಲ್ಲದೆ, ಹೈನುಗಾರಿಕೆ, ಕುರಿ, ಕೋಳಿ, ಹಂದಿ ಸಾಕಾಣಿಕೆಯಂತಹ ಪೂರಕ ಕಸುಬುಗಳಿಗೂ ಅಗತ್ಯವಾದ ವಸ್ತುಗಳನ್ನು ಇಲ್ಲಿ ಕಾಣಬಹುದು.

ಇದಸ್ಟೆ ಅಲ್ಲದೆ ಗುಡಿ ಕೈಗಾರಿಕೆ ವಸ್ತುಗಳು,ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು,ಗೃಹ ಬಳಕೆ ವಸ್ತುಗಳು,ಜನಪದ ಕಲಾವಿದರು ಮೇಳದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ವರಧಿ : ಪ್ರಜಾವಾಣಿ

Also read  ಬೆಂಗಳೂರು ಕೃಷಿಮೇಳ:ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳಿಗೆ ಆದ್ಯತೆ
Also read  ಇಂದಿನಿಂದ ಬೆಂಗಳೂರು ‘ಕೃಷಿ ಮೇಳ’

Leave a Reply