Featured NewsKrushi

ಕೃಷಿ ಮೇಳಕ್ಕೆ ತೆರೆ:ಕಾಲಿಡಲಾಗದಷ್ಟು ಜನಸಂದಣಿ

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕೃಷಿ ಮೇಳ ಭಾನುವಾರ ಕೊನೆಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೆರೆದಿದ್ದ ರೈತರನ್ನುದ್ಧೇಶಿಸಿ ಮಾತನಾಡಿದರು.

ನಾಲ್ಕು ದಿನಗಳ ಮೇಳಕ್ಕೆ ಬೇರೆ ಬೇರೆ ಜಿಲ್ಲೆಗಳ ಲಕ್ಷ್ಯಾಂತರ ರೈತರು ಪಾಲ್ಗೊಂಡು ಮಾಹಿತಿ ಪಡೆದರು.

ಬರೀ ರೈತರಲ್ಲದೇ ನಗರದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತಿರುವ,ಕೃಷಿಯಲ್ಲಿ ಆಸಕ್ತಿ ಉಳ್ಳವರು ತಾವಲ್ಲದೆ ತಮ್ಮ ಮಕ್ಕಳನ್ನುಕೂಡ ಮೇಳದಲ್ಲಿ ಪಾಲ್ಗೊಳಿಸಿ ಕೃಷಿಯಲ್ಲಿ ಮತ್ತು ರೈತರ ಬಗ್ಗೆ ತಿಳುವಳಿಕೆ ಮೂಡಿಸಿದರು.

ಶನಿವಾರ ಮತ್ತು ಭಾನುವಾರ ರಜೆ ದಿನವಾದ ಕಾರಣ ಕಾಲಿಡಲು ಜಾಗ ಸಿಗದಷ್ಟು ಜನಸಂದಣಿ ಕಂಡುಬಂತು.

ಪಶುಸಂಗೋಪನೆ, ಹೈನುಗಾರಿಕೆ, ಕುರಿ,ಕೋಳಿ ಸಾಕಣೆ ಮತ್ತು ಮೀನು ಸಾಕಣೆ ಮಳಿಗೆಗಳ ವಿಭಾಗ, ಕೃಷಿ ಯಂತ್ರೋಪಕರಣಗಳ ವಿಭಾಗ, ಸಾವಯವ ಹಾಗೂ ಸಿರಿಧಾನ್ಯ ವಿಭಾಗಗಳಿಗೆ ಜನರು ಭೇಟಿಕೊಟ್ಟು ಮಾಹಿತಿ ಪಡೆದರು.

15 ಲಕ್ಷ್ಯಕ್ಕೂ ಹೆಚ್ಚು ಹಣ್ಣು ಮತ್ತು ಔಷಧೀ ಗಿಡಗಳ ಮಾರಾಟ
ಮೇಳದಲ್ಲಿ ಹಣ್ಣು ಮತ್ತು ಔಷಧೀ ಗಿಡಗಳಿಗೆ ಬಾರಿ ಬೇಡಿಕೆ ಕಂಡುಬಂದಿತು . ವರದಿಗಳ ಪ್ರಕಾರ 15 ಲಕ್ಷ್ಯಕ್ಕೂ ಹೆಚ್ಚು ಗಿಡಗಳು ಮಾರಾಟವಾದವು .
ಶಿಮ್ಲಾ ಆಪಲ್,ರಕ್ತ ಚಂದನ, ಶ್ರೀಗಂಧ,ರಾಂಬೂತ ಹಾಗೂ ಹೈಬ್ರಿಡ್ ತಳಿಗಳ ಹಲಸು ಮತ್ತು ಮಾವು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು.

ಬೆಟ್ಟದ ನೆಲ್ಲಿಕಾಯಿಯ ಶರಭತ್ತು
ಬೆಟ್ಟದ ನೆಲ್ಲಿಕಾಯಿ ಶರಭತ್ತುಮಾರುತಿದ್ದ ಸ್ಟಾಲ್‌ಗೆ ಬಿಸಿಲಿನಿಂದ ಸುಸ್ತಾದ ಜನರು ಮುಗಿಬಿದ್ದು ಒಂದು ಗ್ಲಾಸ್‌ಗೆ 10 ರೂಪಾಯಿ ಕೊಟ್ಟು ಶರಭತ್ತು ಕುಡಿದರು.
ಆರೋಗ್ಯಕ್ಕೆ ಒಳಿತಾದ ಶರಭತ್ತು ತುಂಭಾ ರುಚಿಯಾಗಿತ್ತುಕೂಡ.ಶರಭತ್ತು ಅಲ್ಲದೆ ಬೆಟ್ಟದ ನೆಲ್ಲಿಕಾಯಿಯ ಜಾಮ್ ಮತ್ತು ಸ್ಕ್ವಾಶ್ ಕೂಡ ಮಾರಾಟವಾದವು.

Also read  ಕಾಫಿ ಬೆಳೆಗೆ ವರದಾನವಾದ ಮಳೆ

Leave a Reply