ಕೃಷಿಕನಿಗೆ ಐದು ಕೃಷಿ ಪತ್ರಿಕೆಗಳು
ಭಾರತ ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ಸವಾಲುಗಳು ಬಹಳ, ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವ ಈ ಸಮಯದಲ್ಲಿ ಎಲ್ಲ ರೈತ ಕುಟುಂಬಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆಯಿದೆ.
ಮೊನ್ನೆ ತಾನೇ ಮುಕ್ತಾಯವಾದ ಬೆಂಗಳೂರು ಕೃಷಿ ಮೇಳದಲ್ಲಿ ನಾವು ಕಂಡ ಕೃಷಿ ಪತ್ರಿಕೆಗಳನ್ನು ಇಲ್ಲಿ ವಿವರಿಸಲಾಗಿದೆ. ಕೃಷಿಕನಿಗಾಗಿ ಹೊರ ತಂದಿರುವ ಈ ಪತ್ರಿಕೆಗಳನ್ನು ಕೊಂಡು ಓದಿ ಪ್ರೋತ್ಸಾಹಿಸುವುದು ನಿಮ್ಮೆಲ್ಲರ ಕರ್ತವ್ಯವೆಂದು ಭಾವಿಸುತ್ತೆವೆ.
ಅಡಿಕೆ ಪತ್ರಿಕೆ
ಇದರ ಶೀರ್ಷಿಕೆ ಹೇಳುವಂತೆ ಇದೊಂದು ಕೃಷಿಕರಿಗಾಗಿ ಕೃಷಿಕರೇ ರೂಪಿಸಿರುವ ಒಂದು ಹಳೆಯ ಹಾಗೂ ಪ್ರಸಿದ್ದ ಮಾಸ ಪತ್ರಿಕೆ. ವಿಚಾರತಜ್ಞ ಶ್ರೀಪಡ್ರೆಯವರ ನೇತೃತ್ವದಲ್ಲಿ 29 ವರ್ಷ ಪೂರೈಸಿರುವದು ಇದರ ಹೆಗ್ಗಳಿಕೆ . ಬಹುಷಃ ನಮ್ಮ ನಿಮ್ಮೆಲ್ಲರ ಹಳೆಯ ರೈತರ ಮಿತ್ರ ಎಂದರು ತಪ್ಪಾಗದು.
ಇದರ ವಿಮರ್ಶಕರೇ ಹೇಳುವಂತೆ ಅಡಿಕೆ ಪತ್ರಿಕೆಯೊಂದು ಕೃಷಿಕರಿಗೆ ’ಎನ್‌ಸೈಕ್ಲೋಪೀಡಿಯಾ’- ಕೃಷಿಯ ಬಗ್ಗೆ ಅರಿವು,ಜಾಗೃತಿ, ಒಲವು ಮೂಡಿಸುವ ಮಾರ್ಗದರ್ಶಿ.
ಮೊದಲಿಗೆ ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ,ಶಿವಮೊಗ್ಗ ಜಿಲ್ಲೆಯ ರೈತರಿಗಾಗಿ ಅಡಿಕೆ ಬೆಳೆಯ ಮಾಹಿತಿ ನೀಡಲು ಪ್ರಾರಂಬಿಸಿದ ಪತ್ರಿಕೆ ನಂತರ ಎಲ್ಲ ಬೆಳೆಗಳ ರೈತರಿಗೂ ಮಾಹಿತಿ ನೀಡುತಿದೆ.
ಕೃಷಿ ಪತ್ರಕರ್ತರನ್ನು ರೂಪಿಸಿದ ಕೀರ್ತಿ ಅಡಿಕೆಪತ್ರಿಕೆಗೆ ಸಲ್ಲಬೇಕು.’ಕೃಷಿಯಲ್ಲಿ ಬರೆಯಲು ಏನಿದೆ’ ಎನ್ನುವ ಕಾಲಘಟ್ಟದಲ್ಲಿ ಶುರುವಾದ ಪತ್ರಿಕೆ ’ಬರೆಯಲು ಇನ್ನಷ್ಟು ಇದೆ’ ಎಂದು ತೋರಿಸುತ್ತಿದೆ. – ರಘುರಾಮ ಬೆಂಗಳೂರು
ಪತ್ರಿಕೆಯಲ್ಲಿ ಮೂಡಿ ಬರುವ ಎಲ್ಲಾ ಲೇಖನಗಳು ಸಂಗ್ರಹಿಸಲೋಗ್ಯ ಆದುದರಿಂದ ಎಲ್ಲ ರೈತರು ಚಂದಾದರಾಗಿ ಓದಿಕೊಳ್ಳಿ.
ಬಿಡಿ ಪ್ರತಿಗೆ 15 ರೂ. ವಾರ್ಷಿಕ ಚಂದಾ 175 ರೂ.
ಅಡಿಕೆ ಪತ್ರಿಕೆಯ ವಿಳಾಸ : ಅಂಚೆ ಪಟ್ಟಿಗೆ ಸಂಖ್ಯೆ 29, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574201
ಸುಜಾತಾ ಸಂಚಿಕೆ
23 ವರ್ಷ ಪೂರೈಸಿರುವ ಮತ್ತೊಂದು ಹಳೆಯ ಕೃಷಿ ಪತ್ರಿಕೆ. ಇದು ಕೂಡ ದಕ್ಷಿಣ ಕನ್ನಡದ ಮಂಗಳೂರುನಿಂದ ಪ್ರಕಟಗೊಳ್ಳುತ್ತದೆ.
ರೈತರ ಪರಿಚಯ, ಹೊಸ ಬೆಳೆಯ ಬಗ್ಗೆ ,ಕೃಷಿ ಯಶಸ್ಸಿನ ಕಥೆಗಳು ಹೀಗೆ ಕೃಷಿಯ ಎಲ್ಲಾ ಮಾಹಿತಿಗಳನ್ನು ತಿಂಗಳಿಗೊಮ್ಮೆ ಹೊತ್ತು ತರುತ್ತದೆ. ಇದರ ಎಲ್ಲಾ ಪುಟಗಳು ಬಣ್ಣದಿಂದ ಕೂಡಿದೆ. ಇದರ ಎಲ್ಲಾ ಬರಹಗಳು ಕೂಡ ರೈತನಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದೆ.
ಬಿಡಿ ಪ್ರತಿಗೆ 50 ರೂ. ವಾರ್ಷಿಕ ಚಂದಾ 550 ರೂ.
ವಿಳಾಸ :
Dr. G.K. ಹೆಬ್ಬಾರ್,107/108, ‘ಸುಪ್ರಭಾತ’,ಬೇಜೈ ಕಾಪಿಕಾಡ್ ಮಂಗಳೂರು – 575 004
ಸಹಜ ಸಾಗುವಳಿ
ಇದೊಂದು ದ್ವೈಮಾಸಿಕ ಪತ್ರಿಕೆ. ಇದರ ಶೀರ್ಷಿಕೆ ಹೇಳುವಂತೆ ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಸುಸ್ಥಿರ ಸಾವಯವ-ಸಹಜ ಕೃಷಿಗೆ ಮೀಸಲಾದ ಪತ್ರಿಕೆ . ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳನ್ನು ವಿರೋಧಿಸುತ್ತದೆ.
ಸಹಜ ಸಾಗುವಳಿಯನ್ನು ಸರ್ಕಾರೇತರ ಸಂಸ್ಥೆ ಇಕ್ರಾ ಹೊರತರುತ್ತಿದೆ. ಬರಿ ಮಾಹಿತಿ ನೀಡದೆ ಸಹಜ ಸಾಗುವಳಿ ಸಂಸ್ಥೆ ರಾಜ್ಯದೆಲ್ಲೆಡೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನೇಕ ಸಮಾಲೋಚನಾ ಸಭೆ, ವಿಚಾರ ಸಂಕಿರಣ ಹಮ್ಮಿಕೊಳ್ಳತದೆ.ಹಾಗಾಗಿ ಸಹಜ ಸಾಗುವಳಿ ಓದಿಗರಿಗೂ ಮತ್ತು ರಾಜ್ಯದ ರೈತ ಕುಟುಂಬಕೂ ಕೊಂಡಿಯಾಗಿ ಬೆಳೆದಿದೆ.
ಬಿಡಿ ಪ್ರತಿಗೆ 12 ರೂ. ವಾರ್ಷಿಕ ಚಂದಾ 60 ರೂ.
ವಿಳಾಸ : ಸಂಪಾದಕರು, ಸಹಜ ಸಾಗುವಳಿ, ನಂ 22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು -560075
ಹಸಿರುವಾಸಿ
ಹೆಸರೇ ತಿಳಿಸುವಂತೆ ಕೃಷಿ,ಪ್ರಕೃತಿ,ಗ್ರಾಮೀಣ ಬದುಕು,ಆರೋಗ್ಯ,ನೀರು,ವಿಜ್ಞಾನ ಹೀಗೆ ಎಲ್ಲಾ ವಿಶೇಷತೆ ಯನ್ನು ಒಂದೇ ಪತ್ರಿಕೆಯಲ್ಲಿತಿಳಿಸುವ ಒಂದು ಹೊಸ ಪ್ರಯತ್ನ. ಹಸಿರುವಾಸಿ ಒಂದು ಪಾಕ್ಷಿಕ, ಕನ್ನಡ ಹಾಗೂ ಇಂಗ್ಲೀಷ್ ಬಾಷೆಯಲ್ಲಿ ಪ್ರಕಟಣೆಗೊಳ್ಳುತದ್ದೆ.
ಪ್ರಧಾನ ಸಂಪಾದಕರಾಗಿ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಡ್ತಿ ತಮ್ಮ 25 ವರ್ಷದ ಪತ್ರಿಕೋದ್ಯಮದ ಅನುಭವವನ್ನು ಇಲ್ಲಿ ನೋಡಬಹುದು. ಕೃಷಿ ಮತ್ತು ಪರಿಸರ ವಿಜ್ಞಾನದ ಸಮಗ್ರ ಸುದ್ದಿಗಾಗಿ ಹಸಿರುವಾಸಿ ಪತ್ರಿಕೆಯನ್ನು ಓದಬಹುದು.
ಇನ್ನು ಪತ್ರಿಕೆ ತುಂಭಾ ಆಕರ್ಷಕವಾಗಿದೆ, ಎಲ್ಲಾ ಪುಟಗಳು ಮತ್ತು ಫೋಟೋಗಳು ಕೂಡ ವರ್ಣರಂಜಿತವಾಗಿದೆ.
ಬಿಡಿ ಪ್ರತಿಗೆ 50 ರೂ. ವಾರ್ಷಿಕ ಚಂದಾ 599 ರೂ.
ವಿಳಾಸ : ಭೂಮಿಗೀತ ಮೀಡೀಯ Pvt. Ltd.,#67/1, 5th ಕ್ರಾಸ್, ಗುರುದತ್ತ ಲೇಯೌಟ್,ದತ್ತಾತ್ರೇಯನಗರ, ಹೊಸ್ಕೆರೆಹಳ್ಳಿ,ಬೆಂಗಳೂರು – 560 085.
ಕೃಷಿ ಜಾಗರಣ
ಭಾರತ ಅತಿ ದೊಡ್ಡ ಗ್ರಾಮೀಣ ಪತ್ರಿಕೆ. ಒಟ್ಟೂ ಭಾರತದ ವಿವಿಧ 12 ಭಾಷೆಯಲ್ಲಿ ನವ ದೆಹಲಿಯಿಂದ ಪ್ರಕಟಗೊಳ್ಳುತ್ತದೆ.
ಪ್ರತಿ ಪತ್ರಿಕೆಯಲ್ಲಿ ಕರ್ನಾಟಕದ ಪ್ರತಿ ಜಿಲ್ಲೆಯ ಒಂದು ಲೇಖವನ್ನು ಸ್ಥಳೀಯ ಲೇಖಕರು ಯಾವುದರೂರೊಂದು ವಿಷಯವನ್ನು ಸಂಕ್ಷಿಪ್ತವಾಗಿ ಚಿತ್ರ ಮತ್ತು ಅಂಕಿ ಅಂಶಗಳ ಮೂಲಕ ವಿವರವಾಗಿ ಹೇಳಲಾಗುತದೆ.
ಕೃಷಿ,ಪರಿಸರ,ಪಶುಸಂಗೋಪನೆ, ಹೈನುಗಾರಿಕೆ ಹೀಗೆ ರೈತನಿಗೆ ಬೇಕಾದ ಎಲ್ಲಾ ವಿಷಯವನ್ನು ಕಟ್ಟಿಕೊಡುವ ಒಂದು ದೊಡ್ಡ ಬಳಗ.
ಬಿಡಿ ಪ್ರತಿಗೆ 50 ರೂ. ವಾರ್ಷಿಕ ಚಂದಾ 600 ರೂ.
ವಿಳಾಸ : ಮ್ಯಾಕ್ ಕೃಷಿ ಜಾಗರಣ,60/9, 3ನೇ ಮಹಡಿ, ಯೂಸಫ್ ಸಾರೈಯೀ ಮಾರ್ಕೆಟ್ ,ಗ್ರೀನ್ ಪಾರ್ಕ್ ಮೆಟ್ರೋ ಸ್ಟೇಶನ್ ಹತ್ತಿರ ,ನವ ದೆಹಲಿ – 110016
ಕೃಷಿಕನಿಗಾಗಿ ಹೊರ ತಂದಿರುವ ಈ ಪತ್ರಿಕೆಗಳನ್ನು ಕೊಂಡು ಓದಿ ಪ್ರೋತ್ಸಾಹಿಸುವುದು ನಿಮ್ಮೆಲ್ಲರ ಕರ್ತವ್ಯವೆಂದು ಭಾವಿಸುತ್ತೆವೆ
ಯಾವುದೇ ಪತ್ರಿಕೆಯ ಹೆಚ್ಚಿನ ಮಾಹಿತಿಗೆ ಕೆಳಗಿನ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ