Featured NewsKrushi

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ:ರಾಜ್ಯದ 18 ಸಾವಿರ ರೈತರಿಗೆ ಬಂತು 2000 ರೂ.

ಕೇಂದ್ರ ಸರಕಾರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆಗೆ ಚಾಲನೆ ಸಿಕ್ಕಿದ್ದು ರಾಜ್ಯದ 18 ಸಾವಿರ ರೈತರಿಗೆ 2,000 ರೂ. ಖಾತೆಗೆ ಸೇರಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ರಾಜ್ಯದ ಫಲಾನುಭವಿಗಳ ಪೈಕಿ 18 ಸಾವಿರ ರೈತರಿಗೆ 2,000 ರೂ. ಜಮೆ ಆಗಿದೆ. ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ಕುಟುಂಬಕ್ಕೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂ.ಗಳನ್ನು ಕೇಂದ್ರ ಸರಕಾರ ನೀಡುತ್ತಿದೆ. ಈ ಯೋಜನೆಯ ಮೊದಲ ಕಂತಿನ 2 ಸಾವಿರ ರೂ. ಹಣ ಬಿಡುಗಡೆಗೆ ಚಾಲನೆ ದೊರೆತಿದೆ.

ಪ್ರಕ್ರಿಯೆ ಹೇಗೆ ?

  • ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಗಳನ್ನು ರೈತ ಸಂಪರ್ಕ ಕೇಂದ್ರ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಬೇಕು. 
  • ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ, ಅಟಲ್‌ ಜೀ ಜನಸ್ನೇಹಿ ಕೇಂದ್ರ, ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ನಮೂನೆ ಸಲ್ಲಿಸಬೇಕು. 
  • ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಜಮೀನಿನ ಪಹಣಿ ಪತ್ರ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕ, ಪರಿಶಿಷ್ಟರಾದಲ್ಲಿ ಜಾತಿ ಪ್ರಮಾಣ ಪತ್ರಗಳ ನಕಲು ಪ್ರತಿ ಅಗತ್ಯ( ಪರಿಶಿಷ್ಟ ಜಾತಿ/ ಪಂಗಡ ರೈತರು).ಪಾಸ್‌ ಪೊರ್ಟ್‌ ಅಳತೆಯ ಭಾವಚಿತ್ರ,ರೇಶನ್‌ ಕಾರ್ಡ್‌ ಒದಗಿಸಬೇಕು.
  • ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಯಲ್ಲಿ ಇಲ್ಲದ ರೈತರು ಕೂಡ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವುದಾಗಿ 20 ರೂ. ಛಾಪಾ ಕಾಗದದಲ್ಲಿ ಸ್ವಯಂ ಘೋಷಣಾ ಪತ್ರದೊಂದಿಗೆ ದಾಖಲೆ ಸಲ್ಲಿಸಬಹುದು.
  • ಯೋಜನೆಯಿಂದ ಹೊರಗುಳಿಯ ಬಯಸುವ ರೈತರು ಸಣ್ಣ ಮತ್ತು ಅತಿಸಣ್ಣ ರೈತರ ಪಟ್ಟಿಯಿಂದ ಹೊರಗಿಡುವಂತೆ ವಿನಂತಿಸಬಹುದು. 
  • ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಯಾರು ಅರ್ಹರಲ್ಲ?

ಐದು ಎಕರೆಗಿಂತ ಹೆಚ್ಚು ಭೂಮಿ ಇರುವವರು, ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಭೂಮಿ ಹೊಂದಿರುವ ಸಂಘ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿಯಿಂದ ಲೋಕಸಭೆವರೆಗಿನ ಹಾಲಿ ಅಥವಾ ಮಾಜಿ ಸದಸ್ಯರು, 10 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು, ವೃತ್ತಿಪರರು ಮತ್ತು ವೃತ್ತಿ ಪರ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡು ವೃತ್ತಿಯಲ್ಲಿ ತೊಡಗಿರುವವರು.

ಹೇಗಿದೆ ಪ್ರತಿಕ್ರಿಯೆ?

ಯೋಜನೆ ಬಗ್ಗೆ ರಾಜ್ಯ ಸರಕಾರ ಮೂಗು ಮುರಿದರೂ ನಿತ್ಯವೂ ಸಾವಿರಾರು ಜನ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ .

ಎಲ್ಲೆಲ್ಲಿ ಹಣ ಜಮಾ ಆಗಿದೆ ?

ರಾಯಚೂರು – 3600
ಕಲಬುರಗಿ – 3,850
ಯಾದಗಿರಿ – 6026
ಬೀದರ್‌ – 3,000
ಹಾವೇರಿ – 2,052
ಧಾರವಾಡ – 350

ಜಿಲ್ಲೆ ಮತ್ತು ನೋಂದಣಿ ಸಂಖ್ಯೆ

ದಕ್ಷಿಣ ಕನ್ನಡ -6,941
ಉಡುಪಿ – 3,825
ಕೊಡಗು – 1900
ಚಾಮರಾಜನಗರ – 21,704
ಹಾಸನ – 1.17 ಲಕ್ಷ
ಮಂಡ್ಯ – 14,100
ಮೈಸೂರು – 80,335
ಬಾಗಲಕೋಟ – 19,824
ಚಿತ್ರದುರ್ಗ – 17,000
ರಾಯಚೂರು – 34,689
ಕೊಪ್ಪಳ – 16,675
ಬಳ್ಳಾರಿ – 39,961
ವಿಜಯಪುರ -21,601
ಬೆಳಗಾವಿ – 14,000
ದಾವಣಗೆರೆ – 35,000
ಕಲಬುರಗಿ – 25,000
ಯಾದಗಿರಿ – 6026
ಬೀದರ್‌ – 19,700
ಶಿವಮೊಗ್ಗ – 48,817
ಗದಗ – 35,500
ಉತ್ತರ ಕನ್ನಡ – 24,000
ಹಾವೇರಿ – 30,000
ಧಾರವಾಡ – 45,000
ತುಮಕೂರು – 40
ಕೋಲಾರ – 14,184
ಚಿಕ್ಕಬಳ್ಳಾಪುರ – 20,059
ರಾಮನಗರ – 35,000
ಬೆಂಗಳೂರು ಗ್ರಾಮಾಂತರ -3739

ತಾಂತ್ರಿಕ ಕಾರಣಕ್ಕಾಗಿ ಬೇಡ ಎಂದವರು

ಶಿವಮೊಗ್ಗದಲ್ಲಿ 20 ಮಂದಿ ಕಿಸಾನ್‌ ಸಮ್ಮಾನ್‌ ನಿಧಿ ಬೇಡವೆಂದು ಇ ಫಾರಂ ಸಲ್ಲಿಸಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರ ಪಟ್ಟಿಯಲ್ಲಿದ್ದರೂ, ತಮ್ಮ ಕುಟುಂಬದ ಸದಸ್ಯರು ಸರಕಾರಿ, ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ 10 ಸಾವಿರಕ್ಕೂ ಅಧಿಕ ವೇತನ ಪಡೆಯುತ್ತಿರುವುದರಿಂದ ಈ ಅರ್ಜಿ ಸಲ್ಲಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲೂ 15 ರೈತರು ಅರ್ಜಿ ಸಲ್ಲಿಸಿದ ಬಳಿಕ ಪಟ್ಟಿಯಿಂದ ಹೆಸರು ತೆಗೆಸಲು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಆನ್‌ಲೈನ್‌ ಸಮಸ್ಯೆ ಇದೆ

ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಶಿರಸಿ ಭಾಗದಲ್ಲಿ ರೈತರು ಅರ್ಜಿ ಸಲ್ಲಿಸುವ ಆಸಕ್ತಿ ತೋರಿಸುತ್ತಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಅನ್‌ಲೈನ್‌ ಸಮಸ್ಯೆಯಿಂದ ನೋಂದಣಿಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಕೇಂದ್ರಗಳಲ್ಲಿ ಒತ್ತಡ

ಎಲ್ಲ ಕಡೆಯೂ ಅರ್ಹ ಫಲಾನುಭವಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದ ಮೂಲಕ ರೈತರ ಡಾಟಾ ಸಂಗ್ರಹಿಸಲಾಗುತ್ತಿದೆ. ಕಡಿಮೆ ಸಿಬ್ಬಂದಿ ಇರುವುದರಿಂದ ರೈತಸಂಪರ್ಕ ಕೇಂದ್ರದವರಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ.

Also read  ರಾಜ್ಯ ಬಜೆಟ್ 2019-ರೈತರಿಗೆ ನೀಡಿದ ಅನುದಾನ ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

Leave a Reply