CoffeeFeatured News

ರೋಬಸ್ಟಾ ಕಾಫಿ ಗಿಡಕಸಿಯ ಮಹತ್ವ

ಕಾಫಿ ಫಸಲಿನಲ್ಲಿ ಅಧಿಕವಾದ ಏರುಪೇರುಗಳನ್ನು ನಿಯಂತ್ರಿಸಲು ಮಾಡುವುದು ಅವಶ್ಯಕವಾಗಿದೆ. ಹೀಗೆ ಗಿಡಕಸಿಗಳನ್ನು ಮಾಡುವದರಿಂದ ಗಿಡಗಳು ಬಳಲುವುದನ್ನು ತಪ್ಪಿಸಬಹುದು ಮತ್ತು ಹಾಕಿದ ಗೊಬ್ಬರದ ಸದ್ಬಳಕೆ ಆಗುವಂತೆ ನೋಡಿಕೊಳ್ಳುತ್ತದೆ.

ಗಿಡ ಕಸಿ ಮಾಡುವುದರಿಂದ ಕಾಫಿ ಗಿಡದ ಎಲ್ಲಾ ಭಾಗಗಳಿಗೆ ಸರಿಯಾಗಿ ಗಾಳಿ ಮತ್ತು ಬೆಳಕು ಬೀಳಲು ಸಹಾಯವಾಗುತ್ತದೆ. ದಕ್ಷವಾಗಿ ಮತ್ತು ದೋಷಹೀನವಾಗಿ ಮಾಡಿದ ಗಿಡಕಸಿಯಿಂದ ಆರೋಗ್ಯ ಕಾಪಾಡಿ ರೋಗ ರುಜಿನ ಮುಕ್ತವಾಗಿ ಇಡಬಹುದು.

ರೋಬಸ್ಟಾದಲ್ಲಿ ಕೊಯ್ಲು ಮುಗಿದ ಕೂಡಲೇ ಮಾಡುವ ಗಿಡಕಸಿ ಪದ್ದತಿಯಿದ್ದು ಅದನ್ನು ವಾತಾವರಣ ಪರಿಸ್ಥಿತಿ ನೋಡಿಕೊಂಡು ಮಾಡಬೇಕು. ವಾತಾವರಣದಲ್ಲಿ ಒಣ ಹವೆ ಇದ್ದು, ಮಣ್ಣಿನಲ್ಲಿ ತೇವಾಂಶ ಕೊರತೆ ಇದ್ದರೆ ಗಿಡಕಸಿಯನ್ನು ಒಂದೆರಡು ಬಿಸಿಲು ಮಳೆ (ಕಡಿಮೆ ಎಂದರೆ ಎರಡು ಇಂಚು) ಮಳೆ ಬೀಳುವ ತನಕ ಮುಂದೂಡಬೇಕು. ಒಣ ಹವೆ ಇದ್ದಾಗ ಗಿಡದ ಕಸಿ ಮಾಡಿದರೆ ಮೊದಲೇ ಕುಯಿಲುನಿಂದಾದ ಆಘಾತವಾದ ಗಿಡಗಳಿಗೆ,ನೀರಿನ ತೇವಾಂಶ ಇಲ್ಲದಿರುವುದರಿಂದ ಮರು ಅಘಾತವಾಗಿ ಮುಂಬರುವ ರೆಕ್ಕೆಗಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.ಒಂದೆರಡು ಬೇಸಿಗೆ ಮಳೆ ಬಂದಾಗ,ಗಿಡಗಳಲ್ಲಿ ಚಿಗುರುಗಳು ಒಡೆಯುತ್ತವೆ ಈ ಸಮಯದಲ್ಲಿ ಗಿಡ ಕಸಿಯನ್ನು ಮಾಡಲು ಪ್ರಾರಂಭ ಮಾಡಬಹುದು . ಆದರೆ ನೀರಾವರಿ ಮಾಡಿದ ಪ್ರದೇಶ ಕೊಯ್ಲು ಮುಗಿದ ಕೂಡಲೆ ಗಿಡಕಸಿ ಮಾಡಬಹುದು.

ಕಸಿ ಮಾಡುವಾಗ ಗೊಡ್ಡು ರೆಕ್ಕೆ ,ಒಣ ಕಡ್ಡಿ ,ಬಳಲಿದ ರೋಗಪೀಡಿತ,ಅಡ್ಡಡ್ಡ ಬೆಳೆದ ಮತ್ತು ನೂಲು ರೆಕ್ಕೆಗಳನ್ನು ತೆಗೆಯಬೇಕು ಆದರೆ ತೀವ್ರವಾಗಿ ಬಳಲಿದ ಗಿಡಗಳನ್ನು ಸಾಕಷ್ಟು ಮಳೆಬಿದ್ದ ನಂತರವೇ ಕಸಿ ಮಾಡಬೇಕು.ಗಿಡ ಕಸಿ ಮಾಡಲು ರೋಗ ಮುಕ್ತ ಹರಿತವಾದ ಕತ್ತಿಯ/ಚಾಕು ಬಳಕೆ ಮಾಡಬೇಕು.

Also read  Why has the coffee price fallen so low?