CoffeeFeatured News

ಹೆಚ್ಚಿದ ಪೂರೈಕೆ ಕುಸಿದ ಬೇಡಿಕೆಯಿಂದ ಕಾಫಿ ಬೆಲೆ ಇಳಿಕೆ

ಕಾಫಿ ಬೆಲೆಗಳು ಎರಡನೇ ದಿನವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತಕಂಡಿದೆ,ಅರೇಬಿಕಾ ಕಾಫಿ ಬೆಲೆಗಳು 3-ತಿಂಗಳ ಹತ್ತಿರ ಕಡಿಮೆಯಾದರೆ , ರೋಬಸ್ಟಾ ಕಾಫಿ ಬೆಲೆಗಳು 2-ತಿಂಗಳ ಕನಿಷ್ಠವನ್ನು ತಲುಪಿದೆ . CECAFE ಮಂಗಳವಾರ ಬ್ರೆಜಿಲ್ನ ಸೆಪ್ಟೆಂಬರ್ ಹಸಿರು ಕಾಫಿ ರಫ್ತುಗಳು ವರ್ಷದಿಂದ ವರ್ಷಕ್ಕೆ ಶೇಕಡಾವಾರು 7.1 ಅಂದರೆ 3.1 ಮಿಲಿಯನ್ ಚೀಲಗಳಿಗೆ ಏರಿದೆ ಎಂದು ವರದಿ ಮಾಡಿದ ನಂತರ ಬ್ರೆಜಿಲ್‌ನಿಂದ ಹೆಚ್ಚಿದ ಕಾಫಿ ರಫ್ತ್ತುನಿಂದ ಬೆಲೆಗಳು ಕುಸಿತಕಂಡವು .ಮಂದಗತಿಯ ಆರ್ಥಿಕತೆ ಮತ್ತು ಹಣದುಬ್ಬರ ಕಾರಣಗಳಿಂದ ಕಾಫಿ ಅಂಗಡಿಗಳಂತಹ ಮಾರುಕಟ್ಟೆಯಲ್ಲಿನ ಕಡಿಮೆ ಬೇಡಿಕೆಯಿಂದ ಕೂಡ ಕಾಫಿ ಬೆಲೆಗಳು ಕುಸಿತಕಂಡಿದೆ.

ವಿಯೆಟ್ನಾಂನಿಂದ ದೃಢವಾದ ಕಾಫಿ ಸರಬರಾಜು ಕಾಫಿ ಬೆಲೆಗೆ ನಕಾರಾತ್ಮಕ ಪರಿಣಾಮಬೀರಿದೆ .ವಿಯೆಟ್ನಾಂನ ಕಸ್ಟಮ್ಸ್ ಜನರಲ್ ಡಿಪಾರ್ಟ್ಮೆಂಟ್ ಕಳೆದ ಶುಕ್ರವಾರ ವರದಿ ಪ್ರಕಾರ ವಿಯೆಟ್ನಾಂ 2021/22 (ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡತೆ ) ಋತುವಿನಲ್ಲಿ 1.73 MMT ಕಾಫಿಯನ್ನು ರಫ್ತು ಮಾಡಿದೆ, ಇದು 4 ವರ್ಷಗಳ ಗರಿಷ್ಠವಾಗಿದೆ. ವಿಯೆಟ್ನಾಂ ರೋಬಸ್ಟಾ ಕಾಫಿಯ ವಿಶ್ವದ ಅತಿದೊಡ್ಡ ಉತ್ಪಾದಕವಾಗಿದೆ.

ಬ್ರೆಜಿಲ್‌ನಲ್ಲಿ ಸಮೃದ್ಧವಾದ ಮಳೆಯ ಸುದ್ದಿಯಿಂದ ಕಾಫಿ ಬೆಲೆಗಳು ಕಡಿಮೆಯಾಗುತ್ತಿವೆ, ಇದು ಮುಂದಿನ ವರ್ಷದ ಕಾಫಿ ಬೆಳೆಗೆ ಹೂಬಿಡುವಿಕೆಯನ್ನು ಉತ್ತೇಜಿಸುತ್ತದೆ. ಮಿನಾಸ್ ಗೆರೈಸ್‌ನಲ್ಲಿ ಕಳೆದ ವಾರ 62.9 ಮಿಮೀ ಅಥವಾ ಐತಿಹಾಸಿಕ ಸರಾಸರಿಯ 243% ಮಳೆಯಾಗಿದೆ ಎಂದು ಸೋಮರ್ ಮೆಟಿಯೊರೊಲೊಜಿಯಾ ಸೋಮವಾರ ವರದಿ ಮಾಡಿದೆ. ಮಿನಾಸ್ ಗೆರೈಸ್ ಬ್ರೆಜಿಲ್‌ನ ಅರೇಬಿಕಾ ಬೆಳೆಯಲ್ಲಿ ಸುಮಾರು 30% ರಷ್ಟು ಪಾಲುಹೊಂದಿದೆ.

ಬ್ರೆಜಿಲ್‌ನಲ್ಲಿ ಕಾಫಿ ಕೊಯ್ಲು ಒತ್ತಡವು ಕಾಫಿ ಬೆಲೆಗೆ ಒಂದು ನಕಾರಾತ್ಮಕ ಅಂಶವಾಗಿದೆ. ಬ್ರೆಜಿಲ್‌ನ ಅತಿದೊಡ್ಡ ಕಾಫಿ ಉತ್ಪಾದಕರಲ್ಲಿ ಒಂದಾದ Cooxupe ಸಹಕಾರಿ, ಸೆಪ್ಟೆಂಬರ್ 21 ರಂದು ಬ್ರೆಜಿಲ್‌ನ ಕಾಫಿ ಕೊಯ್ಲು ಸೆಪ್ಟೆಂಬರ್ 16 ಕ್ಕೆ 99.4% ಪೂರ್ಣಗೊಂಡಿದೆ ಎಂದು ವರದಿ ಮಾಡಿದೆ.

ಕೊಲಂಬಿಯಾ ಅರೇಬಿಕಾ ಬೀನ್ಸ್‌ನ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.

Also read  Spot Pepper stays unchanged on limited activities