Featured NewsKrushi

ಮೀನಿನ ಟ್ಯಾಂಕ್‌ನಲ್ಲಿ ಒಣಗುತ್ತಿರುವ ಕಾಫಿ ಬೀಜ!

ಮೂಡಿಗೆರೆ ಮೀನುಗಾರಿಕೆ ಇಲಾಖೆಯಲ್ಲಿ ಮೀನು ಸಾಕಣೆಗೆ ಸರಕಾರ ನಿರ್ಮಿಸಿ ಕೊಟ್ಟಿರುವ ಟ್ಯಾಂಕನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಕಾಫಿ ಬೀಜ ಒಣಗಿಸಲು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮೂಡಿಗೆರೆ ಮೀನುಗಾರಿಕೆ ಇಲಾಖೆಗೆ ಮೀನು ಸಾಕಣೆ ಮಾಡಿ, ಮೀನು ಕೃಷಿಕರಿಗೆ ಮಾರಾಟ ಮಾಡಲು ಸರಕಾರ ಸುಮಾರು 8ಕ್ಕೂ ಅಧಿಕ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಈಗಾಗಲೇ ನಾಲ್ಕೈದು ಟ್ಯಾಂಕ್‌ಗಳಲ್ಲಿ ಮೀನು ಸಾಕಣೆ ಮಾಡುತ್ತಿದ್ದು, ಉಳಿದ ಟ್ಯಾಂಕ್‌ಗಳು ಖಾಲಿಯಾಗಿದ್ದವು. ಈ ಖಾಲಿ ಟ್ಯಾಂಕ್‌ನಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿ ಖಾಸಗಿ ವ್ಯಕ್ತಿಯೊಬ್ಬರಿಗೆ ಕಾಫಿ ಬೀಜವನ್ನು ಒಣಗಿಸಲು ಅವಕಾಶ ನೀಡಿದ್ದಾರೆ.

ಹಲವು ದಿನಗಳ ಹಿಂದೆ ಎರಡು ಟ್ಯಾಂಕ್‌ಗಳನ್ನು ಬಳಸಿಕೊಂಡು ಕಾಫಿ ಬೀಜ ಒಣಗಿಸಿ ತೆರವುಗೊಳಿಸಲಾಗಿದೆ. ಇತ್ತೀಚೆಗೆ ಮತ್ತೆರಡು ಟ್ಯಾಂಕ್‌ ಬಳಸಿಕೊಂಡು ಕಾಫಿ ಬೀಜ ಒಣಗಿಸಲು ಹಾಕಲಾಗಿತ್ತು.

Also read  ಕೊಳೆರೋಗದಿಂದ ಕಾಫಿ ಉದುರಲು ಕಾರಣಗಳು ಮತ್ತು ಪರಿಹಾರ

Leave a Reply