CoffeeFeatured News

ಬಿಗಿಯಾದ ಪೂರೈಕೆಯಿಂದ ಗರಿಷ್ಠ ಮಟ್ಟ ತಲುಪಿದ ಅರೇಬಿಕಾ,ರೊಬಸ್ಟಾ ಕಾಫಿ ಬೆಲೆಗಳು

ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಬೆಲೆಗಳು ಸೋಮವಾರ 10ವರ್ಷದಿಂದೀಚೆಗೆ ಗರಿಷ್ಠ ಮಟ್ಟ ತಲುಪಿದೆ .ಇದು ಸರಕು ಸಾಗಾಟದಲ್ಲಿ ಉಂಟಾಗಿರುವ ಬಿಕ್ಕಟಿನಿಂದ ಮತ್ತು ವಿಶ್ವದ ಅತಿದೊಡ್ಡ ಕಾಫಿ ಬೆಳೆಯುವ ಮತ್ತು ಸರಬರಾಜು ಮಾಡುವ ಬ್ರೆಜಿಲ್ ದೇಶದಲ್ಲಿ ಮುಂದಿನ ಕಾಫಿ ಉತ್ಪಾದನೆಯು ಕಡಿಮೆಯಾಗುವ ನಿರೀಕ್ಷೆಗಳಿಂದ ಈ ಕಾಫಿ ದರ ಏರಿಕೆಯ ಮೇಲೆ ಪ್ರಭಾವ ಬೀರಿದೆ.

ವಿಶ್ವದ್ಯಾಂತ ಉಂಟಾಗಿರುವ ಸರಕು ಸಾಗಾಟಗಳ ತೊಂದರೆಗಳಿಂದ ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಕಾಫಿ ಪೂರೈಕೆ ಬಿಗಿಯಾಗಿದೆ. ಈ ವರ್ಷದ ಆರಂಭದಲ್ಲಿ ವಿಶ್ವದ ಅಗ್ರ ರಫ್ತುದಾರ ಬ್ರೆಜಿಲ್‌ನಲ್ಲಿನ ಹವಾಮಾನ ವೈಪರೀತ್ಯದಿಂದ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಬಾರಿ ಪ್ರಭಾವ ಬೀರಿದೆ.

Also read  ಹತ್ತು ಸಾವಿರ ಗಡಿ ದಾಟಿದ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ : 8 ವರ್ಷದಲ್ಲಿ ಇದು ದಾಖಲೆಯ ಏರಿಕೆ !

ನವೆಂಬರ್‌ನಲ್ಲಿ ಬ್ರೆಜಿಲಿನ ಕಾಫಿ ಸಾಗಣೆಗಳು 100,000 ಟನ್‌ಗಳಷ್ಟು ಕಡಿಮೆಯಾಗಿದೆ ಎಂದು ಸರ್ಕಾರಿ ರಫ್ತುದಾರರ ಸಂಘ ಸೆಕೆಫೆ ವರದಿ ಮಾಡಿದೆ.

ನ್ಯೂಯಾರ್ಕ್‌ನಲ್ಲಿ ಅರೇಬಿಕಾ ಬೀನ್ಸ್‌ನ ವಹಿವಾಟು ಸೋಮುವಾರ 2. 6% ನಷ್ಟು ಹೆಚ್ಚಾಗಿದೆ. ಇದು ಅಕ್ಟೋಬರ್ 2011 ರಿಂದೀಚೆಗೆ ಗರಿಷ್ಠ ಮಟ್ಟಕ್ಕೆ ತಲುಪಿದೆ.ರೋಬಸ್ಟಾ ಕಾಫಿ ವಹಿವಾಟು ಕೂಡ 1.4% ನಷ್ಟು ಹೆಚ್ಚಾಗಿದೆ. ಇದು ಆಗಸ್ಟ್ 2011 ರಿಂದೀಚೆಗೆ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಏತನ್ಮಧ್ಯೆ,ಅಗ್ರ ರೋಬಸ್ಟಾ ಉತ್ಪಾದಕ ವಿಯೆಟ್ನಾಂನಲ್ಲಿ ಮಳೆ ಕಾಫಿ ಕುಯಿಲಿಗೆ ಅಡ್ಡಿಪಡಿಸಿದೆ. COVID-19 ಸಾಂಕ್ರಾಮಿಕದಿಂದ ಕಾಫಿ ಕುಯಿಲು ಕುಂಟಿತಗೊಂಡಿದೆ.