Black pepperFeatured News

ಕಾಳು ಮೆಣಸು ಆಮದನ್ನು ಕೂಡಲೇ ನಿಲ್ಲಿಸಬೇಕು -ಸಕಲೇಶಪುರದಲ್ಲಿ ಬೆಳೆಗಾರರ ಬೃಹತ್‌ ಪ್ರತಿಭಟನೆ

ಕಾಳುಮೆಣಸು ಬೆಲೆ ಕುಸಿಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳೇ ಕಾರಣ,ಸರ್ಕಾರ ಕಾಳು ಮೆಣಸು ಆಮದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್‌್ಸ ಸಂಘ ಹಾಗೂ ವಿವಿಧ ಹೋಬಳಿ ಬೆಳೆಗಾರರ ಸಂಘಟನೆಗಳು, ವರ್ತಕರು ಗುರುವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ,ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
‘ವಿಯೆಟ್ನಾಂನಿಂದ ಶ್ರೀಲಂಕಾಕ್ಕೆ ರಫ್ತು ಮಾಡಲಾದ ಕಳಪೆ ಗುಣಮಟ್ಟದ ಕಾಳುಮೆಣಸನ್ನು, ಅಗ್ಗದ ದರದಲ್ಲಿ ಭಾರತಕ್ಕೆ ಆಮದು ಮಾಡಿಕೊಂಡು, ಇಲ್ಲಿನ ಮೆಣಸಿಗೆ ಬೆರಕೆ ಮಾಡಿ ಇತರೆ ದೇಶಗಳಿಗೆ ಪುನಃ ರಫ್ತು ಮಾಡಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟ ಎಂಬ ಹೆಗ್ಗಳಿಕೆ ಮತ್ತು ಹೆಚ್ಚಿನ ಬೇಡಿಕೆ ಇರುವ ಸ್ಥಳೀಯ ಮೆಣಸಿನ ದರ ದಿಢೀರ್ ಕುಸಿದಿದೆ’ ಎಂದು ಬೆಳೆಗಾರರು ದೂರಿದರು.
ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ, ಕಾಫಿ ಬೆಲೆ ಕುಸಿತ ಹಾಗೂ ಇತರೆ ಕಾರಣಗಳಿಂದ ಈಗಾಗಲೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಮತ್ತಷ್ಟು ಸಮಸ್ಯೆಗಳ ಸುಳಿಗೆ ಸಿಲುಕುವಂತಾಗಿದೆ. ಕಾಫಿ ತೋಟಗಳ ಮತ್ತು ಮೆಣಸಿನ ಬೆಳೆ ನಿರ್ವಹಣೆ ಮಾಡುವುದು ದುಸ್ತರವಾಗುತ್ತಿದೆ.
ಕಾಫಿ ಮತ್ತು ಮೆಣಸಿನ ತೋಟಗಳನ್ನೆ ಅವಲಂಬಿಸಿ ಜೀವನ ನಡೆಸುತ್ತಿರುವ ರೈತರು ಮತ್ತು ಕೂಲಿ ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಗಳಿವೆ’ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.
Source:
1.Prajawani
Also read  Black pepper spot prices on 06-12-2017

Leave a Reply