Featured NewsWeather

ಕಾಫಿ ಬೆಳೆಗೆ ವರದಾನವಾದ ಮಳೆ

ಹಿಂದು ಮಹಾ ಸಾಗರದಲ್ಲಿಉಂಟಾದ ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ದಿನಗಳಿಂದ ಕಾಫಿ ಬೆಳೆಯುವ ಪ್ರದೇಶಗಳಾದ ಕೊಡಗು,ಚಿಕ್ಕಮಗಳೂರು ಜಿಲ್ಲೆಯ ಅನೇಕ ಭಾಗದಲ್ಲಿ ಬಹು ಅಮೂಲ್ಯವಾದ ಮಳೆಯಾಗಿದೆ.  

ಕಾಫಿ ಹಾಗು ಕರಿಮೆಣಸು ಸೇರಿದಂತೆ ಅನೇಕ ಬೆಳೆಗಳಿಗೆ ಮಳೆಯ ಅಗತ್ಯವಿತ್ತು.

ಕಾಫಿ ಕುಯ್ಲು ಮುಗಿದ ನಂತರ ಜನವರಿಯಿಂದ ಮಾರ್ಚ್ ಒಳಗಡೆ ಹೂ ಬಿಡುವ ಸಮಯ. ಆದರೆ, ಈ ಅವಧಿಯಲ್ಲಿ ಉತ್ತಮ ಮಳೆ ಅಗತ್ಯವಿದೆ. ಮಳೆ ಇಲ್ಲದಿದ್ದಲ್ಲಿ ಹೂ ಅರಳದೆ ಬಿಸಿಲಿನ ತಾಪಕ್ಕೆ ಅಲ್ಲಿಯೇ ಒಣಗಿ ಹೋಗುತ್ತವೆ. ಇದರಿಂದ ಮುಂದಿನ ವರ್ಷದ ಫಸಲು ಕೈಕೊಡುತ್ತದೆ. ಈಗಾಗಲೇ ಕಾಫಿ ಫಸಲು ಹಾಗೂ ದರ ಪಾತಾಳಮುಖಿಯಾಗಿದ್ದು, ಬೆಳೆಗಾರರು ದಾರಿ ಕಾಣದೆ ಪರಿತಪಿಸುತ್ತಿದ್ದಾರೆ.

ಕಾಫಿ ಹೂ ಅರಳಿಸಲು ಕೆಲವು ಕಡೆ ನೀರಿನ ಸೌಲಭ್ಯ ಇರುವವರು ಕೃತಕ ನೀರಾವರಿಯ ಮೊರೆ ಹೋಗಿದ್ದಾರೆ. ನದಿ ಹಾಗೂ ಕೆರೆಯಿಂದ ನೀರು ಹಾಯಿಸಿದ್ದಾರೆ. ಆದರೆ, ಇನ್ನು ಸಾಕಷ್ಟು ಮಂದಿ ಬೆಳೆಗಾರರು ನೀರಿನ ಸೌಲಭ್ಯ ಇಲ್ಲದೆ ಮಳೆಯನ್ನೇ ಆಶ್ರಯಿಸಿದ್ದಾರೆ. ಇವರು ಪ್ರತಿದಿನ ಆಕಾಶ ನೋಡುತ್ತ ಮಳೆ ನಿರೀಕ್ಷೆಯಲ್ಲಿದ್ದರು .ಅದರಿಂದ ಈ ಪ್ರದೇಶಗಳಲ್ಲಿ ಮಳೆ ದೊಡ್ಡ ವರದಾನವೆಂದೆನಿಸಿದೆ.  

ಪ್ರದೇಶಗಳ ಮೇಲೆ ವಿವರ  

ಮಡಿಕೇರಿ 1 ಇಂಚು  

ವಿರಾಜಪೇಟೆ 70 ಸೆಂಟ್ಸ್  

ಪಾಲಿಬೆಟ್ಟ 25 ಸೆಂಟ್ಸ್ 

ಶನಿವಾರಸಂತೆ  80 ಸೆಂಟ್ಸ್

ಬಾಳೆಹೊನ್ನೂರು ಭಾಗದಲ್ಲಿ 1ಇಂಚು 50ಸೆಂಟ್ಸ್

ಸಕಲೇಶಪುರ 60-70 ಸೆಂಟ್ಸ್

ಬೇಲೂರು-ಅರೇಹಳ್ಳಿ 25 ಸೆಂಟ್ಸ್

ಬಂಕಲ್ ಮೂಡಿಗೆರೆ 50 ಸೆಂಟ್ಸ್

Also read  Fixing Pepper Minimum Import Price is Wrong,says Exporters

Leave a Reply