Featured NewsKrushi

ಕಾಡುಪ್ರಾಣಿಗಳಿಗಾಗಿ ಕೆರೆ ಕಟ್ಟಿದ ಕೊಡಗಿನ ಕಾಫಿ ಬೆಳೆಗಾರ

ಆಹಾರ ಅರಸಿ ತೋಟಗಳಿಗೆ ಲಗ್ಗೆ ಇಡುವ ಕಾಡುಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಕುಶಾಲನಗರ ಅತ್ತೂರು ಾಮದ ಪ್ರಗಿಪರ ರೈತೊಬ್ಬರು ಮಾದರಿಯಾಗಿದ್ದಾರೆ.ಸಮೀಪದ ಅತ್ತೂರು ಮೀಸಲು ಅರಣ್ಯ ಪ್ರದೇಶದ ಕಾಡಂಚಿನಲ್ಲಿರುವ ರೈತ ಎ.ಪಿ.ಜೋಯಪ್ಪ ಅವರು ತಮ್ಮ ತೋಟದಲ್ಲಿ ಎರಡು ಬೃಹತ್ ಕೆರೆಗಳನ್ನು ನಿರ್ಮಿಸಿದ್ದಾರೆ. ಇವರಿಗೆ 15 ಎಕರೆ ತೋಟವಿದ್ದು, ತೆಂಗು, ಬಾಳೆ, ಸಪೋಟಾ, ನೇರಳೆ, ಹಲಸು, ಕಾಫಿ ಮತ್ತು ಕರಿಮೆಣಸು ಬೆಳೆದಿದ್ದಾರೆ.ಈ ತೋಟಕ್ಕೆ ಪ್ರತಿನಿತ್ಯ ಆನೆ, ಕಡವೆ, ಜಿಂಕೆ, ಕಾಡು ಹಂದಿ, ಮೊಲ, ಕಾಡೆಮ್ಮೆ ಸೇರಿದಂತೆ ಹಲವು ಪ್ರಾಣಿಗಳು ಲಗ್ಗೆ ಇಡುತ್ತವೆ. ಆದರೆ ಇವರು ಅವುಗಳ ನಿಯಂತ್ರಣಕ್ಕೆ ಸೋಲಾರ್ ತಂತಿ ಬೇಲಿ ನಿರ್ಮಿಸಿಲ್ಲ. ಅವು ತೋಟದಲ್ಲಿ ಬೇಕಾದ ಆಹಾರ ತಿಂದು ನೀರು ಕುಡಿದು ಹೋಗುವಂಥ ವಾತಾವರಣ ನಿರ್ಮಿಸಿದ್ದಾರೆ.

Also read  Coffee Prices (Karnataka) on 09-02-2022

ನವಿಲು, ಗಿಳಿ, ಪಾರಿವಾಳ ಸೇರಿದಂತೆ ಹಲವು ಪಕ್ಷಿಗಳು ನಿತ್ಯ ಜೋಯಪ್ಪ ಅವರ ಮನೆಯ ಮುಂದೆ ಬಂದು ಅವರು ಹಾಕುವ ಕಾಳುಗಳನ್ನು ತಿಂದು ಹೋಗುತ್ತಿವೆ.ಇದುವರೆಗೆ ತೋಟದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಅವರು ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಒಂದು ಅರ್ಜಿಯನ್ನೂ ಹಾಕಿಲ್ಲ. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಆನೆ–ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಕಾಡಾನೆ ಹಾವಳಿ ನಿಯಂತ್ರಿಸಬೇಕು ಎಂದು ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೋಟಕ್ಕೆ ನುಗ್ಗಿ ಹಾನಿ ಮಾಡಿದರೂ ಚಿಂತಿಸದೆ ಕಾಡುಪ್ರಾಣಿಗಳ ಯೋಗಕ್ಷೇಮದ ಬಗ್ಗೆ ವಿಶೇಷ ಕಾಳಜಿ ತೋರಿರುವ ಜೋಯಪ್ಪ ಅಚ್ಚರಿ ಮೂಡಿಸಿದ್ದಾರೆ.

Also read  Heavy Rains on 19,20 in Karnataka:IMD

ಪ್ರಕಟಣೆ : ಪ್ರಜಾವಾಣಿ

ದಿನಾಂಕ : 05-04-2018

 

Leave a Reply