CoffeeFeatured News

ಕಾಫಿ ತೋಟಕ್ಕೆ ಬೆಳ್ಳಿ ತೋರಣದ ಅಲಂಕಾರ!

ಕಣ್ಣು ಹಾಯಿಸಿದಷ್ಟಕ್ಕೂ ದೂರ ಕಾಣುವುದು ಹಸಿರು ಸಾಗರ. ಅದಕ್ಕೆ ಬೆಳ್ಳಿ ತೋರಣದ ಅಲಂಕಾರ! ಹೌದು ಕಾಫಿ ತವರೂರು ಕೊಡಗು,ಚಿಕ್ಕಮಗಳೂರು,ಹಾಸನದ ತೋಟಗಳ ಕಾಫಿ ಗಿಡಗಳಲ್ಲಿ ಘಮ ಘಮಿಸುವ ಬಿಳಿಯ ಹೂಗಳು ಅರಳಿ ತೋರಣಗಟ್ಟಿದಂತೆ ಕಾಣುತ್ತ ಸೊಬಗು ಬೀರುತ್ತಿವೆ. ಇಡೀ ಜಿಲ್ಲೆಯಲ್ಲೀಗ ಇದರದ್ದೇ ಸುವಾಸನೆ.

ಪ್ರತಿ ವರ್ಷ ಫೆಬ್ರುವರಿ ಸಮಯದಲ್ಲಿ ಜಿಲ್ಲೆಗಳ ಪ್ರಕೃತಿ ಮಾತೆಗೆ ಸುಗ್ಗಿಯ ಕಾಲ. ಕಾಫಿ ತೋಟ ಮೈತುಂಬ ಹೂ ಮುಡಿದು ನರ್ತಿಸುವ ಸಮಯ. ಕೆಲವು ಕಡೆ ಮಂಜಿಗೆ, ಮತ್ತೆ ಕೆಲವು ಕಡೆ ಸ್ಪ್ರಿಂಕ್ಲರ್ ನೀರಿಗೆ ಹೂ ಬಿಟ್ಟಿದೆ. ಇತ್ತ ತೋಟಕ್ಕೂ ನೀರು ಹಾಯಿಸಿರುವುದರಿಂದ ಮರಗಿಡಗಳು ಚಿಗುರಿ ನಿಂತಿವೆ.

ಸಾಗರದಂತೆ ಕಾಣುತ್ತಿರುವ ಕಾಫಿ ಹೂಗಳಿಗೆ ದುಂಬಿ, ಜೇನು ಹುಳುಗಳು ಮುತ್ತಿಕ್ಕುತ್ತಿವೆ. ಹೂವಿನ ಸುವಾಸನೆ ಜತೆಗೆ ಇವುಗಳ ಝೇಂಕಾರ ಪ್ರಕೃತಿಯಲ್ಲಿ ಸಂಗೀತ ನಿನಾದ ಉಂಟುಮಾಡಿದೆ.

ಕೃಷಿ ಹೊಂಡಗಳಲ್ಲಿ ಶೇಖರವಾಗಿರುವ ನೀರನ್ನು ಬಳಸಿಕೊಂಡು ಬೆಳೆಗಾರರು ಹಗಲು ರಾತ್ರಿ ಸ್ಪ್ರಿಂಕ್ಲರ್ ಮೂಲಕ ಕಾಫಿಗೆ ನೀರು ಹಾಕುತ್ತಿದ್ದಾರೆ. ಅರಳಿದ ಹೂವುಗಳ್ಳೆವು ಕಾಯಿಕಟ್ಟಿ ಮುಂದಿನ ಒಳ್ಳೆ ಫಸಲಿನ ನಿರೀಕ್ಷೆ ಯಲ್ಲಿದ್ದಾನೆ ಬೆಳೆಗಾರ.

ಕೃಪೆ:ಪ್ರಜಾವಾಣಿ

Also read  The Universal Spice - Black pepper

Leave a Reply