ಕಾಫಿ ಬೆಳೆಗಾರನ ಕೈ ಬಿಡದ ಅಡಿಕೆ
ಮಲೆನಾಡು ಪ್ರದೇಶವಾದ ಚಿಕ್ಕಮಗಳೂರಿನಲಿಗ ಅಡಿಕೆ ಕೊಯ್ಲಿನ ಭರಾಟೆ.
ಪ್ರದೇಶದ ಪ್ರಮುಖ ಬೆಳೆಗಳಾದ ಕಾಫಿ ಹಾಗೂ ಕಪ್ಪು ಮೆಣಸಿಗೆ ಮಾರುಕಟ್ಟೆಯಲಿಗ ಧಾರಣೆ ಕಡಿಮೆ ಆದರೆ ಅಡಿಕೆಗೆ ಈ ಬಾರಿ ಉತ್ತಮ ಧಾರಣೆ.
ಕಾಫಿ ಹಾಗೂ ಮೆಣಸಿಗೆ ಬೆಲೆ ಕಡಿಮೆ
ಜಾಗತಿಕ ಕಾಫಿ ಉತ್ಪಾದನೆಯ ಹೆಚ್ಚಳದ ಕಾರಣಕ್ಕೆ ಕಾಫಿ ಬೆಲೆ ನೆಲ ಕಚ್ಚಿದೆ. 50 ಕೆ.ಜಿ. ತೂಕದ ರೊಬಸ್ಟಾ ಚೆರ್ರಿ ಮತ್ತು ಅರೇಬಿಕಾ ಚೆರ್ರಿ ಕ್ರಮವಾಗಿ ₹2,900 ಮತ್ತು 3,700 ಕನಿಷ್ಠ ಧಾರಣೆ ಪಡೆದಿವೆ. 2 ವರ್ಷದಲ್ಲೇ ಕಾಫಿಗೆ ಇದು ಅತ್ಯಂತ ಕನಿಷ್ಠ ಧಾರಣೆ.
ಅತ್ತ ಕಪ್ಪು ಬಂಗಾರವೆಂದೇ ಹೆಸರಾಗಿರುವ ಕಾಳುಮೆಣಸು ಧಾರಣೆ ಕೂಡ ಕೆ.ಜಿ.ಗೆ ₹380–390 ಆಸುಪಾಸಿನಲ್ಲೇ ಸ್ಥಗಿತವಾಗಿದೆ. ವಿಯೆಟ್ನಾಂ ಕಾಳುಮೆಣಸಿನ ಆಮದಿನ ಕಾರಣಕ್ಕೆ ಮೆಣಸಿನ ಬೆಲೆಯೂ ಪಾತಾಳಕ್ಕೆ ಮುಟ್ಟಿದೆ. ಮೆಣಸಿನ ಆಮದು ಬೆಲೆಯನ್ನು ಕಿಲೋಗೆ ₹500ಗೆ ಈ ವಾರವಷ್ಟೇ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಆದರೂ ಧಾರಣೆ ಏರಲು ಕೆಲ ದಿನಗಳೇ ಬೇಕಾಗಬಹುದು.
ಇಂತಹ ಸಂಕಷ್ಟದ ಕಾಲದಲ್ಲಿ ಬೆಳೆಗಾರರ ಕೈ ಹಿಡಿಯುತ್ತಿರುವುದು ಅಡಿಕೆ. ಕ್ವಿಂಟಲ್ ಒಂದಕ್ಕೆ ರಾಶಿ ಇಡಿ ₹37,500 ಬೆಲೆ ಇದ್ದರೆ ಬೆಟ್ಟೆ ಅಡಿಕೆ ಧಾರಣೆ ₹39,000 ಆಗಿದೆ. ಇದು ಅಡಿಕೆಯ ಮಟ್ಟಿಗೆ ಉತ್ತಮ ಧಾರಣೆಯೇ ಆಗಿದೆ ಎಂಬುದು ಬೆಳೆಗಾರರ ಅಭಿಪ್ರಾಯ. ಆದರೂ ಜನವರಿ ಕಳೆದರೆ ಅಡಿಕೆ ಬೆಲೆ ಗಗನಕ್ಕೆ ಏರುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಹುತೇಕ ಬೆಳೆಗಾರರು ಅಡಿಕೆ ಮಾರದೆ ಉಳಿಸಿಕೊಂಡಿದ್ದಾರೆ.
ಎರಡು ವರ್ಷದ ಸತತ ಮಳೆ ಕೊರತೆ ಕಾರಣಕ್ಕೆ ಬಯಲು ಸೀಮೆಯಲ್ಲಿ ಅಡಿಕೆ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 4–5 ವರ್ಷ ಅಡಿಕೆ ಬೆಲೆ ಇಳಿಯದು ಎಂಬ ಭಾವನೆ ಇದೆ.
Read more here : ಪ್ರಜಾವಾಣಿ