ತೋಟದಲ್ಲಿ ಏಪ್ರಿಲ್ /ಮೇ ತಿಂಗಳುಗಳಲ್ಲಿ ಮಾಡಬೇಕಿರುವ ಕೆಲಸಗಳು
ವಿವಿಧ ಬೆಳೆಗಳಲ್ಲಿ ತೋಟದಲ್ಲಿ ಏಪ್ರಿಲ್ /ಮೇ ತಿಂಗಳುಗಳಲ್ಲಿ ಮಾಡಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿದೆ.
ಅರೇಬಿಕಾ
-
- ನೀರು ಕೊಡುವುದನ್ನು ಮುಂದುವರೆಸುವುದು.
- ಗಿಡಗಳ ಬುಡಕ್ಕೆ ಮುಚ್ಚುವುದು.
- ಬಿಳಿ ಕಾಂಡಕೊರಕ ಹತೋಟಿಗೆ ಕ್ರಮ ವಹಿಸುವುದು.(ಬೋರರ್ ಪೀಡಿತ ಗಿಡಗಳನ್ನು ಗುರುತಿಸಿ ತೆಗೆದು ನಾಶಪಡಿಸುವುದು).
- ಎಲೆ ಚುಕ್ಕಿ ರೋಗಕ್ಕೆ ಕಾಂಟಾಫ್ ಸ್ಪ್ರೇ ಮಾಡುವುದು.
- ಬಯೋ-20 1 ಲೀಟರನ್ನು 200 ಲೀಟರ್ ನೀರಿಗೆ ಹಾಕಿ ಸ್ಪ್ರೇ ಮಾಡುವುದು.
- ಅಥವಾ
ಜಿಂಕ್ ಸಲ್ಫೇಟ್ 25 ಕೆಜಿ
ಬೊರಾನ್ 15 ಕೆಜಿ
ಮೆಗ್ನಿಶಿಯಂ ಸಲ್ಫೇಟ್ 50 ಕೆಜಿ
ನೀಮ್ ಪೌಡರ್ 50 ಕೆಜಿ
ಮಿಶ್ರಣ ಮಾಡಿ ಪ್ರತಿ ಗಿಡಗಳಿಗೆ 150-200 ಗ್ರಾಂ ಕೊಡುವುದು.
- ಕಳೆಯ ನಿಯಂತ್ರಣ ಮಾಡುವುದು.
- ಕಂಬ ಚಿಗುರು ತೆಗೆಯುವುದು.
ರೊಬಸ್ಟಾ
- ನೀರು ಕೊಡುವುದನ್ನ ಮುಂದುವರೆಸಬಹುದು.
- ಕಂಬ ಚಿಗುರು ತೆಗೆಯುವುದು.
- ಮಿಲಿ ಬಗ್ ಅಥವಾ ರೆಕ್ಕೆ ಬೋರರ್ ಇದ್ದರೆ ಫೆರಿಫಾಸ್ ಅಥವಾ HAMLA ಸ್ಪ್ರೇ ಮಾಡುವುದು.
- ಕಳೆ ನಿಯಂತ್ರಣ ಮತ್ತು ಗಿಡಗಳ ಬುಡಕ್ಕೆ ತರಗು ಮುಚ್ಚುವುದು .
ಜಿಂಕ್ ಸಲ್ಫೇಟ್ 25 ಕೆಜಿ
ಬೊರಾನ್ 15 ಕೆಜಿ
ಮೆಗ್ನಿಶಿಯಂ ಸಲ್ಫೇಟ್ 50 ಕೆಜಿ
ನೀಮ್ ಪೌಡರ್ 50 ಕೆಜಿ
ಮಿಶ್ರಣ ಮಾಡಿ ಪ್ರತಿ ಗಿಡಗಳಿಗೆ 200-250 ಗ್ರಾಂ ಕೊಡುವುದು.
ಮೆಣಸು
- ಯೆಥೇಚ್ಛವಾಗಿ ನೀರು ಕೊಡುವುದು
- ಬಳ್ಳಿಗಳ ಬುಡಕ್ಕೆ ತರಗು ಮುಚ್ಚುವುದು
- ಕ್ಲೋರೋಪ್ಹೇರಿಫಾಸ್ 6೦೦ ಮೀ ಲಿ ಯನ್ನು 2೦೦ ಲೀಟರ್ ನೀರಿಗೆ ಬೆರಸಿ ಪ್ರತಿ ಗಿಡಗಳಿಗೆ 8-1೦ ಲೀಟರ್ ಬುಡಕ್ಕೆ ಹಾಕುವುದು.
- IMIDA 100 ಮೀ.ಲೀ ಯನ್ನು 200 ಲೀಟರ್ ನೀರಿಗೆ ಬೇರೆಸಿ ಸ್ಪ್ರೇ ಮಾಡುವುದು .
- D.A.P ಯನ್ನು 250-300 ಗ್ರಾಂ ನಂತೆ ದೊಡ್ಡ ಬಳ್ಳಿಗಳಿಗೆ ಕೊಡುವುದು.
- 12:61:0 ಯನ್ನು 200 ಲೀಟರ್ ನೀರಿಗೆ 2 ಕೆ ಜಿ ಬೆರೆಸಿ ಸ್ಪ್ರೇ ಮಾಡುವುದು.
ಅಡಿಕೆ
- ನೀರು ಕೊಡುವುದು
- C.N 200 ಗ್ರಾಂ ನಂತೆ ಪ್ರತಿ ಮರಗಳಿಗೆ ಕೊಡುವುದು.
- M -45 400 ಗ್ರಾಂ ಮತ್ತು EKOLUX 400 ಮೀ . ಲೀ ಮಿಶ್ರಣವನ್ನು ಸ್ಪ್ರೇ ಮಾಡುವುದು.