Coffee

ತೋಟದಲ್ಲಿ ಏಪ್ರಿಲ್ /ಮೇ ತಿಂಗಳುಗಳಲ್ಲಿ ಮಾಡಬೇಕಿರುವ ಕೆಲಸಗಳು

ವಿವಿಧ ಬೆಳೆಗಳಲ್ಲಿ ತೋಟದಲ್ಲಿ ಏಪ್ರಿಲ್ /ಮೇ ತಿಂಗಳುಗಳಲ್ಲಿ ಮಾಡಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿದೆ.

ಅರೇಬಿಕಾ

    • ನೀರು ಕೊಡುವುದನ್ನು ಮುಂದುವರೆಸುವುದು.
    • ಗಿಡಗಳ ಬುಡಕ್ಕೆ ಮುಚ್ಚುವುದು.
    • ಬಿಳಿ ಕಾಂಡಕೊರಕ ಹತೋಟಿಗೆ ಕ್ರಮ ವಹಿಸುವುದು.(ಬೋರರ್ ಪೀಡಿತ ಗಿಡಗಳನ್ನು ಗುರುತಿಸಿ ತೆಗೆದು ನಾಶಪಡಿಸುವುದು).
    • ಎಲೆ ಚುಕ್ಕಿ ರೋಗಕ್ಕೆ ಕಾಂಟಾಫ್ ಸ್ಪ್ರೇ ಮಾಡುವುದು.
    • ಬಯೋ-20 1 ಲೀಟರನ್ನು 200 ಲೀಟರ್ ನೀರಿಗೆ ಹಾಕಿ ಸ್ಪ್ರೇ ಮಾಡುವುದು.
    • ಅಥವಾ
      ಜಿಂಕ್ ಸಲ್ಫೇಟ್           25 ಕೆಜಿ
      ಬೊರಾನ್                 15 ಕೆಜಿ
      ಮೆಗ್ನಿಶಿಯಂ ಸಲ್ಫೇಟ್  50 ಕೆಜಿ
      ನೀಮ್ ಪೌಡರ್         50 ಕೆಜಿ

ಮಿಶ್ರಣ ಮಾಡಿ ಪ್ರತಿ ಗಿಡಗಳಿಗೆ 150-200 ಗ್ರಾಂ ಕೊಡುವುದು.

  •  ಕಳೆಯ ನಿಯಂತ್ರಣ ಮಾಡುವುದು.
  •  ಕಂಬ ಚಿಗುರು ತೆಗೆಯುವುದು.

ರೊಬಸ್ಟಾ

  • ನೀರು ಕೊಡುವುದನ್ನ ಮುಂದುವರೆಸಬಹುದು.
  • ಕಂಬ ಚಿಗುರು ತೆಗೆಯುವುದು.
  • ಮಿಲಿ ಬಗ್ ಅಥವಾ ರೆಕ್ಕೆ ಬೋರರ್ ಇದ್ದರೆ ಫೆರಿಫಾಸ್ ಅಥವಾ HAMLA ಸ್ಪ್ರೇ ಮಾಡುವುದು.
  • ಕಳೆ ನಿಯಂತ್ರಣ ಮತ್ತು ಗಿಡಗಳ ಬುಡಕ್ಕೆ ತರಗು ಮುಚ್ಚುವುದು .

ಜಿಂಕ್ ಸಲ್ಫೇಟ್          25 ಕೆಜಿ
ಬೊರಾನ್             15 ಕೆಜಿ
ಮೆಗ್ನಿಶಿಯಂ ಸಲ್ಫೇಟ್  50 ಕೆಜಿ
ನೀಮ್ ಪೌಡರ್         50 ಕೆಜಿ
ಮಿಶ್ರಣ ಮಾಡಿ ಪ್ರತಿ ಗಿಡಗಳಿಗೆ 200-250 ಗ್ರಾಂ ಕೊಡುವುದು.

ಮೆಣಸು

  • ಯೆಥೇಚ್ಛವಾಗಿ ನೀರು ಕೊಡುವುದು
  • ಬಳ್ಳಿಗಳ ಬುಡಕ್ಕೆ ತರಗು ಮುಚ್ಚುವುದು
  • ಕ್ಲೋರೋಪ್ಹೇರಿಫಾಸ್ 6೦೦ ಮೀ ಲಿ ಯನ್ನು 2೦೦ ಲೀಟರ್ ನೀರಿಗೆ ಬೆರಸಿ ಪ್ರತಿ ಗಿಡಗಳಿಗೆ 8-1೦ ಲೀಟರ್ ಬುಡಕ್ಕೆ ಹಾಕುವುದು.
  • IMIDA 100 ಮೀ.ಲೀ ಯನ್ನು 200 ಲೀಟರ್ ನೀರಿಗೆ ಬೇರೆಸಿ ಸ್ಪ್ರೇ ಮಾಡುವುದು .
  • D.A.P ಯನ್ನು 250-300 ಗ್ರಾಂ ನಂತೆ ದೊಡ್ಡ ಬಳ್ಳಿಗಳಿಗೆ ಕೊಡುವುದು.
  • 12:61:0 ಯನ್ನು 200 ಲೀಟರ್ ನೀರಿಗೆ 2 ಕೆ ಜಿ ಬೆರೆಸಿ ಸ್ಪ್ರೇ ಮಾಡುವುದು.

ಅಡಿಕೆ

  • ನೀರು ಕೊಡುವುದು
  • C.N 200 ಗ್ರಾಂ ನಂತೆ ಪ್ರತಿ ಮರಗಳಿಗೆ ಕೊಡುವುದು.
  • M -45 400 ಗ್ರಾಂ ಮತ್ತು EKOLUX 400 ಮೀ . ಲೀ ಮಿಶ್ರಣವನ್ನು ಸ್ಪ್ರೇ ಮಾಡುವುದು.
Also read  Coffee Prices Rebound from early losses