Black pepperFeatured News

ಕಾಳುಮೆಣಸಿನಲ್ಲಿ ಸೊರಗು ರೋಗದ ಹರಡುವಿಕೆ – ರೈತರಿಗೆ ಎಚ್ಚರಿಕೆ

ಧಾರಾಕಾರ ಮಳೆಯ ಕಾರಣದಿಂದಾಗಿ ತೋಟದಲ್ಲಿ ತೇವಾಂಶ ಹೆಚ್ಚಾಗಿ ತಿರುಗುತ್ತಿರುವ ಕಾರಣ ಸೊರಗು ರೋಗವು ವ್ಯಾಪಕವಾಗಿ ಹರಡುತ್ತಿದೆ. ಮಳೆಯ ಅವಧಿ, ಹೆಚ್ಚಿನ ತೇವಾಂಶ ಇರುವ ಹವಾಮಾನದಲ್ಲಿ ಕಾಳುಮೆಣಸು ಬೆಳೆಗಳಲ್ಲಿ ಸೊರಗು ರೋಗ (Leaf Blight / Collar Rot) ಹರಡುತ್ತಿದ್ದು, ರಾಜ್ಯದ ಹಲವಾರು ಭಾಗಗಳಲ್ಲಿ ಇದರಿಂದ ಬೆಳೆ ಹಾನಿಯಾಗುತ್ತಿದೆ. ರೈತ ಬಂಧುಗಳು ಈ ಸಂದರ್ಭ ಎಚ್ಚರಿಕೆಯಿಂದ ರೋಗದ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವುದು ಅವಶ್ಯಕ.

ಈ ರೋಗದ ಮುಖ್ಯ ಲಕ್ಷಣಗಳು:

* ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಬಾಡಿ ಹೋಗುತ್ತವೆ
* ಬಳ್ಳಿಯ ಚಿಗುರು ಭಾಗಗಳಲ್ಲಿ ಕಪ್ಪು ಬಣ್ಣದ ಗುರುತುಗಳು ಕಾಣಿಸುತ್ತವೆ
* ನೆಲದ ಮೇಲೆ ಹರಡಿರುವ ಬಳ್ಳಿಯ ಭಾಗ (tiller base) ಕಪ್ಪಾಗಿ ಬಳ್ಳಿ ಒಣಗುತ್ತದೆ
* ಕೊನೆಯಲ್ಲಿ ಸಂಪೂರ್ಣ ತೋಟವೇ ಒಣಗುವ ಹಂತಕ್ಕೂ ಹೋಗಬಹುದು

ಈ ರೋಗದ ತೀವ್ರತೆ ಎಷ್ಟು?

ರೋಗ ಬೆಳೆಯ ಬುಡ ಭಾಗದಲ್ಲಿ ಹಿಡಿದರೆ, ತೀವ್ರ ಹಂತಕ್ಕೇ ತಲುಪಿದ ನಂತರ ಯಾವುದೇ ಔಷಧಿಯು ಪರಿಣಾಮಕಾರಿಯಾಗುವುದಿಲ್ಲ,1–1.5 ತಿಂಗಳೊಳಗೆ ಸಂಪೂರ್ಣ ತೋಟವೇ ಒಣಗಬಹುದು. ಆದ್ದರಿಂದ ತಡವಾಗುವ ಮೊದಲು ಕ್ರಮ ಕೈಗೊಳ್ಳಬೇಕು.

ತಡೆಗಟ್ಟುವ ಮತ್ತು ಚಿಕಿತ್ಸೆ ಉಪಾಯಗಳು:

ರಾಸಾಯನಿಕ ಪರಿಹಾರ:
Metalaxyl 35% + Mancozeb ಶಿಲೀಂಧ್ರನಾಶಕ (fungicide) 1 ಗ್ರಾಂ 1 ಲೀಟರ್ ನೀರು
ವಿಧಾನ: Sticker (ಅಂಟಿಕೆ) ಜೊತೆಗೆ ಸೇರಿಸಿ, ಎಲೆಗಳಿಗೆ ಸಮಾನವಾಗಿ ಸ್ಪ್ರೇ ಮಾಡುವುದು
ಉತ್ತಮ ಸಮಯ:ಮಳೆಯ ಆರಂಭದ ವೇಳೆಯಲ್ಲಿಯೇ ಮುಂಚಿತವಾಗಿ ಸ್ಪ್ರೇ ಮಾಡುವುದು ಉತ್ತಮ

ನೈಸರ್ಗಿಕ ನಿರ್ವಹಣೆ:
ಹಾನಿಯಾಗಿರುವ ಎಲೆಗಳು ಮತ್ತು ಬಳ್ಳಿಗಳನ್ನು ತೆಗೆದು ಹಾಕಿ
ನೆಲ ಒದ್ದೆಯಾದರೆ ತಕ್ಷಣ ಒಣಗಿಸುವ ಕ್ರಮ ಕೈಗೊಳ್ಳಿ
ಟ್ರೈಕೊಡೆರ್ಮಾ (Trichoderma) ಅಥವಾ ನೀಮ್ ಕೆಕ್ (Neem Cake) ಬಳಸುವುದರಿಂದ ಬೆಳೆಗೆ ರಕ್ಷಣೆ ದೊರೆಯಬಹುದು

ರೈತರಿಗಾಗಿ ಪ್ರಮುಖ ಸಲಹೆಗಳು:
ತೋಟದ ಮೆಣಸಿನ ಬಳ್ಳಿಗಳನ್ನು ಪ್ರತಿ ನಿತ್ಯ ಪರೀಕ್ಷಿಸಿ – ಎಲೆ ಬಣ್ಣ ಬದಲಾಗುವುದು ಅಥವಾ ಬಳ್ಳಿ ಒಣಗುವುದು ಕಂಡು ಬಂದ ತಕ್ಷಣ ಸ್ಪ್ರೇ ಮಾಡಿ
ನೆಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಡ್ರೈನೇಜ್ ವ್ಯವಸ್ಥೆ ಉತ್ತಮವಾಗಿರಲಿ.
ನೆಲದ ಮೇಲೆ ಹರಡಿರುವ ಬಳ್ಳಿಗಳಿಗೆ ಹೆಚ್ಚು ರೋಗ ಹಿಡಿಯುವ ಸಾಧ್ಯತೆ – ಅವುಗಳ ಕಟಿಂಗ್‌ ಮತ್ತು ಪ್ರೂನಿಂಗ್‌ ಮಾಡುವುದು ಉತ್ತಮ
ಹಿಂದಿನ ವರ್ಷ ರೋಗ ಬಂದಿದ್ದ ಕಡೆ ಮತ್ತೆ ಬಳ್ಳಿ ಹಾಕಬೇಡಿ ಅಥವಾ ಜೈವಿಕ ನಿರೋಧಕಗಳನ್ನು ಬಳಸಿದ ಮೇಲೆ ಮಾತ್ರ ಬಳ್ಳಿ ನೆಡಬೇಕು.

ಸೂಚನೆ:ಈ ರೋಗ ಸಾಮಾನ್ಯವಾಗಿ ಮಳೆಗಾಲದ ಕೊನೆಯಲ್ಲಿ ಅಥವಾ ಧಾರಾಕಾರ ಮಳೆಯ ನಂತರ ತೀವ್ರವಾಗುತ್ತದೆ. ಆದ್ದರಿಂದ ಈ ರೋಗವನ್ನು ಮುಂಚಿತವಾಗಿ ಗುರುತಿಸಿ ನಿಗಾ ವಹಿಸಿದರೆ ದೊಡ್ಡ ನಷ್ಟವನ್ನು ತಪ್ಪಿಸಬಹುದು.

Also read  All you need to know about deadly Nipah Virus