Black pepperFeatured News

‘ರೋಗನಿರೋಧಕ ಶಕ್ತಿ ಹೆಚ್ಚಿರೋ ಸಿಗಂದಿನಿ ಕಾಳುಮೆಣಸಿನ ತಳಿ’

ಸಿದ್ಧಾಪುರ ತಾಲೂಕಿನ ಕಾನಸೂರು ಸಮೀಪದ ಕೊಡ್ಸರ ಹುಣಸೆಕೊಪ್ಪದ ಗ್ರಾಮೀಣ ರೈತ ರಮಾಕಾಂತ ಹೆಗಡೆ ತಮ್ಮ ವೆನಿಲ್ಲಾ ಬೆಳೆ ಕೈಕೊಟ್ಟ ನಂತರ ಕೈಕಟ್ಟಿ ಕೂತುಕೊಳ್ಳಲಿಲ್ಲ. ತಮ್ಮ ತೋಟದಲ್ಲಿ ಎಲ್ಲಾ ತೊಂದರೆಗಳ ಮಧ್ಯೆ ಹುಲುಸಾಗಿ ಬೆಳೆದಿದ್ದ ಕರಿಮೆಣಸಿನ ಬಳ್ಳಿಯ ವೈಶಿಷ್ಟ್ಯ ತಿಳಿಯತೊಡಗಿದರು. ತಜ್ಞರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಕರಿಮೆಣಸಿನ ಕೃಷಿ ವಿಸ್ತರಣೆ ಮಾಡಿದರು.

ಬಳ್ಳಿಯ ಗಿಡಗಳ ನರ್ಸರಿ ಮಾಡಿದರು. ಹೆಚ್ಚಿನ ಮಳೆಗೆ ಹೆದರದ ರೋಗನಿರೋಧಕ ಶಕ್ತಿ ಇರುವ ಸ್ಥಳಿಯ ಕರಿಮೆಣಸಿನ ಪ್ರಬೇಧವನ್ನು ಬೆಳೆದು ಮಾರುಕಟ್ಟೆಗೆ ಕಳುಹಿಸಿದರು. ಸ್ಥಳಿಯ ಮಾರುಕಟ್ಟೆಯಲ್ಲಿ ರಮಾಕಾಂತ ಹೆಗಡೆಯವರ ಬಿಳಿ ಬೋಳುಕಾಳು,ಕರಿಮೆಣಸಿನ ಬೆಳೆಗೆ ಹೆಚ್ಚಿನ ಬೆಲೆಯೂ ದೊರೆಯಿತು. ಈ ಬಗ್ಗೆ ಕರಿಮೆಣಸು ತಜ್ಞ ಡಾ. ವೇಣುಗೋಪಾಲರ ಮಾರ್ಗದರ್ಶನ ಪಡೆದು ಪೇಟೆಂಟ್ ಗೆ ಪ್ರಯತ್ನಿಸಿದರು. ಈ ಪ್ರಯತ್ನ ಈಗ ಫಲ ಕೊಟ್ಟಿದ್ದು ಗ್ರಾಮೀಣ ರೈತ ರಮಾಕಾಂತ್ ಹೆಗಡೆಯವರಿಗೆ ತಮ್ಮ ಸಿಗಂದಿನಿ ಕರಿಮೆಣಸು ತಳಿಗೆ ಪೇಟೆಂಟ್ ಸಿಕ್ಕಿದೆ.

Also read  Black Pepper Spot Prices Stays Firm

ರಾಜ್ಯದ ಸಿಗಂದಿನಿ ಕಾಳುಮೆಣಸಿಗೆ ಪೇಟೆಂಟ್‌ ಗೌರವ,15ನೇ ಶತಮಾನದ ಹಿನ್ನೆಲೆಯ ಉ.ಕ. ಕರಿಮೆಣಸಿಗೆ ಅಂತರಾಷ್ಟ್ರೀಯ ಮಾನ್ಯತೆ

ಸಿಗಂದಿನಿ ಕಾಳುಮೆಣಸಿನ ಗೊಂಚಲು

ಹುಣಸೆಕೊಪ್ಪದ ಕೃಷಿಕ ರಮಾಕಾಂತ ಹೆಗಡೆ ಬೆಳೆದಿರುವ ಕಾಳುಮೆಣಸಿಗೆ ಕೇಂದ್ರ ಸರಕಾರದ ಪೇಟೆಂಟ್‌ ಲಭ್ಯವಾಗಿದ್ದು ಈ ತಳಿಗೆ  “ಸಿಗಂದಿನಿ” ಎಂದು ನಾಮಕರಣ ಮಾಡಲಾಗಿದೆ. ಇದುವರೆಗೆ ಕಾಳುಮೆಣಸಿನ 3 ತಳಿಗೆ ಮಾತ್ರ ಪೇಟೆಂಟ್‌ ಲಭಿಸಿದ್ದು, ಅದರಲ್ಲಿ 2 ಕೇರಳದ ಪಾಲಾಗಿದೆ. ಪೇಟೆಂಟ್‌ ಪಡೆದ ಕರ್ನಾಟಕದ ತಳಿ ಸಿಗಂದಿನಿಯಾಗಿದೆ. ಉತ್ತರಕನ್ನಡ ಜಿಲ್ಲೆ 15ನೇ ಶತಮಾನದಲ್ಲಿ. ಜಗತ್ತಿಗೆ ಕಾಳು ಮೆಣಸನ್ನು ಪರಿಚಯಿಸಿದ ಖ್ಯಾತಿ ಹೊಂದಿದೆ. ಜಿಲ್ಲೆಯಲ್ಲಿ ಕರಿಮೆಣಸಿನ ಹಲವಾರು ತಳಿಗಳು ಇವೆ. ಹೀಗಿದ್ದರೂ, ಅವುಗಳಿಗೆ ಪೇಟೆಂಟ್‌ ಮಾನ್ಯತೆ ಲಭಿಸಿದ್ದು ಜದೇ ಮೊದಲು. ತೋಟಗಾರಿಕೆ ಇಲಾಖಾ ಅಧಿಕಾರಿಗಳ ನೆರವಿನೊಂದಿಗೆ ಪೇಟೆಂಟ್‌ ಗಳಿಸುವ ನಿಟ್ಟಿನಲ್ಲಿ ಶ್ರಮಿಸಿ ಗಮನ ಸೆಳೆದಿದ್ದಾರೆ ಕೃಷಿಕರಾದ ರಮಾಕಾಂತ ಹೆಗಡೆ.

ಸಾಂಪ್ರಾದಾಯಿಕ ಅಡಕೆ ತೋಟದಲ್ಲಿ ಬೆಳೆದ ಈ ಕಾಳುಮೆಣಸಿನ ತಳಿ ರಮಾಕಾಂತರ ಅಜ್ಜನ ಕಾಲದಿಂದಲೂ ಇತ್ತಾದರೂ ವೆನಿಲಾ ಅಬ್ದರದ ಕಾಲದಲ್ಲಿ ಮೂರೆಗುಂಪಾಗಿತ್ತು. ನಂತರ ವೆನಿಲಾ ತೆರವುಗೊಳಿಸಿದಾಗ ಯಾವುದೇ ರೋಗ ರುಜಿನವಿಲ್ಲದೆ ಹಸಿರಾಗಿರುವ ಕಾಳುಮೆಣಸಿನ ಬಳ್ಳಿಯನ್ನು ಕಂಡು ಆಸಕ್ತಿ ಹೊಂದಿ ಅದನ್ನು ಅಭಿವೃದ್ಧಿಪಡಿಸಿದರು. ಈ ಸಂದರ್ಭದಲ್ಲಿ ತೋಟಕ್ಕೆ ಭೇಟಿ ನೀಡಿದ ತೋಟಗಾರಿಕಾ ಇಲಾಖೆಯ. ಅಧಿಕಾರಿಗಳು, ಇದು ಅಪರೂಪದ ತಳಿ ಎಂದು ಗುರುತಿಸಿ ಪೆಟೆಂಟ್‌ ಪಡೆಯಲು ಸಹಕಾರ ನೀಡಿದರು.

Also read  Heavy rain over South Interior Karnataka on 20 and 21 May:IMD

ಸಿಗಂಧಿನಿಯ ವೈಶಿಷ್ಟ್ಯ ಹಲವು

ಸಿಗಂದಿನಿ ಕಾಳುಮೆಣಸಿನ ಬಳ್ಳಿ
  • ಸಿಗಂದಿನಿ ಕಾಳುಮೆಣಸಿನ ಬಳ್ಳಿಗೆ ರೋಗದ ಪ್ರಮಾಣ ಕಡಿಮೆ. ಬುಡದಲ್ಲಿ ಹರಡುವ ಕವಲು ಬಳ್ಳಿಗೆ ರೋಗ ಬಂದರೂ ತಾಯಿ ಬಳ್ಳಿಗೆ ರೋಗ ಬರುವುದಿಲ್ಲ.ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗ ನಿರೋಧಕ ಶಕ್ತಿ ಅಥವಾ ರೋಗ ಸಹಿಷ್ಣುತೆ.
  • ಸಿಗಂದಿನಿ ಕಾಳುಮೆಣಸು ನಾಟಿ ಮಾಡಿದ ಎರಡು ವರ್ಷಕ್ಕೆ ಫಸಲು ನೀಡುತ್ತದೆ. ಉತ್ತಮವಾಗಿ ನಿರ್ವಹಣೆಯಿದ್ದರೆ ಹೆಚ್ಚಿನ ಫಸಲು ಸಿಗುತ್ತದೆ. ನಿರ್ವಹಣೆ ಇಲ್ಲದಿದ್ದರೂ ಸಾಯುವುದಿಲ್ಲ.
  • ಕಾಳುಗಳು ಒಂದೇ ಅಳತೆ ಯದ್ದಾಗಿದ್ದು ತೂಕದ ಪ್ರಮಾಣವೂ ಹೆಚ್ಚು.ಜುಲೈ-ಆಗಸ್ಟ್‌ನಲ್ಲೆ ಹೂವು ಬಿಡುವ ಪ್ರಕ್ರಿಯೆ ಪ್ರಾರಂಭ ವಾಗಿ ಜನವರಿ- ಫೆಬ್ರವರಿಯಲ್ಲಿ ಕೊಯ್ಲು ಮುಗಿದಿರುತ್ತದೆ. ಇದರಿಂದ ಬಳ್ಳಿಗೆ ಬೆಳೆಯಲು ಅನುಕೂಲವಾಗುತ್ತದೆ.
  • ಸಾವಯವ ಗೊಬ್ಬರದಲ್ಲೆ ಬೆಳೆಯಬಹುದು. ಬೇರೆ ಯಾವುದೇ ರಾಸಾಯನಿಕ ನೀಡಬೇಕಾಗಿಲ್ಲ.
  • ಔಷಧಿಯ ಗುಣವಂತೂ ಉಳಿದೆಲ್ಲ ತಳಿಗಿಂತ ಹೆಚ್ಚಾಗಿದೆ.
  • ಸಿಗಂದಿನಿ ತಳಿ ಕಾಳುಮೆಣಸಿನ ಲೀಟರ್‌ ವೇಯ್ಟ್‌ ಹೆಚ್ಚು ಇರುವುದರಿಂದ ಇದನ್ನು ವಿದೇಶಕ್ಕೂ ರಪ್ತು ಮಾಡುವ ಅವಕಾಶವಿದೆ.
  • ಅಡಿಕೆ ಆಧಾರಿತ ಬಹು-ಹಂತದ ಬೆಳೆ ವ್ಯವಸ್ಥೆಗಳಿಗೆ ಹೆಚ್ಚು ಸೂಕ್ತವಾಗಿದೆ.

ಹೆಚ್ಚಿನ ಮಾಹಿತಿಗೆ :

Ramakant Hegde: +919480776208

 Sigandini Nursery, Kodsar