ಕೇರಳ ಪ್ರವೇಶಿಸಿದ ಮುಂಗಾರು ಎರಡು ದಿನಗಳಲ್ಲಿ ಕರ್ನಾಟಕಕ್ಕೆ
ಕೊಚ್ಚಿ: ನೈರುತ್ಯ ಮುಂಗಾರು ನಿರೀಕ್ಷೆಗಿಂತಲೂ ಎರಡು ದಿನ ಮೊದಲೇ ಅಂದರೆ ಗುರುವಾರವೇ ಕೇರಳ ಕರಾವಳಿ ಪ್ರವೇಶಿಸಿದೆ. ‘‘ದಕ್ಷಿಣ ಅರಬ್ಬಿ ಸಮುದ್ರದ ಮೂಲಕ ನೈರುತ್ಯ ಮುಂಗಾರು ದಕ್ಷಿಣ ಕೇರಳ ಪ್ರವೇಶಿಸಿದೆ. ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ, ಪುದುಚೆರಿ, ತಮಿಳುನಾಡು, ರಾಯಲಸೀಮೆ ಪ್ರವೇಶಿಸುವ ನಿರೀಕ್ಷೆ ಇದೆ,’’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 5ರಂದು ಮುಂಗಾರು ಕೇರಳ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿತ್ತು. ದೇಶದಲ್ಲಿ ವಾಡಿಕೆ ಮಳೆಯ ಶೇ.70ರಷ್ಟು ಜೂನ್-ಸೆಪ್ಟೆಂಬರ್ ನಡುವಿನ ಮುಂಗಾರು ಋುತುವಿನಲ್ಲಿ ಸುರಿಯುತ್ತದೆ. ಈ ವರ್ಷ ವಾಡಿಕೆ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.