ಕಾಫಿ,ಕಾಳುಮೆಣಸು ಮತ್ತು ಅಡಿಕೆ – ಮಾರ್ಚ್ ತಿಂಗಳುಗಳಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳು
ಮಾರ್ಚ್ ತಿಂಗಳ ಕಾರ್ಯ ಚಟುವಟಿಕೆಗಳು
ಅರೇಬಿಕಾ
• ಮರಗಸಿ ಮಾಡುವುದು

• ಗಿಡಕಸಿ ಮಾಡುವುದು
• ನೀರು ಕೊಡುವುದನ್ನು ಮುಂದುವರಿಸುವುದು.
• ಮಣ್ಣು ಪರೀಕ್ಷೆ pH ಅನುಗುಣವಾಗಿ 19:19:19 ಅಥವಾ 16:16:16 ಗೊಬ್ಬರವನ್ನು ಹಾಕುವುದು.
• ಕಂಬ ಚಿಗುರು ತೆಗೆಯುವುದು.
• ಕ್ಲೋರೋಫೈರಿಫಾಸ್ (20ಇ.ಸಿ) ಹಚ್ಚುವುದು.
• ಬೋರರ್ ಗಿಡಗಳನ್ನು ಗುರುತಿಸಿ ಕಿತ್ತು ಸುಡುವುದು.
• 2 ಕೆ.ಜಿ 18:18:18 ಅನ್ನೋ 80 ಮಿಲಿ Planofix ಹಾಕಿ ಸ್ಪ್ರೇ ಮಾಡುವುದು.
•ಹೂವಿನ ನೀರು ಕೊಡುವುದು(ಒಂದು ಇಂಚು).
ರೋಬಸ್ತಾ

•ನೀರು ಕೊಡುವುದನ್ನು ಮುಂದುವರಿಸುವುದು.
•ಮಣ್ಣು ಪರೀಕ್ಷೆ (pH) ಗೆ ಅನುಗುಣವಾಗಿ 19 ಆಲ್ ಅಥವಾ DAP ಮಿಕ್ಸ್ ಗೊಬ್ಬರವನ್ನು 200 ಗ್ರಾಂ ನಂತೆ ಗಿಡವೊಂದಕ್ಕೆ ಹಾಕುವುದು.
•ಕಂಬ ಚಿಗುರು ತೆಗೆಯುವುದು.
•ಕಡ್ಡಾಯವಾಗಿ ಬಿದ್ದ ಹಣ್ಣನ್ನು ಆರಿಸುವುದು.
•ಗಿಡಕಸಿ ಮಾಡುವುದು.
ಕಾಳುಮೆಣಸು
•ನೆರಳು ಕಡಿಮೆ ಇರುವ ಕಡೆ ಬಿಸಿಲಿನ ತಾಪ ಹೆಚ್ಚಿದ್ದರೆ 200 ಲೀಟರ್ ನೀರಿಗೆ 6 ಕೆ.ಜಿ ಸುಣ್ಣ ಹಾಕಿ ಸ್ಪ್ರೇ ಮಾಡುವುದು
• ಕಾಳುಮೆಣಸಿನ ಕಟಿಂಗ್ ಅನ್ನು ನಾಟಿ ಮಾಡುವುದು
• ಆಟೋಟ್ರೋಫಿಕ್(autotrophic) ಅಥವಾ ಹರಿಬಳ್ಳಿ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
• ನೆರಳು ನಿಯಂತ್ರಣ ಮಾಡುವುದು.
• ಬುಡಕ್ಕೆ ಒಣ ತರಗು ಹಾಕುವುದು.
• ನೀರು ಕೊಡುವುದು ಅಗತ್ಯವಿದ್ದರೆ ಮಾತ್ರ.
• ರೋಗಗ್ರಸ್ತ ಬಳ್ಳಿಗಳನ್ನು ಕಿತ್ತು ಸುಡುವುದು.
ಅಡಿಕೆ

• ಹೇರಳವಾಗಿ ನೀರು ಕೊಡುವುದು.
• 19 All ಗೊಬ್ಬರವನ್ನು ಪ್ರತಿ ಮರಕ್ಕೆ 250 ರಿಂದ 300 ಗ್ರಾಂ ಕೊಡುವುದು.
• ಹೊಂಬಾಳೆಗೆ ಸ್ಪ್ರಿಂಟ್(sprint) 400 ಗ್ರಾಂ ಅಥವಾ ekalux 300 ಮಿಲಿ ನಿಂದ ಸ್ಪ್ರೇ ಮಾಡುವುದು.
• ಬುಡಕ್ಕೆ ಒಣಗಿದ ಗರಿ ಮುಚ್ಚುವುದು.