ಬ್ರೆಜಿಲ್‌ನಲ್ಲಿ ಕಾಫಿ ಉತ್ಪಾದನೆ ಕುಸಿತದ ಅಂದಾಜು:ಬೆಲೆ ಹೆಚ್ಚಳ
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಕಾಫಿ ಬೆಲೆ ಏರಿಕೆಯಾಗಿದೆ. ಬ್ರೆಜಿಲ್‌ನ ಅಧಿಕೃತ ಕೃಷಿ ಸಂಸ್ಥೆ ಕೋನಾಬ್ (Conab) ತನ್ನ 2025ರ ಕಾಫಿ ಉತ್ಪಾದನಾ ಸಮೀಕ್ಷೆಯಲ್ಲಿ ಬ್ರೆಜಿಲ್‌ನಲ್ಲಿ ಕಾಫಿ ಉತ್ಪಾದನೆ ಕಡಿತಗೊಳಿಸಿರುವುದರಿಂದ ಬೆಲೆಗಳು ಮೇಲೇರಿವೆ.
ಕೋನಾಬ್ ಇತ್ತೀಚಿನ ವರದಿ ಪ್ರಕಾರ, ಬ್ರೆಜಿಲ್‌ನ 2025ರ ಅರಬಿಕಾ ಕಾಫಿ ಬೆಳೆ ಅಂದಾಜು 37.0 ಮಿಲಿಯನ್ ಬ್ಯಾಗ್‌ನಿಂದ 35.2 ಮಿಲಿಯನ್ ಬ್ಯಾಗ್‌ಗಳಿಗೆ (–4.9%) ಇಳಿಕೆಯಾಗಿದೆ. ಇದೇ ರೀತಿ, ಒಟ್ಟು ಕಾಫಿ ಉತ್ಪಾದನೆ 55.7 ಮಿಲಿಯನ್ ಬ್ಯಾಗ್‌ನಿಂದ 55.2 ಮಿಲಿಯನ್ ಬ್ಯಾಗ್‌ಗಳಿಗೆ (–0.9%) ಇಳಿಕೆಯಾಗಿದೆ.
ಜಾಗತಿಕ ಕಾಫಿ ರಫ್ತು ಇಳಿಕೆಯಾಗಿದ್ದು, ಜುಲೈ ತಿಂಗಳಲ್ಲಿ –1.6% ಕುಸಿತ ಹಾಗೂ ಅಕ್ಟೋಬರ್–ಜುಲೈ ಅವಧಿಯಲ್ಲಿ –0.3% ಇಳಿಕೆ ಕಂಡುಬಂದಿದೆ ಎಂದು ಅಂತರಾಷ್ಟ್ರೀಯ ಕಾಫಿ ಸಂಸ್ಥೆ (ICO) ತಿಳಿಸಿದೆ. ಇದರ ಜೊತೆಗೆ, ICE ಕಾಫಿ ದಾಸ್ತಾನು ತೀವ್ರವಾಗಿ ಕಡಿಮೆಯಾದದ್ದು ಮತ್ತು ಅಮೆರಿಕಾದಲ್ಲಿ ಬ್ರೆಜಿಲ್ ಕಾಫಿಗೆ 50% ಸುಂಕ ವಿಧಿಸಿದ ಪರಿಣಾಮ ಖರೀದಿದಾರರು ಒಪ್ಪಂದಗಳನ್ನು ರದ್ದುಪಡಿಸಿರುವುದು, ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.