CoffeeFeatured NewsInternational

ಬ್ರೆಜಿಲ್‌ನಲ್ಲಿ ಬರ, ವಿಯೆಟ್ನಾಂನಲ್ಲಿ ಮಳೆ — ಕಾಫಿ ಬೆಲೆ ಏರಿಕೆ

ಮಂಗಳವಾರ ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಬೆಲೆಗಳು ಗಣನೀಯವಾಗಿ ಏರಿಕೆ ಕಂಡವು. ಮಾರ್ಚ್ ಅರೆಬಿಕಾ ಕಾಫಿ (KCH26) +6.75 (+1.79%) ಹೆಚ್ಚಾಗಿ ಕೊನೆಕೊಂಡರೆ , ಜನವರಿ ICE ರೋಬಸ್ಟಾ ಕಾಫಿ (RMF26) +106 (+2.38%) ಏರಿಕೆಯೊಂದಿಗೆ ವ್ಯಾಪಾರ ಅಂತ್ಯಗೊಳಿಸಿತು.

ಜಾಗತಿಕ ಕಾಫಿ ಬೆಲೆಗಳಲ್ಲಿ ಏರಿಕೆಗೆ ಬ್ರೆಜಿಲ್ ಮತ್ತು ವಿಯೆಟ್ನಾಂ ಪ್ರದೇಶಗಳಲ್ಲಿ ಉಂಟಾದ ಹವಾಮಾನ ವ್ಯಪರೀತ್ಯ ಪ್ರಮುಖ ಕಾರಣವಾಗಿದೆ.

ಬ್ರೆಜಿಲ್: ಮಳೆಯ ಕೊರತೆ ಬೆಳೆ ಅಪಾಯ

ಕಾಫಿ ಉತ್ಪಾದನೆಯಲ್ಲಿ ದೊಡ್ಡ ರಾಷ್ಟ್ರವಾದ ಬ್ರೆಜಿಲ್‌ನ ಮಿನಾಸ್ ಜೆರೈಸ್ ಪ್ರದೇಶದಲ್ಲಿ ಮಳೆಯ ಕೊರತೆ ಮುಂದುವರಿದಿದೆ. Somar Meteorologia ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ನವೆಂಬರ್ 21ರಂದು ಅಂತ್ಯಗೊಂಡ ವಾರದಲ್ಲಿ ಈ ಪ್ರದೇಶಕ್ಕೆ ಕೇವಲ 26.4 mm ಮಳೆ ಮಾತ್ರ ದಾಖಲೆಯಾಗಿದೆ — ಇದು ಸರಾಸರಿಯ 49% ಮಾತ್ರ.

ಈ ಬರ ಪರಿಸ್ಥಿತಿ ಅರಬಿಕಾ ಕಾಫಿ ಬೆಳೆಗಳ ಬೆಳವಣಿಗೆಗೆ ಧಕ್ಕೆಯಾಗಿ, ಮಾರುಕಟ್ಟೆಯಲ್ಲಿ ಸರಬರಾಜಿನ ಕುಸಿಯುವ ಮುನ್ಸೂಜನೆ ನೀಡಿದೆ.

ವಿಯೆಟ್ನಾಂ: ಭಾರೀ ಮಳೆಯಿಂದ ರೋಬಸ್ಟಾ ಕೂಯ್ಲು ವಿಳಂಬ

ವಿಶ್ವದ ಅತಿದೊಡ್ಡ ರೋಬಸ್ಟಾ ಉತ್ಪಾದನಾ ಪ್ರದೇಶವಾದ ವಿಯೆಟ್ನಾಂನ ಡಕ್ ಲಾಕ್ ಪ್ರಾಂತ್ಯದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಈ ಮಳೆಯ ಪರಿಣಾಮವಾಗಿ ಬೆಳೆ ಕೂಯ್ಲು ವಿಳಂಬ ಆಗುವ ಸಾಧ್ಯತೆ ವ್ಯಕ್ತವಾಗಿದೆ.

ಇದರಿಂದ ರೋಬಸ್ಟಾ ಕಾಫಿಯ ಜಾಗತಿಕ ಸರಬರಾಜು ಕುಂಠಿತವಾಗುವ ಭೀತಿ ಹೆಚ್ಚಿದ್ದು, ಇದು ಬೆಲೆ ಏರಿಕೆಗೆ ಕಾರಣವಾಯಿತು.

Also read  India's Coffee Production is expect to slump to 21 years low