ಬ್ರೆಜಿಲ್‌ನಲ್ಲಿ ಬರ, ವಿಯೆಟ್ನಾಂನಲ್ಲಿ ಮಳೆ — ಕಾಫಿ ಬೆಲೆ ಏರಿಕೆ
ಮಂಗಳವಾರ ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಬೆಲೆಗಳು ಗಣನೀಯವಾಗಿ ಏರಿಕೆ ಕಂಡವು. ಮಾರ್ಚ್ ಅರೆಬಿಕಾ ಕಾಫಿ (KCH26) +6.75 (+1.79%) ಹೆಚ್ಚಾಗಿ ಕೊನೆಕೊಂಡರೆ , ಜನವರಿ ICE ರೋಬಸ್ಟಾ ಕಾಫಿ (RMF26) +106 (+2.38%) ಏರಿಕೆಯೊಂದಿಗೆ ವ್ಯಾಪಾರ ಅಂತ್ಯಗೊಳಿಸಿತು.
ಜಾಗತಿಕ ಕಾಫಿ ಬೆಲೆಗಳಲ್ಲಿ ಏರಿಕೆಗೆ ಬ್ರೆಜಿಲ್ ಮತ್ತು ವಿಯೆಟ್ನಾಂ ಪ್ರದೇಶಗಳಲ್ಲಿ ಉಂಟಾದ ಹವಾಮಾನ ವ್ಯಪರೀತ್ಯ ಪ್ರಮುಖ ಕಾರಣವಾಗಿದೆ.
ಬ್ರೆಜಿಲ್: ಮಳೆಯ ಕೊರತೆ ಬೆಳೆ ಅಪಾಯ
ಕಾಫಿ ಉತ್ಪಾದನೆಯಲ್ಲಿ ದೊಡ್ಡ ರಾಷ್ಟ್ರವಾದ ಬ್ರೆಜಿಲ್‌ನ ಮಿನಾಸ್ ಜೆರೈಸ್ ಪ್ರದೇಶದಲ್ಲಿ ಮಳೆಯ ಕೊರತೆ ಮುಂದುವರಿದಿದೆ. Somar Meteorologia ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ನವೆಂಬರ್ 21ರಂದು ಅಂತ್ಯಗೊಂಡ ವಾರದಲ್ಲಿ ಈ ಪ್ರದೇಶಕ್ಕೆ ಕೇವಲ 26.4 mm ಮಳೆ ಮಾತ್ರ ದಾಖಲೆಯಾಗಿದೆ — ಇದು ಸರಾಸರಿಯ 49% ಮಾತ್ರ.
ಈ ಬರ ಪರಿಸ್ಥಿತಿ ಅರಬಿಕಾ ಕಾಫಿ ಬೆಳೆಗಳ ಬೆಳವಣಿಗೆಗೆ ಧಕ್ಕೆಯಾಗಿ, ಮಾರುಕಟ್ಟೆಯಲ್ಲಿ ಸರಬರಾಜಿನ ಕುಸಿಯುವ ಮುನ್ಸೂಜನೆ ನೀಡಿದೆ.
ವಿಯೆಟ್ನಾಂ: ಭಾರೀ ಮಳೆಯಿಂದ ರೋಬಸ್ಟಾ ಕೂಯ್ಲು ವಿಳಂಬ
ವಿಶ್ವದ ಅತಿದೊಡ್ಡ ರೋಬಸ್ಟಾ ಉತ್ಪಾದನಾ ಪ್ರದೇಶವಾದ ವಿಯೆಟ್ನಾಂನ ಡಕ್ ಲಾಕ್ ಪ್ರಾಂತ್ಯದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಈ ಮಳೆಯ ಪರಿಣಾಮವಾಗಿ ಬೆಳೆ ಕೂಯ್ಲು ವಿಳಂಬ ಆಗುವ ಸಾಧ್ಯತೆ ವ್ಯಕ್ತವಾಗಿದೆ.
ಇದರಿಂದ ರೋಬಸ್ಟಾ ಕಾಫಿಯ ಜಾಗತಿಕ ಸರಬರಾಜು ಕುಂಠಿತವಾಗುವ ಭೀತಿ ಹೆಚ್ಚಿದ್ದು, ಇದು ಬೆಲೆ ಏರಿಕೆಗೆ ಕಾರಣವಾಯಿತು.
