ಮಲೆನಾಡು ಭಾಗದಲ್ಲಿ ನಿರಂತರ ಮಳೆಗೆ ಕಾಫಿ ಫಸಲು ಮಣ್ಣು ಪಾಲು
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಕಾಫಿ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶೀತ ಹೆಚ್ಚಾಗಿ,ಕಟಾವಿಗೆ ಬಂದ ಕಾಫಿ ಬೆಳೆ ಉದುರಿಹೋಗುತ್ತಿದ್ದ,ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ.ರೈತರಿಗೆ ನುಂಗಲಾರದ ತತ್ತಾಗಿ ಪರಿಣಮಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ,ಚಾರ್ಮಾಡಿ ಘಾಟ್,ಬಣಕಲ್,ಬಾಳೂರ,ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಮಲೆನಾಡ ಭಾಗಗಳಲ್ಲೂ ಭಾರೀ ಮಳೆಯಾಗಿದೆ.ಕಳೆದ ಹತ್ತು ದಿನಗಳಿಂದ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಭಾರೀ ಮಳೆಯಾಗಿದೆ.
ತಮ್ಮ ತೋಟದಲ್ಲಿ ಕಾಫಿ ಹಣ್ಣಾಗಿ ಕೊಯ್ಲು ಪ್ರಾರಂಭಿಸಲಾಗಿದೆ. ಮಳೆಯಿಂದ ಕೊಯ್ಲು ಮಾಡಲು ಅಡ್ಡಿಯಾಗುತ್ತಿದೆ. ಕೊಯ್ಲು ಮಾಡಿದ ಕಾಫಿ ಹಣ್ಣು ಒಣಗಿಸಲು ಸಾಧ್ಯವಾಗದೇ ಕೊಳೆಯಲು ಆರಂಭಿಸಿದೆ. ಮಳೆ ಹೀಗೆ ಮುಂದುವರಿದರೆ ಈ ವರ್ಷದ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಪ್ರಸನ್ನ ತಳವಾರ, ಕೃಷಿಕರು
ಈ ಬಾರಿಯೂ ಭಾರೀ ಮಳೆಯ ಜೊತೆಗೆ ಬಿರುಗಾಳಿ ಆರ್ಭಟಕ್ಕೆ ಕಾಫಿ ಫಸಲು ಮಣ್ಣುಪಾಲಾಗಿದೆ.ಕಾಫಿ ಫಸಲಿನ ಜೊತೆಗೆ ಕಾಫಿ ಗಿಡಗಳು ಕೂಡ ತೀವ್ರ ಶೀತದಿಂದ ಸಾಯುತ್ತಿದ್ದು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ.ಡಿಸೆಂಬರ್-ಜನವರಿಯಲ್ಲಿ ಹಣ್ಣು ಆಗಬೇಕಿದ್ದ ಕಾಫಿ,ಈಗಾಗಲೇ ಕೆಂಪು ಬಣ್ಣಕೆ ತಿರುಗಿ ಹಣ್ಣಾಗಿದೆ.ಅಷ್ಟೇ ಅಲ್ಲದೇ ಮಳೆಯ ಹೊಡೆತಕ್ಕೆ ಕಾಫಿ ಉದುರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.ಸತತ 3ನೇ ವರ್ಷ ಕಾಫಿ ಬೆಳೆಗಾರರು ಕಾಫಿಯನ್ನ ಕಳೆದುಕೊಳ್ಳುತ್ತಿರೋದ್ರಿಂದ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಎದುರಾಗಿದೆ ಹಾಗಾಗಿ,ಬೆಳೆಗಾರರು ಸೂಕ್ತ ಪರಿಹಾರ ಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಕೂಡಲೇ ಕೇಂದ್ರ-ರಾಜ್ಯ ಸರ್ಕಾರ ಸಂಕಷ್ಟದಲ್ಲಿರೋ ಕಾಫಿ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.