Black pepperFeatured News

ಕಾಳುಮೆಣಸಿನಲ್ಲಿ ಕೊತ್ತು ಬೀಳುವುದನ್ನು ತಡೆಗಟ್ಟುವ ಕ್ರಮ

ಬೆಟ್ಟ ಪ್ರದೇಶಗಳಾದ ಕೊಡಗು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಪನ್ನಿಯೂರ್‌-1 ತಳಿಯಿಂದ ಕೊತ್ತು ಬೀಳುವುದು ಸಾಮಾನ್ಯವಾಗಿದೆ. ಮಳೆಯು ಏಪ್ರಿಲ್ /ಮೇ ತಿಂಗಳಲ್ಲಿ ಸಾಕಷ್ಟು ಬರದೆ. ಜೂನ್‌ ತಿಂಗಲ್ಲಿ ಬಂದರೆ, ಮೆಣಸಿನ ಹೂಗಳು ಜುಲೈ ತಿಂಗಳಲ್ಲಿ ಬಂದಾಗ ಕೊತ್ತು ಬೀಳುವುದು ಸಾಮಾನ್ಯ. ಜುಲೈ ತಿಂಗಳಿನಲ್ಲಿ ಬಂದ ಹೂಗಳು ಸಾಮಾನ್ಯವಾಗಿ ಬರೀ ಹೆಣ್ಣು ಹೂವುಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳಿಂದ ಕೂಡಿರುವುದು ತುಂಬಾ ಕಡಿಮೆ.

ಇದರಿಂದ ಪರಾಗಸ್ಪರ್ಶವಾಗದ ಹೂಗಳು ಹಾಗೂ ಪೊಳ್ಳುರೋಗಕ್ಕೆ ತಗುಲಿದ ಹೂಗಳು ಅಧಿಕ ಪ್ರಮಾಣದಲ್ಲಿ ಉದುರಿ ಹೋಗುತ್ತದೆ.

Also read  TOP 5 RAINIEST PLACES OF MALNAD IN LAST 24 HRS

ಆದುದರಿಂದ ಇಂತಹ ಪದೇಶಗಳಲ್ಲಿ ಮಾರ್ಚ್‌ ಮೂರನೇ ವಾರದಿಂದ ಪ್ರತಿ 15 ದಿನಗಳ ಅಂತರದಲ್ಲಿ ಪ್ರತಿ ಬಳ್ಳಿಗೆ 50/60 ಲೀಟರ್‌ ನೀರು ಕೊಟ್ಟು, ನೆರಳು ತೆಗೆದು, ಶೇ 1 ರ ಬೋರ್ಡೋ ಮಿಶ್ರಣ ಅಥವಾ ಶೇ 0.1 ರ ಕಾರ್ಬೆಂಡಿಜಿಮ್‌ +ಮ್ಯಾಂಕೋಜೆಬ್‌ ಸಿಂಪಡಣೆ ಮಾಡುವುದರಿಂದ ಕೊತ್ತು ಬೀಳುವುದನ್ನು ನಿಲ್ಲಿಸಬಹುದು.

Also read  24hrs Rain Map of Karnataka – 26 June 2018