ಬ್ರೆಜಿಲ್‌ನಲ್ಲಿ ಬರಗಾಲ : 2021 ಕಾಫಿ ಉತ್ಪಾದನೆ ಕುಸಿಯುವ ಸಾಧ್ಯತೆ
ವಿಶ್ವದ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್ ದೇಶದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ಮೊದಲ ವಾರದಲ್ಲಿ ತಲೆದೋರಿದ ಬರಗಾಲದಿಂದ ೨೦೨೧ ಕಾಫಿ ಉತ್ಪಾದನೆ ಕುಸಿಯುವ ಸಾಧ್ಯತೆಯಿದೆ ಎಂದು ಅಂತರಾಷ್ಟ್ರೀಯ ವರದಿ ಹೇಳಿದೆ.ಅತಿದೊಡ್ಡ ಜಾಗತಿಕ ಉತ್ಪಾದಕ ಮತ್ತು ರಫ್ತು ರಾಷ್ಟ್ರವಾದ ಬ್ರೆಜಿಲ್ನನ ಕೆಲವು ಪ್ರದೇಶಗಳಲ್ಲಿ ಮುಂದಿನ ವರ್ಷದ ಬೆಳೆಯಲ್ಲಿ 50% ನಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ.
ಬ್ರೆಜಿಲ್‌ನ ಅರೇಬಿಕಾ ಪ್ರಭೇದದ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ಅಂದಾಜು ಮಾಡಲು ಈಗಲೇ ಸಾಧ್ಯತೆಯಿಲ್ಲ,ಇದರ ಕುಯಿಲು ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಎಂದು ವರದಿ ತಿಳಿಸಿದೆ.
2020 ರಲ್ಲಿ ಬ್ರೆಜಿಲ್‌ನ ಕಾಫಿ ಬೆಳೆಗಳು(ಅರೇಬಿಕಾ ಮತ್ತು ರೋಬಸ್ಟಾ ಪ್ರಭೇದಗಳ) ಸಾರ್ವಕಾಲಿಕ ಗರಿಷ್ಠ 63 ದಶಲಕ್ಷ ಚೀಲಗಳನ್ನು(6೦ ಕೆಜಿ ) ತಲುಪಿದೆ. 2020 ರಲ್ಲಿ ಅರೇಬಿಕಾ ಉತ್ಪಾದನೆಯಲ್ಲಿ ಬಾರಿ ಏರಿಕೆಯೊಂದಿಗೆ ಈ ದಾಖಲೆ ಸಾಧ್ಯವಾಗಿದೆ.
ಬ್ರೆಜಿಲ್‌ನ ಬರಗಾಲದಿಂದ ಮುಂದಿನ ಕಾಫಿ ಫಸಲಿನ ಮೇಲೆ ಪರಿಣಾಮದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಬೆಳೆಗಳು ಏರತೊಡಗಿದೆ.