ಕಾಳು ಮೆಣಸಿನಲ್ಲಿ ಫಸಲು ಹೆಚ್ಚಿಸಲು ಮಾಡಲೇಬೇಕಾದ ಕ್ರಮಗಳು
- ಪ್ರತಿ ವರ್ಷ ನವೆಂಬರ್-ಡಿಸೆಂಬರ್ನಲ್ಲಿ ಪ್ರತಿ ಬೆಳೆಗಳ, ನೆರಳು ಮರಗಳ ಮತ್ತು ವಿವಿಧ ಹಂತದ ಬಳ್ಳಿಗಳ ರೆಕ್ಕೆ ತೆಗೆದು ಮುಂದಿನ ವರ್ಷ ನಾಟಿಗೆ ಬೇಕಾದ ಮತ್ತು ಬೆಳೆ ನಿರ್ವಹಣೆಗೆ ಬೇಕಾದ ಯೋಜನೆ/ಚಿಂತನೆ ಮಾಡುವುದು.
- ನೆರಳು ಮರದಸಂಖ್ಯೆ ಆಧರಿಸಿ ಪ್ರತಿ ಹೆಕ್ಟೇರಿನಲ್ಲಿ 225-575 ಬಳ್ಳಿಗಳು ಮುಂದಿನ 2-3 ವರ್ಷದಲ್ಲಿರುವಂತೆ ನಾಟಿ ಮಾಡುವುದು. ಅಡಿಕೆ ತೋಟಗಳಲ್ಲಿ ಮರ ಬಿಟ್ಟು ಮರಕ್ಕೆ ಬಳ್ಳಿ ಹಬ್ಬಿಸುವುದು.
- ಅರೇಬಿಕ ಮತ್ತು ಅಡಿಕೆ ತೋಟಗಳಲ್ಲಿ ಒಂದಕ್ಕಿಂತ ಹೆಚ್ಚು ತಳಿಗಳಿರುವಂತೆ ನಾಟಿ ಮಾಡುವುದು.
- ಪ್ರತಿ ವರ್ಷ ಅತ್ಯಗತ್ಯ ಮಣ್ಣಿನ ಪೋಷಣೆಗೆ ಬೇಕಾದ ಕೃಷಿ ಸುಣ್ಣ/ಡೊಲೊಮೈಟ್ ಸೇರ್ಪಡೆ, 5 ಸೆಂಟಿ ಮೀಟರ್ ಎತ್ತರಕ್ಕೆ ಮಣ್ಣೇರಿಸುವುದು.ಕಾಂಪೋಸ್ಟ್ ಹಾಕುವುದು,ವರ್ಷದ ಯಾವುದೇ ಸಮಯದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡುವುದು, ತೆಳುವಾಗಿ ತರಗು ಹೊದಿಸುವುದು ಮುಂತಾದ ಕ್ರಮಗಳನ್ನು ಅಳವಡಿಸುವುದು.
- ಬಳ್ಳಿಯ ಗಾತ್ರ ಹೆಚ್ಚಿಸಲು 5-8 ಬಳ್ಳಿಗಳನ್ನು ಹತ್ತಿಸುವುದು ಮತ್ತು ಪ್ರತಿ ವರ್ಷ 1-2 ಬಳ್ಳಿಗಳನ್ನು ಎತ್ತಿ ಕಟ್ಟುವುದು.
- ಇಳುವರಿಗೆ ಆಧಾರಿತ ಗೊಬ್ಬರ ನಿರ್ವಹಣೆ ಮಾಡುವುದು. ಮಾರ್ಚ್-ಏಪ್ರಿಲ್ನಲ್ಲಿ ನೆರಳು ಮರಗಳನ್ನು ಸವರುವುದು.
- ಮಳೆಯ ಕೊರತೆಯಿದ್ದೆಡೆ ಮತ್ತು ಫಸಲಿನ ಏರಿಳಿತ ತಪ್ಪಿಸಲು ಅಯ್ದ ಬಳ್ಳಿಗಳಿಗೆ ನೀರುಣಿಸುವುದು.
- ಒಂದರಿಂದ ಮೂರು ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಶೇ. 1 ರ ಬೋರ್ಡೊ ದ್ರಾವಣ ಸಿಂಪರಣೆ ಮತ್ತು ಬುಡ ಕೊಳ” ಕೋಗವಿದ್ದೆಡೆ 0.2 ಕಾಪರ್ ಆಕ್ಷಿಕ್ಷೊರೈಡ್ನಿಂದ 3 ರಿಂದ 8 ಲೀಟರ್ನಂತೆ ಬಳ್ಳಿಯ ಬೇರಿನ ಭಾಗವನ್ನು ನೆನೆಸುವುದು.
- ಬೇರಿಗೆ ಬರುವ ಬಿಳಿ ಹುಳ, ನೆರಳು ಮರಗಳ ತೊಗಟೆಗೆ ಬರುವ ಗೆದ್ದಲು ನಿಯಂತ್ರಣ ಕ್ರಮಗಳು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಅತ್ಯಗತ್ಯ.
- ಕಡಿಮೆ ಮಳೆ ಮತ್ತು ಒಣ ಪ್ರದೇಶಗಳಲ್ಲಿ ಬುಡ ಮತ್ತು ಬೇರುಗಳು ಒಣಗಿ ಸಾಯದಂತೆ ನೀರಾವರಿ ವ್ಯವಸ್ಥೆ ಮಾಡುವುದು.