Black pepperFeatured News

ಏರುಗತಿಯಲ್ಲಿ ಕಾಳುಮೆಣಸು ಧಾರಣೆ

ಪಾತಾಳದತ್ತ ಮುಖ ಮಾಡಿದ್ದ ಕಾಳುಮೆಣಸು ಧಾರಣೆ ಒಂದು ವಾರದಿಂದ ಏರಿಕೆ ಕಾಣುತ್ತಿದ್ದ,ನಾಲ್ಕು ವರ್ಷ ಬಳಿಕ ಇದೇ ಮೊದಲ ಬಾರಿಗೆ 470 ರೂ. ಗಡಿ ದಾಟಿದ್ದ,ಬೆಳೆ ಹಾಗೂ ಬೆಲೆ ನಷ್ಟದಿಂದ ಕಂಗಾಲಾಗಿರುವ ಕೃಷಿಕರಿಗೆ ಸ್ವಲ್ಪಮಟ್ಟಿನ ನೆಮ್ಮದಿ ತರಿಸಿದೆ. ಚೇತರಿಕೆಯ ನಿರೀಕ್ಷೆ ಮೂಡಿಸಿದೆ.

ಇತ್ತೀಚಿನ ಒಂದೆರಡು ವರ್ಷಗಳಿಂದ 380 ರೂ.ನಿಂದ 390 ರೂ. ಆಸುಪಾಸಿನಲ್ಲೇ ಬೆಲೆ ಇದ್ದು,ಅತ್ತ ಏರಿಕೆಯೂ ಕಾಣದೆ, ಇತ್ತ ಕುಸಿತವೂ ಕಾಣದೆ ಸ್ಥಿರವಾಗಿತ್ತು.

ಕೇರಳದಲ್ಲಿನ ವಿಪರೀತ ಮಳೆ, ಶ್ರೀಲಂಕಾದಲ್ಲಿ ಉತ್ಪಾದನೆ ಕುಸಿತ, ವಿಯೆಟ್ನಾಂನ ಬೆಳೆ ಬದಲಾವಣೆ ಧಾರಣೆ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಸದ್ಯದ ದರ ಏರಿಕೆ ಗಮನಿಸಿದರೆ ಕೆಲವು ದಿನಗಳಲ್ಲಿ ಕೆಜಿಗೆ 500 ರೂ.ಗೆ ತಲುಪುವ ಸಾಧ್ಯತೆ ಇದೆ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು.

ಮಾರುಕಟ್ಟೆಗೆ ಅತೀ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೊರತೆ ಪ್ರಮಾಣ ನೀಗಿಸಲು ಧಾರಣೆ ಏರಿಸಿ ಬೆಳೆಗಾರರನ್ನು ಸೆಳೆಯುವ ತಂತ್ರಗಾರಿಕೆ ನಡೆಯುತ್ತಿದೆ. ಕೆಲವು ಮೂಲಗಳ ಪ್ರಕಾರ ಡಿಸೆಂಬರ್‌ ಒಳಗೆ ಧಾರಣೆ 600 ರೂ. ತಲುಪುವ ಸಾಧ್ಯತೆ ಇಲ್ಲದಿಲ್ಲ. ಏಕೆಂದರೆ ಸಾಗರ, ಕೋಣಂದೂರು, ಸಿದ್ದಾಪುರ, ಮುಂತಾದ ಕಡೆಯ ವ್ಯಾಪಾರಿಗಳು ಕಾಳುಮೆಣಸು ಖರೀದಿಸಿ ದಾಸ್ತಾನಿಗೆ ಮುಂದಾಗಿದ್ದಾರೆ.ಮಾರುಕಟ್ಟೆಯಲ್ಲಿ ದರ ಏರಿಕೆ ಕಾಣದ ಹೊರತಾಗಿ ಕೃಷಿಕರು ಕರಿಮೆಣಸು ಮಾರದೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇದೀಗ ಧಾರಣೆ ಏರಿಕೆ ಕಾಣುತ್ತಿದ್ದರೂ ಮಾರುಕಟ್ಟೆಯಲ್ಲಿ ಕರಿಮೆಣಸು ಖರೀದಿ ತೀರಾ ಸಪ್ಪೆಯಾಗಿದ್ದು, ಕೃಷಿಕರು ಇನ್ನಷ್ಟು ಧಾರಣೆ ಏರಿಕೆ ನಿರೀಕ್ಷೆಯಲ್ಲಿದ್ದಾರೆ.

ಬೇಡಿಕೆ ಹೆಚ್ಚಳ ಮುಖ್ಯವಾಗಿ ಲಾಕ್‌ಡೌನ್‌ ಬಳಿಕ ಕಾಳು ಮೆಣಸು ಆಧಾರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಬೇಡಿಕೆ ಹೆಚ್ಚಳಕ್ಕೆ ಪೂರಕವಾಗಿದೆ. ವಿದೇಶಗಳಿಂದಲೂ ಭಾರತದ ಕಾಳು ಮೆಣಸಿಗೆ ಬೇಡಿಕೆ ಉಂಟಾಗಿದ್ದು, ರಪು ಉದ್ದೇಶಕ್ಕೂ ಮೆಣಸಿನ ಅಗತ್ಯ ಇದೆ.

Also read  Pepper cultivation declines in Wayanad within 15 years

ಮಳೆಗೆ ಬೆಳೆ ಹಾನಿ ಭೀತಿ
ಕಳೆದೊಂದು ತಿಂಗಳಿನಿಂದ ಆಗಾಗ ವಾಯುಭಾರ ಕುಸಿತದ ಪರಿಣಾಮ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ಇದು ಕರಿಮೆಣಸು ಬೆಳೆ ಮೇಲೆ ದೊಡ್ಡ ಹಾನಿ ಮಾಡುವ ಭೀತಿ ಕೃಷಿಕರನ್ನು ಕಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಉತ್ತಮ ಧಾರಣೆ ಇದ್ದರೂ ಬೆಳೆ ನಷ್ಟದ ಆತಂಕ ಕೃಷಿಕರ ನಿದ್ದೆಗೆಡಿಸಿದೆ.ಕರ್ನಾಟಕದಲ್ಲೂ ಮಳೆ ಕಾರಣ ದಿಂದ ಶೇ. 25ರಷ್ಟು ಬೆಳೆ ನಷ್ಟವಾಗುವ ಭೀತಿ ಇದೆ.

ಮಾರುಕಟ್ಟೆಯಲ್ಲಿ ಸದ್ಯ 430ರಿಂದ 435 ರೂ.ವರೆಗೆ ಧಾರಣೆ ಇದ್ದರೂ ಬೆಳೆ ನಷ್ಟದಿಂದ ಕೃಷಿಕರಿಗೆ ದೊಡ್ಡ ಲಾಭ ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಧಾರಣೆ ಇನ್ನಷ್ಟು ಏರಿಕೆ ಕಾಣುವ ಮುನ್ಸೂಚನೆ ಇದೆ.

Also read  25/08/2025–Karnataka-District & Taluk-wise coffee prices