ನಿಫಾ ವೈರಸ್:ಮಾವು ಬೆಳೆಗಾರರಿಗೆ ದೊಡ್ಡ ಹೊಡೆತ
ಬಾವಲಿ ತಿಂದ ಹಣ್ಣುಗಳಿಂದ ಹಾಗೂ ಹಂದಿಗಳಿಂದ ನಿಫಾ ವೈರಸ್ ಹರಡುತ್ತಿದೆ ಎಂಬ ಮಾಹಿತಿ ತಿಳಿದು ಬಂದಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ಮಾವು ಸೇರಿದಂತೆ ಇತರೆ ಹಣ್ಣುಗಳನ್ನು ಕೊಳ್ಳುವವರಿಲ್ಲದಂತಾಗಿದೆ.
ನಿಫಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಹಣ್ಣುಗಳ ಬೆಲೆಯು ಕಡಿಮೆಯಾಗುತ್ತಿದೆ. ಇದು ಬೆಳೆಗಾರರಿಗೆ ದೊಡ್ಡ ಹೊಡೆತ ನೀಡಿದೆ.
ಮೆಟ್ರೋದಲ್ಲಿ ಓಡಾಡಿದರೆ ಸೋಂಕು ತಗುಲಬಹುದು: ಬೆಂಗಳೂರು ಜಿಲ್ಲಾಧಿಕಾರಿ ಡಿಸಿ ದಯಾನಂದ್
ಮೆಟ್ರೋ ಸೇರಿದಂತೆ ಸಮೂಹ ಸಾರಿಗೆಯಲ್ಲಿ ನಿಫಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ಹೇಳಿದ್ದಾರೆ.
ನಿಫಾ ವೈರಸ್ ಭೀತಿ–ಆತಂಕ ಬೇಡ :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮನವಿ
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಕಂಡುಬಂದಿರುವ ನಿಫಾ ವೈರಾಣು ಸೋಂಕಿನ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ಮಾಹಿತಿಯನ್ನು ಜನರು ನಂಬಬಾರದು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಮನವಿ ಮಾಡಿದರು.
‘ನಿಫಾ ವೈರಾಣು ಸೋಂಕು ಗಾಳಿ ಅಥವಾ ನೀರಿನ ಮೂಲಕ ಹರಡುವುದಿಲ್ಲ. ಸೋಂಕು ತಗುಲಿರುವ ವ್ಯಕ್ತಿಯನ್ನು ಸ್ಪರ್ಶಿಸಿದರೆ ಮಾತ್ರವೇ ಹರಡಲು ಸಾಧ್ಯ. ಸೋಂಕು ತಗುಲಿರುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಜನರು ಆತಂಕಕ್ಕೆ ಒಳಗಾಗುವಂತಹ ಯಾವುದೇ ಸ್ಥಿತಿಯೂ ಜಿಲ್ಲೆಯಲ್ಲಿ ಇಲ್ಲ’ ಎಂದರು.
ಕೇರಳದ ದುರಂತ ನಾಯಕಿಗೆ ಸರ್ಕಾರ, ಸಾರ್ವಜನಿಕರಿಂದ ನೆರವಿನ ಮಹಾಪೂರ!
ಮಾರಕ ನಿಫಾ ವೈರಾಣು ಸೋಂಕು ಪೀಡಿತ ರೋಗಿಗೆ ಚಿಕಿತ್ಸೆ ನೀಡುತ್ತಲೇ ಅದೇ ವೈರಾಣು ಸೋಂಕಿಗೆ ತುತ್ತಾಗಿ ಬಲಿಯಾದ ಕೇರಳದ ದುರಂತ ನಾಯಕಿ, ನರ್ಸ್ ಲಿನಿ ಕುಟುಂಬಕ್ಕೆ ಇದೀಗ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ನಿಫಾ ವೈರಾಣು ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದ ದಾದಿಯೇ ಬಲಿಯಾದ ವಿಚಾರ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಇದೀಗ ನರ್ಸ್ ಲಿನಿ ಕುಟುಂಬಕ್ಕೆ ಕೇರಳ ಸರ್ಕಾರ ನೆರವಿನ ಹಸ್ತ ಚಾಚಿದೆ. ಮೂಲಗಳ ಪ್ರಕಾರ ಲಿನಿ ಪತಿ ಸತೀಶ್ ಅವರಿಗೆ ಸರ್ಕಾರ ಉದ್ಯೋಗ ನೀಡುವ ಭರವಸೆ ನೀಡಿದೆ. ಅಲ್ಲದೆ ಲಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನೂ ಕೂಡ ಕೇರಳ ಸರ್ಕಾರ ಘೋಷಣೆ ಮಾಡಿದೆ.