Black pepperFeatured NewsKrushi

ಮೇಘಾಲಯದ ಈ ರೈತ 30 ವರ್ಷಗಳಿಂದ ಅತ್ಯುತ್ತಮ ಮೆಣಸು ಬೆಳೆಯುತ್ತಿದ್ದಾನೆ! ಆದರೆ ಅದು ಹೇಗೆ?

ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ಸ್ ಜಿಲ್ಲೆಯ ಟಿಕ್ರಿಕಿಲ್ಲಾ ಬ್ಲಾಕ್‌ನ 61 ವರ್ಷದ ಎನ್ ನಾನಾಡ್ರೊ ಬಿ ಮರಕ್ ಅವರ ಕಾಳು ಮೆಣಸಿನ ತೋಟ ತನ್ನ ಮನೆ ಸುತ್ತಲಿನ ಐದು ಹೆಕ್ಟೇರ್‌ನ ಬೆಟ್ಟ ಪ್ರದೇಶದಲ್ಲಿ ಹರಡಿದೆ. ತನ್ನ ಪೂರ್ವಜರಿಂದ ಪಡೆದ ಈ ತೋಟದಲ್ಲಿ 3400 ಮರಗಳಲ್ಲಿ ಕರಿಮುಂಡ ಪ್ರಭೇದದ ಮೆಣಸಿನ ಕೃಷಿ ಮಾಡಿದ್ದಾರೆ.

ಮೇಘಾಲಯದ ಪಶ್ಚಿಮ ಗಾರೊ ಬೆಟ್ಟಗಳ ನಾನಾಡ್ರೊ ಬಿ ಮರಕ್ 1986 ರಲ್ಲಿ ಸಾವಯವ ಕರಿಮೆಣಸು ಕೃಷಿಯನ್ನು ಪ್ರಾರಂಭಿಸಿದರು.ಆಗಿನ ಕಾಲದಲ್ಲಿ 10,000 ರೂ ಹೂಡಿಕೆಯೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದ ಅವರು ಸುಮಾರು ನೂರು ಮರಗಳನ್ನು ನೆಟ್ಟರು. ಪ್ರತಿ ವರ್ಷ ಮರಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋದರು.

ಅ ಪ್ರದೇಶದ ಇತರ ರೈತರಿಗಿಂತ ಭಿನ್ನವಾಗಿ,ನಾನಾಂಡ್ರೊ ಸಾವಯವ ಕೃಷಿಗೆ ಅಂಟಿಕೊಂಡರು ಮತ್ತು ಮೊದಲಿನಿಂದಲೂ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಿದರು .ಕೀಟಗಳನ್ನು ಕೊಲ್ಲಲು ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಂಡರು.

Also read  Black pepper prices rise continues

ಸಾವಯವ ಕೃಷಿಯಿಂದಾಗಿ ಇಂದು ಪ್ರತಿ ಮರಕ್ಕೆ ಸರಾಸರಿ 3.2 ಕಿಲೋ ಇಳುವರಿಯನ್ನು ನೀಡುತ್ತಿದೆ . ಇದು ರಾಜ್ಯದ ಇತರ ಬೆಳೆಗಾರರಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ, ಸಾವಯವ ಕೃಷಿಯಲ್ಲಿ ಬೆಳದ ಮೆಣಸಿನ ಕಾಳುಗಳಲ್ಲಿ ತೈಲ ಅಂಶವೂ ಹೆಚ್ಚಾಗಿದೆ. ಕಾಳುಗಳ ಸುವಾಸನೆ ,ರುಚಿ ಮತ್ತು ವಿನ್ಯಾಸವು ಇತರರಂತೆಯೇ ಇರುತ್ತದೆ.ಅವರ ಪ್ರಶಸ್ತಿಗೆ ಪ್ರಮುಖವಾದುದು ಅವರ ಈ ಉತ್ಪಾದನಾ ಪ್ರಮಾಣ.

ನಾನಾಂಡ್ರೊ ಅವರ ಕಾಳು ಮೆಣಸಿನ ಬೆಳೆಯ ಅವಧಿ 8-9 ತಿಂಗಳುಗಳು ಮತ್ತು ಅವರು ವರ್ಷಕ್ಕೆ ಎರಡು ಬಾರಿ ಕೊಯ್ಲು ಮಾಡುವ ರೀತಿಯಲ್ಲಿ ತಮ್ಮ ತೋಟವನ್ನು ರೂಪಿಸಿಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ 8,330 ಕಿಲೋ ಮೆಣಸು ನಂತರ ಎರಡನೆಯದು 2,550 ಕಿಲೋವನ್ನು ನೀಡುತ್ತದೆ – ಇದು ಪ್ರತಿವರ್ಷ ಒಟ್ಟು 10,000 ಕಿಲೋಗಳಿಗಿಂತ ಹೆಚ್ಚು. ಪ್ರತಿ ಕಿಲೋಗೆ ಸರಾಸರಿ 170 ರೂ.ಗಳ ಬೆಲೆಯೊಂದಿಗೆ, ನಾನಾಂಡ್ರೊ 2019 ರಲ್ಲಿ 17 ಲಕ್ಷ ರೂ.ಗಳ ಆದಾಯವನ್ನು ಗಳಿಸಿದರು, ಇದರಿಂದಾಗಿ ಇದು ಅತ್ಯಂತ ಸುಸ್ಥಿರ ಮಾದರಿಯಾಗಿದೆ.

ಈ ಅತ್ಯಂತ ಸುಸ್ಥಿರ ಅಭ್ಯಾಸಗಳೇ ಅವರಿಗೆ 2018 ರಲ್ಲಿ ಅಂತರರಾಷ್ಟ್ರೀಯ ಮೆಣಸು ಸಮುದಾಯ (ಐಪಿಸಿ) “ಭಾರತದ ಅತ್ಯುತ್ತಮ ಮೆಣಸು ಬೆಳೆಗಾರ’ ಎಂಬ ಬಿರುದನ್ನು ನೀಡಿತು.

ಅತ್ಯುತ್ತಮ ಮೆಣಸು ಬಿರುದು ಪಡೆಯಲು ವಿವಿಧ ಅಂಶಗಳ ಸಂಯೋಜನೆಯಾಗಿದೆ .

ಮಣ್ಣಿನ ನೆಲಸಮಗೊಳಿಸುವಿಕೆ ಯಿಂದ ಹಿಡಿದು , ಕಾಳುಗಳ ಗುಣಮಟ್ಟ, ಸಾವಯವ ಗೊಬ್ಬರ , ಕಾಳುಗಳನ್ನು ಸರಿಯಾದ ಸಮಯಕ್ಕೆ ಕೊಯ್ಲು ಮಾಡುವುದು ಹೀಗೆ ಪ್ರತಿ ಹಂತವೂ ಇಲ್ಲಿ ನಿರ್ಣಾಯಕವಾಗಿದೆ. 24 ಗಂಟೆಗಳಿಗಿಂತ ಹೆಚ್ಚು ಕಾಲ ಬಳ್ಳಿಯ ಬುಡದಲ್ಲಿ ನೀರು ನಿಂತರೆ ಬಳ್ಳಿಗಳು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತದೆ .ಅದೇ ರೀತಿ ಹೆಚ್ಚುವರಿ ಆದಾಯದ ಮೂಲವನ್ನು ಪಡೆಯಲು ನಾನಾಂಡ್ರೊ ಅವರು ಅಂತರ ಬೆಳೆಯಾಗಿ ಮೆಣಸು ನಡುವೆ ಅಡಿಕೆ ಬೆಳೆ ಕೂಡ ಬೆಳೆದಿದ್ದಾರೆ .

ನಾನಾಂಡ್ರೊ ಅವರ ಯಶಸ್ಸನ್ನು ನೋಡಿ, ಹಲವಾರು ರೈತರು ಅಡಿಕೆ ಮರಗಳ ಜೊತೆಗೆ ಕರಿಮೆಣಸು ಬೆಳೆಯುವ ಬಗ್ಗೆ ಸಲಹೆ ಮತ್ತು ತರಬೇತಿಗಾಗಿ ಅವರ ಬಳಿಗೆ ಬರುತ್ತಾರೆ.18 ಗ್ರಾಮಗಳಲ್ಲಿ ಸುಮಾರು 800 ರೈತರಿಗೆ ತರಬೇತಿ ನೀಡಿದ್ದಾರೆ .

Also read  IMD issues thunderstorms warning for 13 states till May 11

ಕಪ್ಪು ಮೆಣಸು ಬೆಳೆಯಲು ನಾನಾಂಡ್ರೊ ಅನುಸರಿಸುವ ಮೂಲ ಹಂತಗಳು ಇಲ್ಲಿವೆ:

  1. .ಪ್ರತಿ ಕರಿಮೆಣಸು ಮರದ ನಡುವೆ 8 × 8 ಅಡಿಗಳ ಅಂತರವನ್ನು ಕಾಪಾಡಿಕೊಳ್ಳಿ ಮತ್ತು ನಡುವೆ ಅಡಿಕೆ ಗಿಡ ನೆಡಬೇಕು.
  2. ಮೆಣಸಿನ ಹಣ್ಣುಗಳನ್ನು ಒಣಗಿಸುವ ಮೊದಲು ಒಂದು ನಿಮಿಷ ಕುದಿಯುವ ನೀರಿನಲ್ಲಿ ನೆನೆಸಿ ಕರಿಮೆಣಸಿನ ಗುಣಮಟ್ಟವನ್ನು ಸುಧಾರಿಸಿಬಹುದು . ಇದು ಏಕರೂಪದ ಬಣ್ಣವನ್ನು ನೀಡುತ್ತದೆ, ಸೂಕ್ಷ್ಮಜೀವಿಯ ಹೊರೆ ಕಡಿಮೆ ಮಾಡುತ್ತದೆ ಮತ್ತು ಧೂಳಿನಂತಹ ಕಲ್ಮಶಗಳನ್ನು ತೆಗೆದುಹಾಕುತ್ತದೆ.
  3. ಒಣಗಿದ ಎಲೆಗಳು, ಹುಲ್ಲು ಮತ್ತು ಬಾಳೆ ಕಾಂಡದಿಂದ ನೆಲವನ್ನು ಹಸಿಗೊಬ್ಬರ ಮಾಡಬಹುದು . ಬೇರುಗಳಿಗೆ ಹಾನಿಯಾಗದಂತೆ ಬಳ್ಳಿಗಳ ಬುಡದಲ್ಲಿ ಏನು ಕೆಲಸ ಮಾಡಬಾರದು.
  4. ಪ್ರತಿ ಗಿಡಕ್ಕೆ 10-20 ಕಿಲೋ ಒಣ ಹಸುವಿನ ಗೊಬ್ಬರ, ಎರೆಗೊಬ್ಬರ ಮತ್ತು ಕಾಂಪೋಸ್ಟ್ ಬಳಸಿ.
  5. ತೊಟ್ಟುಗಳಿಂದ ಹಣ್ಣುಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಥ್ರೆಷರ್ ಯಂತ್ರವನ್ನು ಬಳಸಿ.
  6. ಕರಿಮೆಣಸಿನಲ್ಲಿ ಕುಯ್ಲು ಸಮಯದಲ್ಲಿ ಶೇಕಡಾ 70 ರಷ್ಟು ತೇವಾಂಶವಿದೆ. ಸಾಕಷ್ಟು ಸೂರ್ಯನ ಒಣಗಿಸುವಿಕೆಯೊಂದಿಗೆ ಇದನ್ನು ಶೇಕಡಾ 10 ಕ್ಕೆ ಇಳಿಸಿ. ಬೇರ್ಪಡಿಸಿದ ಕಾಳುಗಳನ್ನು ಪ್ಲಾಸ್ಟಿಕ್ ಹಾಳೆಯಲ್ಲಿ 3-5 ದಿನಗಳವರೆಗೆ ಸೂರ್ಯನ ಶಾಖದಲ್ಲಿ ಒಣಗಿಸಿ ಶುದ್ಧವಾದ ಗೋಣಿ ಚೀಲಗಳಲ್ಲಿ ಶೇಖರಿಸಬೇಕು .
    Also read  Coffee Prices (Karnataka) on 29-12-2022