ಇಟಲಿ ಸೇರಿದಂತೆ ಯೂರೋಪ್ ಖರೀದಿದಾರರ ಹಿಂಜರಿಕೆ:ಭಾರತೀಯ ಕಾಫಿ ರಫ್ತಿಗೆ ಹೊಡೆತ
ಈ ಹೊಸ ಅರಣ್ಯ ಸಂರಕ್ಷಣಾ ನಿಯಮಗಳ (EUDR) ಪ್ರಕಾರ, ಯೂರೋಪ್‌ಗೆ ಕಾಫಿ ಮಾರಾಟ ಮಾಡುವವರು ಕಾಫಿ ಬೆಳೆಯುವ ಭೂಮಿಗಾಗಿ ಅರಣ್ಯ ಕತ್ತರಿಸಿ ಬೆಳೆದಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಇದರಿಂದ ದೊಡ್ಡ ಬೆಳೆಗಾರರು, ರಫ್ತುದಾರರು ಮಾತ್ರವಲ್ಲ, ಸಣ್ಣ ರೈತರು ಕೂಡ ಕಡ್ಡಾಯವಾಗಿ ದಾಖಲೆ ತೋರಿಸಬೇಕಾಗುತ್ತದೆ.
ಬೆಲೆಗಳು ಈಗಾಗಲೇ ಹೆಚ್ಚು ಇರುವುದರಿಂದ ಯೂರೋಪ್ ಖರೀದಿದಾರರು ಹಿಂದೆ ಸರಿಯುತ್ತಿದ್ದಾರೆ. ಇಟಲಿ ಸೇರಿದಂತೆ ಪ್ರಮುಖ ದೇಶಗಳು ಭಾರತೀಯ ಕಾಫಿ ಖರೀದಿ ಕಡಿಮೆ ಮಾಡುತ್ತಿವೆ.
ಇದರ ಪರಿಣಾಮ, 50,000 ಟನ್ ಕಾಫಿ ರೈತರ ಕೈಯಲ್ಲೇ ಮಾರಾಟವಾಗದೆ ಉಳಿಯುವ ಸಾಧ್ಯತೆ ಇದೆ ಎಂದು ಕಾಫಿ ಎಕ್ಸ್ಪೋರ್ಟರ್ಸ್ ಅಸೋಸಿಯೇಷನ್ ಎಚ್ಚರಿಸಿದೆ.
ರಫ್ತು ಕುಸಿತದ ಅಂಕಿ-ಅಂಶಗಳು
-ಜನವರಿ 1ರಿಂದ ಸೆಪ್ಟೆಂಬರ್ 1, 2025ರವರೆಗೆ ಭಾರತದಿಂದ ಕಾಫಿ ರಫ್ತು 11.32% ಇಳಿಕೆಯಾಗಿದೆ. ಅಂದರೆ, ಹಿಂದಿನ ವರ್ಷ ಇದೇ ಅವಧಿಯಲ್ಲಿ 3,02,752 ಟನ್ ಕಾಫಿ ರಫ್ತು ಮಾಡಲಾಗಿತ್ತು. ಈ ವರ್ಷ ಅದೇ ಅವಧಿಯಲ್ಲಿ ಕೇವಲ 2,68,452 ಟನ್ ಮಾತ್ರ ರಫ್ತು ಆಗಿದೆ .
->ಮೌಲ್ಯದಲ್ಲಿ ಏರಿಕೆ: ಕಳೆದ ವರ್ಷ ಕಾಫಿ ರಫ್ತು ಮೌಲ್ಯ ₹9,854 ಕೋಟಿ ಇತ್ತು. ಈ ವರ್ಷ ಅದು ಹೆಚ್ಚಾಗಿ ₹12,673 ಕೋಟಿಗೆ ತಲುಪಿದೆ.
ಯೂರೋಪ್ ಮಾರುಕಟ್ಟೆಯ ತಿರಸ್ಕಾರ
ಭಾರತದ ರೊಬಸ್ಟಾ ಕಾಫಿ ಬೆಲೆ ಉಗಾಂಡಾದಿಗಿಂತ 8–9% ಹೆಚ್ಚು ಇದೆ.ಭಾರತೀಯ ರೊಬಸ್ಟಾ ಬೆಲೆ: $5200 – $5250 ಪ್ರತಿ ಟನ್,ಉಗಾಂಡಾ ರೊಬಸ್ಟಾ ಬೆಲೆ: $4800 ಪ್ರತಿ ಟನ್,ಇದರಿಂದಾಗಿ ಇಟಲಿ ಸೇರಿದಂತೆ ಯೂರೋಪಿನ ಖರೀದಿದಾರರು “ನಿಮ್ಮ ಕಾಫಿ ತುಂಬಾ ದುಬಾರಿ” ಎಂದು ಹೇಳಿ ಖರೀದಿಯನ್ನು ತಡೆಹಿಡಿದಿದ್ದಾರೆ.
EUDR ನಿಯಮಗಳ ಅರ್ಥ
-ಈ ನಿಯಮಗಳು ಅರಣ್ಯ ನಾಶವಾಗದ ಜಾಗದಿಂದ ಬಂದ ಕಾಫಿ ಮಾತ್ರ ಯೂರೋಪ್ ಮಾರುಕಟ್ಟೆಗೆ ಹೋಗಬೇಕು ಎಂದು ಹೇಳುತ್ತವೆ.
-ದೊಡ್ಡ ಬೆಳೆಗಾರರು/ರಫ್ತುದಾರರು 2025 ಡಿಸೆಂಬರ್ 30ರೊಳಗೆ ಈ ನಿಯಮ ಪಾಲಿಸಬೇಕು.
-ಸಣ್ಣ ರೈತರು/ವ್ಯಾಪಾರಿಗಳು: 2026 ಜೂನ್ 30ರೊಳಗೆ ಪಾಲನೆ ಮಾಡಬೇಕು.
ರೈತರಿಗೆ ರಫ್ತ್ತು ಕುಸಿದ ಪರಿಣಾಮ
* ಬೆಲೆ ಹೆಚ್ಚಾದರೂ ರಫ್ತು ಕಡಿಮೆಯಾಗುತ್ತಿದೆ.
* ಯೂರೋಪ್ ಖರೀದಿದಾರರು ಉಗಾಂಡಾದ ಕಾಫಿ ಕಡೆ ತಿರುಗುತ್ತಿದ್ದಾರೆ.
* ಸುಮಾರು 50,000 ಟನ್ ಕಾಫಿ ರೈತರ ಕೈಯಲ್ಲೇ ಉಳಿಯುವ ಆತಂಕ.
ಭಾರತೀಯ ಕಾಫಿಗೆ ಮುಂದಿನ ದಾರಿ
ಕಾಫಿ ಎಕ್ಸ್ಪೋರ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮೇಶ್ ರಾಜಾ ಹೇಳುವ ಪ್ರಕಾರ “ಇಟಲಿ ಹಾಗೂ ಯೂರೋಪ್ ಮಾರುಕಟ್ಟೆ ಕುಸಿಯುತ್ತಿರುವುದರಿಂದ, ನಾವು ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಿದ್ದೇವೆ” ಎಂದು ತಿಳಿಸಿದ್ದಾರೆ.