Featured NewsWeather

ವಿಧಾನಸಭಾ ಚುನಾವಣೆ: ಮತದಾನ ದಿನದಂದು ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ

ಕರ್ನಾಟಕ ವಿಧಾನಸಭಾ ಚುನಾವಣೆಯ ದಿನದಂದೇ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 
ಚುನಾವಣೆಯ ದಿನದಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ ಮೂರು ದಿನಗಳ ಕಾಲವೂ ರಾಜ್ಯದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮಳೆಯಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗಲು ಮತದಾರರು ಸಾಧ್ಯವಾದಷ್ಟು ಬೇಗ ಮತದಾನ ಮಾಡುವಂತೆ ಸಲಹೆ ನೀಡುತ್ತೇವೆಂದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿಯವರು ಹೇಳಿದ್ದಾರೆ.
 
ಮತದಾರರು 3 ಗಂಟೆಗಳೊಳಗಾಗಿ ಮತದಾನ ಮಾಡಿದ್ದರೆ, ಮಳೆ ಸಮಸ್ಯೆಯಿಂದ ದೂರ ಇರಬಹುದು ಎಂದು ತಿಳಿಸಿದ್ದಾರೆ.
 
ಈ ಬಾರಿ ಹಿಂದಿನಂತೆಯೇ ಸಾಮಾನ್ಯದಂತೆ ಪೂರ್ವ ಮಾನ್ಸೂನ್ ಆಗಮಿಸಿದ್ದು, ಕರ್ನಾಟಕ ಕರಾವಳಿ ತೀರ ಪ್ರದೇಶ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಅರೇಬಿಯಾ ಸಮುದ್ರ ಹಾಗೂ ಬಂಗಾಳದಲ್ಲಿ ಸೈಕ್ಲೋನ್ ಆಗಿರುವ ಪರಿಣಾಮ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಈ ಬಾರಿ ಮಾನ್ಸೂನ್ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಬರಲಿದೆ. ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಿಂದಲೇ ಮಾನ್ಸೂರ್ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
 
ಎಲ್ಲೆಲ್ಲಿ ಮಳೆ…?
ದಕ್ಷಿಣದ ಆಂತರಿಕ ವಲಯ: ಬೆಂಗಳೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯದಲ್ಲಿ ಮಳೆಯಾಗಲಿದೆ.
ಕರಾವಳಿ ತೀರ ಪ್ರದೇಶ: ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಹಾಗೂ ಕಾರವಾರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಮಲೆನಾಡು ಪ್ರದೇಶ: ಹಾಸನ್, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಇತರೆ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 ವರಧಿ: ಕನ್ನಡಪ್ರಭ  
Also read  Coffee – Weekly Roundup 5/May/17

Leave a Reply