Black pepperFeatured News

ಕಾಳು ಮೆಣಸಿನ ಕೊಯ್ಲು ಮತ್ತು ಸಂಸ್ಕರಣೆ

ಕರಿಮೆಣಸು ಹೂ ಬಿಟ್ಟ ನಂತರ ಕಾಳುಗಳು ಸಂಪೂರ್ಣವಾಗಿ ಬೆಳೆಯಲು 7-8 ತಿಂಗಳು ತೆಗೆದುಕೊಳ್ಳುತ್ತದೆ.ಭಾರತದ ಬಯಲು ಪ್ರದೇಶದಲ್ಲಿ ಬೆಳೆಯನ್ನು ಡಿಸೆಂಬರ್‌-ಜನವರಿಯಲ್ಲ್ಹಿ ಕೊಯಿಲು/ಕಟಾವ್ರ ಮಾಡಲಾಗುವುದು ಮತ್ತು ಪಶ್ಚಿಮ ಘಟ್ಟಗಳ ಹೆಚ್ಚಿನ ಶ್ರೇಣಿಯಲ್ಲಿ / ಗುಡ್ಡಗಾಡು ಪ್ರದೇಶಗಳಲ್ಲಿ ಜನವರಿ-ಏಪ್ರಿಲ್‌ ವರೆಗೆ ಕೊಯಿಲು ಮಾಡಲಾಗುತ್ತದೆ. ಕೊಯಿಲನ್ನು ಕಾಳುಗಳು ಸರಿಯಾಗಿ ಬಲಿಯುವಿಕೆಯ ಹಂತದಲ್ಲಿ ಮಾಡುವುದರಿಂದ ಉತ್ತಮ ಬಣ್ಣ ಹಾಗೂ ಅಧಿಕ ಒಣ ಉತ್ಪನ್ನವನ್ನು ಪಡೆಯಲು ಅತ್ಯವಶ್ಯಕವಾಗಿದೆ. ಒಂದು ಅಥವಾ ಎರಡು ಕಾಳುಗಳು ಹಳದಿ ಬಣ್ಣಕ್ಕೆ ತಿರುಗಿದಾದ ಕೊಯಿಲನ್ನು ಪ್ರಾರಂಭಿಸಬಹುದು.

Pepper Harvesting in Kerala

ಕಾಳುಮೆಣಸಿನ ಗೊಂಚಲನ್ನು ಕೈಯಿಂದ ಬಿಡಿಸಿ ಚೀಲದಲ್ಲಿ ಸಂಗ್ರಹಿಸಲಾಗುತ್ತದೆ. ಒಂದು ಕಂಬದ ಬಿದಿರಿನ ಏಣಿಯನ್ನು ಸಾಮಾನ್ಯವಾಗಿ ಕೊಯಿಲು ಮಾಡಲು ಬಳಸಲಾಗುತ್ತದೆ. ಕಾಳುಗಳನ್ನು ತುಂಬಾ ಬಲಿಯಲು ಬಿಟ್ಟರೆ ನೆಲಕ್ಕೆ ಬಿದ್ದು ಮತ್ತು ಪಕ್ಷೆಗಳು ತಿಂದು ಇಳುವರಿ ಕ್ಷೀಣಿಸುತ್ತದೆ. ಕೊಯಿಲು ಮಾಡಲಾದ ಗೊಂಚಲನ್ನು ಸ್ವಚ್ಚವಾದ ಗೋಣಿ ಚೀಲದಲ್ಲಿ ಸಂಗ್ರಹಿಸಲಾಗುವುದು. ನೆಲಕ್ಕೆ ಬಿದ್ದ ಗೊಂಚಲನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸ್ವಚ್ಚಮಾಡಿ, ಬೇರೆಯದರೊಂದಿಗೆ ಸೇರಿಸಬೇಕು.

ಇತ್ತೀಚಿನ ಉತ್ಪನ್ನ ಸುಧಾರಣೆಗಳ ವೈವಿಧ್ಯೀಕರಣವು ಕಾಳುಗಳ ವಿವಿಧ ಬಲಿಯುವಿಕೆಯ ಹಂತದಲ್ಲಿ ಕೊಯ್ದು ಮಾಡುವ ಅನಿವಾರ್ಯತೆಯ ಬಗ್ಗೆ ತಿಳಿಸಿಕೊಟ್ಟಿದೆ. ಮೆಣಸಿನ ಬಲಿಯುವಿಕೆಯ ಹಂತಕ್ಕೆ ಅನುಗುಣವಾಗಿ ವಿವಿಧ ಮೆಣಸಿನ ಉತ್ಪನ್ನಗಳನ್ನು ಪಡೆಯಲು ಕೊಯಿಲು ಮಾಡಲು ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ.

ಕೊಯ್ಲೋತ್ತರ ಪ್ರಕ್ರಿಯೆಗಳು

ಒಕ್ಕಣೆ ಬಿಸಿನೀರಿನಲ್ಲಿ ಅದ್ದಿ ತೆಗೆಯುವುದು (ಬ್ಲಾಂಚಿಂಗ್‌), ಒಣಗಿಸುವುದು, ಸ್ವಚ್ಚಮಾಡುವ್ರದು, ವರ್ಗೀಕರಣ ಹಾಗು ಚೀಲದಲ್ಲಿ ತುಂಬಿಡುವುದು ಕಾಳುಮೆಣಸಿನ ವಿವಿಧ ಕೊಯ್ಲೋತ್ತರ ಕಾರ್ಯಗಳಾಗಿವೆ. ಈ ಎಲ್ಲಾ ಕಾರ್ಯಗಳ ಸಮಯದಲ್ಲಿ ಅತ್ಯಂತ ಹೆಚ್ಚಿನ ಎಚ್ಚರವಹಿಸುವ್ರುದರಿಂದ ಉತ್ತಮ ಗುಣಮಟ್ಟವನ್ನು ಕಾಪಾಡಬಹುದು.

ಒಕ್ಕಣೆ

50 ಕಿ.ಗ್ರಾಂ/ಹೆ ನಿಂದ 2500 ಕಿ.ಗ್ರಾಂ/ಹೆ ಗಳಷ್ಟು ಕಾಳು ಮೆಣಸನ್ನು ಬೇರ್ಪಡಿಸುವ ಒಕ್ಕಣೆ ಯಂತ್ರಗಳಿದ್ದು,ಇವ್ರು. ಕಾಳುಗಳ ಬೇರ್ಪಡಣೆಯ ವೇಗವನ್ನು ಹೆಚ್ಚಿಸುವುದಲ್ಲದೆ, ಕಾಳುಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

Pepper Threshers – Machine

ಬಿಸಿ ನೀರಿನಲ್ಲಿ ಅದ್ದಿ ತೆಗೆಯುವುದು

ತಾಜಾ ಹಣ್ಣುಗಳನ್ನು ಒಕ್ಕಣೆ ಮಾಡಿದ ನಂತರ ಒಣಗಿಸುವ ಮೊದಲು ಬಿಸಿ ನೀರಿನಲ್ಲಿ ಒಂದು ನಿಮಿಷ ಕಾಲ ಅದ್ದುವುದರಿಂದ ಉತ್ತಮ ಗುಣಮಟ್ಟದ ಹಾಗೂ ಆಕರ್ಷಕ ಕಪ್ಪು ಬಣ್ಣ ಬೆಳವಣಿಗೆಯಾಗಿ ಒಣಗುವ ಅವಧಿಯನ್ನು ಕಡಿಮೆ ಮಾಡಿತ್ತದೆ.

ಈ ಕ್ರಿಯೆಯಿಂದಾಗುವ ಹಲವಾರು ಉಪಯೋಗಗಳು:

* ಉತ್ತಮ ಗುಣಮಟ್ಟದ ಹಾಗೂ ಆಕರ್ಷಕ ಕಪ್ಪು ಬಣ್ಣ ಬೆಳವಣೆಗೆಯಾಗಿ ಒಣಗುವ ಅವಧಿಯನ್ನು ಕಡಿಮೆ ಮಾಡುತ್ತದೆ.
* ಒಣಗಿಸಿದ ನಂತರ ಏಕರೂಪದ ಬಣ್ಣದ ಕರಿಮೆಣಸು ದೊರೆಯುತ್ತದೆ.
* ಸೂಕಾಾಣುಜೀವಿಯ ಸಂಖ್ಯೆಯನ್ನು ಕೀಣಿಸುತದೆ.
* ಒಣಗುವ ಅವಧಿಯನ್ನು 5-6 ದಿನದಿಂದ 3-4 ದಿನಕ್ಕೆ ಕಡಿಮೆಗೊಳಿಸುತ್ತದೆ.
* ಕಾಳುಗಳಿಗೆ ಅಂಟಿದ ಧೂಳು ಮತ್ತು ಹೊರ ಕಲ್ಮಶಗಳನ್ನು ತೆಗೆಯುತ್ತದೆ.

ಕೊಯಿಲು ಮಾಡಿದ ಮೆಣಸಿನ ಕಾಳಿನಲ್ಲಿ ಶೇ. 65 ರಿಂದ 70ರಷ್ಟು ತೇವಾಂಶವಿದ್ದು, ಅದು ಒಣಗಿದ ನಂತರ ತೇವಾಂಶವನ್ನು ಶೇ. 10 ರಷ್ಟು ನಿಯಂತ್ರಿಸಬೇಕು. ಮೆಣಸಿನ ಕಾಳಿನಲ್ಲಿ ಕ್ಲೋರೋಫಿಲ್‌ ಎಂಬ ಕಣಗಳಿದ್ದು ಅದು ಹಸಿರು ಬಣ್ಣಕ್ಕೆ ಕಾರಣವಾಗಿದೆ. ಒಣಗಿಸುವ ಸಂದರ್ಭದಲ್ಲಿ ಮೆಣಸಿನಲ್ಲಿರುವ ಫಿನಾಲಿಕ್‌ ಸಂಯುಕ್ತಗಳು ಮತ್ತು ಕಿಣ್ವಗಳು ಮೆಣಸನ್ನು ಕಂದು ಬಣ್ಣಕ್ಕೆ ತಿರುಗಿಸುತ್ತವೆ ಮತ್ತು ಅಂತಿಮವಾಗಿ ಕಪ್ಪು ಬಣ್ಣ ಪಡೆದುಕೊಳ್ಳುತ್ತದೆ.

ಕಾಳು ಮೆಣಸನ್ನು ಸೂರ್ಯನ ಶಾಖದಲ್ಲಿ ಒಣಗಿಸುವುದು ಸಾಂಪ್ರದಾಯಿಕವಾದ ವಿಧಾನವಾಗಿದೆ. ಕಾಳುಗಳನ್ನು ಸಿಮೆಂಟ್‌ ನೆಲದ ಮೇಲೆ ಹರಡಿ ಸೂರ್ಯನ ಶಾಖದಲ್ಲಿ 3-5 ದಿನಗಳವರೆಗೆ ಒಣಗಿಸಿ ತೇವಾಂಶವನ್ನು ಶೇ. 10ಕ್ಕೆ ತರಬೇಕು, ಹೆಚ್ಚು ತೇವಾಂಶವಿದ್ದರೆ (>12%) ಶಿಲೀಂಧ್ರದ ಬೆಳವಣೆಗೆಗೆ ಕಾರಣವಾಗುತ್ತದೆ. ಶಿಲೀಂಧ್ರಗಳು. ಮೈಕೋಟಾಕ್ಸಿನ್ಸ್‌ ಎಂಬ ವಿಷವನ್ನು ಉತ್ಪತ್ತಿಮಾಡಿ ಕಾಳುಮೆಣಸು ಮಾನವನ ಬಳಕೆಗೆ ಯೋಗ್ಯವಲ್ಲದ ಹಾಗೆ ಮಾಡುತ್ತವೆ. ಆದುದರಿಂದ ಉತ್ತಮ ಗುಣಮಟ್ಟದ ಒಣ ಕಾಳುಮೆಣಸನ್ನು ಪಡೆಯಲು, ಹಸಿ ಕಾಳುಗಳನ್ನು ಸ್ವಚ್ಚ ಒಣಗಿದ ಸಿಮೆಂಟ್‌ ನೆಲ ಅಥವಾ ಅಧಿಕ ಸಾಂಧ್ರತೆಯ ಕಪ್ಪು ಪಾಲಿಥೀನ್‌ ಹಾಳೆಯ ಮೇಲೆ ಹಾಕಿ ಸೂರ್ಯನ ಶಾಖದಲ್ಲಿ 4 ರಿಂದ 6 ದಿನಗಳವರೆಗೆ ಒಣಗಿಸಬೇಕು. ಸರಾಸರಿ ಒಣ ಚೇತರಿಕೆಯು ಶೇ. 33.37 ರಷ್ಟು ಇದ್ದು ಇದು ವಂಶಾವಳಿ ಹಾಗೂ ತಳಿಗಳಿಗೆ ಅನುಗುಣವಾಗಿರುತ್ತದೆ.

ವಿವಿಧ ಸಂಸ್ಥೆಗಳು ಬಿಡುಗಡೆಗೊಳಿಸಿದ ಯಾಂತ್ರಿಕ ಸಲಕರಣೆಗಳನ್ನು ಕಾಳುಮೆಣಸು ಒಣಗಿಸಲು ಬಳಸಬಹುದು. ವಿದ್ಯುತ್‌ಶಕ್ತಿಯಿಂದ ಚಾಲನೆಯಾಗುವ ವಿವಿಧ ಸಾಮರ್ಥ್ಯದ ಯಂತ್ರದ ಮಾದರಿಯಿಂದ ಹಾಗೂ ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದಲೂ ಕಾಳುಮೆಣಸನ್ನು ಒಣಗಿಸಬಹುದಾಗಿದೆ. ಉಷ್ಣಾಂಶವು 53 ಡಿಗ್ರಿ ಸೆಂಟಿಗ್ರೇಡ್‌ ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಅವಶ್ಯಕ.

ಸ್ವಚ್ಚ ಮಾಡುವುದು ಹಾಗು ವರ್ಗೀಕರಣ

ಒಕ್ಕಣೆ ಮಾಡಿದ ಹಾಗೂ ಒಣಗಿಸಿದ ಕರಿಮೆಣಸಿನಲ್ಲಿ ಕೊತ್ತುಗಳು, ಕಲ್ಲುಗಳು, ಕಸಗಳು, ಮರಳಿನ ಕಣಗಳು ಇರುತ್ತವೆ. ಆದುದರಿಂದ ಶುದ್ಧಗೊಳಿಸಿ ವರ್ಗೀಕರಣ ಮಾಡುವುದರಿಂದ ಉತ್ಪನ್ನದ ಮೌಲ್ಯ ಹೆಚ್ಚಾಗುವುದಲ್ಲದೆ ಹೆಚ್ಚಿನ ಲಾಭ ಪಡೆಯಲು ಸಹಾಯಕವಾಗುತ್ತದೆ. ಸಣ್ಣ ಪ್ರಮಾಣದ ಕಾಳುಮೆಣಸನ್ನು ಗಾಳಿಗೆ ತೂರುವ ಮೂಲಕ ಹಾಗೂ ಕಸವನ್ನು ಕೈಯಿಂದ ತೆಗೆಯುವ ಮೂಲಕ ಸ್ವಚ್ಚಮಾಡಲಾಗುವುದು.

ಕಾಳುಮೆಣಸಿನ ವರ್ಗೀಕರಣವನ್ನು ವಂದರಿ ಮಾಡುವುದರಿಂದ ಹಾಗು ಮೆಣಸಿನ ಗಾತ್ರ ಆಧಾರಿಸಿ ಮಾಡಲಾಗುವುದು. ಕಾಳು ಮೆಣಸಿನ ಪ್ರಮುಖ ವರ್ಗಗಳು ಈ ರೀಶಿ ಇದೆ. ಟಿಲಿಚೆರಿ ಗ್ರ್ಯಾಬಲ್ಡ್‌ ಸ್ಪೆಷಲ್‌ ಎಕ್ಸ್ಟ್ರಾ ಬೋಲ್ಡ್‌ (ಟಿ.ಜಿ.ಎಸ್‌.ಇ.ಬಿ) 4.8 ಮಿ.ಮೀ, ಆಿಲಿಚಿರಿ ಗ್ರಾ ‘ಬಲ್ಡ್‌ ಎಕ್ಸ್ಟ್ರಾ ಬೋಲ್ಡ್‌ (ಟಿ.ಜಿ.ಇ.ಬಿ) 4.2 ಮಿ.ಮೀ,

ಬಿಳಿಮೆಣಸು

ಚೆನ್ನಾಗಿ ಬಲಿತಿರುವ ಹಸಿರು ಮೆಣಸಿನ ಕಾಳುಗಳಿಂದ ಬಿಳಿಮೆಣಸನ್ನು ಮಾಡಲಾಗುತ್ತದೆ. ಬಲಿತಿರುವ ಹಸಿರು ಕಾಳುಗಳನ್ನು ನೀರಿನಲ್ಲಿ 7 ರಿಂದ 8 ದಿನಗಳ ಕಾಲ ನೆನೆಸಿ, ಉಜ್ಜಿ ಸಿಪ್ಪೆ ತೆಗೆದು, ಚೆನ್ನಾಗಿ ತೊಳೆದು ನಂತರ ತೇವಾಂಶವು ಶೇ. 10 ರಷ್ಟು ಇರುವಂತೆ ಒಣಗಿಸಬೇಕು. ನೀರನ್ನು ಪ್ರತಿದಿನ ಬದಲಾವಣೆ ಮಾಡುತ್ತಿರಬೇಕು. ಹಣ್ಣಾದ ಮೆಣಸನ್ನು ವಿಶಿಷ್ಟ ವಿಧಾನದಲ್ಲಿ ನೆನೆಹಾಕುವುದು ಮತ್ತು ಹಬೆಯಲ್ಲಿ ನೆನೆಸುವುದು ಮುಂತಾದ ವಿಧಾನಗಳಿಂದ ಬಿಳಿಮೆಣಸನ್ನು ತಯಾರಿಸಬಹುದು.

ಚೀಲದಲ್ಲಿ ತುಂಬಿಡುವುದು

ಸಾವಯವ ಪದ್ಧತಿಯಲ್ಲಿ ಬೆಳೆದ ಕಾಳುಮೆಣಸನ್ನು ಪ್ರತ್ಯೇಕವಾಗಿ ಹೆಸರಿಸಿ ಚೀಲದಲ್ಲಿ ತುಂಬಿಸಿಡಬೇಕು. ವಿವಿಧ ರೀತಿಯ ಬೇರೆ ಬೇರೆ ತಳಿಯ ಮೆಣಸನ್ನು ಮಿಶ್ರಣ ಮಾಡುವುದು ವಾಣಿಜ್ಯ ದೃಷ್ಟಿಯಿಂದ ಒಳಿತಲ್ಲ. ಕಾಳುಮೆಣಸನ್ನು ಪರಿಸರ ಸ್ನೇಹಿ ಸ್ವಚ್ಚ ಗೋಣಿ ಚೀಲದಲ್ಲಿ ತುಂಬಿಸಬೇಕು ಹಾಗೂ ಪಾಲೀಥಿನ್‌ ಚೀಲದ ಬಳಕೆಯನ್ನು ಕಡಿಮೆ ಮಾಡಬೇಕು. ಎಲ್ಲಿ ಸಾಧ್ಯವೋ ಅಲ್ಲೆಲ್ಲ ಮರುಬಳಕೆ ಮಾಡಬಹುದಾದ ಚೀಲಗಳನ್ನು ಪ್ಯಾಕ್‌ ಮಾಡಲು ಉಪಯೋಗಿಸಬೇಕು.

ಸಂಗ್ರಹಣೆ

ಕಾಳುಮೆಣಸು ನೀರನ್ನು ಹೀರುವ ಗುಣವನ್ನು ಹೊಂದಿದ್ದು, ಮಳೆಗಾಲದಲ್ಲಿ ಅಧಿಕ ಆದ್ರತೆ ಮತ್ತು ತೇವಾಂಶವಿದ್ದಾಗ ಶಿಲೀಂದ್ರ ಹಾಗೂ ಕೀಟಗಳ ಬಾಧೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಕಾಳುಮೆಣಸನ್ನು ಶೇ. 10 ಕ್ಕಿಂತ ಕಡಿಮೆ ತೇವಾಂಶ ಇರುವಂತೆ ಒಣಗಿಸಬೇಕು. ವರ್ಗೀಕರಿಸಿದ ಕಾಳುಮೆಣಸನ್ನು ಬೇರೆ ಬೇರೆಯಾಗಿ ದಪ್ಪನೆಯ ಕಾಗದದ ಚೀಲಗಳಲ್ಲಿ ಅಥವಾ ಸೆಣಬಿನ (ಗೋಣಿ) ಚೀಲಗಳಲ್ಲಿ ತುಂಬಿಡಬೇಕು. ನಂತರ ನೆಲದ ಮೇಲೆ ಪಾಲಿಪ್ರೊಪಲಿನ್‌ ಹಾಳೆಯನ್ನು ಹಾಸಿ, ಚೀಲಗಳನ್ನು ಒಂದರ ಮೇಲೊಂದರಂತೆ ಮರದ ತಟ್ಟಿಗಳಲ್ಲಿ ಜೋಡಿಸಬೇಕು.

ಆಧುನಿಕ ಗುಣಮಟ್ಟಗಳನ್ನೊಳಗೊಂಡ ಸಾಂಬಾರ ಸಂಸ್ಕರಣಾ ಘಟಕವನ್ನು ಭಾ.ಕೃಅ.ಪ-ಭಾರತೀಯ ಸಾಂಬಾರ ಬೆಳಗಳ ಸಂಶೋಧನಾ ಸಂಸ್ಥೆ, ಪೆರುವಣ್ಣಾಮುಳಿಯಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಸಾಂಬಾರ ಸಂಸ್ಕರಣೆಯ ಕುರಿತು ತರಬೇತಿಯನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ :

ವ್ಯವಸ್ಥಾಪಕರು

ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ

ಭಾ.ಕೃ ಅ.ಪ.-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ

ಕೋಜಿಕೋಡು — 673012, ಕೇರಳ

PH: 0495-2731410, 2730704 Fax : 0495-2731187

ಮಿಂಚಂಚೆ : mail@spices.res.in

Also read  ಕಾಫಿ ಎಲೆಯಿಂದಲೂ ಪಾನೀಯ;ಕಾಫಿ ಬೆಳೆಗಾರರಿಗೆ ವರ್ಷಪೂರ್ತಿ ಆದಾಯ!

Leave a Reply