Featured NewsWeather

ಗಜ ಚಂಡ ಮಾರುತ:ಕರ್ನಾಟಕದಲ್ಲಿ ಎರಡು ದಿನ ಮಳೆಯಾಗುವ ನಿರೀಕ್ಷೆ

ಈಗಾಗಲೇ ಗಜ ಚಂಡ ಮಾರುತ ತಮಿಳುನಾಡು, ಆಂಧ್ರ ಪ್ರದೇಶದಕ್ಕೆ ಲಗ್ಗೆ ಇಟ್ಟು ಸಾಕಷ್ಟು ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡಿದ್ದಲ್ಲದೆ 46 ಮಂದಿ ಮೃತಪಟ್ಟಿದ್ದರು.

ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಕರ್ನಾಟಕದಲ್ಲಿ ಎರಡು ದಿನ ಮಳೆಯಾಗುವ ನಿರೀಕ್ಷೆ ಇದೆ.

Also read  ಇಂದು ತಮಿಳುನಾಡು ತೀರಕ್ಕೆ ಅಪ್ಪಳಿಸಲಿರುವ 'ಗಜ'

ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ ಗಜಮಳೆ ಈಗಾಗಲೇ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ರಾಜ್ಯದಲ್ಲಿಯೂ ನವೆಂಬರ್ 24ರವರೆಗೆ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಮತ್ತು ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಗಜ ಅವಾಂತರ: ತಮಿಳುನಾಡಿಗೆ ಸಾವಿರ ಕೋಟಿ ಪರಿಹಾರ ಘೋಷಣೆಕಳೆದ ವಾರ ಗಜ ಚಂಡಮಾರುತ ಆರ್ಭಟ ಜೋರಾಗಿತ್ತು. ನವೆಂಬರ್ 19 ರಿಂದ 21 ರವರಗೂ ಚಂಡಮಾರುತದ ಎಫೆಕ್ಟ್ ಜೋರಾಗಿರಲಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿತ್ತು. ಗಜ ಚಂಡಮಾರುತದ ಭೀಕರತೆಗೆ ತಮಿಳುನಾಡಿನಲ್ಲಿ ಇದುವರೆಗೂ 45 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಕಣ್ಮರೆಯಾಗಿದ್ದರು.ವಾಯುಭಾರ ಕುಸಿತ ವೇಗದ ಜೊತೆಗೆ ಚಳಿ ಗಾಳಿಯೂ 30 ಕಿ.ಮೀ ವೇಗದಲ್ಲಿ ಬೀದುತ್ತಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಚಳಿಗಾಳಿ ಬೀಸಲಿದೆ ಎಂದು ತಿಳಿಸಿದ್ದಾರೆ.

Leave a Reply