Featured NewsKrushi

ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ಬೆಳೆ ನಷ್ಟ

ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಕಫಿ ತೋಟ ಭಸ್ಮವಾಗಿದ್ದು,ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.

ಗೋಣಿಬೀಡು ಹೋಬಳಿ ಜೇನುಬೈಲಿನ ಕೃಷ್ಣಪ್ಪ ಎಂಬುವರಿಗೆ ಕಾಫಿ ತೋಟಕ್ಕೆ ಬೆಂಕಿ ತಗುಲಿ ಸುಮಾರು 6 ಲಕ್ಷ ರೂ ನಷ್ಟ ಸಂಭವಿಸಿದೆ. ಕೃಷ್ಣಪ್ಪ ಅವರು ತತ್ಕೋಳ ನಿರಾಶ್ರಿತರು. ಅವರಿಗೆ ಸರಕಾರ ಅಂಗಡಿ ಗ್ರಾಮದ ಸ.ನಂ 70 ರಲ್ಲಿ ಕಳೆದ 10ವರ್ಷದ ಹಿಂದೆ 2 ಎಕರೆ ಜಮೀನು ಮಂಜೂರುಗೊಳಿಸಿತ್ತು. ಆ ಜಮೀನಿನಲ್ಲಿ ಕೃಷ್ಣಪ್ಪ ಅವರು ಕಾಫಿ, ಬಾಳೆ, ಕಾಳು ಮೆಣಸು,ಅಡಕೆ ಸಹಿತ ಇತರೆ ಬೆಳೆ ಬೆಳೆದಿದ್ದರು.
ಹಿಂದೆ ತಾಲೂಕಿನ ತತ್ಕೊಳ ಗ್ರಾಮದಲ್ಲಿ 6 ಎಕರೆ ಕಾಫಿ ತೋಟವಿತ್ತು. ಕಳೆದ 15 ವರ್ಷದ ಹಿಂದೆ ಆ ತೋಟವನ್ನು ಅರಣ್ಯ ಇಲಾಖೆ ಖುಲ್ಲಾಗೊಳಿಸಿ ಜೇನುಬೈಲ್‌ನಲ್ಲಿ 2 ಎಕರೆ ಜಾಗ ನೀಡಿ ಅಲ್ಲಿಗೆ ವಾಸ ಬದಲಿಸಿವಂತೆ ಸೂಚಿಸಿದ್ದರಿಂದ ಜೇನುಬೈಲ್‌ಗೆ ತೆರಳಿ ಅಲ್ಲಿ ಹೊಸದಾಗಿ ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಗಿಡಗಳನ್ನು ಹಾಕಿ ಕಷ್ಟಪಟ್ಟು ಬೆಳೆಸಿದ್ದೆ. ಈ ತೋಟ ಬೆಂಕಿಗಾವುತಿಯಾಗಿದೆ. ಮುಂದೇನು ಮಾಡಬೇಕೆಂದು ದಾರಿ ತೋರದಾಗಿದೆ ಎಂದು ಕೃಷ್ಣಪ್ಪ ಅಳಲು ತೋಡಿಕೊಂಡಿದ್ದಾರೆ.

News:Vijaya Karnataka

Also read  Coffee Prices (Karnataka) on 24-09-2022

Leave a Reply