CoffeeFeatured News

ಕಾಫಿ ಎಲೆಯಿಂದಲೂ ಪಾನೀಯ;ಕಾಫಿ ಬೆಳೆಗಾರರಿಗೆ ವರ್ಷಪೂರ್ತಿ ಆದಾಯ!

ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ದ ಪ್ರಧಾನ ವಿಜ್ಞಾನಿ ಪುಷ್ಪ ಎಸ್‌.ಮೂರ್ತಿ ಕಾಫಿ ಎಲೆಗಳಿಂದಲೂ ಪಾನೀಯ ತಯಾರು ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಮುಂದಿನ 6 ತಿಂಗಳಲ್ಲಿ ಇದು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಕಾಫಿ ಬೆಳೆಗಾರರಿಗೆ ಇದು ವರ್ಷಪೂರ್ತಿ ವರಮಾನ ತಂದುಕೊಡುವ ವಿಶ್ವಾಸವನ್ನು ವಿಜ್ಞಾನಿ ಪುಷ್ಪ ಎಸ್‌.ಮೂರ್ತಿ ವ್ಯಕ್ತಪಡಿಸಿದ್ದಾರೆ.

ಕಾಫಿ ವಾರ್ಷಿಕ ಬೆಳೆ. ವರ್ಷದಲ್ಲಿ ಬಹುತೇಕ 9 ತಿಂಗಳು ಬೆಳೆಗಾರರಿಗೆ ಯಾವುದೇ ವರಮಾನ ಇರುವುದಿಲ್ಲ. ಆದರೆ, ಖರ್ಚು ಮಾತ್ರ ತಪ್ಪುವುದಿಲ್ಲ. ಕಾಫಿ ತೋಟಗಳಲ್ಲಿ ಗಿಡಗಳ ಬೆಳವಣಿಗೆ, ಇಳುವರಿಗೆ ಅಡ್ಡಿಯಾಗದಂತೆ ಹಿಂಗಾರು ಸಮಯದಲ್ಲಿ ಬಲಿತ ಕಾಫಿ ಎಲೆಗಳನ್ನು ಪಾನೀಯ ತಯಾರಿಕೆಗೆ ಬಳಸಬಹುದು. ಕಾಫಿ ಪಾನೀಯದ ಮೂಲಕ ಕಾಫಿ ಬೆಳೆಗಾರರು, ಕಾರ್ಮಿಕರು ವರ್ಷಪೂರ್ತಿ ವರಮಾನ ಬರುವಂತೆ ನೋಡಿಕೊಳ್ಳಬಹುದು.

Also read  Kerala floods push spices prices up 25 percent in Mumbai

ಕಾಫಿ ಎಲೆಗಳು ನಿರುಪಯುಕ್ತ ವಸ್ತು ಎಂದು ಭಾವಿಸಲಾಗುತ್ತದೆ. ಆದರೆ ಕಾಫಿ ಬೆಳೆಯುವ ದೇಶವೇ ಆಗಿರುವ ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ  ಕಾಫಿ ಎಲೆಯಿಂದ ಪಾನೀಯವನ್ನು ತಯಾರಿಸುವುದು ಹೊಸತೇನಲ್ಲ. ಅಲ್ಲಿ ಇದನ್ನು ಹಿಂದಿನಿಂದಲೇ ತಯಾರಿಸುತಿದ್ದು, ಇದನ್ನು “ಕುಟಿ ಟೀ”ಎಂದು ಕರೆಯಲಾಗುತ್ತದೆ ಮತ್ತು ಪಶ್ಚಿಮ ಸುಮಾತ್ರಾ ಮತ್ತು ಇಂಡೋನೇಷ್ಯಾದಲ್ಲಿ “ಕಹ್ವಾ ಡಾನ್” ಎಂದು ಕರೆಯಲಾಗುತ್ತದೆ.

ಕಾಫಿ ಎಲೆ ಪಾನೀಯ ಕಾಫಿ ಮತ್ತು ಟೀಗಿಂತಲೂ ವಿಭಿನ್ನ. ಹರ್ಬಲ್‌ ಪಾನೀಯವಾಗಿರುವ ಇದು ಆರೋಗ್ಯವರ್ಧಕವೂ ಹೌದು.ಎಲೆಯ ಸಾರ ಕಾಫಿಯಂತೆ ರುಚಿಸುವುದಿಲ್ಲ. ಕಾಫಿ ಮತ್ತು ಚಹಾಕ್ಕಿಂತ ಕಡಿಮೆ ಕೆಫಿನ್‌ ಹೊಂದಿದೆ. ಕಾಫಿ ಎಲೆಗಳಲ್ಲಿ ಫಿನಾಲಿಕ್‌ ಆಮ್ಲ ಸಮೃದ್ಧವಾಗಿದೆ.ಒಂದು ಕಾಫಿ ಎಲೆಯು ಗ್ರೀನ್‌ ಟೀಗಿಂತ 17 ಪ್ರತಿಶತ ಹೆಚ್ಚು ಉತ್ಕರ್ಷಣ ನಿರೋಧಕ ಒಳಗೊಂಡಿದೆ. ಕ್ಲೋರೊಜೆನಿಕ್‌ ಆಮ್ಲ, ಮ್ಯಾಂಗಿಫೆರಿನ್‌ನಂತಹ ಆರೋಗ್ಯ ಉತ್ತೇಜಿಸುವ ಪಾಲಿಫಿನಾಲ್‌ಗಳನ್ನು ಹೊಂದಿದ್ದು, ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ, ಉರಿಯೂತ, ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕವಾಗಿದೆ.

Also read  Yemen Coffee tops list of 'Top 30 Coffees of 2017'