Black pepperFeatured News

ಕಾಳುಮೆಣಸು:ಆರು ವರ್ಷದ ಗರಿಷ್ಠಕ್ಕೆ ಏರಿದ ಧಾರಣೆ

ವಿಯೆಟ್ನಾಂನಲ್ಲಿ ಪ್ರತಿಕೂಲ ಹವಾಮಾನದ ಕಾರಣ ರೊಬಸ್ಟಾ ಕಾಫಿ ಹಾಗೂ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ.ಕೆ.ಜಿ ಕಾಳುಮೆಣಸು ಶನಿವಾರ ₹660ಕ್ಕೆ ಮಾರಾಟ ಆಗಿದ್ದು ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ. 2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ ₹780ಗೆ ತಲುಪಿತ್ತು.

ಫೆಬ್ರುವರಿಯಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿದ್ದಾಗ ಕೆ.ಜಿಗೆ ₹525ರ ಆಸುಪಾಸಿನಲ್ಲಿ ಇದ್ದ ಧಾರಣೆ ಈಚೆಗೆ 2 ವಾರಗಳಿಂದ ಸತತ ಏರುಗತಿಯಲ್ಲಿದೆ.2018ರ ಹಂತಕ್ಕೆ ಬೆಲೆ ತಲುಪುವುದೇ ಎಂಬ ಕುತೂಹಲದಲ್ಲಿದ್ದಾರೆ ಬೆಳೆಗಾರರು.

ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆಯುತ್ತಿದ್ದು, ಈ ಪೈಕಿ ಶೇ 50ಕ್ಕೂ ಹೆಚ್ಚು ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಕೊಡುಗೆ.
2019ರಲ್ಲಿ 2.8 ಲಕ್ಷ ಟನ್‍ಗೂ ಹೆಚ್ಚು ಕಾಳುಮೆಣಸು ಬೆಳೆದಿದ್ದ ವಿಯೆಟ್ನಾಂನಲ್ಲಿ ಈ ವರ್ಷ ಅಂದಾಜು 1.8 ಲಕ್ಷ ಟನ್‍ ಇಳುವರಿ ಲಭಿಸಿದೆ. ಭಾರತದ ಕಾಳುಮೆಣಸು ಉತ್ತಮ ಗುಣಮಟ್ಟ ಹೊಂದಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್‍ಗೆ 8,000 ಡಾಲರ್ ಬೆಲೆ ಇದೆ. ಬ್ರೆಜಿಲ್‌ನಿಂದ ಸಾಗುವ ಕಾಳುಮೆಣಸಿಗೆ 7,700 ಡಾಲರ್‌ ಸಿಕ್ಕಿದರೆ, ವಿಯೆಟ್ನಾಂ ಮೆಣಸಿಗೆ 6,500 ಡಾಲರ್ ಮತ್ತು ಮಲೇಷ್ಯಾ ಮೆಣಸಿಗೆ 4,900 ಡಾಲರ್ ಬೆಲೆ ಇದೆ.

Also read  Black pepper gains on limited stock