ಮೇ ತಿಂಗಳ ಕಾರ್ಯಚಟುವಟಿಕೆಗಳು
ಮೇ ತಿಂಗಳ ಕಾರ್ಯಚಟುವಟಿಕೆಗಳು
ಅರೇಬಿಕಾ:
1. ಕಾಫಿ ಗಿಡನೆಡಲು ಸಾಲುಗಳನ್ನು ಗುರುತು ಮಾಡುವುದು (ಲೈನ್ ಮಾರ್ಕಿಂಗ್)
2. ಕಾಫಿ ಗುಂಡಿಗಳು (ಪಿಟ್ಟಿಂಗ್)
3. ಕಾಂಡಕೊರಕದ ನಿರ್ವಹಣೆ
4. ಗಿಡ ಕಸಿ
5. ಮುಂಗಾರು ಮುಂಚಿನ ಗೊಬ್ಬರ ಹಾಕುವಿಕೆ
6. ಮುಂಗಾರು ಮಳೆ ಮುನ್ನ ಬೋರ್ಡೋ ದ್ರಾವಣ ಸಿಂಪರಣೆ
7. ಮರಗಸಿ
8. ತೊಟ್ಟಿಲು ಗುಂಡಿ/ನೀರು ಗುಂಡಿಗಳ ನವೀಕರಣ
9. ಕಳೆ ತೆಗೆಯುವುದು
10. ತಿಗಣೆಗಳ ನಿರ್ವಹಣೆ.
ರೋಬಸ್ಟಾ:
1. ಕಾಫಿ ಗಿಡನೆಡಲು ಸಾಲುಗಳನ್ನು ಗುರುತು ಮಾಡುವುದು (ಲೈನ್ ಮಾರ್ಕಿಂಗ್)
2. ಕಾಫಿ ಗುಂಡಿಗಳು (ಪಿಟ್ಟಿಂಗ್)
3. ಗಿಡಕಸಿ
4. ಮುಂಗಾರು ಮುಂಚಿನ ಗೊಬ್ಬರ ಹಾಕುವಿಕೆ.
5. ಮರಗಸಿ
6. ತೊಟ್ಟಿಲು ಗುಂಡಿ/ನೀರು ಗುಂಡಿಗಳ ನವೀಕರಣ.
7. ಕಾಫಿ ಕಾಯಿಕೊರಕದ ನಿರ್ವಹಣೆ.
ಕಾಳುಮೆಣಸು :
1 ನರ್ಸರಿ ಮಡಿಗಳಿಗೆ ದಿನನಿತ್ಯ ನೀರು ನೀಡುವುದು
2. ರೋಗಬಾಧೆ ಕಂಡುಬಂದಲ್ಲಿ ಶೇ 1 ರ ಬೋರ್ಡೊ ದ್ರಾವಣವನ್ನು ಅಥವಾ ಶೇ 0.2 coc ಯನ್ನು ಡ್ರಂಚ್ ಮಾಡುವುದು
3. ಮಿಲಿಬಗ್ ಹಾವಳಿ ಕಂಡುಬಂದಲ್ಲಿ ಶೇ 0.075 Chlorpyriphos ಯನ್ನು ಡ್ರಂಚ್ ಮಾಡುವುದು
4. ಸಸಿ ಮಡಿಗಳಲ್ಲಿ ತೀವ್ರಸ್ವರೂಪದ ರೋಗಬಾಧೆಗೆ ತುತ್ತಾದ ನರ್ಸರಿ ಬುಟ್ಟಿಗಳನ್ನು ಈ ಹಂತದಲ್ಲಿ ಬೇರ್ಪಡಿಸುವುದು ಮತ್ತು ಬೇರ್ಪಡಿಸಿದ ಬುಟ್ಟಿಗಳನ್ನು ಮರುಬಳಕೆ
1. ಬುಟ್ಟಿಗಳನ್ನು ನೆಡುವ ಮರಗಳ ಉತ್ತರ ದಿಕ್ಕಿಗೆ ಕನಿಷ್ಠ ಒಂದು ಅಡಿ ಅಂತರದಲ್ಲಿ (50X50X50 ಸೆಂ.ಮೀ) ಗುಂಡಿಗಳನ್ನು ತೆಗೆಯಬೇಕು
2. ಪ್ರತಿ ಗುಂಡಿಗೂ ಸುಮಾರು 5 ಕೆ.ಜಿ ಗಳಷ್ಟು ಮೇಲ್ಪದರದ ಮಣ್ಣು ಕೊಟ್ಟಿಗೆ ಗೊಬ್ಬರ ಮತ್ತು ಬಯೋ ಕಂಟ್ರೋಲರ್‌ಗಳನ್ನು ಹಾಕುವುದು
3. ನಾಟಿ ಮಾಡಿದ ಬಳ್ಳಿಗಳನ್ನು ಮರಗಳಿಗೆ ಸೂಕ್ತ ರೀತಿಯಲ್ಲಿ ಕಟ್ಟುವುದು
4. ನಾಟಿ ಮಾಡಿದ ಬಳ್ಳಿಗಳಿಗೆ ನೆರಳು ಒದಗಿಸುವುದು, ಹಳೆಯ ತೋಟಗಳಲ್ಲಿ ಒಂದೆರಡು ಬಾರಿ ನೀರು ನೀಡಿದ ನಂತರ ನೆರಳು. ನಿಯಂತ್ರಿಸುವುದು.
5. ರೋಗಗ್ರಸ್ತವಾದ ಹಾಗೂ ಸತ್ತ ಬಳ್ಳಿಗಳನ್ನು ಬೇರು ಸಮೇತ ಕಿತ್ತು ನಾಶಪಡಿಸುವುದು
6. ಮುಂಗಾರು ಪ್ರಾರಂಭವಾಗುವ ಮುನ್ನವೇ ಹರಿಬಳ್ಳಿಗಳನ್ನು (Runners) ಕತ್ತರಿಸುವುದು ಅಥವಾ ಮರಕ್ಕೆ ಸೇರಿಸಿ ಕಟ್ಟುವುದು.
7. ನೀರಿನ ಲಭ್ಯತೆಯನ್ನು ಆಧರಿಸಿ ಬಳ್ಳಿಗಳಿಗೆ ಕಾಲದಿಂದ ಕಾಲಕ್ಕೆ ನೀರು ನೀಡುವುದು.
8. ಏಪ್ರಿಲ್ ತಿಂಗಳಿನಲ್ಲಿ ಮರಗಸಿ ಮಾಡದೆ ಇದ್ದಲ್ಲಿ ಮರಗಸಿಯನ್ನು ಕಡ್ಡಾಯವಾಗಿ ಮಾಡುವುದು
9. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಡೋಲೋಮೈಟ್/ಸುಣ್ಣವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ನೀಡುವುದು.
10. ಮೂರು ವರ್ಷಕ್ಕಿಂತ ಹೆಚ್ಚು ಪ್ರಾಯದ ಬಳ್ಳಿಗಳಿಗೆ ವಾರ್ಷಿಕ ಸರಾಸರಿ ನೀಡುವ ಗೊಬ್ಬರದ ಶೇ 50 ರಷ್ಟು ಪ್ರಮಾಣದ ರಾಸಾಯನಿಕ ಗೊಬ್ಬರವನ್ನು (ಎನ್.ಪಿ.ಕೆ
11. ಸಾವಯವ ಮಾದರಿಯ ಕೃಷಿ ಪದ್ಧತಿಯನ್ನು ಪಾಲಿಸುತ್ತಿದ್ದಲ್ಲಿ ಒಂದು ಕಿಲೋ ಬೇವಿನ ಹಿಂಡಿ, 200 ಗ್ರಾಂ ರಾಕ್ ಪಾಸ್ಟೇಟ್, 0.5 ಕೆಜಿ ಪೊಟ್ಯಾಶ್, 10 ಕೆಜಿ ಕೊಟ್ಟಿಗೆ ಗೊಬ್ಬರ ಪ್ರತಿ ಬಳ್ಳಿಗೆ ನೀಡು
12. ಬಳ್ಳಿಗಳಲ್ಲಿ ಪೊಟ್ಯಾಶಿಯಂ ಕೊರತೆ ಕಂಡು ಬಂದಲ್ಲಿ ಪ್ರತಿ ಬಳ್ಳಿಗೆ 150 ಗ್ರಾಂ ಸಲ್ವೇಟ್ ಆಫ್ ಪೊಟ್ಯಾಷ್ ಅನ್ನು ನೀಡುವುದು
13. ಐ.ಐ.ಎಸ್.ಆರ್(I.S.R) ಸಂಸ್ಥೆಯ ಪೆಪ್ಪರ್ ಮೈಕ್ರೋ ನ್ಯೂಟ್ರಿಯೆಂಟ್ಸ್ ಮಿಶ್ರಣವನ್ನು 1 ಲೀಟರ್ ನೀರಿಗೆ 5 ಗ್ರಾಂ ನಂತೆ ಮಿಶ್ರಣ ಮಾಡಿ ಸಿಂಪಡಿಸುವುದು
ಅಡಿಕೆ:
1. ಹೇರಳವಾಗಿ ನೀರು ಕೊಡುವುದು.
2. 16:16:16 ಗೊಬ್ಬರವನ್ನು ಪ್ರತಿ ಗಿಡಕ್ಕೆ 300 ಗ್ರಾಂ ನಂತೆ ಕೊಡುವುದು.
3. ಎರಡನೇ ರೌಂಡ್ ಗೊಬ್ಬರ ಹಾಕುವುದು, ಡಿ.ಎ.ಪಿ ಮಿಕ್ಸ್ 300 ಗ್ರಾಂ ಪ್ರತಿ ಮರಕ್ಕೆ.
4. ಕಾಂಪೋಸ್ಟ್ ಹಾಕುವುದು, 10 ಕೆ.ಜಿ ಪ್ರತಿ ಮರಕ್ಕೆ.
5. ಚರಂಡಿ ಸೋಸುವುದು.(ಬಸಿ ಕಾಲುವೆ)
